Back

ⓘ ಗಾತಿಕ್ ಕಲೆ                                               

ಗಾತಿಕ್ ವಾಸ್ತು ಶೈಲಿ

ಈ ಶೈಲಿ ಎಲ್ಲಿ ಮತ್ತು ಹೇಗೆ ಉಗಮವಾಯಿತು ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಇಂಗ್ಲಿಷ್ ಚರಿತ್ರಕಾರರು ಇದು ಇಂಗ್ಲಿಷ್ ಜನಾಂಗದ ಕೊಡುಗೆಯೆಂದೂ ಜರ್ಮನ್ನರು ತಮ್ಮ ಕೊಡುಗೆಯೆಂದು ವಾದಿಸುವ ರಾದರೂ ಇತ್ತೀಚಿನ ಸಂಶೋಧನೆಗಳಿಂದ ಇದು ಫ್ರಾನ್ಸಿನ ಕೊಡುಗೆಯೆಂದೂ ಮೊಟ್ಟ ಮೊದಲು ಪ್ಯಾರಿಸ್ಸಿನ ಸಮೀಪದಲ್ಲಿ ಪ್ರಾರಂಭವಾಯಿತೆಂದೂ ತಿಳಿದುಬಂದಿದೆ. ಪ್ರ.ಶ. 1144ರಲ್ಲಿ ದೊರೆ ಏಳನೆಯ ಲೂಯಿ, ಅವನ ರಾಣಿ, ಐವರು ಆರ್ಚ್ಬಿಷಪ್ಪರು ಹದಿನಾಲ್ಕು ಬಿಷಪ್ಪರು ಮತ್ತು ಅನೇಕ ಜನಗಳು ಸೇಂಟ್ ಡೇನಿಸ್ ಕ್ರೈಸ್ತಮಠದಲ್ಲಿ ಸೇರಿ, ಆರಾಧನಾಗೀತೆಯನ್ನು ಹಾಡಲು ಅನುಕೂಲವಾಗಿರುವಂಥ ಪ್ರತ್ಯೇಕ ಕಟ್ಟಡ ಒಂದನ್ನು ರೂಪಿಸಿದರು. ಅದು ಉದ್ದನೆಯ ಗೋಪುರ, ಬಣ್ಣದ ಗಾಜಿನ ಕಿಟಕಿ ಮುಂತಾದವುಗಳಿಂದ ಕೂಡಿದ್ದು, ಪ್ಯಾರಿಸ್ಸಿನ ಸಮೀಪದಲ್ಲಿ ಮುಂದೆ ಕಟ್ಟಲಾದ ಚರ್ಚುಗಳಿಗೆಲ್ಲ ಒಂದು ...

                                               

ಇಂಗ್ಲೆಂಡಿನ ವಾಸ್ತುಶಿಲ್

: ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಿಸಿದ ಸ್ಟೋನ್‍ಹೆಂಜ್ ಮುಂತಾದವುಗಳನ್ನು ಬಿಟ್ಟರೆ, ಇಂಗ್ಲೆಂಡಿನ ಮುಖ್ಯ ವಾಸ್ತುಕೃತಿಗಳು ಆ ದೇಶ ರೋಮ್ ಸಾಮ್ರಾಜ್ಯದ ಅಧೀನದಲ್ಲಿದ್ದ ಕಾಲಕ್ಕೆ ಸೇರಿದವುಗಳಾಗಿವೆ. ಈ ಕಾಲದ ಕೆಲವು ಸ್ನಾನದ ಕೊಳಗಳ ಉಳಿಕೆಗಳು ಬಾತ್, ಲೀಸ್ಟರ್, ರಾಚೆಸ್ಟರ್ ಮುಂತಾದ ಕಡೆಗಳಲ್ಲಿ ಅನೇಕ ಕೋಟೆಗಳೂ ಬಿಡಿ ಮನೆಗಳ ಅವಶೇಷಗಳೂ ಲಂಡನ್, ಬಿನ್ನೋರ್, ಸಸಿಕ್ಸ್, ಬ್ರೇಡಿಂಗ್, ವುಡ್‍ಚೆಸ್ಟರ್ ಮುಂತಾದೆಡೆಗಳಲ್ಲೂ ಬೆಳಕಿಗೆ ಬಂದಿವೆ. ಈ ಕಾಲದ ಬಿಡಿಮನೆಗಳು ವಿಶೇಷವಾಗಿ ದಕ್ಷಿಣಕ್ಕೆ ತೆರೆದಂತೆ "U" ಆಕೃತಿಯಲ್ಲಿದ್ದು ಐವತ್ತಕ್ಕೂ ಹೆಚ್ಚು ಕೋಣೆಗಳನ್ನು ಒಳಗೊಂಡಿರುತ್ತಿದ್ದವು.

ಗಾತಿಕ್ ಕಲೆ
                                     

ⓘ ಗಾತಿಕ್ ಕಲೆ

ಪ್ರ.ಶ. 12ನೆಯ ಶತಮಾನದಿಂದ 15ನೆಯ ಶತಮಾನದವರೆಗೆ ಯುರೋಪಿನ ವಿವಿಧ ಭಾಗಗಳಲ್ಲಿ ಪ್ರಸಿದ್ಧವಾಗಿದ್ದ ಕಲಾ ಸಂಪ್ರದಾಯ. ಜರ್ಮನಿಯ ಗಾತ್ ಎಂಬ ಬುಡಕಟ್ಟಿಗೆ ಸೇರಿದ ಜನ ರೋಮನ್ ಸಾಮ್ರಾಜ್ಯವನ್ನು ಗೆದ್ದು ರೋಮನರ ಅನೇಕ ಕಟ್ಟಡಗಳನ್ನೂ ಶಿಲ್ಪಗಳನ್ನೂ ನಾಶಮಾಡಿದರು. ಈ ಜನ ಅನಾಗರಿಕರೆಂದೂ ಅಭಿಜಾತ ರೋಮನ್ ಮತ್ತು ಗ್ರೀಕ್ ಸಂಪ್ರದಾಯಗಳನ್ನು ಅರಿಯದವ ರೆಂದೂ ಭಾವಿಸಿದ್ದ. ಕೆಲವರು ಈ ಕಾಲದಲ್ಲಿ ಬೆಳೆದುಬಂದ ಕಲೆಯನ್ನು ಗಾತಿಕ್ ಕಲೆ ಎಂದು ಕರೆದರು. ಒರಟರೂ ಅನಾಗರಿಕರೂ ಆದ ಜನಗಳ ಕಲೆಯೆಂಬ ತಾತ್ಸಾರ ಭಾವನೆಯಿಂದ ಈ ಪದ ಮೊದಲು ಬಳಕೆಗೆ ಬಂದಂತೆ ಕಾಣುತ್ತದೆ. ಕಾಲಕ್ರಮದಲ್ಲಿ ಈ ಕಲೆಯ ಅವಶೇಷಗಳ ಪುರ್ಣ ಅಧ್ಯಯನ ವಾದ ಮೇಲೆ ಈ ತಾತ್ಸಾರ ಮನೋಭಾವ ಮಾಯವಾಗಿ ಗಾತಿಕ್ ಕಲೆ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ ಯೆಂದೂ ಯುರೋಪಿನ ಕಲೆಗೆ ಇದರ ಕೊಡುಗೆ ಮಹತ್ತರವಾದು ದೆಂದೂ ಜನ ಅರಿತರು. ಗಾತಿಕ್ ಸಂಪ್ರದಾಯ ಮಧ್ಯ ಫ್ರಾನ್್ಸ ದೇಶದಲ್ಲಿ ಪ್ರ.ಶ. 12ನೆಯ ಶತಮಾನದಲ್ಲಿ ಪ್ರಾರಂಭವಾಗಿ 13, 14 ಮತ್ತು 15ನೆಯ ಶತಮಾನಗಳಲ್ಲಿ ಯುರೋಪಿನ ವಿವಿಧ ಭಾಗಗಳಿಗೆ ಹರಡಿತು. ಅನಂತರ ಪುನರುಜ್ಜೀವನ ಕಲೆ ಉಚ್ಛ್ರಾಯ ಸ್ಥಿತಿಗೆ ಬಂದ ಮೇಲೆ ಆ ಸಂಪ್ರದಾಯ ನಶಿಸಿ ಹೋಯಿತು.

ವಾಸ್ತು ವಿಭಾಗಕ್ಕೆ ಸೇರಿದಂತೆ ಈ ಕಲೆಯ ವೈಶಿಷ್ಟ್ಯಗಳು ಹೀಗಿವೆ. ಅಡ್ಡಡ್ಡಲಾಗಿದ್ದ ಕಟ್ಟಡಗಳು ಉದ್ದುದ್ದ ವಾಗಿಯೂ ಚೂಪಾಗಿಯೂ ಬೆಳೆದದ್ದು ಈ ಕಾಲದಲ್ಲಿ. ಉದ್ದನೆಯ ಮತ್ತು ತೆಳುವಾದ ಕಂಬಗಳ ಆಸರೆಯಿಂದ ಚೂಪಾದ ಕಮಾನುಗಳನ್ನು ತಯಾರಿಸಿ ರುವುದು ಇನ್ನೊಂದು ವೈಶಿಷ್ಟ್ಯ. ಮರದಿಂದ ಚಾವಣಿ ಗಳನ್ನು ಮಾಡುವ ತಂತ್ರಕ್ಕೆ ಬದಲಾಗಿ ಕಲ್ಲನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಲು ಪ್ರಾರಂಭ ವಾದುದೂ ಈ ಕಾಲದಲ್ಲೇ. ಚೂಪಾದ ಗೋಪುರಗಳು ವಿಶೇಷವಾಗಿ ಬಳಕೆಗೆ ಬಂದುದ ರಿಂದ ಈ ಕಾಲದ ಕಟ್ಟಡಗಳಿಗೆ ಒಂದು ರೀತಿಯ ವಿಶಿಷ್ಟ ಸೌಂದರ್ಯ ಬಂತು. ಗಾತಿಕ್ ಕಲೆ ಅಭಿವೃದ್ಧಿಯಾದಂತೆ ಅಲಂಕರಣ ಕಾರ್ಯ ವಿಶೇಷವಾಗತೊಡಗಿತು. ರೋಮನೆಸ್ಕ ಕಲೆಗಿಂತ ಭಿನ್ನವಾದ ರೀತಿಯಲ್ಲಿ ಈ ಅಲಂಕರಣ ವಿನ್ಯಾಸ ವ್ಯಾಪಕವಾಗಿ ಬೆಳೆದು ಬಂತು. ಇದು ಎಷ್ಟೊಂದು ವಿಸ್ತಾರವಾಗಿ ಬೆಳೆಯಿತೆಂದರೆ, ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಯಿತು. ರೋಮನೆಸ್ಕ ಕಲೆಯ ವೃತ್ತಾಕಾರದ ಚಿಹ್ನೆಗಳ ಜೊತೆಗೆ ಜ್ಯಾಮಿತಿಯ ವಿವಿಧ ಚಿಹ್ನೆಗಳು ವಿಶೇಷವಾದುವು. ಇವುಗಳ ಜೊತೆಗೆ ಲತೆಗಳು, ಬಳ್ಳಿಗಳು, ಎಲೆಗಳು ಮತ್ತು ಹೂಗಳ ಅಲಂಕರಣ ವಿಶೇಷವಾದುವು. ಜೊತೆಯಲ್ಲಿಯೇ ವಿಚಿತ್ರವಾದ ಪ್ರಾಣಿಗಳ ಪಿಶಾಚಿಗಳ ಮತ್ತು ಪೌರಾಣಿಕ ಪ್ರಾಣಿಗಳ ಅಲಂಕಾರವೂ ಗೋಡೆಗಳ ಮೇಲೆ ಕಾಣಬಂದುವು. ಇವುಗಳಿಂದ ಗಾತಿಕ್ ಕಲೆಯ ಅಲಂಕಾರ ಒಂದು ವಿಚಿತ್ರ ರೀತಿಯದೆಂದು ಪ್ರಸಿದ್ಧವಾಯಿತು.

ಬಣ್ಣದ ಗಾಜುಗಳ ಬಳಕೆ ಗಾತಿಕ್ ಕಲೆಯ ಮತ್ತೊಂದು ವೈಶಿಷ್ಟ್ಯ. ಕಟ್ಟಡಗಳು ಕಿಟಕಿಗಳಿಗೆ ವಿವಿಧ ಆಕಾರಗಳ ಮತ್ತು ವಿಧವಿಧವಾದ ಬಣ್ಣಗಳ ಗಾಜು ಗಳನ್ನು ಅಳವಡಿಸಲಾಯಿತು. ಈ ಬಣ್ಣದ ಗಾಜುಗಳು ಬೆಳಕನ್ನು ಪ್ರತಿಬಿಂಬಿಸಿ ಕಟ್ಟಡಗಳ ಒಳಭಾಗ ವನ್ನು ಒಂದು ರೀತಿಯ ಮಾಯಾ ಜಾಲಗಳಂತೆ ಮಾಡಿದುವು. ಗೋಡೆಗಳ ಮೇಲೆ ವರ್ಣಚಿತ್ರ ಗಳೂ, ಶಿಲ್ಪಗಳೂ ವಿಶೇಷವಾದವು. ಕೆತ್ತನೆಯ ಕೆಲಸ ಈ ಕಾಲದಲ್ಲಿ ನಿಜವಾದ ಕಲೆಯೆನಿಸಿತು. ಕಲ್ಲು, ಮರ, ದಂತ ಮೊದಲಾದ ವಸ್ತು ಗಳಲ್ಲಿ ಮಾಡಿದ ಶಿಲ್ಪಗಳು ಕಿಟಕಿಯ ಗೂಡುಗಳಲ್ಲಿ, ಬಾಗಿಲುವಾಡದ ಮೇಲ್ಭಾಗಗಳಲ್ಲಿ ವಿಶೇಷವಾದವು. ಇವುಗಳು ಮಾತ್ರವಲ್ಲದೆ, ಕಿಟಕಿಯ ಮತ್ತು ಬಾಗಿಲಿನ ಕೊಂಡಿಗಳು, ಚಿಲಕಗಳು, ಬೀಗಗಳು ಈ ಮೊದಲಾದವು ಕೂಡ ಕಲಾತ್ಮಕವಾಗಿದ್ದು, ಎಲ್ಲೆಲ್ಲೂ ಕಲೆಯ ಉತ್ಕರ್ಷವನ್ನು ತೋರಿದುವು. ಇವುಗಳ ಜೊತೆಗೆ ದಿನಬಳಕೆಯ ವಸ್ತುಗಳಾದ, ಮಂಚ, ಕುರ್ಚಿ, ಮೇಜು ಮುಂತಾದವೂ ಉಪಯುಕ್ತವಷ್ಟೇ ಅಲ್ಲದೆ ನಿಜವಾದ ಕಲಾವಸ್ತುಗಳೇ ಆದವು. ಸ್ಯಾಲಿಸ್ಬರಿ, ಲಿಂಕನ್ ಮತ್ತು ಕ್ಯಾಂಟರ್ಬರಿಗಳಲ್ಲಿರುವ ಕತೀಡ್ರಲ್ಗಳಲ್ಲಿ ಉಳಿದು ಬಂದಿರುವ ಈ ವಸ್ತುಗಳಿಂದ ಗಾತಿಕ್ ಕಲೆಯ ಅಲಂಕಾರದ ಸ್ವರೂಪ ನಮಗೆ ವ್ಯಕ್ತವಾಗುತ್ತದೆ.

ಗಾತಿಕ್ ಕಲಾವಸ್ತುಗಳಲ್ಲಿ ಅಲಂಕೃತ ಬಟ್ಟೆಗಳೂ ಪೀಠೋಪಕರಣಗಳನ್ನು ಮುಚ್ಚಲು ಉಪಯೋಗಿಸುತ್ತಿದ್ದ ಗವುನುಗಳೂ ವಿಶೇಷವಾಗಿ ಉಳಿದು ಬಂದಿಲ್ಲ. ಆದರೆ ಕತೀಡ್ರಲ್ಗಳಲ್ಲಿರುವ ವರ್ಣಚಿತ್ರಗಳಲ್ಲಿ ಉಬ್ಬು ಚಿತ್ರದ ನಮೂನೆಗಳನ್ನು ನೆಯ್ದಿರುವ ಕಿನ್ಕಾಪು ಕೆಲಸ ಮಾಡಿದ ವಸ್ತ್ರಗಳನ್ನೂ ಮಖಮಲ್ಲು ಬಟ್ಟೆಗಳನ್ನೂ ಧರಿಸಿರುವ ಸ್ತ್ರೀ ಪುರುಷರನ್ನು ಕಾಣಬಹುದು. ಈ ರೀತಿಯ ಕೆಲಸಗಳಿಗೆ ಸಮಕಾಲೀನ ಇಟಲಿ ಪ್ರಸಿದ್ಧ ವಾಗಿತ್ತು. ಚಿತ್ರಗಳನ್ನು ನೇಯ್ದ ಗೋಡೆತೆರೆಗಳು ಬಹು ನಾಜೂಕಾಗಿದ್ದುವು. ಈ ರೀತಿಯ ಚಿತ್ರಗಳಲ್ಲಿ ವಿಶೇಷವಾಗಿ ಲತೆಗಳು ಮತ್ತು ಬಳ್ಳಿಗಳು ಕಂಡರೂ ಅಪುರ್ವ ವಾಗಿ ಮಾನವಾಕೃತಿಯ ಮತ್ತು ಪ್ರಾಣಿಗಳ ಚಿತ್ರಗಳೂ ಬಳಸಲ್ಪಡುತ್ತಿದ್ದವು. ಪ್ರ.ಶ. 15ನೆಯ ಶತಮಾನದ ಅನಂತರ ಪುನರುಜ್ಜೀವನ ಕಲೆ ಬೆಳೆದು ಗಾತಿಕ್ ಕಲೆ ಅವನತಿಯನ್ನು ಹೊಂದಲು ಪ್ರಾರಂಭಿಸಿ ತಾದರೂ ಬಹುಕಾಲದವರೆಗೆ ಗಾತಿಕ್ ಕಲೆಯ ಲಕ್ಷಣಗಳು ಒಂದಲ್ಲ ಒಂದು ರೀತಿಯಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಯುರೋಪಿಯನ್ ಕಲೆಯಲ್ಲಿ ಸೇರಿದುವು. ಇದು ಗಾತಿಕ್ ಕಲೆ ಎಷ್ಟು ಜನಾನುರಾಗಿ ಯಾಗಿತ್ತೆಂಬುದಕ್ಕೂ ಅದರಲ್ಲಿ ನಿತ್ಯ ನೂತನವಾದ ಲಕ್ಷಣಗಳು ಇದ್ದುವೆಂಬುದಕ್ಕೂ ಸಾಕ್ಷಿಯಾಗಿದೆ ನೋಡಿ- ಐರೋಪ್ಯಕಲೆ; ಗಾತಿಕ್ ವಾಸ್ತುಶೈಲಿ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →