Back

ⓘ ಲೀಲಾ ಚಿಟ್ನಿಸ್ಲೀಲಾ ಚಿಟ್ನಿಸ್
                                     

ⓘ ಲೀಲಾ ಚಿಟ್ನಿಸ್

ಅವರು ಕರ್ನಾಟಕದ ಧಾರವಾಡದ ಒಬ್ಬ ಇಂಗ್ಲೀಷ್ ಪ್ರಾಧ್ಯಾಪಕರ ಮಗಳಾಗಿ ಹುಟ್ಟಿದರು. ಮೊದಲ ವಿದ್ಯಾವಂತ ಚಲನಚಿತ್ರ ನಟಿಯರಲ್ಲಿ ಒಬ್ಬರು. ಆಕೆಯ ತಂದೆ ನಾಟ್ಯಮನ್ವಂತರ್ ಎಂಬ ಮರಾಠಿ ನಾಟಕ ಕಂಪೆನಿಯ ಭಾಗವಾಗಿದ್ದರು.

                                     

1. ವೃತ್ತಿಜೀವನ

ಲೀಲಾ ಚಿಟ್ನೀಸ್ ಅವರು ತಮ್ಮ ವೃತ್ತಿಯ ಆರಂಭದಲ್ಲಿ ಉಸ್ನಾ ನವರಾ ೧೯೩೪ ಎಂಬ ಹಾಸ್ಯಚಿತ್ರದಲ್ಲಿ ನಟಿಸಿದರು ಉದ್ಯಾಚಾ ಸಂಸಾರ್ ಎಂಬ ತಮ್ಮದೇ ಆದ ಚಿತ್ರತಂಡವನ್ನು ಹೊಂದಿದ್ದರು. ತನ್ನ ನಾಲ್ಕು ಮಕ್ಕಳಿಗೆ ಆಧಾರವಾಗಿ ಇರಲು ನಟಿಸಲು ಆರಂಭಿಸಿದರು. ಅವರು ಮೊದಲಿಗೆ ಎಕ್ಸ್ಟ್ರಾ ಆಗಿದ್ದರು. ನಂತರ ಸಾಹಸ ಚಿತ್ರಗಳಲ್ಲಿ ಕೆಲಸ ಮಾಡಿದರು.

ಅವಳು ಮಹಾರಾಷ್ಟ್ರದ ಮೊದಲ ಪದವೀಧರ ಸಾಂಸಾರಿಕ ಮಹಿಳೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಚಾರ ಪಡೆದರು. ಕೆಲಸ ಪುಣೆಯ ಪ್ರಭಾತ್ ಪಿಕ್ಚರ್ಸ್, ಮತ್ತು ರಂಜಿತ್ ಮೂವೀಟೋನ್‌ಗಳಲ್ಲಿ ಕೆಲಸ ಮಾಡಿ ಬಾಂಬೆ ಟಾಕೀಸ್ ಸ್ಟೂಡಿಯೋಗೆ ನಾಯಕಿ ಎಂದು ಸೇರಿಕೊಂಡರು. ಅವರು ಬೇಗನೆ ದೇವಿಕಾ ರಾಣಿ ಅವರನ್ನು ಹಿಂದಿಕ್ಕಿ ಮೆರೆದರು. ಬಾಂಬೆ ಟಾಕೀಸ್ ನೊಂದಿಗಿನ ಅವರ ಸಂಬಂಧ ಅವರನ್ನು ಒಬ್ಬ ತಾರೆಯಾಗಿ ಮಾಡಿತು. ದೇವಿಕಾ ರಾಣಿಯವರ ಜತೆ ನಾಯಕನಾಗಿ ಅಭಿನಯಿಸುತ್ತಿದ್ದ ಅಶೋಕ್ ಕುಮಾರ್ ಗೆ ಒಳ್ಳೆಯ ಜತೆಯಾದರು. ಅಶೋಕ್ ಕುಮಾರ್ ಈಕೆಯ ಅಭಿನಯ ಸಾಮರ್ಥ್ಯದಿಂದ ಎಷ್ಟು ಪ್ರಭಾವಿತರಾದರೆಂದರೆ ತನ್ನ ಕಣ್ಣುಗಳಿಂದಲೇ ಹೇಗೆ ಮಾತಾಡಬೇಕೆಂಬುದನ್ನು ಈಕೆಯಿಂದ ಕಲಿತೆ ಎಂದು ಒಪ್ಪಿಕೊಂಡಿದ್ದಾರೆ.

೧೯೪೦ರ ದಶಕದ ಮಧ್ಯಭಾಗದಲ್ಲಿ ಅವರ ವೃತ್ತಿಜೀವನ ಇಳಿಕೆ ಕಂಡಿತು. ಹೊಸ ಹೊಸ ನಟಿಯರು ಚಿತ್ರರಂಗವನ್ನು ಪ್ರವೇಶಿಸಿದ್ದು ಇದಕ್ಕೆ ಕಾರಣ. ೨೨ ವರ್ಷಗಳವರೆಗೆ ಆಕೆ ದಿಲೀಪ್ ಕುಮಾರ್ ಸೇರಿದಂತೆ ಅನೇಕ ನಾಯಕನಟರಿಗೆ ತಾಯಿಯಾಗಿ ಅಭಿನಯಿಸಿದರು. ಹಿಂದಿ ಚಲನಚಿತ್ರರಂಗಕ್ಕೇ ತಾಯಿಯ ಪಾತ್ರದ ಮಾದರಿಯನ್ನು ಅವರು ಸೃಜಿಸಿದರು. ವಾಸ್ತವವಾಗಿ ಈ ಪಾತ್ರಚಿತ್ರಣವನ್ನೇ ನಂತರದ ನಟಿಯರು ಮುಂದುವರೆಸಿಕೊಂಡು ಹೋದರು. ಅವರು ಚಿತ್ರಗಳಲ್ಲಿ ಅಭಿನಯಿಸುವುದನ್ನು ಮುಂದುವರೆಸಿಕೊಂಡು ಹೋದರು. ೧೯೮೦ರ ದಶಕದ ಕೊನೆಗೆ ಅಮೇರಿಕಕ್ಕೆ ತನ್ನ ಮಕ್ಕಳೊಂದಿಗೆ ಇರಲು ಹೋದರು.

೧೯೪೧ ರಲ್ಲಿ ಲಕ್ಸ್ ಸೌಂದರ್ಯ ಸಾಬೂನನ್ನು ಪ್ರಚಾರ ಮಾಡಿದ ಮೊದಲ ಭಾರತೀಯ ನಟಿ.

ಅವರು ಕನೆಕ್ಟಿಕಟ್‌ನ ಒಂದು ನರ್ಸಿಂಗ್ ಹೋಂ ನಲ್ಲಿ ೯೩ ನೇ ವಯಸ್ಸಿನಲ್ಲಿ ನಿಧನರಾದರು.

                                     

2. ವೈಯಕ್ತಿಕ ಜೀವನ

ಈಕೆಯ ತಂದೆ ಜಾತಿಪದ್ಧತಿಯನ್ನು ತಿರಸ್ಕರಿಸುವ ಧಾರ್ಮಿಕ ಚಳವಳಿಯಾದ ಬ್ರಹ್ಮ ಸಮಾಜಕ್ಕೆ ಸೇರಿಕೊಂಡಿದ್ದರು.

ಲೀಲಾ ಚಿಟ್ನೀಸ್ ಅವರು ೧೫-೧೬ ನೇ ವಯಸ್ಸಿನಲ್ಲಿ ಡಾ ಗಜಾನನ್ ಯಶವಂತ್ ಚಿಟ್ನೀಸ್ ಎಂಬ ವಯಸ್ಸಾದ ವ್ಯಕ್ತಿಯೊಂದಿಗೆ ಮದುವೆ ಆದರು. ಬೇಗ ನಾಲ್ಕು ಮಕ್ಕಳನ್ನು ಪಡೆದರು. ನಂತರ ವಿಚ್ಛೇದನ ಪಡೆದರು. ಈ ದಂಪತಿಗಳು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದರು. ಒಮ್ಮೆಯಂತೂ ಮಾನವೇಂದ್ರ ನಾಥ್ ರಾಯ್ ಎಂಬ ಮಾರ್ಕ್ಸ್ ವಾದಿ ಸ್ವಾತಂತ್ರ್ಯ ಹೋರಾಟಗಾರನಿಗೆ ಆಶ್ರಯ ಕೊಡುವ ಮೂಲಕ ಮೂಲಕ ಬಂಧನಕ್ಕೆ ಒಳಗಾಗುವ ಅಪಾಯವನ್ನು ಎದುರಿಸಿದ್ದರು. ಪತಿಯೊಂದಿಗೆ ವಿಚ್ಛೇದನದ ನಂತರ, ಅವರು ಶಾಲೆಯ ಶಿಕ್ಷಕಿಯಾಗಿ ಕೆಲಸಮಾಡಿದರು. ನಾಟಕರಂಗದಲ್ಲಿ ನಟನೆಯನ್ನು ಆರಂಭಿಸಿದರು. ಹಲವಾರು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡರು., ಕಾಲೇಜು ಪದವೀಧರರನ್ನು ಮಾತ್ರ ನೇಮಿಸಿಕೊಳ್ಳುತ್ತಿದ್ದ ಮುಂಬಯಿ ಟಾಕೀಸ್ ಎಂಬ ಪ್ರಮುಖ ಚಿತ್ರನಿರ್ಮಾಣ ಸಂಸ್ಥೆಯನ್ನು ಸೇರಿಕೊಳ್ಳುವುದಕ್ಕಾಗಿ ಮುಂಬೈವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದುಕೊಂಡರು.

                                     

3. ಕುತೂಹಲಕರ ಸಂಗತಿ

 • ೧೯೪೧ರಲ್ಲಿ, ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಅವರು, ಜನಪ್ರಿಯ ಲಕ್ಸ್ ಸಾಬೂನು ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ಭಾರತದ ಮೊದಲ ನಟಿಯಾಗಿ ಇತಿಹಾಸ ನಿರ್ಮಿಸಿದರು. ಆವರೆಗೆ ಕೇವಲ ಪ್ರಮುಖ ಹಾಲಿವುಡ್ ನಾಯಕಿಯರಿಗೆ ಈ ಅವಕಾಶ ದೊರೆಯುತ್ತಿತ್ತು.
                                     

4. ಚಲನಚಿತ್ರಗಳ ಪಟ್ಟಿ

 • ಸೈಯನ್ ೧೯೫೧
 • ಸತ್ಯಂ ಶಿವಮ್ ಸುಂದರಂ: ಲವ್ ಸಬ್ಲೈಮ್ ೧೯೭೮
 • ಆಜಾದ್ ೧೯೪೦
 • ಮಝ್ಲಿ ದೀದಿ ೧೯೬೭
 • ಹಮ್ ಹಿಂದೂಸ್ತಾನಿ ೧೯೬೦
 • ಧುವಂಧರ್ ೧೯೩೫
 • ಜೊಹರ್-ಮೆಹಮೂದ್ ಇನ್ ಗೋವಾ ೧೯೬೫
 • ಔರತ್ ೧೯೬೯
 • ಸಾಧನಾ ೧೯೫೮. ಮೋಹನ್ ತಂದೆಯ ಮಾತೃ
 • ನಯೀ ಉಮರ್ ಕಿ ನಯೀ ಫಸಲ್ ೧೯೬೫
 • ಕಾಂಚ್ ಕೀ ಗುಡಿಯಾ ೧೯೬೧
 • ದಿಲ್ ಹೀ ತೋ ಹೈ ೧೯೬೩.
 • ಮನ್ ಕಿ ಆಂಖೇ ೧೯೭೦
 • ಭಾಯಿ-ಭಾಯಿ ೧೯೭೦
 • ಬಸಂತ್ ಎಂಬುವರು ೧೯೫೬
 • ಬಿನ್ ಮಾ ಕೆ ಬಚ್ಚೆ ೧೯೮೦
 • ಸೌದಾಮಿನಿ ೧೯೫೦
 • ಘರ್ ಕಿ ರಾಣಿ ೧೯೪೦
 • ಧರ್ಮಪುತ್ರ೧೯೬೧
 • ಚಾರ್ ದೀವಾರಿ ೧೯೬೧
 • ಅಸಲಿ-ನಕಲಿ ೧೯೬೨
 • ಸಂಗದಿಲ್ ೧೯೫೨
 • ಕಿಸೀಸೆ ನಾ ಕೆಹೆನಾ ೧೯೪೨
 • ಮಾ ೧೯೫೨
 • ಆಪ್ ಕಿ ಪರಛಾಯಿಯಾಂ ೧೯೬೪
 • ಛಾಯಾ ೧೯೩೬
 • ಕಂಗನ್ ೧೯೩೯
 • ಪೋಸ್ಟ್ ಬಾಕ್ಸ್ ೯೯೯ ೧೯೫೮
 • ಬಂಧನ್ ೧೯೪೦
 • ಛೋಟೆ ಸರ್ಕಾರ್ ೧೯೩೮
 • ನಮೂನಾ ೧೯೪೯
 • ಪರಖ್ ೧೯೬೦
 • ಮುಖ್ಯ Nashe ಮೆ ಹೂ ೧೯೫೯
 • ಘೂಂಘಟ್ ೧೯೬೦
 • ಜೈಲರ್೧೯೩೮
 • ದೋಸ್ತೀ ೧೯೬೪
 • ನಯಾ ದೌರ್ ೧೯೫೭. ಶಂಕರ್ ತಂದೆಯ ಮಾತೃ
 • ಪೂಜಾ ಕೆ ಫೂಲ್ ೧೯೬೪
 • ಆಜ್ ಕಿ ಬಾತ್ ೧೯೫೫
 • ಆಶಿಕ್ ೧೯೬೨
 • ಜೀವನ್ ಮೃತ್ಯು ೧೯೭೦
 • ಸಂತ ತುಲಸಿದಾಸರ ೧೯೩೯
 • ಮೆಹಮಾನ್ ೧೯೭೩
 • ಬಂಧನ್ ೧೯೫೪
 • ಬರಖಾ ೧೯೫೯
 • ಗುನಾಹೋಂ ಕಾ ದೇವತಾ ೧೯೬೭
 • ನಾಗ್ ದೇವತಾ ೧೯೬೨
 • ಫಿಲ್ ಸುಬಹ್ ಹೋಗಿ ೧೯೫೮
 • ಮಾ ಬಾಪ್ ೧೯೬೦
 • ಶೆಹನಾಯಿ ೧೯೬೪
 • ಝೂಲಾ೧೯೪೧
 • ಮೊಹಬ್ಬತ್ ಇಸ್ಕೊ ಕೆಹತೇ ಹೈ ೧೯೬೫
 • ಬಟ್ವಾರಾ ೧೯೬೧
 • ಕಾಂಚನ್ ೧೯೪೧
 • ಶ್ರೀ ಸತ್ಯನರಾಯಣ ೧೯೩೫
 • ಅರ್ಧಾಂಗಿ ೧೯೪೦
 • ಬಡೀ ದೀದಿ ೧೯೬೯
 • ರೇಖಾ ೧೯೪೩
 • ಇನ್ಸಾಫ್ ೧೯೩೭
 • ದಿಲ್ ತುಝ್ಕೋ ದಿಯಾ ೧೯೮೭
 • ಇಂತಕಾಂ ೧೯೬೯
 • ಕೋಹಿನೂರ್ ೧೯೬೦
 • ವಹಾಂ ೧೯೩೭
 • ಆವಾಜ್ ೧೯೫೬
 • ಫೂಲ್ ಔರ್ ಪತ್ಥರ್ ೧೯೬೬
 • ಬೇವಕೂಫ್ ೧೯೬೦
 • ಪುನರ್ಮಿಲನ್ ೧೯೬೪
 • ಹಮ್ ದೊನೋ ೧೯೬೧
 • ಗೈಡ್ ೧೯೬೫
 • ಚಾರ್ ಆಂಖೇ ೧೯೪೪
 • ಆಸ್ ಕಾ ಪಂಛಿ ೧೯೬೧
 • ಕಾಲಾ ಬಜಾರ್ ೧೯೬೦
 • ಆವಾರಾ ೧೯೫೧
 • ನಯಾ ಘರ್ ೧೯೫೩
 • ಜಿಂದಗಿ ೧೯೬೪
 • ಮನ್ ಮೌಜಿ ೧೯೬೨
 • ಛೋಟಿ ಸಿ ದುನಿಯಾ ೧೯೩೯
 • ಕಲ್ ಹಮಾರಾ ಹೈ ೧೯೫೯
 • ಫರಾರ್ ೧೯೬೫
 • ಸುಹಾಗನ್ ೧೯೬೪
 • ಘರ್ ಘರ್ ಕೀ ಕಹಾನಿ ೧೯೪೭
 • ಗಂಗಾ ಜಮುನಾ೧೯೬೧
 • ಷತ್ರಂಜ್ ೧೯೪೬
 • ಫನ್ತೂಶ್೧೯೫೬
 • ದುಲ್ಹನ್ ಏಕ್ ರಾತ್ ಕಿ ೧೯೬೭
 • ಹರಿ ದರ್ಶನ್ ೧೯೫೩
 • ಪ್ರಿನ್ಸ್ ೧೯೬೯
 • ರಾಜ ಗೋಪಿಚಂದ್ ೧೯೩೮
 • ಉಜಾಲ ೧೯೫೯
 • ವಕ್ತ್ ೧೯೬೫
 • ಧೂಲ್ ಕಾ ಫೂಲ್ ೧೯೫೯

ನಿರ್ದೇಶನ:

 • ಆಜ್ ಕಿ ಬಾತ್ ೧೯೫೫

ನಿರ್ಮಾಣ:

 • ಆಜ್ ಕಿ ಬಾತ್ ೧೯೫೫
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →