Back

ⓘ ಕನ್ನಡ ಸಾಹಿತ್ಯ ಪರಿಷತ್ತು                                               

ಶಿಗ್ಗಾಂವಿ

ಶಿಗ್ಗಾಂವ ತಾಲೂಕಿನಲ್ಲಿರುವ ವಿಶೇಷವೆಂದರೆ ಮೊದಲ ಮಹಮ್ಮದಿಯ ಕವಿ ಶಿಶುವಿನಹಾಳ ಶರೀಫಶಿವಯೊಗಿಗಳು ಜನಿಸಿದ ಸ್ಥಳ ಹಾಗೂ ಕನಕದಾಸರು ಜನಿಸಿದ ಬಾಡ ಗ್ರಾಮವು ಈ ತಾಲೂಕಿನಲ್ಲಿದೆ. ಜೊತೆಗೆ ಕ್ರೀಯಾಶೀಲ ಕನ್ನಡ ಸಾಹಿತ್ಯ ಪರಿ‍‍‍‌‍‍‍‍‍ಷತ್ತು ವಿವಿದ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.ಮನೆಯಂಗಳದಲ್ಲಿ ಸಾಹಿತ್ಯ ಸೌರಭ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಕನ್ನಡ ಶಿಕ್ಷಕರಿಗಾಗಿ ಕನ್ನಡ ಕಮ್ಮಟ, ಪದವಿ ವಿದ್ಯಾರ್ಥಿಗಳಿಗಾಗಿ ಹಳಗನ್ನಡ ಓದು, ಪದವಿಪೂರ್ವ ಹಾಗೂ ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ಜಾಗೃತಿ ಅಭಿಯಾನ ಇವು ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಕಾರ್ಯಕ್ರಮಗಳಾಗಿವೆ ಸದ್ಯ ಅದರ ಅಧ್ಯಕ್ಷರಾಗಿ ನಾಗರಾಜ ಜಿ ದ್ಯಾಮನಕೊಪ್ಪ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ೨೦೧೭ ರಲ್ಲಿ ರಾಜ್ಯ ಮಾದ ...

                                               

ಎಂ. ರಾಘವೇಂದ್ರರಾವ್

ಗಮಕ ಕಲೆಯನ್ನು ಬೆಳೆಸಿ ನಾಡಿನಾದ್ಯಂತ ಪ್ರಚಾರಪಡಿಸಿದ ರಾಘವೇಂದ್ರರಾಯರು ಆಗಸ್ಟ್ ೭, ೧೯೧೪ರಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಜನಿಸಿದರು. ಅವರ ತಂದೆ ಮೈಸೂರು ನೀಲಕಂಠ ಕೇಶವರಾಯರು ಮತ್ತು ತಾಯಿ ವೆಂಕಟಲಕ್ಷ್ಮಮ್ಮನವರು. ರಾಘವೇಂದ್ರರಾಯರಿಗೆ ತಂದೆಯಿಂದಲೇ ಸಾಹಿತ್ಯದ ಪಾಠ ಮೊದಲ್ಗೊಂಡಿತು. ಹತ್ತನೇ ವಯಸ್ಸಿನಿಂದಲೇ ಪ್ರಾರಂಭವಾದ ಅವರ ಗಮಕ, ಅವರ ಕಡೆಯ ಉಸಿರಿನವರೆಗೂ ಅವರೊಡನೆ ನಿರಂತರವಾಗಿತ್ತು. ಸುಮರು ೭೫ವರ್ಷಗಳಷ್ಟು ದೀರ್ಘಕಾಲ ಅವರು ಗಮಕವನ್ನೇ ಉಸಿರಾಡಿದವರು. ರಾಯರು ಮೈಸೂರಿನ ಜವಳಿ ಅಂಗಡಿ ತಮ್ಮಯ್ಯನವರಲ್ಲಿ ಗಮಕ ಅಭ್ಯಾಸವನ್ನು ಗುರುಕುಲಪದ್ಧತಿಯಲ್ಲಿ ನಡೆಸಿದರು.

                                               

ಚಂದ್ರಿಕಾ ಪುರಾಣಿಕ

ಚಂದ್ರಿಕಾ ಪುರಾಣಿಕ- ಕನ್ನಡದ ಲೇಖಕಿಯರಲ್ಲಿ ಒಬ್ಬರು. ಇವರ ಜನನ ೨೯ ನವೆಂಬರ್ ೧೯೬೦ರಂದು,ಬೆಂಗಳೂರಿನಲ್ಲಿ ಆಯಿತು.ಇವರ ತಂದೆ ಅನ್ನದಾನಯ್ಯ ಪುರಾಣಿಕ ಮತ್ತು ದೊಡ್ಡಪ್ಪ ಸಿದ್ದಯ್ಯ ಪುರಾಣಿಕ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಕಾಶವಾಣಿ ಕಲಾವಿದರು ಮತ್ತು ಮಹಿಳಾ ಸಾಹಿತಿಯಾಗಿದ್ದಾರೆ. ಈಗ ಬೆಂಗಳೂರಿನ ಶೇಷಾದ್ರಿಪುರ ಸಂಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಯ ಸದಸ್ಯೆ ಆಗಿದ್ದಾರೆ. ಬಸವ ಪಥ ಮಾಸಿಕ ಪತ್ರಿಕೆಯ ಸಹ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.ರಾಜ್ಯದಲ್ಲಿ ನೆಡೆಯುತ್ತಿರುವ ಸ್ತ್ರೀ ಸ್ವಾತಂತ್ರ್ಯ ಮತ್ತು ದಲಿತ ಪರ ಚಳುವಳಿಗಳಲ್ಲಿ ಇವರು ಸಕ್ರೀಯ ಪಾತ್ರ ವಹಿಸುತ್ತಿದ್ದಾರೆ.

                                               

ಶ್ರೀಮತಿ ಯಶೋದಮ್ಮ

ಶ್ರೀಮತಿ ಯಶೋದಮ್ಮ ಸಿದ್ಬಟ್ಟೆಯವರು ಮಲೆನಾಡಿನ ಮಗಳಾಗಿ ಹುಟ್ಟಿ,ಬಯಲು ಸೀಮೆಯ ಸೂಸೆಯಾಗಿ ಬಂದವರು.ಇವರು ಬೀದರಿನ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾಷಾ ಸಹಾಯಕರಾಗಿ ಸೇವೆ ಸಲ್ಲಿಸಿ,ಈಗ ನಿವೃತ್ತರಾಗಿರುತ್ತಾರೆ.ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮಾಡಿ ಬಿ.ಎಡ್ ಮುಗಿಸಿರುತ್ತಾರೆ. ಇವರ ಅತ್ಯುತ್ತಮ ಶೈಕ್ಷಣಿಯ ಸೇವೆಯನ್ನು ಗಮನಿಸಿದ ಕರ್ನಾಟಕ ಸರಕಾರ "ರಾಷ್ಟ್ರಪ್ರಶಸ್ತಿ"ಯನ್ನಿತ್ತು ಸನ್ಮಾನಿಸಿದೆ.ಇವರು ಬೀದರ್ ಜಿಲ್ಲೆಗೆ "ರಅಷ್ಟ್ರಪ್ರಶಸ್ತಿ"ಯನ್ನು ತಂದು ಪ್ರಥಮ ಮಹಿಳೆಯಾಗಿರುವುದು ಹೆಮ್ಮೆಯ ಸಂಗತಿಯಗಿದೆ. ಯಶೋದಮ್ಮ ಸೆದ್ಬಟ್ಟೆಯವರು ಮೊದಲಿನಿಂದಲೂ ಕಥೆ, ಕವನ,ಹರಟೆಗಳನ್ನು ಬರೆಯುತ್ತಾ ಬಂದಿರುತ್ತಾರೆ. ಇವರು ಅತ್ತುತ್ತಮವಾಗಿ ಯಾಗಿದ್ದಾರೆ. ನೂರಾರು ವಿಷಯಗಳ ಮೇಲೆ ಉಪನ್ನಾಯ ನೀಡಿ ಬೀದರ ಜನತಿಯ ಮೆಚ್ಚುಇಗೆಗೆ ...

                                               

ಒತ್ತೆಕೋಲ

ಒತ್ತೆಕೋಲ ಆಗುವುದಕ್ಕೆ ಕೆಲವು ದಿನಗಳ ಮುಂಚೆಯೆ ವಿಷ್ಣುಮೂರ್ತಿ ದೈವದ ಪೂಜಾರಿಗೆ ದರ್ಶನ ಬರುತ್ತದೆ. ದರ್ಶನ ಬಂದುಪೂಜಾರಿ ಆದೇಶದ ಮೇರೆಗೆ ಊರಿನವರು ಐದು ಹಲಸಿನ ಮರದ ಕೊಂಬೆಗಳನ್ನು ಕಡಿದು ವಿಶಾಲವಾದ ಬಯಲಲ್ಲಿ ಹಾಕಿ ಮಹೂರ್ತ ನಿಶ್ಚಯಿಸುತ್ತಾರೆ. ಮಹೂರ್ತ ತಿಳಿಸಿದ ನಂತರ ಭಕ್ತಾದಿಗಳು ಸೇವೆಯ ರೂಪದಲ್ಲಿ ಕೊಳ್ಳಿಸೌದೆ ತಂದು ಹಾಕಬಹುದು. ಕೇರಳದ ಮಲಯರು ವಿಷ್ಣಮೂರ್ತಿ ದೈವವನ್ನು ಕಟ್ಟುತ್ತಾರೆ. ಊರ ಜನರು ಕ್ರಿಯಾ ಭಾಗಗಳನ್ನು ನೀಡಿದ ನಂತರ ದೈವವೇಷಧಾರಿಗೆ ದರ್ಶನಆವೇಶ ಬರುತ್ತದೆ. ಈ ಸಮಯದಲ್ಲಿ ಬಿಲ್ಲವ. ಗಾಣಿಗ, ಬಂಟ, ಗೌಡ ಹಾಗೂ ಮಣಿಯಾಣಿ ಸಮುದಾಯದವರು ವಿಷ್ಣುಮೂರ್ತಿ ಬಳಿಯಿರುವ ಕತ್ತಿ ಹಿಡಿಯುತ್ತಾರೆ. ಈ ವೇಳೆ ವಿವಿಧ ಜಾತಿಯ ಪೂಜಾರರಿಗೆ ದರ್ಶನ ಬಂದು ಆರ್ಭಟ ಮಾಡುತ್ತಾ ಕತ್ತಿಯನ್ನು ಎದೆಗೆ ಬಡಿದುಕೊಳ್ಳುತ್ತಾರೆ. ಅಲ್ಲಿಗೆ ಆ ದಿವಸದ ಕಾ ...

                                               

ಬಸವರಾಜ ಮಲಶೆಟ್ಟಿ

ಜನಪದ ಸಾಹಿತ್ಯದ ತೌರುಮನೆ ಎನಿಸಿರುವ ಬೆಳಗಾವಿ ಜಿಲ್ಲೆಯು ಹಲವಾರು ಜಾನಪದ ವಿದ್ವಾಂಸರಿಗೆ ಜನ್ಮ ನೀಡಿದ ಸ್ಥಳ. ಬೆಟಗೇರಿ ಕೃಷ್ಣ ಶರ್ಮ, ಚಂದ್ರಶೇಖರ ಕಂಬಾರ, ಎಂ.ಎಸ್. ಲಠ್ಠೆ, ನಿಂಗಣ್ಣ ಸಣ್ಣಕ್ಕಿ, ಜ್ಯೋತಿ ಹೊಸೂರ ಇವರ ಸಾಲಿಗೆ ಸೇರಿದ ಮತ್ತೊಬ್ಬ ಜಾನಪದ ವಿದ್ವಾಂಸರೆಂದರೆ ಬಸವರಾಜ ಮಲಶೆಟ್ಟಿಯವರು. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರಿನ ಸಮೀಪದ ತಿಗಡೊಳ್ಳಿ ಎಂಬ ಹಳ್ಳಿಯಲ್ಲಿ ಕಲಾವಿದರ, ಕುಸ್ತಿ ಪಟುಗಳ ಕುಟುಂದಲ್ಲಿ. ತಂದೆ ಮರಿಕಲ್ಲಪ್ಪ ಮಲಶೆಟ್ಟಿಯವರು, ಕುಸ್ತಿ ಪಟುಗಳು. ಅಜ್ಜ ರುದ್ರಪ್ಪ ಕೂಡಾ ಕುಸ್ತಿಯಲ್ಲಿ ಪ್ರಖ್ಯಾತರು. ತಾಯಿ ಸೋಬಾನೆ ಹಾಡುಗಾರ್ತಿ ನಾಗೇಂದ್ರವ್ವ.

                                               

ಲಕ್ಕೂರು ಸಿ. ಆನಂದ

ಲಕ್ಕೂರು ಸಿ. ಆನಂದ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ-ಬಂಡಾಯ ಕಾವ್ಯ ಮಾರ್ಗದ ಮೂರನೆಯ ತಲೆಮಾರಿಗೆ ಸೇರಿದವರು. ಸೃಜನಶೀಲ ಯುವ ಬರಹಗಾರ. ಕವಿ, ಸಂಶೋಧಕ, ವಿಮಶ‍ಕ, ಸಂಘಟನಾಕಾರ, ಅನುವಾದಕಾರ. ಮಾತೃಭಾಷೆ ತೆಲುಗು. ಪ್ರಸ್ತುತ ಲಕ್ಕೂರು ಸಿ. ಆನಂದ ಅವರು ಕೆಂಗೇರಿಯ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಕವಿ ಲಕ್ಕೂರು ಆನಂದ ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಆಳವಾದ ಅಧ್ಯಯನ ನಡೆಸಿದ್ದಾರೆ.ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಬಂದ ಅತ್ಯುತ್ತಮ ಆತ್ಮ ಕಥೆಗಳೆಂದರೆ, ರಾಣಿ ಶಿವ ಶಂಕರ ಶರ್ಮರ ಕೊನೆಯ ಬ್ರಾಹ್ಮಣ" ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕ ...

                                               

ಬಸವಲಿಂಗ ಪಟ್ಟದೇವರು

ಓಂ ಶ್ರೀ ಗುರು ಬಸವ ಲಿಂಗಾಯನಮಃ ಬಸವ ತತ್ವದ ನಿಜಾಚರಣೆ ÏÏÏÏÏÏ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೆವರ ಸಾಧನೆಯ ಹಾದಿ ÏÏÏÏÏÏÏ Dr.Basavalinga Pattaddevaru ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ. ಇವನರು, ಇವನರು? ಎಂದು ಕೆಳದೇ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದಿನರಿಗೆ,ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯಾರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ.ಎಂ.ಕಲಬುರ್ಗಿಯವರು" ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು.

                                               

ಮೈಲಹಳ್ಳಿ ರೇವಣ್ಣ

ಡಾ.ಮೈಲಹಳ್ಳಿ ರೇವಣ್ಣ ಜಾನಪದ ವಿದ್ಯಾಂಸರು, ಸಂಶೋಧಕರು, ಮಾರ್ಗದರ್ಶಕರು, ಪ್ರಾಧ್ಯಾಪಕರು, ಜನಪದ ಕಲಾವಿದರು, ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠದ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ.

                                               

ಬಾಗಲಕೋಟ ಜಾನಪದ ಪರಂಪರೆ

ಬಾಗಲಕೋಟ ಜಿಲ್ಲೆಯ ಜಾನಪದ ಪರಂಪರೆ ಕನ್ನಡ ಜಾನಪದ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯು ಹಲವು ಪ್ರಥಮಗಳಿಗೆ ಕಾರಣವಾಗಿದೆ.ಕನ್ನಡ ಜಾನಪದದ ಮೊದಲ ನೇಗಿಲ ಪೂಜೆ ನೆರವೇರಿಸಿದವರು ಈ ಜಿಲ್ಲೆಯವರು ಎಂಬುದು ದಾಖಲಾರ್ಹವಾದುದು.ಕ್ರಿ.ಶ. 700 ರ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಸಿಕ್ಕುವ ತ್ರಿಪದಿ ಕನ್ನಡ ಜಾನಪದದ ತಾಯಿ ಬೇರಾದರೆ,ಇದೇ ಬಾದಾಮಿಯಿಂದಲೇ ಕ್ರಿ.ಶ. 1874 ರ ಸುಮಾರಿಗೆ ಕನ್ನಡದಲ್ಲಿ ಮೊದಲ ಜನಪದ ಸಾಹಿತ್ಯ ಸಂಗ್ರಹಣಾ ಕಾರ್ಯ ಆರಂಭವಾಯಿತು.ಜೊತೆಗೆ ಬಾದಾಮಿ ತಾಲೂಕಿನ ಕೆರೂರದ ಡಾ.ಬಿ.ಎಸ್.ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದಲ್ಲಿ ಮೊದಲ ಪಿಎಚ್.ಡಿ. ಸಂಪಾದಿಸಿದರು.ಹೀಗೆ ಜಾನಪದದ ರೂಪ,ಸಂಗ್ರಹ,ಸಂಪಾದನೆ,ಸಂಶೋಧನೆ ಕಾರ್ಯಗಳೆಲ್ಲ ಬಾಗಲಕೋಟ ಜಿಲ್ಲೆಯಿಂದಲೇ ಮೊದಲಾದದ್ದು ಒಂದು ಐತಿಹಾಸಿಕ ಸತ್ಯವಾಗಿದೆ.

                                               

ಹಲ್ಮಿಡಿ ಶಾಸನ

ಹಲ್ಮಿಡಿ ಶಾಸನ ಕನ್ನಡ ಲಿಪಿಯಲ್ಲಿ ರಚಿಸಲ್ಪಟ್ಟಿರುವ ಮೊಟ್ಟ ಮೊದಲ ಶಾಸನ ಎಂದು ೨೦೧೭ವರೆಗೂ ದಾಖಲಾಗಿತ್ತು. ಇದು ಹಾಸನ ಜಿಲ್ಲೆಯ ಬಳಿಯಲ್ಲಿರುವ ಹಲ್ಮಿಡಿ ಎಂಬ ಸ್ಥಳದಲ್ಲಿ ೧೯೩೬ರಲ್ಲಿ ಡಾ. ಎಂ. ಎಚ್. ಕೃಷ್ಣ ಎಂಬುವವರಿಂದ ಸಂಶೋಧಿಸಲ್ಪಟ್ಟಿತು. ಇದು ಹದಿನಾರು ಸಾಲುಗಳನ್ನು ಹೊಂದಿದ್ದು, ಮರಳ ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು ಹಳಗನ್ನಡ ಹಾಗೂ ಬ್ರಾಹ್ಮೀ ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ. ಶತೃರಾಜರ ಮೇಲೆ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನ ಸಂಸ್ಕೃತ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರೌಢ ಕನ್ನಡವನ್ನು ನಿರೂಪಿಸ ...

ಕನ್ನಡ ಸಾಹಿತ್ಯ ಪರಿಷತ್ತು
                                     

ⓘ ಕನ್ನಡ ಸಾಹಿತ್ಯ ಪರಿಷತ್ತು

ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಡಾ. ಮನು ಬಳಿಗಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

                                     

1. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಪಟ್ಟಿ

೧೯೧೫ ರಿಂದ ೧೯೪೦ ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು.

 • ಹೆಚ್. ಬಿ. ಜ್ವಾಲನಯ್ಯ - ೧೯-೨-೧೯೮೬ ರಿಂದ ೧-೧೧-೧೯೮
 • ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ - ೧೭-೫-೧೯೫೬ ರಿಂದ ೨೫-೧೦-೧೯೬೪
 • ಪ್ರೊ. ಎ. ಎನ್. ಮೂರ್ತಿರಾವ್ ೯-೫-೧೯೫೪ ರಿಂದ೧೭-೫-೧೯೫೬
 • ಡಾ. ಸಾ. ಶಿ. ಮರುಳ್ಯಯ - ೨೨-೬-೧೯೯೫ ರಿಂದ ೧೦-೭-೧೯೯೮
 • ಶ್ರೀ ತಿರುಮಲೆ ತಾತಾಚಾರ್ಯ ಶರ್ಮ - ೨೯-೧೨-೧೯೪೭ ರಿಂದ ೬-೩-೧೯೪೯
 • ಪುಂಡಲೀಕ ಹಾಲಂಬಿ - ೦೩-೦೫-೨೦೧೨ ರಿಂದ ೨೦೧೫
 • ಶ್ರೀ ಎನ್. ಬಸವಾರಾಧ್ಯಾ - ೧೦-೭-೧೯೯೮ ರಿಂದ ೧೧-೭-೨೦೦೧
 • ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ - ೧೯೪೦-೧೯೪೦
 • ಶ್ರೀ ಎಚ್. ವಿ. ನಂಜುಂಡಯ್ಯ - ೧೯೧೫-೧೯೨೦
 • ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ - ೧೭-೧೨-೧೯೫೦ ರಿಂದ ೧೬-೯-೧೯೫೩
 • ಪ್ರೊ. ಚಂದ್ರಶೇಖರ ಪಾಟೀಲ ಚಂಪಾ- ೨-೧೧-೨೦೦೪ ರಿಂದ ೩೦-೪-೨೦೦೮
 • ಪ್ರೊ. ಜಿ. ವೆಂಕಟಸುಬ್ಬಯ್ಯ - ೨೫-೧೦-೧೯೬೪ ರಿಂದ ೧೧-೬-೧೯೬೯
 • ಡಾ. ಮನು ಬಳಿಗಾರ್ - ೦೩-೦೩-೨೦೧೬ ರಿಂದ ಹಾಲಿ ಅಧ್ಯಕ್ಷ
 • ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ - ೬-೩-೧೯೪೯ ರಿಂದ ೧೭-೧೨-೧೯೫೦
 • ಡಾ. ನಲ್ಲೂರು ಪ್ರಸಾದ್ ಆರ್. ಕೆ - ೨೭-೮-೨೦೦೮ ರಿಂದ ೨೭-೨-೨೦೧೨
 • ಡಾ. ಹಂಪ ನಾಗರಾಜಯ್ಯ - ೨೩-೭-೧೯೭೮ ರಿಂದ ೧೯-೨-೧೯೮೬
 • ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ -೩೦-೯-೧೯೫೩ ರಿಂದ ೯-೫-೧೯೫೪
 • ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ - ೧೯೪೧-೧೯೪೬
 • ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ - ೧೯೨೪ - ೧೯೪೦
 • ಶ್ರೀ ಗೊ. ರು. ಚನ್ನಬಸಪ್ಪ - ೧೪-೫-೧೯೯೨ ರಿಂದ ೨೨-೬-೧೯೯೫
 • ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ - ೮-೬-೧೯೪೭ ರಿಂದ ೨೯-೧೨-೧೯೪೭
 • ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ - ೭೨-೨-೧೯೮೯ ರಿಂದ ೧೪-೫-೧೯೯೨
 • ಸರ್. ಎಂ. ಕಾಂತರಾಜ ಅರಸ್ - ೧೯೨೦-೧೯೨೩
 • ಶ್ರೀ ಹರಿಕೃಷ್ಣ ಪುನರೂರು - ೧೧-೭-೨೦೦೧ ರಿಂದ ೨-೧೧-೨೦೦೪
 • ಶ್ರೀ ಜಿ. ನಾರಾಯಣ - ೧೧-೬-೧೯೬೯ ರಿಂದ ೨೩-೭-೧೯೭೮
                                     

2. ಕನ್ನಡ ಸಾಹಿತ್ಯ ಸಮ್ಮೇಳನಗಳು

 • ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಸಾಹಿತ್ಯ ಲೋಕದ ದಿಗ್ಗಜರು,ಸಾಹಿತ್ಯಾಸಕ್ತರು,ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ,ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩ ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು,ಕವಿ ಗೋಷ್ಠಿಗಳು,ಸಂವಾದಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ.
                                     

3.1. ನಿಧಿಗಳು ಕನ್ನಡ ನಿಧಿ

projectಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದಿಷ್ಟು ಹಣಕಾಸು ಕ್ರೋಢಿಕರಿಸಬೇಕು. ಆ ಮೂಲಕ ಕನ್ನಡ ತಾಯಿಯ ಸೇವೆಯನ್ನು ವ್ಯಾಪಕಗೊಳಿಸಬೇಕೆಂಬ ನಿಟ್ಟಿನಲ್ಲಿ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಆರ್.ಕೆ. ಅವರು ಕನ್ನಡ ನಿಧಿ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದರು. ಈ ನಿಧಿಗೆ ಹತ್ತು ರೂಪಾಯಿಯಿಂದ ಗರಿಷ್ಠ ಎಷ್ಟು ಬೇಕೆಂದರೂ ಉದಾರವಾಗಿ ದೇಣಿಗೆ ನೀಡಬಹುದು.ಈ ದೇಣಿಗೆ ತೆರಿಗೆ ವಿನಾಯಿತಿಯನ್ನೂ ಪಡೆದಿದೆ.ಈ ಹಣವನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡಿ ಮೂಲಧನವನ್ನು ಯಾವುದೇ ಸಂದರ್ಭದಲ್ಲಿ ಬಳಸದಂತೆ ಹಾಗೂ ಆ ಹಣದಿಂದ ಬಡ್ಡಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಅದರಲ್ಲೂ ಜಿಲ್ಲಾ,ತಾಲೂಕು ಮತ್ತು ಹೋಬಳಿ ಮಟ್ಟದವರೆಗೂ ವಿಸ್ತರಿಸಲಾಗುತ್ತಿದೆ.ಕನ್ನಡ ನಿಧಿ ಯೋಜನೆ ಆರಂಭಗೊಂಡ ತಕ್ಷಣವೇ ಎಲ್ಲ ಕನ್ನಡಿಗರೂ ತಮ್ಮ ಉದಾರ ಹಸ್ತವನ್ನು ಚಾಚಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀ ಟಿ.ಎ.ನಾರಾಯಣಗೌಡ ಕನ್ನಡ ನಿಧಿಗೆ ೫೦,೦೦೦ ರೂ.ನೀಡುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ.ಅದೇ ರೀತಿ ಮಾಜಿ ಶಾಸಕಿ ಹಾಗೂ ಪ್ರಸಿದ್ಧ ವಕೀಲರಾದ ಶ್ರೀಮತಿ ಪ್ರಮೀಳಾ ನೇಸರ್ಗಿ ೧,೦೦,೦೦೧ ರೂ.ನೀಡುವ ಮೂಲಕ ಕನ್ನಡ ಕೈಂಕರ್ಯದಲ್ಲಿ ತಾವೂ ತೊಡಗಿಸಿಕೊಂಡಿದ್ದಾರೆ. ಅನೇಕ ಕನ್ನಡಿಗರು ಹಾಗೂ ಸಂಘ ಸಂಸ್ಥೆಗಳು ನಿಧಿಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.

ಕನ್ನಡ ನಿಧಿಗೆ ದೇಣಿಗೆ ನೀಡುವ ಆಸಕ್ತಿಯುಳ್ಳವರು ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಚಾಮರಾಜಪೇಟೆ ಶಾಖೆಯ ಖಾತೆ ಸಂಖ್ಯೆ ೨೦೧/೫೬೬೭೭ ಇಲ್ಲಿಗೆ ನೇರವಾಗಿ ಹಣವನ್ನು ಜಮಾ ಮಾಡಿ ಚಲನ್ ಪ್ರತಿಯನ್ನು ಪರಿಷತ್ತಿಗೆ ಕಳುಹಿಸಿದರೆ ಅಂತಹ ಉದಾರಿಗಳಿಗೆ ೧೦೦೦ ರೂ.ಗಿಂತ ಮೇಲ್ಪಟ್ಟಕನ್ನಡ ಮಾನಧನರುಎಂಬ ಅಭಿನಂದನಾ ಪತ್ರವನ್ನು ಪರಿಷತ್ತು ನೀಡಿ ಗೌರವಿಸಲಿದೆ.ಈ ನಿಧಿಗೆ ನೀಡುವ ಹಣಕ್ಕೆ ೮೦ ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.                                     

3.2. ನಿಧಿಗಳು ದತ್ತಿನಿಧಿ

Project ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ನೀಡಲು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲು ಅನೇಕ ಸಾಹಿತ್ಯಾಭಿಮಾನಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ.ಈ ಮೂಲನಿಧಿಯನ್ನು ಶಾಶ್ವತ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ದಾನಿಗಳ ಅಪೇಕ್ಷೆಯಂತೆ ನಡೆಸಿಕೊಂಡು ಬರಲಾಗುತ್ತಿದೆ.ಈಗ ಇಂತಹ ೮೫೦ ದತ್ತಿನಿಧಿಗಳಿವೆ. ಉಪನ್ಯಾಸ, ಸಾಹಿತ್ಯಕ ಸ್ಪರ್ಧೆ, ಗ್ರಂಥಭಂಡಾರಕ್ಕೆ ಪುಸ್ತಕ ಖರೀದಿ, ಪುಸ್ತಕ ಪ್ರಕಟಣೆ, ಬಹುಮಾನ, ಪ್ರಶಸ್ತಿ ನೀಡಿಕೆ ಇತ್ಯಾದಿ ಆಶಯಗಳನ್ನು ತಿಳಿಸಿದ ದತ್ತಿನಿಧಿಗಳಿವೆ.

                                     

4. ಶಿಕ್ಷಣ

ಸಾಹಿತ್ಯ ಪರೀಕ್ಷೆಗಳು

 • ೧೯೪೦ನೇ ಇಸವಿಯಿಂದ ಪ್ರಾರಂಭವಾಗಿರುವ ಸಾಹಿತ್ಯ ಪರೀಕ್ಷೆಗಳು ಪರಿಷತ್ತಿನ ಜನಪ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಒಂದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ತಿಳಿವಳಿಕೆನೀಡುವ ಕನ್ನಡ ಕಾವ, ಜಾಣ, ರತ್ನ ಪರೀಕ್ಷೆ ಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುವುದರ ಜೊತೆಗೆ ಹೊಸದಾಗಿ ಕನ್ನಡ ಕಲಿಯುವ ಆಸಕ್ತರಿಗಾಗಿ ಕನ್ನಡ ಪ್ರವೇಶ ವೆಂಬ ಪರೀಕ್ಷೆಯನ್ನು ಏರ್ಪಡಿಸುತ್ತಿದೆ. ಪರೀಕ್ಷೆಗಳು ಸರ್ಕಾರದಿಂದ ಅಂಗೀಕಾರ ಪಡೆದಿರುತ್ತವೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಸಾಹಿತ್ಯ ಪರೀಕ್ಷೆಗಳ ಪ್ರಯೋಜನ ಪಡೆದಿದ್ದಾರೆ.

ಎಂ.ಫಿಲ್ ಮತ್ತು ಪಿ.ಹೆಚ್.ಡಿ

 • ಕನ್ನಡ ಎಂ.ಫಿಲ್ ಮತ್ತು ಪಿ.ಹೆಚ್.ಡಿ - ಕನ್ನಡ ವಿಶ್ವವಿದ್ಯಾಲಯ, ಹಂಪಿಯು ೨೦೧೧ನೇ ಸಾಲಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಎಂ.ಫಿಲ್ ಮತ್ತು ಪಿ.ಹೆಚ್.ಡಿ ಪದವಿಗಳಿಗೆ ಮಾನ್ಯತೆ ನೀಡಿದೆ.

ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು

 • ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿವೆ. ಇದು ೯ ತಿಂಗಳ ಕೋರ್ಸ್ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಪರಿಷತ್ತನ್ನು ಸಂಪರ್ಕಿಸುವುದು.
                                     

5. ಹೊರಗಿನ ಸಂಪರ್ಕಗಳು

 • ಕನ್ನಡ ವಿಶ್ವವಿದ್ಯಾಲಯ
 • ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗದ್ದಲ, ಗಲಾಟೆ - ಪ್ರಜಾವಾಣಿ ಸೆಪ್ಟೆಂಬರ್ ೨೬, ೨೦೦೫
 • ಕಸಾಪ 24ನೇ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಒನ್ ಇಂಡಿಯಾ ಕನ್ನಡ ಮೇ ೨, ೨೦೧೨"
 • ಇ-ಜ್ಞಾನ,ಟಿ.ಜಿ.ಶ್ರೀನಿಧಿ, ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ: ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ-ಬೇಳೂರು ಸುದರ್ಶನ
ಕೆ.ಆಭಯ್ ಕುಮಾರ್
                                               

ಕೆ.ಆಭಯ್ ಕುಮಾರ್

೨೦೦೧ರಲ್ಲಿ ಕಾಮನ್‍ ವೇಲ್ತ‍್ ಪೇಲೋಶೀಪ್,ಲಂಡನ್ ವಿಶ್ವವಿದ್ಯಾನಿಲಯ ಸ್ಕೂಲ್‍ ಅಪ್‍ ಒರಿಯಂಟಲ್‍ ಎಂಡ್‍ ಅಫ್ರಿಕನ್‍ ಸ್ಟಡೀಸ್‍.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →