Back

ⓘ ಮಧುಬನಿ ಕಲೆಮಧುಬನಿ ಕಲೆ
                                     

ⓘ ಮಧುಬನಿ ಕಲೆ

ಮಧುಬನಿಕಲೆ ಅಥವ ಮಿಥಿಲ ಚಿತ್ರಕಲೆ ಭಾರತದ ಚಿತ್ರ್ಕಲೆ ಶೈಲಿಗಳಲ್ಲಿ ಒಂದಾಗಿದೆ. ಬಿಹಾರ್ ರಜ್ಯದ ಮಿಥಿಲ ಪ್ರದೇಶದಲ್ಲಿ, ಭಾರತದ ಪಕ್ಕದಲ್ಲಿರು ನೆಪಾಲಿನ ತೆರಾಯಿನಲ್ಲಿ ಈ ಕಲೆ ಕಂಡು ಬರುತ್ತದ. ಚಿತ್ರಗಳನ್ನು ನೈಸರ್ಗಿಕ ವರ್ಣಗಳು ಮತ್ತು ವರ್ಣದ್ರವ್ಯಗಳನ್ನು ಬಳಸಿ, ಬೆರಳುಗಳು, ಕೊಂಬೆಗಳನ್ನು, ಕುಂಚ, ಮುಳ್ಳು-ಪೆನ್ನುಗಳು, ಮತ್ತು ಬೆಂಕಿ ಪೊಟ್ನತ್ದ ಕಡ್ಡಿಯನ್ನು ಉಪಯೊಗಿಸಿ ಮಾಡಲಾಗುತ್ತದೆ. ಅಕರ್ಶಕವಾದ ರೇಖಾಗಣಿತದ ಗುಣಲಕ್ಷಣಗಳನ್ನು ಕೂಡಿರುವ ಕಲೆಯಾಗಿ ತೊರುತ್ತದೆ. ಪ್ರತಿ ಆಚರಣೆ ಮತ್ತು ಹಬ್ಬ ವಿವರಿಸುವುದಕ್ಕೆ ಚಿತ್ರಗಲಿವೆ, ಅದು ಹೊಲಿ, ಕಾಳಿ ಪೂಜೆ,ಸೂರ್ಯ ಶಸ್ತಿ, ಅಥವ ಹುಟ್ಟ ಹಬ್ಬವಿರಬಹುದು ಸಂಗತಿಯಾಗಲಿ ಅದಕ್ಕೆ ಚಿತ್ರವಿದೆ.

                                     

1. ಉಗಮ

ಮಧುಬನಿ ಚಿತ್ರಕಲೆ ಅಥವಾ ಮಿಥಿಲಾ ಚಿತ್ರಕಲೆ ಮಧುಬನಿ ವಾಚ್ಯಾರ್ಥ ಅರ್ಥವು ಜೇನು ಅರಣ್ಯಗಳು ಮೂಲಗಳು ಪ್ರಾಚೀನತೆ ಮತ್ತು ಪುರಾಣದಲ್ಲಿ ಮುಚ್ಚಿಹೋದಗಿದೆ.ಸಾಂಪ್ರದಾಯಿಕವಾಗಿ ಮಧುಬನಿ ಪ್ರಸ್ತುತವಾದ ದರ್ಭಾಂಗ ಪಟ್ಟಣ ಮತ್ತು ಮಿಥಿಲಾ ಇತರ ಪ್ರದೇಶಗಳಲ್ಲಿ ಸುಮಾರು ಹಳ್ಳಿಗಳ ಮಹಿಳೆಯರು ಮಡುತಾರೆ.ಈ ಚಿತ್ರಕಲೆ ಮುಂಚೆ ಹೊಸದಾಗಿ ಸುಣ್ಣ ಹಾಕಿರುವ ಮಣ್ಣಿನ ಗೋಡೆಗಳು ಮತ್ತು ಗುಡಿಸಲುಗಳ ನೆಲದ ಮೇಲೆ ಮಾಡಲಾಯಿತು, ಆದರೆ ಈಗ ಅವರು ಬಟ್ಟೆ, ಕರಕುಶಲ ಕಾಗದ ಮತ್ತು ಕ್ಯಾನ್ವಾಸ್ ಮೇಲೆ ಮಾಡುತ್ತಾರೆ. ಚಿತ್ರ ಮಾಡಲು ಅಕ್ಕಿಯ ಗಂಜಿ ಬಳಸಲಾಗುತ್ತದೆ.ಮಧುಬನಿ ಚಿತ್ರಕಲೆ ಒಂದು ಸಾಂದ್ರ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿ ಉಳಿದಿದೆ. ಮಿಥಿಲ ಕೌಶಲವನ್ನು ಶತಮಾನಗಳಿಂದ ಪೀಳಿಗೆಯ ಮೂಲಕ ವರ್ಗಾಯಿಸಲ್ಪಟ್ಟಿ ದೆ. ಈ ಕಲೆಯ ವಿಷಯ ಮತ್ತು ಶೈಲಿಯು ಹೆಚ್ಚಾಗಿ ಹಾಗೆ ಉಳಿದಿದೆ. ಇದರಿಂದ ಮಧುಬನಿ ಕಲೆಗೆ ಅಸ್ಕರವಾದ್ ಜಿ.ಐ Geographical Indication ಸ್ಥಾನಮಾನ ಪಡೆದಿದೆ. ಚಿತ್ರಗಳಲ್ಲಿ ಎರಡು ಆಯಾಮವನ್ನು ಬಳಸಲಾಗಿದೆ. ಬಣ್ಣ್ಗಗಳನ್ನು ಸಸ್ಯಗಳಿಂದ ಪಡೆಯುತ್ತಾರೆ. ಕಾವಿಮಣ್ಣು ಬಣ್ಣ ಮತ್ತು ದೀಪದ ಮಸಿ ಬಣ್ಣ,ಅನುಕ್ರಮವಾಗಿ, ಕಂದು ಮತ್ತು ಕಪ್ಪನ್ನು ವ್ಯಕ್ತಪಡಿಸಲ್ಪಡುತ್ತದೆ.

ಹೆಚ್ಚಾಗಿ ಮನುಷ್ಯ ಮತ್ತು ಪ್ರಕೃತಿಯ ಒಡನಾಟವನ್ನು ಅಥವ ಮಹಾಕಾವ್ಯಗಳಲ್ಲಿರುವ ದೇವತೆಗಳ್ನ್ನು ಬಿಂಬಿಸುತ್ತವೆ.ಸ್ವಾಭಾವಿಕ ವಸ್ತುಗಳಾಅದ ಸೂರ್ಯ, ಚಂದ್ರ ಮತ್ತು ತುಳಸಿ ನಂತಹ ಧಾರ್ಮಿಕ ಗಿಡಗಳು ಜೊತೆಗೆ ರಾಯಲ್ ಕೋರ್ಟ್ ಮತ್ತು ಮದುವೆ ಮುಂತಾದ ಸಾಮಾಜಿಕ ಘಟನೆಗಳ ದೃಶ್ಯಗಳನ್ನು ಚಿತ್ರಿಸಲಾಗುತ್ತದೆ.ಸಾಮಾನ್ಯವಾಗಿ ಯಾವುದೇ ಜಾಗವನ್ನು ಖಾಲಿ ಬಿಡುವುದಿಲ್ಲ ; ಅಂತರದಲ್ಲಿ ಹೂಗಳು, ಪ್ರಾಣಿಗಳು, ಪಕ್ಷಿಗಳು, ಮತ್ತು ಜ್ಯಾಮಿತೀಯ ವಿನ್ಯಾಸಗಳ ವರ್ಣಚಿತ್ರಗಳಿಂದ ತುಂಬಿರುತ್ತವೆ. Kohbar ಘರಿನಹೊಸತಾಗಿ ಮದುವೆಯಾದ ದಂಪತಿಗಳು ತಮ್ಮ ಮೊದಲ ರಾತ್ರಿ ಪರಸ್ಪರ ನೋಡುವ ಕೋಣೆ ಗೋಡೆಗಳ ಮೇಲೆ ಬಿಡಿಸಿರುವ ಚಿತ್ರಗಳು ಲೈಂಗಿಕ ಸಂತೋಷದ ಸಂಕೇತಗಳಾಗಿವೆ. ಸಾಂಪ್ರದಾಯಿಕವಾಗಿ ಈಚಿತ್ರಕಲೆ ಮುಖ್ಯವಾಗಿ ಮಿಥಿಲಾ ಪ್ರದೇಶದ ಮಹಿಳೆಯರು ತಮ್ಮ ಕುಟುಂಬಗಳ ಪೀಳಿಗೆಯಿಂದ ಪೀಳಿಗೆಗೆ ಬಳುವಳಿಯಾಗಿ ಬರುವ ಕೌಶಲಗಳಲ್ಲಿ ಒಂದು.

                                     

2. ಕಲಾವಿದರು ಮತ್ತು ಪ್ರಶಸ್ತಿಗಳನ್ನು

ಭಾರತದ ಅಧ್ಯಕ್ಷ ಮಧುಬನಿ ಬಳಿ ಇರುವ ಜಿತ್ಬರ್ಪುರ್ ಗ್ರಾಮದ, ಜಗ್ದಮ್ಬ ದೇವಿಯವರಿಗೆ ಪ್ರಶಸ್ತಿ ನೀಡಿದಾಗ ಮಧುಬನಿ ಚಿತ್ರಕಲೆ, 1970 ರಲ್ಲಿ ಅಧಿಕೃತ ಮನ್ನಣೆ ಪಡೆಯಿತು. ವರ್ಣಚಿತ್ರಕಾರರು, ಮಹಾಸುನ್ದ್ರಿ ದೇವಿ,ಸೀತಾ ದೇವಿ, ಗೋದಾವರಿ ದತ್, ಭಾರ್ತಿ ದಯಾಳ್ ಮತ್ತು ಬುವಾ ದೇವಿ ಕೂಡ ​​ಈ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಶ್ರೀಮತಿ ಭಾರತಿ ದಯಾಳ್ ೨೦೦೧ ವರ್ಷದ AIFAC ರಿಂದ ಮಿಲೇನಿಯಮ್ ಕಲೆ ಸ್ಪರ್ಧೆ ಅಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ ಐವತ್ತು ಸ್ವತಂತ್ರ ಭಾರತದಲ್ಲಿ ಕಲೆಯ ವರ್ಷಗಳ ಮತ್ತು ಮಿಥಿಲಾ ಚಿತ್ರಕಲೆ ಮತ್ತು ತನ್ನ ಚಿತ್ರಕಲೆ "ಎಟರ್ನಲ್ ಸಂಗೀತ" ನಲ್ಲಿ ಕಲಾಂಕರಿ ರಾಜ್ಯ ಪ್ರಶಸ್ತಿಯನ್ನು ಅಖಿಲ ಭಾರತ ಫೈನ್ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಒಂದು ಪ್ರಶಸ್ತಿ.ಶ್ರೀಮತಿ ಭಾರತಿ ದಯಾಳ್ ಕೂಡ ಬಿಹಾರದ ೧೦೦ ವರ್ಷ ನೆನಪಿಗಾಗಿ ಹಬ್ಬಗಳ ಮಧ್ಯೆ ವಿಶಿಷ್ಟ್ ಬಿಹಾರಿ ಸಮ್ಮಾನ್ ಮನ್ನಣೆ ಇದೆ.ಅವರು ಜಾಗತಿಕವಾಗಿ, ಮಧುಬನಿ ಕಲೆಯಲ್ಲಿ ತನ್ನ ಅಸಾಧಾರಣ ಕೆಲಸಕ್ಕಗಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ೨೦೧೩ರಲ್ಲಿ ಅಭಿನಂದಿಸಲಾಯಿತು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →