Back

ⓘ ಏಪ್ರಿಲ್                                               

ಕೇದಾರನಾಥ

ಕೇದಾರನಾಥ ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ. ಸುಮಾರು ೩೫೬೪ ಮೀಟರ್ ಎತ್ತರದಲ್ಲಿರುವ ಈ ಸ್ಥಳದ ವಿಪರೀತ ಚಳಿಯ ವಾತಾವರಣದಿಂದಾಗಿ ದೇವಾಲಯವು ಕೇವಲ ಏಪ್ರಿಲ್ ಕೊನೆಯ ಭಾಗದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಿರುತ್ತದೆ.

                                               

ವಿಕಿಸೋರ್ಸ್

ವಿಕಿಸೋರ್ಸ್ ವಿಕಿಮೀಡಿಯ ಪ್ರತಿಷ್ಠಾಣದ ನಿರ್ವಹಣೆಯಲ್ಲಿರುವ ಉಚಿತ ವಿಷಯವನ್ನು ಗ್ರಂಥಮೂಲ ಗಳನ್ನು ತೋರಿಸುವ ಆನ್ಲೈನ್ ಡಿಜಿಟಲ್ ಗ್ರಂಥಾಲಯ ಆಗಿದೆ. ವಿಕಿಸೋರ್ಸ್ ಎನ್ನುವುದು ಒಟ್ಟಾರೆಯಾಗಿ ಯೋಜನೆಯ ಹೆಸರು ಮತ್ತು ಆ ಯೋಜನೆಯ ಪ್ರತಿಯೊಂದು ನಿದರ್ಶನಗಳ ಹೆಸರು ; ಅನೇಕ ವಿಕಿಸೋರ್ಸಗಳು ವಿಕಿಸೋರ್ಸ್ನ ಒಟ್ಟಾರೆ ಯೋಜನೆಯನ್ನು ರೂಪಿಸುತ್ತದೆ. ಎಲ್ಲಾ ರೀತಿಯ ಉಚಿತ ಪಠ್ಯವನ್ನು, ಅನೇಕ ಭಾಷೆಗಳಲ್ಲಿ ಮತ್ತು ಅನುವಾದಗಳಲ್ಲಿ ಹೋಸ್ಟ್ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಮೂಲತಃ ಉಪಯುಕ್ತ ಅಥವಾ ಪ್ರಮುಖ ಐತಿಹಾಸಿಕ ಪಠ್ಯಗಳನ್ನು ಸಂಗ್ರಹಿಸಲು ಆರ್ಕೈವ್ ಆಗಿ ಕಲ್ಪಿಸಲಾಗಿತ್ತು, ಇದು ಸಾಮಾನ್ಯ-ವಿಷಯ ಗ್ರಂಥಾಲಯವಾಗಿ ವಿಸ್ತರಿಸಿದೆ. ಪ್ರಾಜೆಕ್ಟ್ ಗುಟೆನ್‌ಬರ್ಗ್‌ನ ನಾಟಕವಾದ ಪ್ರಾಜೆಕ್ಟ್ ಸೋರ್ಸ್‌ಬರ್ಗ್ ಹೆಸರಿನಲ್ಲಿ ಈ ಯೋಜನೆ ಅಧಿಕೃತವಾಗಿ ನವೆಂಬರ್ ...

                                               

ಚನ್ನರಾಯಪಟ್ಟಣ

ಚನ್ನರಾಯಪಟ್ಟಣ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ, ಅದರ ಆಡಳಿತ ಕೇಂದ್ರ. ಇದು ಬೆಂಗಳೂರಿನಿಂದ ೧೪೭ ಕಿ.ಮೀ ದೂರದಲ್ಲಿದೆ. ಇದಕ್ಕೆ ಕೊಳತ್ತೂರು/ಅಮೃತಪುರ ಎಂಬ ಹೆಸರುಗಳಿವೆ. ಈ ನಗರದ ಹೆಸರು ಚೆನ್ನಿಗರಾಯಪಟ್ಟಣ - ನಗರವನ್ನು ಆಳುತಿದ್ದ ರಾಜನ ಹೆಸರಿನಿಂದ ಬಂದಿದ್ದುದು. ಚನ್ನರಾಯಪಟ್ಟಣದಲ್ಲಿ ಆರು ಹೋಬಳಿಗಳಿವೆ. ೧. ನುಗ್ಗೇಹಳ್ಳಿ ೨. ಹಿರಿಸಾವೆ ೩. ಬಾಗೂರು ೪.ಶ್ರವಣಬೆಳಗೊಳ ೫. ದಂಡಿಗನಹಳ್ಳಿ ೬.ಕಸಬಾ ಉತ್ತರದಲ್ಲಿ ಅರಸೀಕೆರೆ ತಾಲ್ಲೂಕು ಮತ್ತು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು, ಪೂರ್ವದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ದಕ್ಷಿಣದಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು, ನೈಋತ್ಯ ಮತ್ತು ಪಶ್ಚಿಮದಲ್ಲಿ ಹೊಳೆನರಸೀಪುರ ಮತ್ತು ಹಾಸನ ತಾಲ್ಲೂಕುಗಳು ಚೆನ್ನರ ...

                                               

ಚೈತ್ರ ಮಾಸ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಮೊದಲನೇ ಮಾಸ.ಬಂಗಾಳಿ ಪಂಚಾಂಗದಲ್ಲಿ ಇದು ಕೊನೆಯ ಮಾಸವಾಗಿದೆ ಅಲ್ಲಿ ಇದನ್ನು ಚೊಯಿತ್ರೊ ಎನ್ನುತ್ತಾರೆ.ನೇಪಾಳೀ ಪಂಚಾಂಗದಲ್ಲಿಯೂ ಸಹ ಇದು ಕೊನೆಯ ಮಾಸವಾಗಿದೆ ಇದು ಮಾರ್ಚ್ ತಿಂಗಳ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಇದನ್ನು ಚೈತ್ರ ಅಥವಾ ಚೈತ್ ಎನ್ನುತ್ತಾರೆ.ತಮಿಳ್ ಪಂಚಾಂಗದಲ್ಲಿ ಇದು ಮೊದಲ ಮಾಸವಾಗಿದ್ದು ಇದನ್ನಿ ಚಿತ್ತಿರೈ ಎಂದು ಕರೆಯುತ್ತಾರೆ.ವೈಷ್ಣವ ಪಂಚಾಂಗದಲ್ಲಿ ವಿಷ್ಣು ಈ ತಿಂಗಳನ್ನು ಆಳುತ್ತಾರೆ. ಸಾಂಪ್ರದಾಯಿಕವಾಗಿ ಈ ಮಾಸವು ಗ್ರೆಗೊರಿಯನ್ ಪಂಚಾಂಗದ ಮಾರ್ಚ್ ಅಥವಾ ಏಪ್ರಿಲ್ ನಿಂದ ಶುರುವಾಗುತ್ತದೆ.ಹಿಂದೂ ಹೊಸ ವರ್ಷಾರಂಭ ಎಂದರೆ ಚೈತ್ರ ಮಾಸದ ಮೊದಲ ದಿನಾಂಕವು ಗ್ರೆಗೊರಿಯನ್ ಪಂಚಾಂಗದಲ್ಲಿ ನಿಗದಿತವಾಗಿರುವುದಿಲ್ಲ. ಈ ಮಾಸವನ್ನು ಅನೇಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ,ದ ...

                                               

ಮಲ್ಲೇಶ್ವರಂ

ಮಲ್ಲೇಶ್ವರ ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ಒಂದು.ಈ ಪ್ರದೇಶ ನಗರದ ಕೆಂಪೇಗೌಡ ಬಸ್ ನಿಲ್ಡಾಣ ಹಾಗು ರೈಲು ನಿಲ್ದಾಣಕ್ಕೆ ಬಹಳ ಹತ್ತಿರದಲ್ಲಿದೆ. ಇಲ್ಲಿನ ಪುರಾತನ ಕಾಡುಮಲ್ಲೇಶ್ವರ ದೇವಸ್ಥಾನ ಬಹಳ ಪ್ರಸಿದ್ದಿ ಹೊಂದಿದೆ. ಇಲ್ಲಿ ಮದುವೆಗೆ ಬೇಕಾದ ರೇಷ್ಮೆ ಬಟ್ಟೆಗಳು ಸಿಗುತ್ತವೆ. ಇಲ್ಲಿ ಬೆಳಗಿನ ವ್ಯಾಯಾಮವನ್ನು ಉತ್ತೇಜಿಸಲು ಸ್ಯಾ೦ಕಿ ಟ್ಯಾ೦ಕ್ ಇದೆ. ಅಲ್ಲದೆ ಮಲ್ಲೇಶ್ವರದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವಿದೆ.ಇಲ್ಲಿನ chats ತುಂಬ ಪ್ರಸಿದ್ಧಿ. ಮಲ್ಲೇಶ್ವರ ಬೆಂಗಳೂರು ನಗರದ ವಾಯುವ್ಯ ಜಿಲ್ಲೆಯಾಗಿದೆ. ಅನೇಕ ಜನರು 1898 ರಲ್ಲಿ ಈ ಪ್ರದೇಶದಿಂದ ಹೊರಗೆ ಹೊಗಲು ಪ್ಲೇಗ್ ಉಪದ್ರವವು ಕಾರಣವಾಯಿತು, ಒಂದು ಸಮಯದಲ್ಲಿ ಮಲ್ಲೇಶ್ವರ ಉಪನಗರ ಎಂದು ಪ್ರಖ್ಯಾತಿ ಪಡೆದಿತ್ತು. ಇದು ಕಾಡು ಮಲ್ಲೇಶ್ವರ ದೇವಸ್ಥಾನದಿಂದ ತನ್ನ ಹೆಸರನ್ನು ಪಡೆದುಕೊಂ ...

                                               

ಮೀನ ಮಾಸ

ಹಿಂದೂ ಧರ್ಮದ ಸೌರಮಾನ ಪಂಚಾಂಗದ ಹನ್ನೆರಡನೇ ಮಾಸ, ಸೌರಮಾನವರ್ಷದ ಕೊನೆಯ ತಿಂಗಳು. ತಮಿಳಿನಲ್ಲಿ ಈ ತಿಂಗಳನ್ನು ಪಂಗುನಿ ಎಂದು ಕರೆಯುತ್ತಾರೆ. ನಿರಯನ ಸೂರ್ಯ ಭೂಮಂಡಲದ 330ನೆಯ ಅಂಶಕ್ಕೆ ಬಂದಾಗ ಮೀನಮಾಸ ಆರಂಭವಾಗಿ 360 ಅಂಶಗಳಿಗೆ ಬಂದಾಗ ಮುಗಿಯುತ್ತದೆ. ಈ ಅವಧಿಯಲ್ಲಿ ಸೂರ್ಯ ಪೂರ್ವಾಭಾದ್ರ 4ನೆಯ ಪಾದ, ಉತ್ತರಾಭಾದ್ರ, ರೇವತಿ ನಕ್ಷತ್ರಗಳಿಂದ ಕೂಡಿದ ಮೀನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಮಾರ್ಚ್ 14ನೆಯ ತಾರೀಖು ಈ ತಿಂಗಳು ಆರಂಭವಾಗಿ ಏಪ್ರಿಲ್ 13 ಅಥವಾ 14ನೆಯ ತಾರೀಖಿನಲ್ಲಿ ಮುಗಿಯುತ್ತದೆ. ಒಂಬತ್ತು ಸಹಸ್ರ ಕಿರಣಗಳಿಂದ ಕೂಡಿದ ಅರುಣವರ್ಣದ ಪರ್ಜನ್ಯ ಎಂಬ ಸೂರ್ಯ ಈ ತಿಂಗಳಿನ ದೇವತೆ. ಈ ಮಾಸದಲ್ಲಿ ಎರಡು ಅಮಾವಾಸ್ಯೆಗಳು ಬಂದರೆ ಅದು ಚಾಂದ್ರಮಾನದಂತೆ ಅಧಿಕ ಚೈತ್ರಮಾಸವಾಗುತ್ತದೆ.

                                     

ⓘ ಏಪ್ರಿಲ್

ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೨೧

ಈ ತಿಂಗಳ ಮೊದಲ ದಿನವನ್ನು ವಿಶ್ವದ ಬಹುತೇಕ ಕಡೆ ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಬರುವ ಇತರ ಪ್ರಮುಖ ದಿನಗಳು ಹೀಗಿವೆ:

  • ಏಪ್ರಿಲ್ ೨೪ ೧೯೭೩ ರಂದು ಸಚಿನ್ ರಮೇಶ್ ತೆಂಡೂಲ್ಕರ್ ಜನನ.
  • ಏಪ್ರಿಲ್ ೨೬, ೧೯೭೭ರಂದು ಕನ್ನಡ ರಂಗಭೂಮಿ ಕಲಾವಿದ ಅವಿನಾಶ್ ಕಾಮತ್ ಜನನ.
  • ೧೨ ನೇ ತಾರೀಖು ೨೦೦೬ ಕನ್ನಡದ ವರನಟ ಡಾ.ರಾಜಕುಮಾರ್ ನಿಧನ.
  • ೮ ನೇ ತಾರೀಖು ೨೦೦೬ಹಾಲಿವುಡ್ ಚಲನಚಿತ್ರ ಜಂಗಲ್ ಬುಕ್ ೨೦೧೬ ಚಲನಚಿತ್ರ. ೨೦೧೬ ಮುಂಬೈನಲ್ಲಿ ಪ್ರದರ್ಶನಗೊಂಡಿತು.
  • ೧೪ ನೇ ತಾರೀಖು ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ.
  • ೨೪ ನೇ ತಾರೀಖು ಕನ್ನಡದ ವರನಟ ಡಾ.ರಾಜ್‍ಕುಮಾರ್ ಜನ್ಮದಿನ.
ಕ್ಯಾಥರಿನ್ ಮಿಡ್ಲ್‌ಟನ್
                                               

ಕ್ಯಾಥರಿನ್ ಮಿಡ್ಲ್‌ಟನ್

ಕೇಂಬ್ರಿಜ್‌ನ ರಾಜಕುಮಾರಿ ಕ್ಯಾಥರಿನ್ ಅಥವಾ ಕ್ಯಾಥರಿನ್ ಎಲಿಜಬೆತ್ ಮಿಡ್ಲ್‌ಟನ್ ಅಥವಾ ಜನಪ್ರಿಯವಾಗಿ ಕೇಟ್ ಅವರು ರಾಜಕುಮಾರ ವಿಲಿಯಮ್ ಅವರ ಪತ್ನಿ. ಇವರು ಏಪ್ರಿಲ್ ೨೯ರಂದು ವಿವಾಹವಾದರು.

ಮೈಸಿ ವಿಲಿಯಮ್ಸ್
                                               

ಮೈಸಿ ವಿಲಿಯಮ್ಸ್

ಮಾರ್ಗರೆಟ್ ಕಾನ್ಸ್ಟನ್ಸ್ "ಮೈಸಿ" ವಿಲಿಯಮ್ಸ್ ಒರ್ವ ಇಂಗ್ಲಿಷ್ ನಟಿ. ಅವರ ನಟನಾ ವೃತ್ತಿಯು 2011 ರಲ್ಲಿ ಪ್ರಾರಂಭವಾಯಿತು. ವಿಲಿಯಮ್ಸ್ ಅವರು ಗೇಮ್ ಆಫ್ ಥ್ರೋನ್ಸ್ ನಲ್ಲಿ ಆರ್ಯ ಸ್ಟಾರ್ಕ್ ಪಾತ್ರಕ್ಕಾಗಿ ವಿಶ್ವಾದ್ಯಂತ ಪ್ರಸಿದ್ದರಾಗಿದ್ದಾರೆ. ಈ ಪಾತ್ರಕ್ಕಾಗಿ ಇವರು ಹಲವಾರು ಪ್ರಶಸ್ತಿಗಳನ್ನು ಸಹ ಪಡೆದುಕೊ೦ಡಿದ್ದಾರೆ.

ಕುರಿಯಾಕೋಸ್
                                               

ಕುರಿಯಾಕೋಸ್

ಆರಂಭಿಕ ಜೀವನ ಕುರಿಯಾಕೋಸ್ ಎಲಿಯಾಸ್ ಚವರ Iko ಕುರಿಯಾಕೋಸ್ ಚವರ ಮರಿಯಮ್ Chothirakkunnel ಮಗ Nasrani ಕ್ರಿಶ್ಚಿಯನ್ ಕುಟುಂಬದಲ್ಲಿ ಕೈನಕರಿ, ಕೇರಳ ಫೆಬ್ರವರಿ 1805 10 ರಂದು ಜನಿಸಿದರು. Nasranis ಮೊದಲ ಶತಮಾನದಲ್ಲಿ ಸೇಂಟ್ ಥಾಮಸ್ ಧರ್ಮ ಬ್ಯಾಪ್ಟೈಜ್ ಕೇರಳದ ಪುರಾತನ ಕ್ರೈಸ್ತರು ಇದನ್ನು ಸಿರಿಯನ್ Chrstians ಎಂದು ಕರೆಯಲಾಗುತ್ತದೆ ಸಂತ ಥಾಮಸ್ ಕ್ರೈಸ್ತರು. ಕುರಿಯಾಕೋಸ್ ಸಿರಿಯಾಕ್ ಅರಾಮಿಕ್ ಹೆಸರು ܩܘܪܝܩܘܣ Quriaqos ಎಂಬ ಹೆಸರು ಹುಟ್ಟಿಕೊಂಡಿದೆ. ಸಂತರ ಪಟ್ಟಿಗೆ

                                               

ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ

ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ವು ಭಾರತ ಸರ್ಕಾರದ ಸಚಿವಾಲಯವಾಗಿದೆ. ಈ ಸಚಿವಾಲಯವನ್ನು 1962 ರಲ್ಲಿ ನವದೆಹಲಿಯಲ್ಲಿ ನಡೆದ 9 ನೇ ಏಷ್ಯನ್ ಕ್ರೀಡಾಕೂಟದ ಸಮಯದಲ್ಲಿ ಸ್ಥಾಪಿಸಲಾಯಿತು. 1985 ರ ಅಂತರರಾಷ್ಟ್ರೀಯ ಯುವ ವರ್ಷಾಚರಣೆಯ ಸಂದರ್ಭದಲ್ಲಿ ಇದನ್ನು ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಯಿತು.ನಂತರ ಇದನ್ನು 24 ಮೇ 2000 ರಂದು ಸಚಿವಾಲಯವನ್ನಾಗಿ ಮಾಡಲಾಯಿತು. ಈ ಸಚಿವಾಲಯವನ್ನು 30 ಏಪ್ರಿಲ್ 2007 ರಂದು ಯುವ ವ್ಯವಹಾರಗಳ ಇಲಾಖೆ ಮತ್ತು ಕ್ರೀಡಾ ಇಲಾಖೆ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರಸ್ತುತ ರಾಜ್ಯ ಮಂತ್ರಿ - ಕಿರೆಣ್ ರಿಜಿಜು ಸ್ವತಂತ್ರ ಉಸ್ತುವಾರಿ

ಡಚ್ ವಿಕಿಪೀಡಿಯ
                                               

ಡಚ್ ವಿಕಿಪೀಡಿಯ

ಡಚ್ ವಿಕಿಪೀಡಿಯ ವಿಕಿಪೀಡಿಯಾದ ಉಚಿತ ಆನ್‌ಲೈನ್ ವಿಶ್ವಕೋಶದ ಡಚ್ ಭಾಷೆಯ ಆವೃತ್ತಿಯಾಗಿದೆ. ಇದನ್ನು ಜೂನ್ 2001 ರಲ್ಲಿ ಪ್ರಾರಂಭಿಸಲಾಯಿತು. ಜುಲೈ 2020 ರ ಹೊತ್ತಿಗೆ, ಡಚ್ ವಿಕಿಪೀಡಿಯಾ 2.020.925 ಲೇಖನಗಳೊಂದಿಗೆ ಆರನೇ ಅತಿದೊಡ್ಡ ವಿಕಿಪೀಡಿಯಾ ಆವೃತ್ತಿಯಾಗಿದೆ. ಇಂಗ್ಲಿಷ್, ಜರ್ಮನ್ ಮತ್ತು ಫ್ರೆಂಚ್ ಆವೃತ್ತಿಗಳ ನಂತರ ಒಂದು ಮಿಲಿಯನ್ ಲೇಖನಗಳನ್ನು ಮೀರಿದ ನಾಲ್ಕನೇ ವಿಕಿಪೀಡಿಯಾ ಆವೃತ್ತಿಯಾಗಿದೆ. ಏಪ್ರಿಲ್ 2016 ರಲ್ಲಿ, 1154 ಸಕ್ರಿಯ ಸಂಪಾದಕರು ಆ ತಿಂಗಳಲ್ಲಿ ಕನಿಷ್ಠ ಐದು ಸಂಪಾದನೆಗಳನ್ನು ಮಾಡಿದ್ದಾರೆ.

೨೦೧೫ ನೇಪಾಳ ಭೂಕಂಪ
                                               

೨೦೧೫ ನೇಪಾಳ ಭೂಕಂಪ

ಸೂಮಾರು ೬,೩೦೦ಕ್ಕಿಂತ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಹಾಗೂ ಇದಕ್ಕಿಂತ ದುಪ್ಪಟ್ಟು ಜನರನ್ನು ಗಾಯಾಳುಗಳನ್ನಾಗಿ ಮಾಡಿದ ೨೦೧೫ ನೇಪಾಳ ಭೂಕಂಪವು ಏಪ್ರಿಲ್ ೨೫ರ ೧೧:೫೬ ನೇಪಾಳದ ಸಮಯಕ್ಕೆ ರಿಕ್ಚರ್ ಮಾಪಕದ ೭.೮ ಅಥವಾ ೮.೧ ರ ಪ್ರಮಾಣದಲ್ಲಿ ಸಂಭವಿಸಿತು. ಭೂಕಂಪದ ಅಧಿಕೇಂದ್ರವು ಗೊರ್ಕಾ ಜಿಲ್ಲೆಯ ಬರ್ಪಾಕ್ ಎಂಬ ಹಳ್ಳಿಯಲ್ಲಿ ೧೫ಕಿಮೀ ಆಳದಲ್ಲಿತ್ತು. ಇದು ೧೯೩೪ರ ನೇಪಾಳ-ಬಿಹಾರ ಭೂಕಂಪ ನಂತರ ನೆಡೆದ ಅತ್ಯಂತ ಶಕ್ತಿಶಾಲಿ ದುರಂತವಾಗಿದೆ. ಕೆಲ ಸಾವುನೋವುಗಳು ನೆರೆ-ಹೊರೆ ದೇಶಗಳಾದ ಭಾರತ, ಚೀನಾ ಮತ್ತು ಬಾಂಗ್ಲಾದೇಶ ಗಳಲ್ಲೂ ವರದಿಯಾಗಿವೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →