Back

ⓘ ಭಾರತೀಯ ಶಾಸ್ತ್ರೀಯ ಸಂಗೀತ                                               

ತಿರುಚಿ ಎಲ್ ಸರವಣನ್

ಸರವಣನ್ ಅವರು ದಿವಂಗತ ಶ್ರೀ ಕೆ.ಎಸ್.ನಾರಾಯಣನ್ ಶ್ರೀ ಮಾಲಿಯ ಹಿರಿಯ ಶಿಷ್ಯ, ದಿವಂಗತ ವಿ.ಸುಂದರೇಶನ್ ಮತ್ತು ಪ್ರಖ್ಯಾತ ಪಿಟೀಲು ವಾದಕ ನಾಗ ಆರ್. ಆರ್. ಮುರಳೀಧರನ್ ಅವರ ಶಿಷ್ಯರಾಗಿದ್ದಾರೆ. ಸರವಣನ್ ಯುವಕಲಾಭಾರತಿ ಪ್ರಶಸ್ತಿ ವಿಜೇತರು. ಗಾಯಕನಾಗಿ ಸಮಾನವಾಗಿ ತರಬೇತಿ ಪಡೆದ ಸರವಣನ್ ಪ್ರೇಕ್ಷಕರ ಅಪೇಕ್ಷೆಗಳಿಗಿಂತ ಸಂಯೋಜನೆಯ ಅಗತ್ಯತೆಗಳನ್ನು ಪೂರೈಸುವ ಸ್ವರ ಮತ್ತು ವಾದ್ಯಗಳ ತಂತ್ರಗಳೆರಡನ್ನೂ ತನ್ನ ಚಿತ್ರಣಗಳಲ್ಲಿ ಸಂಯೋಜಿಸುತ್ತಾರೆ. ಅವರು ತಮ್ಮ ೧೦ ನೇ ವಯಸ್ಸಿನಲ್ಲಿ ಗಾಯನ ಮತ್ತು ಕರ್ನಾಟಕ ಕೊಳಲಿನಲ್ಲಿ ಪ್ರಾರಂಭಿಸಿದರು. ಹೆಸರಾಂತ ಶಿಕ್ಷಕರ ಅಡಿಯಲ್ಲಿ ಸಂಗೀತದಲ್ಲಿ ಹಲವಾರು ವರ್ಷಗಳ ಶಾಲಾ ಶಿಕ್ಷಣದ ನಂತರ, ತಿರುಚಿಯ ಆಲ್ ಇಂಡಿಯಾ ರೇಡಿಯೊದಲ್ಲಿ ೧೪ ನೇ ವಯಸ್ಸಿಗೆ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಹಲವಾರು ವರ್ಷಗಳ ಅನುಭವದ ನಂತ ...

                                               

ಸುನಾದ್‍ ಗೌತಮ್

ಸುನಾದ್ ಗೌತಮ್ ತಂದೆ ಉಮೇಶ್‍ ಗೌತಮ್ ನಾಯಕ್‍ ಇವರು ಅಷ್ಟಾವಧಾನಿ, ಸಂಗೀತಗಾರ ಮತ್ತು ಪ್ರೌಢಶಾಲಾ ಭಾಷಾ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದ ಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲಿಯೇ ಆರಂಭವಾಯಿತು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಉಮೇಶ್‍ ಗೌತಮ್ ನಾಯಕ್‍ ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು. ಇದು ಸುನಾದ್‍ ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡ ಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕು ಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು. ತಮ್ಮ ಕಾಲೇಜು ಶಿಕ ...

                                               

ಗೋಷ್ಠಿಗಾನ

ಗೋಷ್ಠಿಗಾನ ಹಲವರು ಒಟ್ಟುಗೂಡಿ ಒಮ್ಮೆಗೇ ಹಾಡಿ ನುಡಿಸುವುದಕ್ಕೆ ಈ ಹೆಸರಿದೆ. ಇಂಥ ಸಮುದಾಯದಲ್ಲಿ ಪ್ರತಿಯೊಬ್ಬರಿಗೂ ಪೂರ್ವ ನಿಶ್ಚಿತ ಧಾತು ಮತ್ತು ಮಾತುಗಳು ತಿಳಿದಿದ್ದು ಅವನ್ನು ನಿಯತಕಾಲದಲ್ಲಿ ಸ್ವತಂತ್ರವಾಗಿ ಹಾಡಿ ನುಡಿಸುತ್ತಾರೆ. ಪಾಶ್ಚಾತ್ಯರ ಆರ್ಕೆಸ್ಟ್ರ ಎಂಬ ಮಾತು ನಮ್ಮಲ್ಲಿ ಇದಕ್ಕೆ ಪರ್ಯಾಯವಾಗಿ ಇಂದು ಬಳಕೆಗೆ ಬಂದಿದೆ. ಕರ್ಣಾಟಕ ಸಂಗೀತ ಅಥವಾ ಹಿಂದೂಸ್ತಾನಿ ಸಂಗೀತಗಳಲ್ಲಿನ ಕಚೇರಿಗಳನ್ನು ಗೋಷ್ಠಿಗಾಯನವೆನ್ನಲಾಗದು. ಏಕೆಂದರೆ ಇವುಗಳಲ್ಲಿನ ಪ್ರಧಾನ ಗಾಯಕ ಅಥವಾ ವಾದಕ ಹಾಡಿ ನುಡಿಸುವುದನ್ನೇ ಪಕ್ಕವಾದ್ಯಗಳವರು ಅನುಸರಿಸಿ ಅನುಕರಿಸುತ್ತಾರೆ. ಸಂಗೀತದ ಧಾತುವಾದರೂ ಇಲ್ಲಿ ಪೂರ್ವನಿಶ್ಚಿತವಲ್ಲ. ಗಾಯಕ ವಾದಕರುಗಳ ಸ್ವತಂತ್ರ ಕಲ್ಪನಾಶಕ್ತಿಯೇ ಇದರ ಜೀವನಾಡಿ. ಅಲ್ಲದೆ ಗೋಷ್ಠಿಗಾನದ ಮೂಲತತ್ತ್ವವಾದ ಸಹಕಾಲಿಕ ಸ್ವತಂತ್ರ ಗಾನವಾದನಗಳು ...

                                               

ಜಿಂ ಅನ್ಕನ್ ದೇಕ

Jim Ankan Deka ಒಂದು ಅಸ್ಸಾಮಿ ಸಂಗೀತಗಾರ, ಸಾಕ್ಷ್ಯಚಿತ್ರ ತಯಾರಕ ಛಾಯಾಗ್ರಾಹಕ ಮತ್ತು ಬೆಂಗಳೂರು ಮೂಲದ ಸಂಸ್ಥೆಯು ಮತ್ತು ಸಂಗೀತ ಶಾಲೆ ಪೂರ್ವ ಫೇರ್ ಸಂಗೀತ ಫೌಂಡೇಶನ್ ನಿರ್ದೇಶಕರಾಗಿದ್ದಾರೆ. ಅವರು ಸಂಗೀತ ಸಂಸ್ಥೆ ಮತ್ತು ಬೆಂಗಳೂರು ಭಾರತದ ನಿರ್ಮಾಣ ತೆರೆಯಲು ಮೊದಲ ಅಸ್ಸಾಮಿ ಆಗಿದೆ. 1998 ರಿಂದ, Deka ರಚನೆಯನ್ನು ಮತ್ತು ಆಲ್ಬಮ್, TV ಸರಣಿ, ಸಾಕ್ಷ್ಯಚಿತ್ರ, ಕಿರುಚಿತ್ರಗಳು ಮತ್ತು ಜಾಹೀರಾತು ಜಿಂಗಲ್ಸ್ ಸಂಗೀತ ವ್ಯವಸ್ಥೆ ಮಾಡಲಾಗಿದೆ. 2012 ರವರೆಗೂ ಅವರು ಇಂಗ್ಲೀಷ್, ಹಿಂದಿ, ಅಸ್ಸಾಮಿ, Mizo ಮತ್ತು Goalporia ಸೇರಿದಂತೆ ವಿವಿಧ ಭಾಷೆಗಳಲ್ಲಿ ಆರು ಆಲ್ಬಂಗಳು ಸಂಗೀತ ಸಂಯೋಜನೆಗಳನ್ನು. ಪ್ರಸ್ತುತ ಅವನು Veenar, ಒಂದು ಜಾಜ್ ಫ್ಯೂಷನ್ ಬ್ಯಾಂಡ್, ಮತ್ತು ಪೂರ್ವ ಫೇರ್, ಬೆಂಗಳೂರು ಅಕೌಸ್ಟಿಕ್ ರಾಕ್ ಬ್ಯಾಂಡ್. ಸದಸ್ಯ

                                               

ಅಂಜಲಿ ಹಳಿಯಾಳ

ಹತ್ತನೇ ತರಗತಿ ಓದುತ್ತಿದ್ದಾಗ ಅಂಜಲಿ ಆಕಾಶವಾಣಿಯ ನಾಟಕಗಳಿಗೆ ನಡೆದ ಧ್ವನಿಪರೀಕ್ಷೆಗಳಲ್ಲಿ ಅರ್ಹತೆ ಗಳಿಸಿದರು. ಹಲವಾರು ನಾಟಕಗಳಲ್ಲಿಯೂ ಅಭಿನಯಿಸಿದ್ದ ಅಂಜಲಿ, ‘ಪೇಚು, ‘ಪ್ರತ್ಯಕ್ಷ ಪ್ರಮಾಣ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. ಬಿ.ಎಸ್.ಎನ್.ಎಲ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿತು. ಮಂಜುಳಾ ಗುರುರಾಜರ ಸಾಧನಾ ಸಂಗೀತ ಶಾಲೆಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಈಟಿವಿ ವಾಹಿನಿಯ ಪ್ರಸಿದ್ಧ ಕಾರ್ಯಕ್ರಮ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಚಂದನ ವಾಹಿನಿಯ ‘ಮಧುರ ಮಧುರವೀ ಮಂಜುಳಗಾನ’ದಲ್ಲಿ ಗಾಯಕಿಯಾಗಿ ಭಾಗವಹಿಸಿದರು. ಇದಲ್ಲದೆ ತಾವು ಕಾರ್ಯನಿರ್ವಹಿಸುತ್ತಿದ್ದ ಬಿ.ಎಸ್.ಎನ್.ಎಲ್ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸುತ್ತಿದ್ದ ಗಾಯನ ಸ್ಪರ್ಧೆಗಳಲ್ಲಿ ಅಹಮದಾಬಾದ್, ಭುವನೇಶ್ವರ್, ಪುಣೆ, ಕಣ್ಣೂರ್ ಮ ...

                                               

ದೇವಾ (ಸಂಯೋಜಕ)

ದೇವನೇಶನ್ ಚೊಕ್ಕಲಿಂಗಮ್ ಜನಪ್ರಿಯವಾಗಿ ದೇವಾ ಭಾರತೀಯ ಚಲನಚಿತ್ರ ಸಂಯೋಜಕ ಮತ್ತು ಗಾಯಕ. ಅವರು ಹಾಡುಗಳನ್ನು ಸಂಯೋಜಿಸಿದ್ದಾರೆ ಮತ್ತು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ಸುಮಾರು 30 ವರ್ಷಗಳ ಕಾಲ ನೀಡಿದ್ದಾರೆ.ಅವರು ಹೆಚ್ಚಾಗಿ ತಮಿಳು ಹಾಡುಗಳನ್ನು ಸಂಯೋಜಿಸಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿಯೇ ಅನೇಕ ಚಲನಚಿತ್ರಗಳಿಗೆ ದೇವ್ ಸಂಗೀತವನ್ನು ಸಂಯೋಜಿಸಿದ್ದಾರೆ.ಅವರು 1989 ರಲ್ಲಿ ಮನಸುಕೇತೆ ಮಹಾರಾಸ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಪ್ರಥಮ ಬಾರಿಗೆ ಪ್ರವೇಶಿಸಿದರು.ಮಧ್ಯಂತರ ವರ್ಷಗಳಲ್ಲಿ ಅವರು 400 ಕ್ಕಿಂತ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

                                               

ಕವಿತಾ ಷಾ

ಕವಿತಾ ಷಾ ಅವರು ನ್ಯೂಯಾರ್ಕ್ನ ಗಾಯಕಿ ಮತ್ತು ಸಂಯೋಜಕರಾಗಿದ್ದಾರೆ. ಅವರು ಸಂಗೀತ ಭಾಷೆಗಳೊಂದಿಗೆ ಅದ್ಭುತ ಕೌಶಲ್ಯ ಹೊಂದಿದ್ದಕ್ಕಾಗಿ ಎನ್.ಪಿ.ಆರ್ ನಿಂದ ಪ್ರಶಂಸಿಸಲ್ಪಟ್ಟಿದ್ದಾರೆ.

                                               

ಸಮಕಾಲೀನ ನೃತ್ಯ

ಸಮಕಾಲೀನ ನೃತ್ಯವು ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಅಭಿವೃದ್ಧಿಪಡಿಸಿದ ನೃತ್ಯ ಪ್ರದರ್ಶನದ ಪ್ರಕಾರವಾಗಿದೆ ಮತ್ತು ನಂತರ ವಿಶ್ವದಾದ್ಯಂತ ಔಪಚಾರಿಕವಾಗಿ ತರಬೇತಿ ಪಡೆದ ನರ್ತಕರಿಗಾಗಿ ಯು.ಎಸ್ ಮತ್ತು ಯುರೋಪ್ನಲ್ಲಿ ಪ್ರಬಲವಾದ ಜನಪ್ರಿಯತೆಯನ್ನು ಹೊಂದಿರುವ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದೆ. ಮೊದಲಿಗೆ ಶಾಸ್ತ್ರೀಯ, ಆಧುನಿಕ, ಮತ್ತು ಜಾಝ್ ಶೈಲಿಗಳಿಂದ ತಿಳಿದುಕೊಂಡಿರುವ ಮತ್ತು ಎರವಲು ಪಡೆದಿದ್ದರೂ, ಅದು ನಂತರ ಅನೇಕ ನೃತ್ಯದ ಶೈಲಿಗಳಿಂದ ಅಂಶಗಳನ್ನು ಸೇರಿಸಿಕೊಳ್ಳುತ್ತದೆ. ಅದರ ತಾಂತ್ರಿಕ ಸಾಮ್ಯತೆಗಳ ಕಾರಣದಿಂದಾಗಿ, ಇದನ್ನು ಆಧುನಿಕ ನೃತ್ಯ, ಬ್ಯಾಲೆ ಮತ್ತು ಇತರ ಕ್ಲಾಸಿಕಲ್ ಸಂಗೀತ ನೃತ್ಯ ಶೈಲಿಗಳೊಂದಿಗೆ ನಿಕಟವಾಗಿ ಸಂಬಂಧಿಸಿದೆ ಎಂದು ಗ್ರಹಿಸಲಾಗಿದೆ. ಅದರ ಕೌಶಲ್ಯದ ದೃಷ್ಟಿಯಿಂದ, ಸಮಕಾಲೀನ ನೃತ್ಯವು ಮುಂಡದ ಮೇಲೆ ಆಧುನಿಕ ನೃತ್ ...

                                               

ರಾಮ್ ತೇರಿ ಗಂಗಾ ಮೆಯ್ಲಿ (ಚಲನಚಿತ್ರ)

ರಾಮ್ ತೇರಿ ಗಂಗಾ ಮೆಯ್ಲಿ ೧೯೮೫ರ ಒಂದು ಹಿಂದಿ ಚಲನಚಿತ್ರ. ಇದನ್ನು ನಟ ನಿರ್ದೇಶಕ ರಾಜ್ ಕಪೂರ್ ನಿರ್ದೇಶಿಸಿದ್ದಾರೆ. ಚಿತ್ರದ ಮುಖ್ಯಪಾತ್ರಗಳಲ್ಲಿ ಮಂದಾಕಿನಿ ಹಾಗೂ ರಾಜೀವ್ ಕಪೂರ್ ನಟಿಸಿದ್ದಾರೆ. ಈ ಚಲನಚಿತ್ರಕ್ಕಾಗಿ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. ಮಂದಾಕಿನಿಯ ಸ್ತನ್ಯಪಾನ ಹಾಗೂ ಪಾರದರ್ಶಕ ಸೀರೆಯಲ್ಲಿ ಸ್ನಾನದ ದಿಟ್ಟ ದೃಶ್ಯಗಳಿಗಾಗಿ ಚಿತ್ರವು ಬಹಳ ವಿವಾದಾತ್ಮಕವಾಯಿತು. ಇದನ್ನು ಆಗ ಸಂಪ್ರದಾಯವಾದಿ ಭಾರತೀಯ ಸೆನ್ಸರ್ ಮಂಡಳಿಯು ಅನುಮತಿಸುತ್ತಿರಲಿಲ್ಲ. ಆದರೂ, ಇದು ಅ ಅನಿರ್ಬಂಧಿತ ವಯಸ್ಸಿನ ವರ್ಗೀಕರಣ ಪಡೆದಿತ್ತು. ಇದನ್ನು ನಂತರ ಅ/ವ ಎಂದು ತಿದ್ದುಪಡಿ ಮಾಡಲಾಯಿತು. ಇದು ರಾಜ್ ಕಪೂರ್ ನಿರ್ದೇಶನದ ಕೊನೆಯ ಚಿತ್ರವಾಗಿತ್ತು. ರಾಮ್ ತೇರಿ ಗಂಗಾ ಮೆಯ್ಲಿ ಚಿತ್ರವನ್ನು ಭಾರತೀಯ ಸಿನಿಮಾದ ಸಾರ್ವಕಾಲ ...

                                               

ಟಿಬೇಟರ ಸಂಸ್ಕೃತಿ

ಟಿಬೆಟರ ಸಂಸ್ಕ್ರತಿ ಪರಿಚಯ ನಮ್ಮ ದೇಶ ಭಾರತದಲ್ಲಿ ಹಲವಾರು ಟಿಬೆಟಿನ ಜನರು ವಾಸವಾಗಿದ್ದಾರೆ. ಇದರಿಂದ ಅವರ ವಿಶಷ್ಟ ಸಂಸ್ಕ್ರತಿ ತಿಳಿಯುವುದು ಬಹಳ ಮುಖ್ಯ. ಟಿಬೆಟರ ಸಂಸ್ಕ್ರತಿ ಬಹಳ ವಿಶೇಷ ಹಾಗು ಬೇರೆ ಸಂಸ್ಕ್ರತಿಯ ಪ್ರಭಾವದಿಂದ ಬೆಳೆದದ್ದು. ನೇಪಾಳ,ಭಾರತ, ಚೀನಾ, ಈ ದೇಶಗಳ ಸಂಸ್ಕ್ರತಿ ಪ್ರಭಾವ ಬೀರಿದೆ. ಇದು ಹಿಮಾಲಯದ ಒಳಗಿನ ಪ್ರದೇಶದಲ್ಲಿ ಇರುವುದರಿಂದ, ಬೇರೆ ಸಂಸ್ಕ್ರತಿಗಳ ಪ್ರಭಾವ ಕಮ್ಮಿಯಾಗಿದೆ. ಏಳನೇ ಶತಮಾನ ದಿಂದ ಬೌದ್ದ ಸಿದ್ದಾಂತ ನಿಂದ ಇವರ ಸಂಸ್ಕ್ರತಿ ಬೆಳೆದದ್ದು ಹಾಗು ಬಹಳ ಪ್ರಭಾವ ಮೂಡಿದೆ. ಅಲ್ಲಿಯ ವಾತವರಣದಿಂದ ಇಲ್ಲಿಯ ಜನಾಂಗ ಬಹಳ ಹೆಚ್ಚಾಗಿ ಪ್ರಾಣಿಗಳನ್ನು ಮೇವಿಸುವುದು ಪ್ರೂತ್ಸಾ ಹಿಸುತ್ತಾರೆ. ಸಂಗೀತ ಇವರ ಸಂಗೀತ ಟಿಬೆಟಿಯನ್ ಅಥವ ಹಿಮಲಯದ ಸುತ್ತ್ತಮುತ್ತಿನ ಸಂಸ್ಕ್ರತಿ ಯನ್ನು ತೋರಿಸುತ್ತದೆ. ಭಾರತದ ನೇಪಾಳ, ಬು ...

                                               

ಗೀತೆಗಳು

ಒಂದು ಹಾಡು, ಹೆಚ್ಚು ವಿಶಾಲವಾಗಿ, ಏಕೈಕ ಸಂಗೀತದ ಕೆಲಸವಾಗಿದೆ, ಸಾಮಾನ್ಯವಾಗಿ ಧ್ವನಿ ಮತ್ತು ಮೌನವನ್ನು ಬಳಸಿಕೊಂಡು ವಿಭಿನ್ನವಾದ ಮತ್ತು ಸ್ಥಿರವಾದ ಪಿಚ್ಗಳು ಮತ್ತು ಮಾದರಿಗಳೊಂದಿಗೆ ಮಾನವನ ಧ್ವನಿಯನ್ನು ಹಾಡಬೇಕೆಂದು ಉದ್ದೇಶಿಸಲಾಗಿದೆ, ಮತ್ತು ಅನೇಕ ಪುನರಾವರ್ತನೆ ವಿಭಾಗಗಳು. ಸಂಗೀತಕ್ಕಾಗಿ ಅಥವಾ ನಿರ್ದಿಷ್ಟವಾಗಿ ರಚಿಸಲಾದ ಸಂಗೀತಕ್ಕಾಗಿ ಬರೆಯಲಾದ ಪದಗಳನ್ನು ಸಾಹಿತ್ಯ ಎಂದು ಕರೆಯಲಾಗುತ್ತದೆ. ಮೊದಲೇ ಅಸ್ತಿತ್ವದಲ್ಲಿರುವ ಕವಿತೆಯನ್ನು ಶಾಸ್ತ್ರೀಯ ಸಂಗೀತದಲ್ಲಿ ಸಂಯೋಜಿತ ಸಂಗೀತಕ್ಕೆ ಹೊಂದಿಸಿದರೆ ಅದು ಕಲಾ ಹಾಡು. ವಿಶಿಷ್ಟ ಬಾಹ್ಯರೇಖೆಗಳು ಮತ್ತು ನಮೂನೆಗಳು ಇಲ್ಲದೇ ಪುನರಾವರ್ತಿತ ಪಿಚ್ಗಳಲ್ಲಿ ಹಾಡಲಾದ ಹಾಡುಗಳು ಏರಿಕೆ ಮತ್ತು ಪತನವನ್ನು ಪಠಣಗಳಾಗಿ ಕರೆಯಲಾಗುತ್ತದೆ. ಅನೌಪಚಾರಿಕವಾಗಿ ಕಲಿತ ಒಂದು ಸರಳ ಶೈಲಿಯಲ್ಲಿ ಹಾಡುಗಳನ್ನು ...

ಭಾರತೀಯ ಶಾಸ್ತ್ರೀಯ ಸಂಗೀತ
                                     

ⓘ ಭಾರತೀಯ ಶಾಸ್ತ್ರೀಯ ಸಂಗೀತ

ಭಾರತೀಯ ಶಾಸ್ತ್ರೀಯ ಸಂಗೀತ ದ ಮೂಲವು, ಬಹಳ ಹಳೆಯ ಧರ್ಮ ಗ್ರಂಥ ಹಿಂದೂ ಸಂಪ್ರದಾಯದ ಒಂದು ಭಾಗವಾದ ವೇದದಲ್ಲಿ ಕಂಡು ಬರುತ್ತದೆ. ಇದು ಭಾರತೀಯ ಜನಾಂಗದ ಸಂಗೀತದಿಂದ ಅರ್ಥವತ್ತಾಗಿ ಪ್ರಭಾವಿತಗೊಂಡಿದೆ, ಮತ್ತು ಹಿಂದೂಸ್ಥಾನಿ ಸಂಗೀತವು ಪರ್ಷಿಯಾ ಸಂಗೀತದಿಂದ ಪ್ರಭಾವಿತಗೊಂಡಿದೆ. ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವು ಸಂಗೀತವನ್ನು ವಿವರವಾಗಿ ಪರಿಚಯಿಸಿದೆ. ಸಾಮವೇದವು ಋಗ್ವೇದದಿಂದ ರಚಿತವಾಗಿದೆ. ಆದುದರಿಂದ ಇದರ ದೇವರನಾಮವನ್ನು ಸಾಮಗಾನವನ್ನಾಗಿ ಹಾಡಬಹುದು; ಈ ಶೈಲಿಯು ಜತಿಗಳಾಗಿ ಪರಿವರ್ತನೆಗೊಂಡು ಕೊನೆಗೆ ರಾಗಗಳಾಗಿ ಪರಿಣಮಿಸಿತು. ಭಾರತೀಯ ಶಾಸ್ತ್ರೀಯ ಸಂಗೀತ, ಅದರ ಉತ್ಪತ್ತಿಯು ಧ್ಯಾನದ ಸಾಧನವಾಗಿದ್ದು ತನ್ನೊಳಗಿನ ಅರಿವನ್ನು ಗಳಿಸುವುದಾಗಿದೆ. ಭರತನ ನಾಟ್ಯ ಶಾಸ್ತ್ರವು, ನಾಟ್ಯ,ಸಂಗೀತ ಮತ್ತುನಾಟಕ ಗಳಿಗೆ ಆಧಾರಭೂತವಾದ ನಿಯಮಗಳನ್ನು ಹಾಕಿದ ಮೊದಲ ಗ್ರಂಥವಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತವು, ಅತ್ಯಂತ ಸಂಕೀರ್ಣ ಮತ್ತು ಸಂಪೂರ್ಣ ರಚನೆಗೊಂಡಿರುವ ಸಂಗೀತದ ವ್ಯವಸ್ಥೆಯಾಗಿದೆ. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಂತೆ ಇದು ಆಕ್ಟೇವ್ವನ್ನು 12 ಅರ್ಧ ಶ್ರುತಿಗಳನ್ನಾಗಿ ವಿಭಾಗಿಸಿದಾಗ, ಸ ರಿ ಗ ಮ ಪ ಧ ನಿ ಸ ಎಂಬ 7 ಮೂಲಭೂತ ಸ್ವರಗಳು ಅನುಕ್ರಮವಾಗಿ, ದೋ ರಿ ಮಿ ಫಾ ಸೋಲ್ ಲ ತಿ ದೋ ಎಂಬ ಸ್ಥಾನಗಳಿಗೆ ಪಲ್ಲಟವಾಗುತ್ತದೆ. ಹೀಗಿದ್ದರೂ ಇದನ್ನು ಕೇವಲ ಸ್ವರಭೇದದ ರಾಗದಲ್ಲಿ ಉಪಯೋಗಿಸಲಾಗುತ್ತದೆ, ಇದಕ್ಕೆ ವಿರೋಧವಾಗಿ ಇದನ್ನು ಹೆಚ್ಚು ಆಧುನಿಕ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಸಮ -ಸ್ವಭಾವ ರಾಗದ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತವು ಸ್ವಭಾವದಲ್ಲಿ ಒಂದೇ ಮಧುರ ದ್ವನಿಯಾಗಿದ್ದು ಮತ್ತು ಒಂದೇ ಮಧುರಎಳೆಯನ್ನು ಸುತ್ತುವರಿದಿದ್ದು, ನಿಗದಿತ ನಾದದಲ್ಲೇ ನುಡಿಸಲಾಗುತ್ತದೆ. ಅಭಿನಯದ ಮಧುರತೆಯು ನಿರ್ದಿಷ್ಟ ರಾಗಗಳು ಮತ್ತು ನಿಯಮಬದ್ಧ ತಾಳಗಳನ್ನು ಆಧರಿಸಿರುತ್ತದೆ.

                                     

1. ಸ್ವರ ಚಿಹ್ನೆಯ ಪದ್ಧತಿ

ಭಾರತೀಯ ಸಂಗೀತವು ಸಾಂಪ್ರದಾಯಿಕವಾಗಿ ಅಭ್ಯಾಸ-ಪೂರ್ವಕವಾಗಿದ್ದು ಮತ್ತು ಪ್ರಾಥಮಿಕ ಮಾದ್ಯಮದ ಬೋಧನೆ, ಅರ್ಥಮಾಡಿಸುವಿಕೆ ಅಥವಾ ಸಂಚಾರಣೆಯ ವಿಧಾನದಲ್ಲಿ ಸ್ವರ ಚಿನ್ಹೆಯನ್ನು ಉಪಯೋಗಿಸಲಾಗುವುದಿಲ್ಲ. ಭಾರತೀಯ ಸಂಗೀತ ಮತ್ತು ಸಂಯೋಜನೆಯ ನಿಯಮವು, ಗುರುವಿನಿಂದ ಶಿಷ್ಯನಿಗೆ ಮುಖತಃ ಕಲಿಸುವುದಾಗಿದೆ. ಬೇರೆ ಬೇರೆ ಭಾರತೀಯ ಸಂಗೀತ ಶಾಲೆಗಳು ಸ್ವರ ಚಿನ್ಹೆಗಳು ಮತ್ತು ವರ್ಗೀಕರಣವನ್ನು ಅನುಸರಿಸುತ್ತಿವೆ. ನೋಡಿ ಮೇಳಕರ್ತಮತ್ತು ಥಾಟ್; ಆದಾಗ್ಯೂ ಸ್ವರ ಚಿನ್ಹೆಯು ಸೊಗಸಿನ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುತ್ತದೆಯೇ ಹೊರತು ಅದು ಪ್ರಮಾಣೀಕೃತವಲ್ಲ. ಹಾಗೆಯೇ ವಿಶ್ವದ ಉಳಿದ ಭಾಗಕ್ಕೆ ಭಾರತೀಯ ಸಂಗೀತವನ್ನು ಅಭ್ಯಸಿಸಲು ಸ್ವರ ಚಿನ್ಹೆಯ ವಿಶ್ವ ನೀತಿಯಿಲ್ಲ. 17 ಮತ್ತು 18 ನೇ ಶತಮಾನದಲ್ಲಿ, ಯುರೋಪ್ ನ ಪಂಡಿತರು ಭಾರತೀಯ ಸಂಗೀತಕ್ಕೆ ಮನಸೋತರು ಮತ್ತು ದ್ವನಿಯನ್ನು ಮುದ್ರಿಸಿಕೊಳ್ಳಲು ಅನುಕೂಲತೆಗಳು ಇರಲಿಲ್ಲವಾದ್ದರಿಂದ, ಆಗಿದ್ದ ಕೆಲವು ನೀತಿಗಳನ್ನು ಉಪಯೋಗಿಸಿ ಸಂಯೋಜನೆಯಲ್ಲಿರುವ ಧ್ವನಿಗಳನ್ನು ಬಹುಶಃ ಹೊರಗೆಡವಬಹುದು, ಎಂದು ಅವರು ವಿಚಾರ ಮಾಡಿದರು. ಪಂಡಿತರು ಈಗಾಗಲೇ ಪರ್ಷಿಯನ್ ಗೆ ಭಾಷಾಂತರ ಮಾಡಿರುವ ಪ್ರಾಚೀನ ಸ್ವರ ಚಿನ್ಹೆಯ ರೀತಿಯು ಗೊತ್ತುಪಡಿಸಲ್ಪಟ್ಟಿದ್ದು, ಆದರೂ ಭಾರತೀಯ ಶಾಸ್ತ್ರೀಯ ಸಂಗೀತದ ಜಟಿಲತೆಗಳನ್ನು ಸಂಕೀರ್ಣತೆಬರಹಗಳಲ್ಲಿ ಹೊರಗೆಡಹಲಾಗಿಲ್ಲ. ಕೆಲವು ಪಾಶ್ಚಿಮಾತ್ಯ ಪಂಡಿತರು ಸ್ಟಾಫ್ ಸ್ವರ ಚಿನ್ಹೆಯ ರೀತಿಯಲ್ಲಿ ಸಂಯೋಜನೆಯನ್ನು ಮುದ್ರಿಸಿದ್ದಾದರೂ, ಭಾರತೀಯ ಸಂಗೀತಗಾರರು 20 ನೇ ಶತಮಾನದಲ್ಲಿ ಭಟ್ಖಂಡೆ ರಚಿಸಿದ ನೀತಿಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಭಟ್ಖಂಡೆಯ ನೀತಿಯು ಹೆಚ್ಚು ಪರಿಪಕ್ವವಾಗಿದ್ದರೂ, ಚಿನ್ಹೆಗಳಿಗಿಂತ ದೇವನಾಗರಿ ಲಿಪಿಯನ್ನು ಅವಲಂಬಿಸಿರುವುದರಿಂದ, ಸ್ವರ ಚಿನ್ಹೆಯನ್ನು ರಚಿಸಲು ಅಡ್ಡಿಯನ್ನುಂಟು ಮಾಡುತ್ತದೆ. ಒಂದು ಹೊಸ ಸ್ವರ ಚಿನ್ಹೆಯ ರೀತಿಯನ್ನು ಸೂಚಿಸಿದ್ದು, ಇದು ಗುರುತುಚಿನ್ಹೆಗಳನ್ನು ಉಪಯೋಗಿಸಿದೆ ಮತ್ತು ಸ್ಟಾಫ್ ಸ್ವರ ಚಿನ್ಹೆಯ ರೀತಿಯಂತೆ ಗ್ರಹಣ ಶಕ್ತಿಯನ್ನು ತಕ್ಷಣವೇ ಕೊಡುತ್ತದೆ. ಇದು ಸ್ವರ ಚಿನ್ಹೆಯ ರೀತಿಯ ಜೊತೆ ಪ್ರಮಾಣಬದ್ಧವಾಗಿದ್ದು, ಇಲ್ಲಿಯವರೆಗಿನ ಅಪರಿಚಿತ ಸಂಯೋಜನೆಗಳನ್ನು ಬೆಳಕಿನ ದಿನ ಎಂದು ಕಾಣಬಹುದಾಗಿದೆ.

                                     

2.1. ಮುಖ್ಯ ಪ್ರಭೇದಗಳು ಶೈಲಿಗಳು ಹಿಂದೂಸ್ತಾನಿ ಸಂಗೀತ

ಖಯಾಲ್ ಮತ್ತು ಧ್ರುಪದ್ ಇವೆರಡು ಹಿಂದೂಸ್ತಾನಿ ಸಂಗೀತದ ಪ್ರಮುಖ ಬಗೆಗಳು ಸ್ವರೂಪ, ಆದರೆ ಇತರ ಶಾಸ್ತ್ರೀಯ ಮತ್ತು ಅರ್ಧ-ಶಾಸ್ತ್ರೀಯ ಬಗೆಗಳು ಅನೇಕ ಇವೆ. ಡ್ರಂನ ಮಾದರಿಯಂತಿರುವ ತಬಲವನ್ನು ನುಡಿಸುವವರು, ಸಾಮಾನ್ಯವಾಗಿ ಧಾಟಿಯನ್ನು ಸುಸ್ಥಿತಿಯಲ್ಲಿಟ್ಟಿದ್ದು, ಹಿಂದೂಸ್ಥಾನಿ ಸಂಗೀತದ ಕಾಲ ಸೂಚಕವೂ ಆಗಿದೆ. ಮತ್ತೊಂದು ಸಾಮಾನ್ಯ ವಾದ್ಯವಾದ ತಂತಿಗಳುಳ್ಳ ತಾನಪುರ ವು, ರಾಗ ದ ಅಭಿನಯದುದ್ದಕ್ಕೂ, ಸ್ಥಿರ ಏಕ ಪ್ರಕಾರದಧ್ವನಿಗಾಗಿ ನುಡಿಸಲಾಗುತ್ತದೆ. ಈ ಕೆಲಸ ಸಾಂಪ್ರದಾಯಿಕವಾಗಿ ಹಾಡುವ ಏಕವ್ಯಕ್ತಿಯ ವಿದ್ಯಾರ್ಥಿಯ ಮೇಲೆ ಬೀಳುತ್ತದೆ, ಈ ನೇಮಿಸಿದ ಕೆಲಸ ನೋಡಲು ಏಕ ಪ್ರಕಾರವಾಗಿ ವೈವಿಧ್ಯವಲ್ಲದಕಾಣಬಹುದು, ಆದರೆ ನಿಜವಾಗಿ,ಇದನ್ನು ಯಾರು ಪಡೆಯುತ್ತಾರೋ ಆ ವಿದ್ಯಾರ್ಥಿಗೆ ಇದು ಗೌರವಯುತವಾದದ್ದು ಮತ್ತು ಅಪರೂಪದ ಅವಕಾಶವಾಗಿರುತ್ತದೆ. ಇತರ ಪಕ್ಕ ವಾದ್ಯಗಳಲ್ಲಿ ಸಾರಂಗಿ ಮತ್ತು ಹಾರ್ಮೋನಿಯಂ ಕೂಡ ಸೇರಿದೆ. ಹಿಂದೂಸ್ಥಾನಿ ಸಂಗೀತದ ಮೂಲ ವಸ್ತು ವಿಷಯಗಳೆಂದರೆ ಭಾವನಾತ್ಮಕ ಪ್ರೀತಿ, ಪ್ರಕೃತಿ, ಮತ್ತು ಭಕ್ತಿ ಗೀತೆಗಳು.ಹಾಡುಗಾರಿಕೆಯ ಅಭಿನಯವು ಸಾಮಾನ್ಯವಾಗಿ ರಾಗದ ನಿಧಾನ ವಿಸ್ತರಣೆಯೊಂದಿಗೆ ಆರಂಭವಾಗುವುದನ್ನು ಬಧತ್ ಎಂದು ತಿಳಿಯಲಾಗಿದೆ. ಇದರ ಶ್ರೇಣಿಯು 30–40 ನಿಮಿಷಗಳಷ್ಟು ಉದ್ದವಾಗಿರಬಹುದು, ಅಥವಾ 2–3 ನಿಮಿಷಗಳಷ್ಟು ಬಹಳ ಕಡಿಮೆಯೂ ಆಗಿರಬಹುದು. ಇದು ಸಂಗೀತಗಾರರ ಶೈಲಿ ಮತ್ತು ಅಭಿನಯವನ್ನು ಅವಲಂಭಿಸಿರುತ್ತದೆ. ಒಂದು ಬಾರಿ ರಾಗವು ಅಭಿವೃದ್ಧಿಯಾಗುತ್ತಿದ್ದಂತೆ, ಮೋದೆಯನ್ನು ಸಿಂಗಾರವಾಗಿಸುತ್ತಾ, ತಾಳಬದ್ಧವಾಗಿ ಪ್ರಾರಂಭಗೊಂಡು, ಕ್ರಮೇಣ ಗತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಪ್ರಕರಣ ಭಾಗ ವನ್ನು ದ್ರುತ್ ಅಥವಾ ಜೋರ್ ಎಂದು ಕರೆಯಲಾಗುತ್ತದೆ. ಕೊನೆಯದಾಗಿ, ಬೆರಳುಗಳಿಂದ ಮೆದುವಾಗಿ ತಟ್ಟುವವನು ಕೂಡಿಕೊಳ್ಳುತ್ತಾನೆ ಮತ್ತು ತಾಳ ದ ಪರಿಚಯವಾಗುತ್ತದೆ. ಹಿಂದೂಸ್ಥಾನಿ ಸಂಗೀತದಲ್ಲಿ, ವಾದ್ಯಗಳು ಮತ್ತು ಪ್ರದರ್ಶನದ ಶೈಲಿಯಲ್ಲಿ ಅರ್ಥಗರ್ಭಿತವಾದ ಪರ್ಷಿಯನ್ ಪ್ರಾಭಾವವಿದೆ. ಹಾಗೂ, ಕರ್ನಾಟಕ ಸಂಗೀತದಂತೆ ಹಿಂದೂಸ್ಥಾನಿ ಸಂಗೀತವೂ ಸಹ ವಿವಿಧ ಪ್ರಾಚೀನ ಜನಾಂಗ ಶ್ರುತಿಧ್ವನಿಗಳನ್ನು ಜೀರ್ಣಿಸಿಕೊಂಡಿದೆ.

                                     

2.2. ಮುಖ್ಯ ಪ್ರಭೇದಗಳು ಶೈಲಿಗಳು ಕರ್ನಾಟಕ ಸಂಗೀತ

ಕರ್ನಾಟಕ ಸಂಗೀತದ ಮಾದರಿಯು, ಹಿಂದೂಸ್ಥಾನಿ ಸಂಗೀತಕ್ಕಿಂತ ಹೆಚ್ಚು ಸಾಂಕೇತಿಕವಾಗಿ ರಚನೆಯಾಗಿದೆ. ಉದಾಹರಣೆಗಾಗಿ, ತಾರ್ಕಿಕ ವರ್ಗೀಕರಣದಿಂದಾದ ರಾಗವು ಮೇಳಕರ್ತವಾಗಿದೆ, ಮತ್ತು ನಿಗದಿತ ಸಂಯೋಜನೆಗಳ ಉಪಯೋಗವು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಹೋಲುತ್ತದೆ. ಕರ್ನಾಟಕ ಸಂಗೀತದ ರಾಗದ ವಿಸ್ತರಣೆಯು ಸಾಮಾನ್ಯವಾಗಿ ಸಂಗೀತದ ತಾಳಗಳಲ್ಲಿ ಹೆಚ್ಚು ವೇಗವಾಗಿಯೂ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಅದರ ಸರಿಸಮಾನತೆಗಿಂತ ಕಡಿಮೆ ಅವಧಿಯದಾಗಿರುತ್ತದೆ. ಆರಂಭದ ತುಣುಕಿನ ಭಾಗವನ್ನು ವರ್ಣಂ ಎಂದು ಕರೆಯಲಾಗಿದ್ದು, ಮತ್ತು ಇದು ಸಂಗೀತಗಾರರಿಗೆ ಉತ್ಸಾಹವನ್ನು ಉಂಟುಮಾಡುತ್ತದೆ. ಇದನ್ನು ಅನುಸರಿಸುತ್ತಾ ಅರ್ಪಣೆ ಮತ್ತು ಬೇಡಿಕೆಯ ಆಶೀರ್ವಾದ, ನಂತರದಲ್ಲಿ ರಾಗಗಳು ಅನಿಯಮಿತ ಮಧುರತೆ ಮತ್ತು ತಾಳಗಳ ಮದ್ಯೆ ಅದಲುಬದಲಾವಣೆಗಳ ಸರಣಿ ಇರುತ್ತದೆ ಜೋರ್ ಗೆ ಸರಿಸಮನಾಗಿ ಅಲಂಕರಣೆಯಾಗಿದೆ. ಇದು ಹ್ಯಮ್ನ್ಗಳ ಜೊತೆ ಅಂತರ್ಮಿಳಿತವಾಗಿದ್ದು, ಇದನ್ನು ಕೃತಿ ಗಳು ಎಂದು ಕರೆಯಲಾಗಿದೆ. ಇದು ಪಲ್ಲವಿ ಯನ್ನು ಅನುಸರಿಸುತ್ತದೆ ಅಥವಾ ರಾಗದ ವಿಷಯ ವಸ್ತು ವಾಗಿರುತ್ತದೆ. ಕರ್ನಾಟಕ ಸಂಗೀತದ ತುಣುಕು ಕೂಡ ಸ್ವರಚಿನ್ಹೆಯಿಂದ ಕೂಡಿರುತ್ತದೆ, ಕವನಗಳ ಸಾಹಿತ್ಯದ ಪುನರುತ್ಪತ್ತಿಯು, ಅಭಿನಯ ನೀಡುವವರ ಕಲ್ಪನೆಯಂತೆ ಉಪಚಾರಗೊಳ್ಳುತ್ತದೆ ಮತ್ತು ಚೆಂದಗೊಳಿಸಲು ಸಾದ್ಯವಾಗುತ್ತದೆ; ಈ ಮೂಲಭೂತ ಭಾಗತುಣುಕುವನ್ನು ಸಂಯೋಜನೆಯೆಂದು ಕರೆಯಲಾಗುತ್ತದೆ. ಸಂಯೋಜನೆಯು ಸಾಮಾನ್ಯವಾಗಿ ಅವುಗಳೊಳಗೆ ವಿಧೇಯಕವನ್ನು ಮೃದುತ್ವಹೊಂದಿದೆ, ಹಾಗೂ ರಚನೆಯನ್ನು ಬೆಳಸುತ್ತದೆ: ಬೇರೆ ಬೇರೆ ಅಭಿನಯಗಾರರಿಂದ ಬೇರೆ ಬೇರೆ ವಿಧಾನದಲ್ಲಿ ಒಂದೇ ಮಾದರಿಯ ಸಂಯೋಜನೆಗಳನ್ನು ಹಾಡುವ ಸಾಮಾನ್ಯ ಸ್ಥಳವಾಗಿದೆ.ಈ ವಿಷಯವಾಗಿ, ಕರ್ನಾಟಕ ಸಂಗೀತವು ಹಿಂದೂಸ್ಥಾನಿ ಸಂಗೀತದಂತೆಯೇ ಇದ್ದು, ಮತ್ತು ಇನ್ನು ನವೀಕರಣಗೊಳಿಸಲಾಗಿದೆ ನೋಡಿ ಮ್ಯೂಸಿಕಲ್ ಇಂಪ್ರೋವೈಸೇಶನ್. ಪ್ರಾಥಮಿಕ ವಿಷಯಗಳು ಆರಾಧನೆಯನ್ನೂ ಸೇರಿಸಿ, ದೇವಾಲಯಗಳ ವರ್ಣನೆ, ತತ್ವ ಶಾಸ್ತ್ರ, ನಾಯಕ -ನಾಯಕಿಯರ ವಸ್ತು ವಿಷಯಗಳು ಮತ್ತು ದೇಶ ಭಕ್ತಿಗೀತೆಗಳು. ಪುರಂದರ ದಾಸ 1480-1564 ರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆದರೆ, ತ್ಯಾಗರಾಜ 1759-1847, ಮುತ್ತುಸ್ವಾಮಿ ದೀಕ್ಷಿತ ರು 1776-1827 ಮತ್ತು ಶ್ಯಾಮಾ ಶಾಸ್ತ್ರಿ 1762-1827 ಈ ಮೂವರನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ತಿಳಿಯಲಾಗಿದೆ.                                     

3. ಸಂಗೀತ ವಾದ್ಯಗಳು

ಹಿಂದೂಸ್ಥಾನಿ ಸಂಗೀತದಲ್ಲಿ ಸಾಂಕೇತಿಕವಾಗಿ ಉಪಯೋಗಿಸುವ ವಾದ್ಯಗಳಲ್ಲಿ ಸಿತಾರ್, ಸರೋದ್, ತಾನ್ಪುರ, ಬಾನ್ಸುರಿ, ಶೆಹನಾಯಿ, ಸಾರಂಗಿ, ಸಂತೂರ್, ಮತ್ತು ತಬಲಾ ಗಳು ಸೇರಿವೆ. ಕರ್ನಾಟಕ ಸಂಗೀತದಲ್ಲಿ ಸಾಂಕೇತಿಕವಾಗಿ ಉಪಯೋಗಿಸುವ ವಾದ್ಯಗಳಲ್ಲಿ ಕೊಳಲು, ಗೋಟುವಾದ್ಯ, ಹಾರ್ಮೋನಿಯಂ, ವೀಣೆ, ಮೃದಂಗ, ಕಂಜಿರ, ಘಟಂ ಮತ್ತು ವಯೊಲಿನ್ ಗಳು ಸೇರಿವೆ.ಭಾರತೀಯ ವಾದ್ಯಗಳ ಮೂಲಭೂತ ವಿಚಾರವನ್ನು ಪರಿಣಾಮಕಾರಿಯಾಗಿ ವಿವರಿಸಿರುವ ಡಾ.ಲಾಲ್ ಮಣಿ ಮಿಶ್ರರವರ ಭಾರತೀಯ ಸಂಗೀತ ವಾದ್ಯ ವು ಅವರ ವರ್ಷಗಳ ಸಂಶೋದನೆಯ ನಂತರ ಹೊರ ತಂದಿದೆ.

                                     

4. ಪಾಂಡಿತ್ಯವುಳ್ಳವರು

ಪ್ರಾಚೀನ ಮೂಲ ಗ್ರಂಥಗಳು ಭಾರತೀಯ ಸಂಗೀತದ ಮೂಲಭೂತ ನಿಯಮಗಳನ್ನು ನೀಡಿವೆ, ಆದರೆ ಓಂಕಾರ ನಾಥ್ ಥಾಕೂರ್, ಲಲಿತ್ ಕಿಶೋರ್ ಸಿಂಗ್,ಲಾಲ್ ಮಣಿ ಮಿಶ್ರ, ಆಚಾರ್ಯ ಬೃಹಸ್ಪತಿ, ಥಾಕೂರ್ ಜೈದೇವ್ ಸಿಂಗ್, ಅರ್. ಸಿ. ಮೆಹತಾ, ಪ್ರೇಮಲತಾ ಶರ್ಮ, ಸುಭದ್ರಾ ಚೌಧರಿ, ಇಂದ್ರಣಿ ಚಕ್ರವರ್ತಿ, ಅಶೋಕ್ ರಾನಡೆ, ಅಬಾನ್ ಇ ಮಿಸ್ಟ್ರಿ, ಮತ್ತು ಇತರರ ಆಧುನಿಕ ಬರವಣಿಗೆ ಭಾರತೀಯ ಸಂಗೀತ ರಚನೆಗೆ ವ್ಯವಸ್ಥೆ ಉಗ್ರ ತಳಹದಿಯನ್ನು ಕೊಟ್ಟಿದೆ. ಇವರುಗಳಲ್ಲದೆ, ಬೇರೆ ವಾಹಿನಿ ಗಳಲ್ಲಿರುವ ಪಂಡಿತರುಗಳೂ ಕೂಡ ಸಂಗೀತದ ಬಗ್ಗೆ ಬರೆದಿದ್ದಾರೆ. ಅನೇಕ ಭಾರತೀಯ ಸಂಗೀತಗಾರರ ಜೀವನ ಚರಿತ್ರೆಗಳಿವೆ, ಹಾಗಿದ್ದರೂ ಕೆಲವು ವಿಮರ್ಶಕಾರರು, ಭಾರತೀಯ ಚರಿತ್ರಾಕಾರರು ಸಂಗೀತಕ್ಕೆ ಹೆಚ್ಚು ಗಮನ ಕೊಟ್ಟಿಲ್ಲವೆಂದು ಭಾವಿಸುತ್ತಾರೆ.

                                     

5. ಸಂಗೀತಗಾರರು - ಹಾಡುವವರು

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ, ಗುರುತಿಸಲ್ಪಡುವ ಹಲವಾರು ಹಾಡುಗಾರರಲ್ಲಿ ಇವರುಗಳು ಸೇರಿದ್ದಾರೆ.ತಾನ್ ಸೇನ್,ಕೇಸರಬಾಯಿ ಕೆರ್ಕರ್, ರೋಶನ್ ಅರಾ ಬೇಗಂ, ಚೆಂಬೈ ವೈದ್ಯನಾಥ ಭಾಗವತರ್,ಎಂ.ಎಸ್.ಸುಬ್ಬುಲಕ್ಷ್ಮಿ, ಜಿ.ಏನ್.ಬಾಲಸುಬ್ರಮಣ್ಯಂ, ಡಾ. ಬಾಲಮುರಳಿ ಕೃಷ್ಣ, ಜಾನ್ ಬಿ. ಹಿಗ್ಗಿನ್ಸ್, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಡಿ.ವಿ.ಪಲುಸ್ಕರ್, ಅಬ್ದುಲ್ ಕರಿಂ ಖಾನ್, ಅಬ್ದುಲ್ ವಾಹಿದ್ ಖಾನ್, ಫೈಯಾಜ್ ಖಾನ್, ಅಮೀರ್ ಖಾನ್, ಬಡೇ ಗುಲಾಂ ಅಲಿ ಖಾನ್, ಕುಮಾರ ಗಂಧರ್ವ, ನಾರಾಯಣರಾವ್ ವ್ಯಾಸ್, ಮಲ್ಲಿಕಾರ್ಜುನ ಮನ್ಸೂರ್, ಹಿರಿಯ ಮತ್ತು ಕಿರಿಯ ದಾಗರ್ ಸಹೋದರರು, ಜಿಯಾ ಫಾರಿದುದ್ದೀನ್ ದಾಗರ್, ರಿತ್ವಿಕ್ ಸನ್ಯಾಲ್, ಗುಂದೇಚ ಸಹೋದರರು, ನಜಕತ್ ಮತ್ತು ಸಲಾಮತ್ ಅಲಿ ಖಾನ್, ಭೀಮಸೇನ್ ಜೋಷಿ, ಮೊಗು ಬಾಯಿ ಕುರ್ದಿಕರ್, ಕಿಶೋರಿ ಅಮೋನ್ಕರ್,ಪಂಡಿತ್ ಜಸರಾಜ್, ಉಲ್ಲ್ಹಾಸ್ ಕಶಲ್ಕರ್, ಸತ್ಯಶೀಲ್ ದೇಶಪಾಂಡೆ, ರಶೀದ್ ಖಾನ್, ಮಧುಪ್ ಮುದ್ಗಲ್, ವಿನಾಯಕರಾವ್ ಪಟವರ್ಧನ್, ಮತ್ತು ಓಂಕಾರ್ ನಾಥ್ ಥಾಕುರ್.

                                     

6. ಸಂಗೀತಗಾರರು - ವಾದ್ಯಗಾರರು

ಅಲ್ಲಾ ಉದ್ದೀನ್ ಖಾನ್ ಒಬ್ಬ ಪರಿವರ್ತನಾಶೀಲ ವಾದ್ಯಗಾರ. ಅವರು ಅವರ ಮಗನಾದ ಅಲಿ ಅಕ್ಬರ್ ಖಾನ್ ಮತ್ತು ಅವರ ಮಗಳು ಅನ್ನಪೂರ್ಣದೇವಿ,ಯನ್ನು ತರಬೇತುಗೊಳಿಸಿದ್ದಾರೆ. ನಿಖಿಲ್ ಬ್ಯಾನರ್ಜಿ, ಪಂಡಿತ್ ರವಿಶಂಕರ್, ಮತ್ತು ಕೊಳಲುವಾದಕ ಪನ್ನಲಾಲ್ ಘೋಷ್,ಬಾಂಗ್ಲಾದೇಶ ದಿಂದ ಆಜಿಜುಲ್ ಇಸ್ಲಾಂ ಯುವ-ಜನಾಂಗದ ಸಿತಾರ್ ವಾದಕರಲ್ಲಿ ಚಂದ್ರಕಾಂತ್ ಸರ್ದೇಶ್ ಮುಖ್ ಬುಧಾದಿತ್ಯ ಮುಖರ್ಜಿ ಮತ್ತು ಶಾಹಿದ್ ಪರ್ವೇಜ್ ಸೇರಿದ್ದಾರೆ. ಯುವ-ಜನಾಂಗದವರ ಪಟ್ಟಿಯಲ್ಲಿ ಶ್ರೇಷ್ಠ ಕೊಳಲುವಾದಕರ ಹೆಸರೆಂದರೆ ವಿಜಯ್ ರಾಘವ ರಾವ್, ಹರಿಪ್ರಸಾದ್ ಚೌರಾಸಿಯಾ, ರಘುನಾಥ್ ಸೇಥ್ ಮತ್ತು ನಿತ್ಯಾನಂದ್ ಹಳ್ದಿಪುರ್. ಬಿಸ್ಮಿಲ್ಲಾ ಖಾನ್ ರ ಹೆಸರು ಶೆಹನಾಯಿ ವಾದ್ಯದ ಜೊತೆ ಪರ್ಯಾಯಪದವಾಗಿದೆ. ಜಿಯಾ ಮೊಹಿದ್ದೀನ್ ದಾಗರ್ ರವರು ವೀಣೆಯೊಂದಿಗಿನ ಅವರ ನೈಪುಣ್ಯತೆಯಿಂದ ಹೆಸರುವಾಸಿಯಾಗಿದ್ದಾರೆ.ಅಲ್ಲಾ ರಖಾ ರವರು, ಪಂಡಿತ್ ರವಿಶಂಕರ್ ಜೊತೆ,ಪಶ್ಚಿಮ ಭಾಗದಲ್ಲಿ ತಬಲವನ್ನು ಪ್ರಸಿದ್ಧವನ್ನಾಗಿ ಮಾಡಿದ್ದಾರೆ.ಅವರ ಮಗ ಜಾಕೀರ್ ಹುಸೇನ್ ಕೂಡ ಒಬ್ಬ ಪ್ರಖ್ಯಾತ ತಬಲ ವಾದಕರು. ಸಂತೂರ್ ವಾದನದಲ್ಲಿ ಶಿವಕುಮಾರ್ ಶರ್ಮಾ ಹೆಸರು ವಾಸಿ.ದಕ್ಷಿಣ ಶಾಸ್ತ್ರೀಯ ಸಂಗೀತಗಾರರಲ್ಲಿ, ಮಾಸ್ಟರ್ ಯು. ಶ್ರೀನಿವಾಸ್ ರವರು ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಮೇರು ಕಲಾವಿದರಾಗಿರುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ,ಅವನ ಮ್ಯಾಂಡೊಲಿನ್ ನಮೂನೆಯ ಪರಿಚಯದಿಂದ ಹೆಸರುವಾಸಿಯಾಗಿದ್ದಾನೆ. ಭಾರತದಲ್ಲಿ "ಮ್ಯಾಂಡೊಲಿನ್" ಶಬ್ದದ ಜೊತೆ ಅವನು ಪರ್ಯಾಯಪದವಾಗಿ ಆಗಿದ್ದಾನೆ.ಅವರುಗಳಲ್ಲಿ, ಚೆನ್ನಾಗಿ ಪ್ರಖ್ಯಾತರಾದ ವಾದ್ಯಗಾರರಲ್ಲಿ ಕುಮರೇಶ್ ಮತ್ತು ಗಣೇಶ್ ಜೋಡಿ, ಲಾಲ್ಗುಡಿ ಜಿ. ಜಯರಾಮನ್ ಮತ್ತು ದಿವಂಗತ ಕುನ್ನಕ್ಕುಡಿ ವೈದ್ಯನಾಥನ್, ಇವರೆಲ್ಲಾ ಅವರ ವಯೊಲಿನ್ ಪ್ರದರ್ಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ.                                     

7. ಹೊರಗಿನ ಕೊಂಡಿಗಳು

 • ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಸರಳ ಪೀಟಿಕೆ- - ಭಾಗ 1 ವಿಶ್ವ ಸಂಗೀತ ಸೆಂಟ್ರಲ್ ರವರಿಂದ ಪ್ರಕಟಣೆ.
 • "ಬನಾರಸ್, ಮ್ಯೂಸಿಕ್ ಆನ್ ದಿ ಗಂಗೆ ಡಾಕ್ಯುಮೆಂಟರಿ 52 ನಿಮಿಷಗಳು.
 • ರಾಗವಾಣಿ ಒಂದು ಆನ್ ಲೈನ್ ದಿನಪತ್ರಿಕೆಯಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳ ಮೇಲೆ ಏಕಾಗ್ರತೆಯನ್ನು ಹೊಂದಿದೆ.
 • ಭಾರತೀಯ ಶಾಸ್ತ್ರೀಯ ಸಂಗೀತದ ತಳಹದಿ ಆಧಾರಮತ್ತು ಇತಿಹಾಸ.
 • ದಕ್ಷಿಣ ಏಷ್ಯಾದ ಸ್ತ್ರೀಯರ ಚಾವಡಿ ಭವನ ಭಾರತೀಯ ಶಾಸ್ತ್ರೀಯ ಸಂಗೀತದ ಜೊತೆ ವಿವರಣೆಯನ್ನು ಹೊಂದಿರುವ ದೊಡ್ಡ ಲೇಖನಗಳ ಸಂಗ್ರಹವನ್ನು ಮತ್ತು ಅಪರೂಪದ ಮುದ್ರಣಗಳಿಂದ ಹೊರತೆಗೆದ ಆಡಿಯೋದ ಶ್ರಾವ್ಯ ಕೊಂಡಿಗಳನ್ನು ಹೊಂದಿದೆ.
 • ಇಂಡಿಯನ್ ಮ್ಯೂಸಿಕ್ ಫಾರ್ ಮ್ಯುಸಿಶಿಯನ್ಸ್ -ಸಂಗೀತಗಾರರು ವಿವಿಧ ರಾಗಗಳ ಸೂಕ್ಷ್ಮ ವ್ಯತ್ಯಾಸಗಳನ್ನು, ಅದರ ಸಾಹಿತ್ಯ ಮತ್ತು ಮನೋಭಾವಗಳನ್ನು ವಿವರವಾಗಿ ಚರ್ಚೆ ಮಾಡಲು ಇರುವ ಒಂದು ಸಭಾಭವನ.
 • ಭಾರತದ ದ್ವನಿಗಳು ಶಬ್ದ - ರಾಗವು ಆಡಿಯೋ ಜೊತೆ ಸಂಬಂಧ ಹೊಂದಿದ್ದು,ಸಂಗೀತದ ತಾರ್ಕಿಕ ಲೇಖನಗಳು ಮತ್ತು ಆನ್ ಲೈನ್ ಪಾಠಗಳು.
 • ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಸರಳ ಪೀಟಿಕೆ - ಭಾಗ 2 ವಿಶ್ವ ಸಂಗೀತ ಸೆಂಟ್ರಲ್ ರವರಿಂದ ಪ್ರಕಟಣೆ.
 • ಸ್ಪಿಕ್ ಮಕಾಯ್ -ಯುವಕರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಸಮಾಜವಾಗಿದೆ.
 • ಸ್ವರ ಗಂಗಾ ಬೈ ಅದ್ವೈತ್ ಜೋಷಿ - ರಾಗದ ತಳಹದಿ, ತಾಳದ ತಳಹದಿ, ಬಂದಿಶ್ ತಳಹದಿ ; ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ವಿವಿಧ ಸಂಗೀತ ಮಾದರಿಗಳು ಮತ್ತು ಲೇಖನಗಳು
 • ವಿಜಯ ಪರ್ರಿಕರ್ ಲೈಬ್ರರಿ ಆಫ್ ಇಂಡಿಯನ್ ಕ್ಲಾಸ್ಸಿಕಾಲ್ ಮ್ಯೂಸಿಕ್ ಗ್ರಂಥಾಲಯವು,ಈಸ್ಟರ್ ವರ್ಷದ ಭಾರತದ ಮಹಾನ್ ಸಂಗೀತ ಮಾಸ್ಟರ್ ಗಳ ಸಂಗೀತದ ಮುದ್ರಿಕೆಗಳು,ಹಳೆಯದರಿಂದ ಆರಿಸಿ ತೆಗೆದದ್ದು,ಶೋಧಿಸಲು ಕಷ್ಟವಾದದ್ದು ಅಥವಾ ಮುದ್ರಣಗೊಂಡು ಬಿಡುಗಡೆಯಾಗದೆ ಇದ್ದದ್ದು ಮುಂತಾದುವುಗಳನ್ನು ಹೊಂದಿದೆ.
 • ತಾನರಂಗ್.ಕಾಮ್ ತಾನರಂಗ್ ಇದು ಒಂದು ಅಂತರ್ಜಾಲವಾಗಿದ್ದು, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳ ಬಗ್ಗೆ ಮತ್ತು ವಿವಿಧ ಬಂದಿಷೆಸ್ ಗಳ ಬಗ್ಗೆ ಕೇಳಲು ಮಾಹಿತಿಗಳನ್ನು ಒಳಗೊಂಡಿದೆ.
 • ಮೈಗ್ಹ್ ಮಲ್ಹಾರ್ - ಇತಿಹಾಸಚರಿತ್ರೆ,ವಿಷಯ,ಚಿರಪರಿಚಿತ ಹಾಡುಗಾರರು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ವಾದ್ಯಗಳ ಮೇಲೆ ವ್ಯಾಪಕವಾದ ವಿವರಣೆಯನ್ನು ನೀಡುತ್ತದೆ.
ನಿತ್ಯಶ್ರೀ ಮಹಾದೇವನ್
                                               

ನಿತ್ಯಶ್ರೀ ಮಹಾದೇವನ್

ಡಾ|ನಿತ್ಯಶ್ರೀ ಮಹಾದೇವನ್ ಬಹಳ ಮೆಚ್ಚುಗೆ ಪಡೆದಿರುವ ಶಾಸ್ತ್ರೀಯ ಸಂಗೀತಗಾರ್ತಿ ಹಾಗು ಹಿನ್ನಲೆ ಗಾಯಕಿ. ಇವರು ಹಲವು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಪ್ರಮುಖ ಸಭೆಗಳಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿರುವ ನಿತ್ಯಶ್ರೀಯವರು ಸಂಗೀತ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಅವರ ಮೊಮ್ಮಗಳು. ನಿತ್ಯಶ್ರೀಯವರು ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ ಹಾಗು ೫೦೦ಕ್ಕು ಹೆಚ್ಚು ಆಲ್ಬಮ್‍ಗಳನ್ನು ಬಿಡುಗಡೆ ಮಾಡಿದ್ದಾರೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →