Back

ⓘ ಚಿತ್ರರಂಗ                                               

ಪಂಜಾಬಿ ಚಿತ್ರರಂಗ

ಸಾಮಾನ್ಯವಾಗಿ ಪಾಲಿವುಡ್ ಎಂದು ಗುರುತಿಸಲ್ಪಡುವ ಪಂಜಾಬಿ ಚಿತ್ರರಂಗವು ಭಾರತ ಮತ್ತು ಪಾಕಿಸ್ತಾನ ದೇಶಗಳ ಪಂಜಾಬ್ ರಾಜ್ಯಗಳಲ್ಲಿ ಕೇಂದ್ರಿತವಾಗಿದೆ. ೨೦ನೇ ಶತಮಾನದಲ್ಲಿ ಪಾಕಿಸ್ತಾನದ ಪಂಜಾಬಿ ಚಿತ್ರರಂಗ ಜನಪ್ರಿಯತೆಯ ಉತ್ತುಂಗದಲ್ಲಿದ್ದರೆ ೨೧ನೆಯ ಶತಮಾನದಲ್ಲಿ ಭಾರತೀಯ ಪಂಜಾಬಿ ಚಿತ್ರರಂಗವು ತನ್ನ ಉತ್ತಮ ಗುಣಮಟ್ಟದ ಚಿತ್ರಗಳ ತಯಾರಿಕೆಯಿಂದ ಜನಪ್ರಿಯವಾಗಿದೆ. ೭೦ರ ದಶಕದಲ್ಲಿ ವರ್ಷಂಪ್ರತಿ ಬಿಡುಗಡೆಗೊಂಡ ಪಂಜಾಬಿ ಚಲನಚಿತ್ರಗಳ ಸರಾಸರಿ ೯ರಷ್ಟಿದ್ದರೆ ೮೦ರ ದಶಕದಲ್ಲಿ ಸರಾಸರಿ ೮ಕ್ಕೆ ಕುಸಿಯಿತು. ೯೦ರ ದಶಕದಲ್ಲಂತೂ ವರ್ಷಂಪ್ರತಿ ಬಿಡುಗಡೆಗೊಂಡ ಚಲನಚಿತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದರ ಮೂಲಕ ಪಂಜಾಬಿ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ೨೦೦೦ದ ನಂತರ ಪಂಜಾಬ್ ಸರ್ಕಾರ ಮತ್ತು ಚಿತ್ರರಂಗದ ಪಂಡಿತರ ಸಂಘಟಿತ ಪ್ರಯತ್ನದಿಂದ ಪ ...

                                               

ರಮೇಶ್

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರು. ಕೆ.ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು ಬೆಂಗಳೂರು ದೂರದರ್ಶನದಲ್ಲಿ ಪರಿಚಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೂಮಳೆ ಮತ್ತು ಅಮೃತಧಾರೆ ಚಿತ್ರಕಥೆಗೆ ನೆರವು ನೀಡಿದ್ದಾರೆ. ತಮಿಳು ಚಿತ್ರರಂಗದಲ್ಲಿಯೂ ರಮೇಶ್ ಅರವಿಂದ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಉತ್ತಮ ವಿಲನ್ ಚಿತ್ರದ ಮೂಲಕ ತಮಿಳು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

                                               

ಪ್ರತಿಮಾದೇವಿ

ಪ್ರತಿಮಾದೇವಿ, ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ನಟಿ. ಇವರು ೧೯೪೭ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಿತ್ರ ೧೯೫೧ರಲ್ಲಿ ಬಿಡುಗಡೆಯಾದ ಜಗನ್ಮೋಹಿನಿಯಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದರು.

                                               

ಬಿ.ಆರ್.ಪಂತುಲು

ಬಡಗೂರು ರಾಮಕೃಷ್ಣ ಪಂತುಲು ಅವರು ಜನಿಸಿದ್ದು ೧೯೧೧ ಜುಲೈ ೨೮ರಂದು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿನ ಬಂಗಾರ ಪೇಟೆಯ ಬಳಿ ಇರುವ ಕುಪ್ಪಂನಿಂದ ಹನ್ನೊಂದು ಕಿಲೋಮೀಟರ್ ದೂರದ ಕುಗ್ರಾಮ ಬಡಗೂರಿನಲ್ಲಿ. ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು,ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು.ಬಾಲ್ಯದಿಂದಲೀ ಪಂತುಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಕಾರಣವಾಯಿತು.ಪಂತುಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಕಿರಿಯವರಾದ ಪಂತುಲು ಸೇರಿದಂತೆ ಐವರು ಮಕ್ಕಳು,ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು.ಪಂತುಲು ಅವರ ತಂದೆ ಸಂಗೀತ,ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು.ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತಿದ್ದರು.ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದನು.ಚಂದ್ರಹಾಸನ ಪಾತ್ರ ನೀಡುವ ಮ ...

                                               

ತುಳು ಚಿತ್ರರಂಗ

ತುಳು ಚಿತ್ರರಂಗ ಭಾರತೀಯ ಸಿನಿಮಾದ ಒಂದು ಭಾಗವಾಗಿದೆ.ಇದು ತುಳು ಭಾಷೆಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತದೆ. ತುಳು ಚಲನಚಿತ್ರೋದ್ಯಮವು ವಾರ್ಷಿಕವಾಗಿ 5 ರಿಂದ 7 ಚಲನಚಿತ್ರಗಳು ಬಿಡುಗಡೆಯಾಗುತ್ತವೆ.

                                               

ಉದಯಕುಮಾರ್

"ಕಲಾ ಕೇಸರಿ" ಮತ್ತು "ನಟ ಸಾಮ್ರಾಟ್" ಎಂದು ಪ್ರಸಿದ್ಧರಾಗಿದ್ದ ಉದಯ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆ. ರಾಜಕುಮಾರ್, ಕಲ್ಯಾಣಕುಮಾರ್ ಮತ್ತು ಉದಯಕುಮಾರ್, ಹೀಗೆ ಕುಮಾರ ತ್ರಯರಿದ್ದ ಕಾಲ, ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾದವು.

                                               

ಶ್ರೀಧರ್

ಶ್ರೀಧರ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲಿ ಒಬ್ಬರು. ಇವರು ಒಬ್ಬ ಉತ್ತಮ ಭರತನಾಟ್ಯ ಕಲಾವಿದರು ಆಗಿದ್ದಾರೆ. ಶ್ರೀಧರ್ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ ಮತ್ತು ಭರತನಾಟ್ಯಂನಲ್ಲಿ ತರಬೇತಿ ಪಡೆದ ನೃತ್ಯ ವಿದ್ವಾಂಸ, ಕಲಾವಿದ ಮತ್ತು ನೃತ್ಯ ನಿರ್ದೇಶಕರಾಗಿದ್ದಾರೆ. ಇಂಜಿನಿಯರಿಂಗ್ನಲ್ಲಿಯೂ ಅವರು ಪದವಿ ಪಡೆದಿದ್ದಾರೆ. ಶ್ರೀಧರ್ ಅವರು ಭರತನಾಟ್ಯ ನೃತ್ಯ ಪ್ರದರ್ಶನಕಾರರಾದ ಅನುರಾಧಾರವರನ್ನು ವಿವಾಹವಾದರು; ಎರಡೂ ಜೋಡಿಯು ಅನೇಕ ನೃತ್ಯ ಪ್ರದರ್ಶನಗಳಿಗಾಗಿ ಪ್ರದರ್ಶನ ನೀಡಿದ್ದಾರೆ

                                               

ವಿನೋದ್ ರಾಜ್

ವಿನೋದ್ ರಾಜ್ ಕನ್ನಡ ಚಿತ್ರರಂಗದ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಟಿ ಡಾ.ಲೀಲಾವತಿ ಅವರ ಪುತ್ರ. ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ, ನಂಜುಂಡ, ಮಹಾಭಾರತ, ಶ್ರೀ ವೆಂಕಟೇಶ್ವರ ಮಹಿಮೆ, ನನಗೂ ಹೆಂಡ್ತಿ ಬೇಕು, ಯುದ್ಧಪರ್ವ, ನಾಯಕ, ಬನ್ನಿ ಒಂದ್ಸಲ ನೋಡಿ, ಗಿಳಿ ಬೇಟೆ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ, ರಂಭಾ ರಾಜ್ಯದಲ್ಲಿ ರೌಡಿ, ರಾಜಣ್ಣ, ದಳವಾಯಿ, ಸ್ನೇಹಲೋಕ, ಓಂ ಶಕ್ತಿ, ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ, ಶ್ರೀ ಮಂಜುನಾಥ, ನಮ್ಮ ಸಂಸಾರ ಆನಂದ ಸಾಗರ, ಪಾಂಡವ, ಕನ್ನಡದ ಕಂದ, ಶುಕ್ರ, ಯಾರದು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

                                               

ಶಾರುಖ್ ಖಾನ್ (ಹಿಂದಿ ನಟ)

ನವೆಂಬರ್ ೨, ೧೯೬೫ ರಂದು ಜನಿಸಿದ ಶಾರುಖ್‌ ಖಾನ್‌ ರವರು ಹಿಂದಿ:शाहरुख़ ख़ान ಉರ್ದು: شاہ رُخ خان), ಪ್ರಖ್ಯಾತ ಬಾಲಿವುಡ್‌ ತಾರೆಯಲ್ಲದೇ, ಚಲನಚಿತ್ರ ನಿರ್ಮಾಪಕ ಮತ್ತು ಕಿರುತೆರೆ ನಿರೂಪಕರೂ ಆಗಿರುವ ಓರ್ವ ಭಾರತೀಯ ನಟ. ಇವರನ್ನು ಷಾಹ್‌ ರುಖ್‌ ಖಾನ್‌ ಎಂಬ ಜನಪ್ರಿಯ ಹೆಸರಿಂದಲೂ ಸಹಾ ಗುರುತಿಸಲಾಗುತ್ತದೆ. ಈ ಜನಪ್ರೀಯ ನಟನನ್ನು ಆತನ ಅಭಿಮಾನಿಗಳು ಕಿಂಗ್ ಖಾನ್, ಬಾಲಿವುಡ್ ಬಾದಷಾ ಅಂತಲೂ ಕರೆಯುತ್ತಾರೆ

                                               

ಅಕಿರಾ ಕುರೋಸಾವಾ

ಅಕಿರಾ ಕುರೋಸಾವಾ ಜಪಾನಿನ ಪ್ರಮುಖ ನಿರ್ದೇಶಕ, ನಿರ್ಮಾಪಕ, ಹಾಗೂ ಚಿತ್ರಕಥಾ ಲೇಖಕರಾಗಿದ್ದರು. ಇವರ ಚಿತ್ರಗಳು ಜಗತ್ತಿನಾದ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠ ಚಿತ್ರಗಳಲ್ಲಿ ಕೆಲವಾಗಿ ಗುರುತಿಸಲಾಗುತ್ತದೆ. ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆಯಾಗಿವೆ. ೧೯೪೩ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲಿ ಸಂಶಿರೋ ಸುಗಾತಾ ಚಿತ್ರದಿಂದ ನಿರ್ದೇಶನ ಪ್ರಾರಂಭಿಸಿದ ಇವರ ಕೊನೆಯ ಚಿತ್ರ ಮದದಾಯೋ ೧೯೯೯ರಲ್ಲಿ ಹೊರಬಂದದ್ದು. ಪ್ರಾಚೀನ ಜಪಾನ್ ಕುರಿತು ಇವರು ನಿರ್ದೇಶಿಸಿದ ಹಲವು ಚಿತ್ರಗಳು ಇಂದಿಗೂ ಸಹೃದಯಿಗಳ ಮೆಚ್ಚುಗೆ ಪಡೆದಿವೆ. ಅವುಗಳಲ್ಲಿ ದಿ ಸೆವೆನ್ ಸಮುರಾಯ್, ಸಂಜುರೋ, ಕಾಗೆಮುಶಾ ಕೆಲವು.

                                               

ಎಂ.ವಿ.ರಾಜಮ್ಮ

ಕನ್ನಡ ವೃತ್ತಿ ರಂಗಭೂಮಿಯ "ಅಭಿನಯ ಶಾರದೆ" ಎಂದೇ ಖ್ಯಾತರಾಗಿದ್ದ ಎಂ.ವಿ.ರಾಜಮ್ಮ ಜನಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ. ತಂದೆ ನಂಜಪ್ಪ, ಜಮೀನ್ದಾರರು. ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ. ಮಹಮದ್ ಪೀರ್‌ರವರ ಚಂದ್ರಕಲಾ ನಾಟಕ ಮಂಡಳಿ ಯ ಸಂಸಾರ ನೌಕ, ಗೌತಮಬುದ್ಧ ನಾಟಕಗಳ ಅಭಿನಯದಿಂದ ಜನ ಮೆಚ್ಚುಗೆ ಗಳಿಸಿದರು. ೧೯೩೬ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸಂಸಾರ ನೌಕ ಕನ್ನಡ ಚಲನಚಿತ್ರದಲ್ಲಿ ಅಭಿನಯ. ಅನೇಕ ಚಲನಚಿತ್ರಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ. ಅಂದಿನ ಜನಪ್ರಿಯ ನಟರುಗಳಾದ ಬಿ.ಆರ್.ಪಂತುಲು, ಹೆಚ್.ಎಲ್.ಎನ್.ಸಿಂಹ, ಡಿಕ್ಕಿ ಮಾಧವರಾವ್, ಜಿ.ವಿ.ಕೃಷ್ಣ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ. ಎಂ.ವಿ. ರಾಜಮ್ಮ ಕನ್ನಡದ ಮೊದಲ ಮಹಿಳಾ ಚಿತ್ರ ನಿರ್ಮ ...

                                               

ಕನ್ನಡ ಚಿತ್ರರಂಗ

ಕನ್ನಡ ಚಿತ್ರರಂಗ ವು ಕರ್ನಾಟಕದಲ್ಲಿ ರಚಿಸಲಾಗುವ ಚಲನಚಿತ್ರಗಳನ್ನು ಒಳಗೊಂಡಿದೆ.ಕನ್ನಡ ಚಿತ್ರರಂಗವು ಮೂಲತಹ ರಂಗಭೂಮಿ ಯನ್ನು ಅವಲಂಬಿಸಿ ಆರಂಭವಾಯಿತು ಪ್ರಮುಖವಾಗಿ ಕನ್ನಡ ಚಿತ್ರಗಳು ಮತ್ತು ಕೆಲವು ತುಳು ಹಾಗು ಕೊಂಕಣಿ ಭಾಷೆಗಳ ಚಿತ್ರಗಳು ಈ ಚಿತ್ರರಂಗಕ್ಕೆ ಸೇರುತ್ತವೆ. ೧೯೩೪ರಲ್ಲಿ ತೆರೆ ಕಂಡ "ಸತಿ ಸುಲೋಚನ" ಮೊದಲ ಕನ್ನಡ ಚಿತ್ರ.ಕನ್ನಡ ಮೊದಲ ವರ್ಣಮಯ ಚಿತ್ರ "."ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.೧೯೫೪ರಲ್ಲಿ ಬಿಡುಗಡೆ ಹೊಂದಿದ "ಬೇಡರ ಕಣ್ಣಪ್ಪ" ಈ ಚಿತ್ರರಂಗದ ಪ್ರಮುಖ ನಟರಾದ ರಾಜಕುಮಾರ್ ಅವರ ಮೊದಲ ಚಿತ್ರ. ಕರ್ನಾಟಕದಲ್ಲಿ ‘ವಸಂತಸೇನಾ ಚಿತ್ರಕ್ಕೆ ಮೊದಲು ಮೂಕಿ ಚಿತ್ರಗಳು ತಯಾರಾಗಿದ್ದವು. ಆದರೆ ಅವು ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ಕಥಾ ಚಿತ್ರಗಳಲ್ಲ. ರಂಗಭೂಮಿಯಲ್ಲಿ ಅಭಿನಯಿಸುವ ನಾಟಕಗಳನ್ನು ಚಿತ್ರಿ ...

                                               

ಗುರುದತ್ ಪಡುಕೋಣೆ

ಗುರುದತ್ ಶಿವಶಂಕರ್ ಪಡುಕೋಣೆ ಇವರು ಭಾರತ ಚಲನಚಿತ್ರ ರಂಗ ಕಂಡ ಓರ್ವ ಅಮೋಘ ನಟ,ನಿರ್ದೇಶಕ ಹಾಗೂ ನಿರ್ಮಾಪಕ. ಕಲಾತ್ಮಕ, ಸಾಹಿತ್ಯಪೂರ್ಣ ಚಲನಚಿತ್ರ ಮಾಡುವುದರಲ್ಲಿ ಇವರದ್ದು ಎತ್ತಿದ ಕೈ. ಇವರ ಅನೇಕ ಉತ್ತಮ ಚಿತ್ರಗಳಲ್ಲಿ "ಪ್ಯಾಸಾ" ಒಂದು.

                                               

ಗುಲ್ಜಾರ್

ಸಂಪೂರಣ್ ಸಿಂಗ್ ಕಾಲ್ರಾ ಎಂಬ ಮೂಲ ಹೆಸರಿನ ವ್ಯಕ್ತಿ ಬಾಲಿವುಡ್ ವಲಯದಲ್ಲಿ ಗುಲ್ಜಾರ್ ಎಂಬ ಹೆಸರಿನಿಂದಲೇ ಗುರುತಿಸಲ್ಪಡುತ್ತಿದ್ದಾರೆ. {{ಆಗಸ್ಟ್ ೧೮, ೧೯೩೬) ಕವಿಗಳಾಗಿ, ಚಿತ್ರ ನಿರ್ದೇಶಕರಾಗಿ, ಗೀತ ರಚನಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಹಿಂದಿ-ಉರ್ದು, ಪಂಜಾಬಿ, ಮತ್ತು ಹಲವು ಉಪಭಾಷೆಗಳಾದ ಬ್ರಜ್, ಖಾರಿಬೋಲಿ, ಹರ್ಯಾಣ್ವಿ, ಮರ್ವಾರಿ ಭಾಷೆಗಳಲ್ಲಿ ಅವರದ್ದು ಅಪ್ರತಿಮ ಪ್ರಭುತ್ವ. ಗುಲ್ಜಾರ್ ಎಂಬುದು ಕಾವ್ಯ ನಾಮ.

                                               

ಗುಲ್ಶನ್ ದೇವಯ್ಯ

ಗುಲ್ಶನ್ ದೇವಯ್ಯ ನವರು ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿರುವ ನಟರು. ಬೆಂಗಳೂರಿನವರಾದ ಇವರು ಕನ್ನಡಿಗರು ಮಾತ್ರವಲ್ಲದೆ, ಕೊಡವ ಜನಾಂಗದವರಾಗಿದ್ದು, ಕಂಬೆಯಂಡ ಮನೆತನಕ್ಕೆ ಸೇರಿದವರು.

                                               

ಚಿತ್ರಗೀತೆಗಳ ಹಕ್ಕು(copyrights of songs)

ಚಿತ್ರಗೀತೆಗಳು ಹಕ್ಕು ಯಾರದು? ಎಂಬ ಹಳೆಯ ಪ್ರಶ್ನೆಗೀಗ ಮತ್ತೆ ಚಾಲನೆ ದೊರಕಿದೆ. ಮಾತ್ರವಲ್ಲ ಇದು ಕೇವಲ ಚರ್ಚೆಯ ಮಟ್ಟದಲ್ಲಿರದೆ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ಬಹು ಚರ್ಚೆಯ ನಂತರವೇ ಇಂಡಿಯನ್ ಪರ್‌ಫಾರ್ಮಿಂಗ್ ರೈಟ್ಸ್ ಸೊಸೈಟಿ ಚಿತ್ರಗೀತೆಗಳ ಹಕ್ಕುಗಳನ್ನು ಹೊಂದಿದ ರಾಷ್ಟ್ರೀಯ ಸಂಸ್ಥೆ ಎಂಬ ಮನ್ನಣೆ ಪಡೆದಿತ್ತು. 1996ರ ಮಾರ್ಚ್ 27 ರಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 1957ರ ಕೃತಿಸ್ವಾಮ್ಯ ಕಾಯಿದೆ ಸೆಕ್ಷನ್ 33ರಂತೆ ಅಧಿಕೃತ ಮನ್ನಣೆ ಒದಗಿಸಿತ್ತು. ಅಲ್ಲಿಂದ ಮುಂದೆ ಕೆಲವು ಮಹತ್ತರ ಬೆಳವಣಿಗೆಗಳಾದವು. ಜಾಗತೀಕರಣದ ಹಿನ್ನೆಲೆಯಲ್ಲಿ ಬಹುಮಾಧ್ಯಮಗಳ ಕಾಲ ಬಂದಿತು. ಚಿತ್ರಗೀತೆಗಳ ವಾಣಿಜ್ಯಿಕ ಬಳಕೆ ನಿರೀಕ್ಷೆಗಿಂತಲೂ ಹೆಚ್ಚಾಯಿತು. ರಸಮಂಜರಿಗಳು ಹೆಚ್ಚಾದವು. ಮೊಬೈಲ್‌ಗಳ ರಿಂಗ್ ಟೋನ್‌ಗಳಾಗಿ ಚಿತ್ರಗೀತೆಗಳು ಬಳಕೆಯಾದವು. ಎಲ್ಲಾ ...

                                               

ದಾದಾಸಾಹೇಬ್ ಫಾಲ್ಕೆ

ದಾದಾ ಸಾಹೇಬ್ ಫಾಲ್ಕೆ ಯೆಂದು ಪ್ರಸಿದ್ಧರಾದ, ದುಂಡಿರಾಜ್ ಗೋವಿಂದ ಫಾಲ್ಕೆಯವರು, ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದವರು. ಅವರು ಗತಿಸಿ ೧೨ ದಶಕಗಳಾದರೂ, ಮಹಾರಾಷ್ಟ್ರದ ಹಾಗೂ ಭಾರತದ ಬೆಳ್ಳಿ-ತೆರೆಯ ಇತಿಹಾಸದಲ್ಲಿ, ಎಂದೆಂದಿಗೂ ಮರೆಯಲಾರದ ವ್ಯಕ್ತಿಯಾಗಿ, ವಿಜೃಂಭಿಸುತ್ತಿದ್ದಾರೆ. ಭಾರತದಲ್ಲಿ ಚಲನಚಿತ್ರ ಲೋಕವನ್ನು ಸೃಷ್ಟಿಸಿದ ಅವರ ಮನೆಯಲ್ಲಿ ಇಟ್ಟ ಹೆಸರು, ಧುಂಡಿರಾಜ್ ಗೋವಿಂದ ಫಾಲ್ಕೆಯೆಂದು. ಧುಂಡಿರಾಜರು, ಬರೋಡದ, ಕಲಾಭವನದ ಶಿಕ್ಷಣ ಮುಗಿಸಿ, ಸರಕಾರಿ ಪ್ರಾಚ್ಯವಸ್ತು ಇಲಾಖೆಯಲ್ಲಿ ಚಿತ್ರಕಾರರಾಗಿ, ಛಾಯಾಚಿತ್ರಗಾರರಾಗಿ ೧೯೦೩ ರಲ್ಲಿ ಖಾಯಂ ನೌಕರಿಯಲ್ಲಿ ಭರ್ತಿಯಾದರು. ಧುಂಡಿರಾಜರು ಫೋಟೋ-ಕೆಮಿಕಲ್ ರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ಚಲನಚಿತ್ರರಂಗದ ಮಾಯಾಲೋಕವನ್ನು ಈ ಹರಿಶ್ಚಂದ್ರ ಚಿತ್ರದ ಮುಖಾಂತರ, ಭಾರತೀಯ ಜನತ ...

                                               

ಪದ್ಮಿನಿ

ಪದ್ಮಿನಿ - - ಸೆಪ್ಟೆಂಬರ್ ೨೪,೨೦೦೬ ಭಾರತದ ಬಹುಭಾಷಾ ನಟಿ ಮತ್ತು ಭರತನಾಟ್ಯ ಕಲಾವಿದೆಯಾಗಿದ್ದರು. ಇವರು ತಮಿಳು, ತೆಲುಗು, ಮಲಯಾಳಂ,ಹಿಂದಿ, ಕನ್ನಡ ಭಾಷೆಯಲ್ಲಿ ಸುಮಾರು ೨೫೦ ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

                                               

ಪ್ರಕಾಶ್ ಮೆಹರಾ

ಪ್ರಕಾಶ್ ಮೆಹರಾ ಹಿಂದಿ ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ ಹಾಗು ದಿಗ್ದರ್ಶಕ. ಅಮಿತಾಬ್ ಬಚ್ಚನ್‌ರವರನ್ನು ಆಂಗ್ರಿ ಯಂಗ್ ಮ್ಯಾನ್ ನಾಯಕ ನನ್ನಾಗಿ ಮಾಡಿ, ಸಲೀಮ್-ಜಾವೀದ್‌ರವರ ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.

                                               

ಫ್ರಾಂಸಿಸ್ ಫೋರ್ಡ್ ಕೊಪ್ಪಲಾ

ಫ್ರಾಂಸಿಸ್ ಫೋರ್ಡ್ ಕೊಪ್ಪಲಾ ಐ ಎಮ್ ಡಿ ಬಿನಲ್ಲಿ 2007 Francis Ford Coppola Video Interview with InterviewingHollywood.com "Perfecting the Rubicon: An interview with Francis Ford Coppola" Francis Ford Coppola: Texas Monthly Talks, YouTube video posted on November 24, 2008 "Back to Bernalda" by Coppola, T International Herald Tribune Style Magazine, December 8, 2012 Francis Ford Coppola Presents Bibliography at the University of California Berkeley Library

                                               

ಬೆಂಗಳೂರಿನ ಪ್ಲಾಝಾ ಥಿಯೇಟರ್

೧೯೩೬ ರಲ್ಲಿ ಬೆಂಗಳೂರಿನಕಂಟೋನ್ಮೆಂಟ್ ವಲಯದಲ್ಲಿ ನಿರ್ಮಿಸಿದ, ಪ್ಲಾಝಾ ಸಿನಿಮಾ ಥಿಯೇಟರ್ ಎಂ.ಜಿ ರಸ್ತೆ ಗೆ ತೀರ ಸಮೀಪದಲ್ಲಿದೆ. ಹಾಲಿವುಡ್ ನಿರ್ಮಾಣದ ಇಂಗ್ಲೀಷ್ ಚಲನಚಿತ್ರಗಳು ಇಲ್ಲಿ ಹೆಚ್ಚಾಗಿ ಪ್ರದರ್ಶಿಸಲ್ಪಡುತ್ತಿದ್ದವು.

                                               

ಭಾರತೀಯ ಚಿತ್ರರಂಗ

ಭಾರತೀಯ ಚಿತ್ರರಂಗಕ್ಕೆ ಸೆಂಚುರಿ ಸಂಭ್ರಮ. ಲವ್, ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್, ಸೆಂಟಿಮೆಂಟ್ ಎಲ್ಲವನ್ನೂ ಎರಡೂವರೆ ಗಂಟೆಯಲ್ಲಿ ನಮ್ಮ ನಿಮ್ಮ ಮುಂದೆ ಇಡೋದೆ ಸಿನಿಮಾ. ಬೆಳ್ಳಪರದೆ ಮೇಲೆ ಕಲರ್ ಪುಲ್ಲಾಗಿ ತನ್ನ ಖದರ್ ತೋರಿಸಿಕೋಡು ಬರ್ತಿರೋ ಈ ಸಿನಿಮಾ ಇಂಡಸ್ಟ್ರಿ,ಭಾರತದಲ್ಲಿ ಬೇರೂರಿ ಸೆಂಚುರಿ ಬಾರಿಸಿದೆ. ಹೌದು ಚಿತ್ರರಂಗಕ್ಕೆ ಈಗ ಶತಕದ ಸಂಭ್ರಮ.ಭಾರತೀಯ ಸಿನಿಮಾರಂಗವೀಗ ಹೆಮ್ಮರವಾಗಿ ಬೆಳೆದುನಿಂತಿದೆ.ಭಾರತವು ೧೯೧೩ರಲ್ಲಿ ತನ್ನ ಮೊದಲ ಚಲನಚಿತ್ರವನ್ನ ತಯಾರಿಸಿತು ಸಾರ್ವತಿಕವಾಗಿ ಹೇಳುವಾದದರೆ ಆರು ಪ್ರಮುಖ ಪ್ರಭಾವಗಳು ಭಾರತದ ಸಂಪ್ರದಾಯ ಚಲನಚಿತ್ರಗಳನ್ನು ರೂಪಿಸಿವೆ. ಅವುಗಳಲ್ಲಿ ಮೊದಲ ಸ್ಥಾನ ಭಾರತದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ.ಭಾರತೀಯ ಜನಪ್ರಿಯ ಚಲನಚಿತ್ರಗಳ ಮೇಲೆ ಅದರಲ್ಲೂ ನಿರ್ಧಿಷ್ಠವಾಗಿ ಅದರ ನಿರೂಪಣ ವಿಧಾನ ...

                                               

ಮಹೇಂದ್ರ ಚಿಟ್ಟಿಬಾಬು

ಮಹೇಂದ್ರ ಚಿಟ್ಟಿಬಾಬು, ಕನ್ನಡ ಸಿನಿಮಾರಂಗದ ಹೆಸರಾಂತ ಛಾಯಾಗ್ರಾಹಕ, ಹಲವು ವರ್ಷಗಳಿಂದ ಜನಪ್ರಿಯ ಧಾರಾವಾಹಿಯೆಂಬ ಹೆಗ್ಗಳಿಗೆ ಪಾತ್ರವಾಗಿ ಓಡುತ್ತಿರುವ, ಪಾಂಡುರಂಗ ವಿಠಲ ನಗೆ ಧಾರಾವಾಹಿ ಯ ಚಿತ್ರೀಕರಣವನ್ನು ಮಾಡುತ್ತಾ ಬಂದಿದ್ದಾರೆ. ಇತರ ಕನ್ನಡ ಸೀರಿಯಲ್ ಗಳಲ್ಲೂ ಚಿತ್ರೀಕರಣ ಮಾಡಿದ್ದಾರೆ.

                                               

ಮುಕೇಶ್ (ಗಾಯಕ)

ಮುಕೇಶ್ ಹಿಂದಿ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರು. ವಿಶೇಷವಾಗಿ ಹೃದಯ ತಟ್ಟುವಂತೆ, ಮನ ಮಿಡಿಯುವಂತೆ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದವರು. ಭಾರತದ ಹಿಂದಿ ಚಲನಚಿತ್ರರಂಗದ ಇತಿಹಾಸದ ಸಂಗೀತ ಕ್ಷೇತ್ರದಲ್ಲಿ ಸುವರ್ಣಯುಗವೆಂದು ಪರಿಗಣಿಸಲಾಗುವ ಇಪ್ಪತ್ತನೇ ಶತಮಾನದ ೫೦ರ ದಶಕದ ಆರಂಭದಿಂದ ತೊಡಗಿ ೭೦ರ ದಶಕದ ಅಂತ್ಯದವರೆಗಿನ ಕಾಲಘಟ್ಟದಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಾಗಿದ್ದ ಮನ್ನಾ ಡೇ, ಮಹಮ್ಮದ್ ರಫಿ, ತಲತ್ ಮೆಹಮೂದ್, ಮತ್ತಿತರ ಕೆಲವರಲ್ಲಿ ಮುಕೇಶ್ ಅಗ್ರಗಣ್ಯರಾಗಿದ್ದರು. ಇವರು ಅಂದಾಜು ೨೦೦ರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿರುವರಲ್ಲದೆ ಅನೇಕ ಹಿಂದಿ ಭಾವಗೀತೆ, ಶೇರ್, ಮುಂತಾದವುಗಳ ಜತೆಗೆ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಹಿಂದಿಯ ಮಹಾಕವಿ ತುಳಸೀದಾಸರ ರಾಮಾಯಣವನ್ನ ...

                                               

ರೋಶೊಮೋನ್ (ಚಲನಚಿತ್ರ)

ರಾಶೋಮನ್ ಇದು 1950 ಜಿದೈಗೆಕಿ ಪ್ರಕಾರದ ಜಪಾನೀಸ್ ಚಲನಚಿತ್ರ ಇದನ್ನು ನಿರ್ದೇಶನ ಮಾಡಿದರು ಅಕಿರಾ ಕುರೋಸಾವಾಯು ಸಿನಿಮಾಟೋಗ್ರಾಫರ್ ಕಝ್ಹೋ ಮಿಯಾಗಾವಾ ಅವರ ನಿಕಟ ಸಹಯೋಗದೊಂದಿಗೆ ಕೆಲಸ ಮಾಡಿದರು. ಮುಖ್ಯಭೂಮಿಕೆಯಲ್ಲಿ ತೋಶಿರೋ ಮಿಫ್ಯೂನ್, ಮಾಚಿಕೊ ಕ್ಯೋ, ಮಸಾಯುಕಿ ಮೋರಿ, ತಕಾಶಿ ಶಿಮುರಾ, ಚಿಯಾಕಿ ಮಿನೋರು ನಟಿಸಿದ್ದಾರೆ. ಚಲನಚಿತ್ರವು ರೈನೋಸುಕ್ ಅಕುಟಗಾವಾ ಅವರ ಸಣ್ಣ ಕಥೆ ರಾಶೆಮೊನ್ ಇಂದಲೂ ಹಾಗೂ ಅಕುಟಗಾವಾ ಅವರ 1922 ರ ಸಣ್ಣ ಕಥೆ "ಎ ಗ್ರೋವ್" ಆಧರಿಸಿದೆ, ಇದು ಪಾತ್ರಗಳು ಮತ್ತು ಕಥಾವಸ್ತುವನ್ನು ಒದಗಿಸುತ್ತದೆ. ಈ ಕಥೆ 8 ನೇ ಶತಮಾನದಲ್ಲಿ ಕ್ಯೋಟೋ ದ್ವಾರವಾದಲ್ಲಿ ನಡೆಯುತ್ತದೆ. ಒಂದೇ ಘಟನೆಯ ವ್ಯಕ್ತಿನಿಷ್ಠ, ಪರ್ಯಾಯ, ಸ್ವಯಂ-ಸೇವೆ ಮತ್ತು ವಿರೋಧಾತ್ಮಕ ಆವೃತ್ತಿಗಳನ್ನು ಒದಗಿಸುವ ವಿವಿಧ ಪಾತ್ರಗಳನ್ನು ಒಳಗೊಂಡಿರುವ ಕಥಾವಸ್ತುವಿನ ...

                                               

ವಿ. ಕೆ. ಮೂರ್ತಿ

ತಮ್ಮ ಆಪ್ತ ಗೆಳೆಯರಿಗೆಲ್ಲಾ ಕುಟ್ಟಿ, ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ವಿ. ಕೆ. ಮೂರ್ತಿ ಚಲನಚಿತ್ರರಂಗದಲ್ಲಿ ಶ್ರೇಷ್ಠ ಚಲನಚಿತ್ರ ಛಾಯಾಗ್ರಾಹಕರೆಂದು ಹೆಸರಾಗಿದ್ದು, ಒಬ್ಬತಂತ್ರಜ್ಞರಾಗಿ ಪ್ರತಿಷ್ಠಿತ ದಾದಾ ಫಾಲ್ಕೆ ಪ್ರಶಸ್ತಿ ಪಡೆದ ಪ್ರಪ್ರಥಮರು.

                                               

ಶ್ಯಾಮ್ ಬೆನಗಲ್

ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಶ್ಯಾಮ್ ಬೆನಗಲ್‌ ೨೦೦೭ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆನಗಲ್ ಕುಟುಂಬ ಮೂಲತಃ ಕರ್ನಾಟಕದ ಕರಾವಳಿಯ ಪ್ರಸಿದ್ಧ ಬೆನಗಲ್‌ನಲ್ಲಿ ನೆಲೆಸಿದ್ದರು. ಅಲ್ಲಿಂದ ವಲಸೆ ಹೋಗಿದ್ದ ಸಿಕಂದರಾಬಾದಿನ ಅಲವಾಲಾದಲ್ಲಿ, ಶ್ಯಾಮ್ ಬೆನಗಲ್ ಡಿಸೆಂಬರ್ ೧೪,೧೯೩೪ ರಂದು ಜನಿಸಿದರು.

                                               

ಸತ್ಯಜಿತ್ ರೇ

ಸತ್ಯಜಿತ್ ರೇ ಪ್ರಸಿದ್ಧ ಬ೦ಗಾಳಿ ಚಿತ್ರ ನಿರ್ದೇಶಕರು, ಮತ್ತು ಭಾರತೀಯ ಚಿತ್ರರ೦ಗದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಪಥೇರ್ ಪಾ೦ಚಾಲಿ, ಅಪರಾಜಿತೊ ಮತ್ತು ಅಪ್ಪುವಿನ ಪ್ರಪ೦ಚ - ಈ ಮೂರು ಚಿತ್ರಗಳ ಸರಣಿ ಇವರ ಅತಿ ಪ್ರಸಿದ್ಧ ಚಿತ್ರಗಳನ್ನು ಒಳಗೊ೦ಡಿದೆ. ಅಕಿರಾ ಕುರೋಸಾವಾ, ಸ್ಟೀವನ್ ಸ್ಪೀಲ್‍ಬರ್ಗ್, ಮಾರ್ಟಿನ್ ಸೋರ್ಸೆಸಿ ಮೊದಲಾದ ಅನೇಕ ಹೆಸರಾ೦ತ ನಿರ್ದೇಶಕರು ಸತ್ಯಜಿತ್ ರೇ ಅವರ ಚಿತ್ರಗಳನ್ನು ಮೆಚ್ಚಿಕೊ೦ಡಿರುವುದು೦ಟು.

                                               

ಸದಾಶಿವ ಬ್ರಹ್ಮಾವರ

ಸದಾಶಿವ ಬ್ರಹ್ಮಾವರ್ ಮೂಲತಃ ಬೆಳಗಾವಿಯವರು. ಬೈಲಹೊಂಗಲದಲ್ಲಿನ ಪರಿಸರದಲ್ಲಿದ್ದ ಸದಾಶಿವ ಬ್ರಹ್ಮಾವರ ಉಡುಪಿಯಲ್ಲಿ ಬೆಳೆದರು. ಚಿಕ್ಕಂದಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಹುಲಿಮನೆ ಸೀತಾರಾಮಶಾಸ್ತ್ರಿ ಒಡೆತನದ ಜಯ ಕರ್ನಾಟಕ ನಾಟಕ ಸಂಘ ನಾಟಕ ಕಂಪನಿಯಲ್ಲಿ ಬಾಲನಟನಾಗಿ ಅಭಿನಯ ಶುರುವಿಟ್ಟರು. ಎಂ ಪಿ ಶಂಕರ್, ಕೆ ಎಸ್ ಅಶ್ವಥ್, ಏಣಗಿ ಬಾಳಪ್ಪ ಮುಂತಾದ ನುರಿತ ಕಲಾವಿದರು ಜಯ ಕರ್ನಾಟಕ ನಾಟಕ ಸಂಘದ ಅಡಿಯಲ್ಲಿ ದುಡಿಯುತ್ತಿದ್ದರು.

                                               

ಸ್ಟೀವನ್ ಸ್ಪೀಲ್ಬರ್ಗ್

ಸ್ಟೀವನ್ ಸ್ಪೀಲ್ಬರ್ಗ್ ಅಮೇರಿಕ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಜುರಾಸಿಕ್ ಪಾರ್ಕ್ ೧೯೯೩ ಇವರ ಅದ್ಭುತ ಚಿತ್ರ. ಇವರ ಪೂರ್ಣ ಹೆಸರು ಸ್ಟೀವನ್ ಆಲಾನ್ ಸ್ಪೀಲ್ಬರ್ಗ್. ಸ್ಪೀಲ್ಬರ್ಗ್ ಹುಟ್ಟಿದ್ದು ಅಮೇರಿಕದ ಒಹಾಯೋ ರಾಜ್ಯದಲ್ಲಿನ ಸಿನ್ಸಿನ್ನಾಟಿ ನಗರದಲ್ಲಿ. ಜನ್ಮ ದಿನಾಂಕ ೧೮ ಡಿಸೆಂಬರ್ ೧೯೪೬.

                                               

ಹೃಷಿಕೇಶ್ ಮುಖರ್ಜಿ

ಹೃಷಿಕೇಶ್ ಮುಖರ್ಜಿ - ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರು. ಹೃಷಿಕೇ‍ಶ್ ಮುಖರ್ಜಿ ಯವರು, ಹಿಂದಿ ಚಿತ್ರರಂಗದಲ್ಲಿ ೪೬ ಕ್ಕೂ ಹೆಚ್ಚು ಅಶ್ಲೀಲದ ಲೇಪವೂ ಇಲ್ಲದ, ಕ್ರೌರ್ಯ, ಗಲಭೆಗಳಿಲ್ಲದ ನವಿರಾದ ಹಾಸ್ಯಪ್ರಧಾನವಾದ ಮತ್ತು ಅದರಲ್ಲಿಯೇ ಮಾನವೀಯತೆಯನ್ನು ಸಾರುವ ಚಿತ್ರಗಳನ್ನು ನಿರ್ಮಿಸಿದರು. ಅವರು ತಮ್ಮ ಅನಾರೋಗ್ಯದಿಂದಾಗಿ ಕೆಲವು ವರ್ಷಗಳಿಂದ ಕೆಲಸ ನಿಲ್ಲಿಸಿದ್ದು ಮತ್ತೆ ಇತ್ತೀಚೆಗೆ ಝೂಟ್ ಬೋಲೆ ಕವ್ವಾಕಾಟೆ ಎಂಬ ಚಿತ್ರ ತಯಾರಿಸಿದರು. ಅವರಂತೆಯೇ ಶ್ರೀ. ಸತ್ಯಜಿತ್ ರೆ, ಬಿಮಾಲ್ ರಾಯ್ ತರಹ, ಬಂಗಾಲಿ ಕಲಾವಿದರುಗಳು ಅವರ ಕಲಾತ್ಮಕತೆ, ಸೂಕ್ಷ್ಮಸಂವೇದನೆ, ಸಂಗೀತ, ತೀವ್ರತೆಗಳಿಂದ ಹಲವಾರು ಚಿತ್ರಗಳನ್ನು ತಯಾರಿಸಿದ್ದಾರೆ.ಮುಖರ್ಜಿಯವರು ತಲಾಶ್ ಎಂಬ ಟಿ.ವಿ.ಸೀರಿಯಲ್ ಮಾಡಿದ್ದರು. ಅವರ ಇನ್ನೊಂದು ಪಾರಿವಾರಿಕ ಅವಿಭಕ್ತ ಕುಟುಂಬ ...

ವಿಜಯಲಕ್ಷ್ಮಿ
                                               

ವಿಜಯಲಕ್ಷ್ಮಿ

ವಿಜಯಲಕ್ಷ್ಮಿ - ಕನ್ನಡ ಚಿತ್ರರಂಗದ ನಾಯಕಿಯರಲ್ಲೊಬ್ಬರು. ಕಾಲೇಜ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ವಿಜಯಲಕ್ಷ್ಮಿಯವರ ಮೊದಲ ಚಲನಚಿತ್ರ ನಾಗಾಭರಣ ನಿರ್ದೇಶನದ ನಾಗಮಂಡಲ. ಅರುಣೋದಯ, ಜೋಗುಳ, ಹಬ್ಬ, ಜೋಡಿಹಕ್ಕಿ ಮುಂತಾದ ಮೂವತ್ತು ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಉದಯ ಟಿವಿ ಕಿರುತೆರೆ ವಾಹಿನಿಯಲ್ಲಿನ ಬಂಗಾರದ ಬೇಟೆ ಧಾರಾವಾಹಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದಾರೆ.

                                               

ಎ ಟಿ ರಘು

ಎ ಟಿ ರಘು ಕನ್ನಡ ಚಲನಚಿತ್ರ ನಿರ್ದೇಶಕರು. ಇವರು ನಿರ್ಮಾಪಕರೂ ನಟರೂ ಹೌದು. ೧೯೮೦ರಿಂದ ೧೯೯೮ರವರೆಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ. ಆ ದೃಷ್ಟಿಯಲ್ಲಿ ಇವರೊಬ್ಬ ಜನಪ್ರಿಯ ಹಾಗೂ ಜಯಶೀಲ ನಿರ್ದೇಶಕರು.

ಜಾರ್ಜ್ ಲ್ಯೂಕಾಸ್
                                               

ಜಾರ್ಜ್ ಲ್ಯೂಕಾಸ್

ಜಾರ್ಜ್ ಲ್ಯೂಕಾಸ್ ಅಮೇರಿಕಾ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಸುಪ್ರಸಿದ್ಧ ಸ್ಟಾರ್ ವಾರ್ಸ್ ಚಿತ್ರಗಳ ನಿರ್ಮಾಪಕ ನಿರ್ದೇಶಕರಾದ ಇವರು ಅಮೇರಿಕಾದ ಹಲವು ಗಣ್ಯರಲ್ಲೊಬ್ಬರು. ಲ್ಯೂಕಾಸ್ ಫಿಲ್ಮ್ಸ್ ಲಿಮಿಟೆಡ್ ಸಂಸ್ಥಾಪಕರೂ ಹೌದು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
                                               

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, ಯವರ, ಜನ್ಮ ಶತಾಬ್ದಿಯ ವರ್ಷವಾದ ೧೯೬೯ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. ಪ್ರತಿ ವರ್ಷದ ಪ್ರಶಸ್ತಿಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ನೀಡಲಾಗುತ್ತದೆ.

ಮನೋಜ್ ನೈಟ್ ಶ್ಯಾಮಲನ್
                                               

ಮನೋಜ್ ನೈಟ್ ಶ್ಯಾಮಲನ್

ಮನೋಜ್ ಶ್ಯಾಮಲನ್ ಆಂಗ್ಲ ಚಿತ್ರಗಳ ನಿರ್ದೇಶಕ, ನಟ ಮತ್ತು ನಿರ್ಮಾಪಕ. ಮನೋಜ್ ಶ್ಯಾಮಲನ್ ಭಾರತದ ಪಾಂಡಿಚೆರಿಯಲ್ಲಿ ಆಗಸ್ಟ್ ೦೬, ೧೯೭೦ರಂದು ಜನಿಸದರು. ಈಗಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ. ಇವರ ಪೂರ್ಣ ಹೆಸರು ಮನೋಜ್ ನೆಲ್ಲಿಯಟ್ಟು ಶ್ಯಾಮಲನ್. ಇವರು ನಿರ್ದೇಶಿಸಿದ ದಿ ಸಿಕ್ಸ್ತ್ ಸೆನ್ಸ್ ಆಂಗ್ಲ ಚಿತ್ರ ವಿಶ್ವದೆಲ್ಲೆಡೆ ಪ್ರದರ್ಶನ ಕಂಡು ಪ್ರಸಿದ್ಧವಾಗಿತ್ತು. ಅನ್ ಬ್ರೇಕಬಲ್, ಸೈನ್ಸ್, ದಿ ವಿಲೇಜ್, ಲೇಡಿ ಇನ್ ದಿ ವಾಟರ್ ಮನೋಜ್ ನಿರ್ದೇಶಿಸಿದ ಇತರ ಚಿತ್ರಗಳು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →