Back

ⓘ ಖನಿಜ                                               

ಗಾರ್ನೆಟ್ (ಖನಿಜ)

ಸಂಮಿಶ್ರಿತ ಸಿಲಿಕೇಟ್ ಖನಿಜ. ಇದರಲ್ಲಿ ಸಾಮಾನ್ಯವಾಗಿ ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನೀಸಿಯಂ, ಕ್ಯಾಲ್ಸಿಯಂ ಮತ್ತು ಅಲ್ಯೂಮಿನಿಯಂ ಧಾತುಗಳಿರುತ್ತವೆ. ಇದು ಗಾಜಿನಂಥ ಒಂದು ಬಗೆಯ ಖನಿಜ. ಪಾರದರ್ಶಕವಾದ ದಟ್ಟ ಕೆಂಪು ಜಾತಿಯ ಗಾರ್ನೆಟ್ ಅನ್ನು ರತ್ನವನ್ನಾಗಿ ಬಳಸುತ್ತಾರೆ. ಇದಕ್ಕೆ ರಕ್ತಮಣಿ, ಪದ್ಮರಾಗ ಎಂಬ ವಿವಿಧ ಹೆಸರುಗಳಿವೆ. ಇದರ ಕಾಠಿಣ್ಯ 6.5 - 7.5. ಇದು ಬಹಳ ಹೇರಳವಾಗಿ ಸಿಕ್ಕುವ ಖನಿಜ ಮತ್ತು ಸಾಮಾನ್ಯವಾಗಿ ರೂಪಾಂತರಿತ ಶಿಲೆಗಳಾದ ಪದರು ಶಿಲೆ ಮತ್ತು ನೈಸ್ಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿದ್ದಾಗ ಆ ಬಗೆಯ ರೂಪಾಂತರಿತ ಶಿಲೆಯನ್ನು ಗಾರ್ನೆಟ್ ಪದರು ಶಿಲೆಯೆಂದೂ ಕರೆಯುವುದುಂಟು. ಗಾರ್ನೆಟ್ ಎಂಬ ಹೆಸರು ರಚನೆಯಲ್ಲಿಯೂ ಹೊರ ರೂಪದಲ್ಲಿಯೂ ಭೌತ ಲಕ್ಷಣದಲ್ಲಿಯೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುವ ಏಳು ವಿಧದ ಬೇ ...

                                               

ಕಲ್ನಾರು

ಕಲ್ನಾರು: ಎಳೆ ಎಳೆಯಾಗಿ ದೊರೆಯುವ, ಕಲ್ಲುಗಳ ರೂಪ ತಳೆಯಬಲ್ಲ ಅತ್ಯುಪಯುಕ್ತ ಖನಿಜಗಳ ಸಾಮಾನ್ಯನಾಮ. ವಿವಿಧ ದರ್ಜೆಯ ಖನಿಜದ ಎಳೆಗಳಿಂದ ತಯಾರಿಸಲಾದ ವಸ್ತುಗಳ ಉಷ್ಣನಿರೋಧಕ ಗುಣದಿಂದ ಕಲ್ನಾರಿಗೆ ಪ್ರಾಮುಖ್ಯ ಬಂದಿದೆ. ಈ ಖನಿಜವನ್ನು ನಾರಿನಂತೆ ಎಳೆ ಎಳೆಯಾಗಿ ಬಿಡಿಸಬಹುದು. ಎಳೆಗಳು ರೇಷ್ಮೆಯಂತೆ ನಯವಾಗಿವೆ. ಇದರ ಬಣ್ಣ ಬಿಳುಪು; ಕಾಠಿಣ್ಯ ೩.೫_೪.೧; ಸಾಪೇಕ್ಷ ಸಾಂದ್ರತೆ ೨.೫_೨.&. ಇದರಲ್ಲಿ ಆಂಫಿಬೋಲ್ ಕಲ್ನಾರು ಮತ್ತು ಕ್ರೈಸೊಲೈಟ್ ಕಲ್ನಾರು ಎಂಬೆರಡು ಜಾತಿಗಳಿವೆ. ಮೊದಲನೆಯದು ಶುದ್ಧವಾದುದು. ಎರಡನೆಯದು ವ್ಯಾಪಾರದ ಬಹುಭಾಗವನ್ನು ಪುರೈಸುತ್ತದೆ. ಎರಡೂ ನಮ್ಮ ದೇಶದಲ್ಲಿವೆ. ಮೊದಲನೆಯದು ಮೈಸೂರು ಜಿಲ್ಲೆಯಲ್ಲಿರುವ ಮಾವಿನಹಳ್ಳಿ ಮತ್ತು ಗೋಪಾಲಪುರದ ಬಳಿ. ಹಾಸನ ಜಿಲ್ಲೆಯಲ್ಲಿ ಹೊಳೇನರಸೀಪುರದ ಹತ್ತಿರ ಇಡೆಗೊಂಡೆನಹಳ್ಳಿ ಮತ್ತು ಕಬ್ಬೂ ...

                                               

ಗೋಸಾನ್

ಖನಿಜ ಸಿರಗಳ ಮತ್ತು ಅದಿರು ನಿಕ್ಷೇಪಗಳ ಅಪಘಟನೆಗೊಂಡ ಮೇಲುಭಾಗಗಳಿಗೆ ಇರುವ ಹೆಸರು. ರಾಸಾಯನಿಕ ಶಿಥಿಲತೆಯಿಂದ ಕರಗದ ಖನಿಜ ನಿಕ್ಷೇಪಗಳು ಶೇಷ ನಿಕ್ಷೇಪಗಳಾಗಿ ಭೂಮಿಯ ಮೇಲುಭಾಗದಲ್ಲಿ ಉಳಿಯುತ್ತವೆ. ಲೋಹ ನಿಕ್ಷೇಪಗಳು ಸಾಮಾನ್ಯವಾಗಿ ನೆಲಮಟ್ಟದಲ್ಲಿ ರಂಧ್ರಾನ್ವಿತ ಕಾವಿ ಅದಿರನ್ನು ಇಲ್ಲವೇ ಜಲಯೋಜಿತ ಕಬ್ಬಿಣದ ಆಕ್ಸೈಡ್ ಮೇಲ್ಪದರವನ್ನು ಪಡೆದಿರುತ್ತವೆ. ಈ ಮೇಲ್ಪದರವೇ ಗೋಸಾನ್. ಇದರ ದಪ್ಪ ರಾಸಾಯನಿಕ ಕ್ರಿಯೆಯ ಪ್ರಮಾಣವನ್ನು ಅನುಸರಿಸಿ ಒಂದೆರಡು ಅಂಗುಲಗಳಿಂದ ಹತ್ತಿಪ್ಪತ್ತು ಅಂಗುಲಗಳ ವರೆಗೂ ಅಪರೂಪಕ್ಕೆ ಇನ್ನೂ ಹೆಚ್ಚಾಗಿ ಕೂಡ ಇರಬಹುದು. ಗೋಸಾನಿನ ಬಣ್ಣ, ರೂಪ, ರಚನೆ ಮುಂತಾದ ಲಕ್ಷಣಗಳ ಅಧ್ಯಯನದಿಂದ ಅದರ ತಳಭಾಗದಲ್ಲಿ ಯಾವ ಲೋಹ ನಿಕ್ಷೇಪವಿದೆ ಎಂಬುದನ್ನು ನಿರ್ಧರಿಸಬಹುದು.

                                               

ಸೂರ್ಯಧಾತು (ಹೀಲಿಯಂ)

ಇತಿಹಾಸ ಹೀಲಿಯಂ, ವಿಶ್ವದಲ್ಲಿ ಎರಡನೇ ಹೇರಳವಾಗಿರುವ ಅಂಶ.ಇದು ಭೂಮಿಯ ಮೇಲೆ ಕಂಡುಹಿಡಿಯುವ ಮೊದಲು ಸೂರ್ಯನ ಮೇಲೆ ಕಂಡುಹಿಡಿಯಲಾಯಿತು. ಪೈರೆ ಜೂಲ್ಸ್-ಸೀಜರ್ ಜಾನ್ಸೆನ್, ಫ್ರೆಂಚ್ ಖಗೋಳಶಾಸ್ತ್ರಜ್ಞ ಒಮ್ಮೆ ಸಂಪೂರ್ಣ ಸೂರ್ಯಗ್ರಹಣದ ಕುರಿತು ಓದುತ್ತಿದ್ದಾಗ ಸೂರ್ಯನ ರೋಹಿತದಲ್ಲಿರುವ ಒಂದು ಹಳದಿ ಗೆರೆಯನ್ನು ಗಮನಕ್ಕೆ 1868ರಲ್ಲಿ ಅರಿತುಕೊಂಡ. ಸರ್ ನಾರ್ಮನ್ ಲೊಕಿಯರ್ ಒಬ್ಬ ಇಂಗ್ಲೀಷ್ ಖಗೋಲಸಶಾಸ್ತೃಜ್ನ, ಈ ಗೆರೆ 587.49 ನ್ಯಾನೋ ತರಂಗಾಂತರವನ್ನು ತಿಳಿದಿದ್ದ ಸಮಯದಲ್ಲಿ ಯಾವುದೇ ಅಂಶ ಉತ್ಪಾದಿಸಬಹುದು ಎಂದು ಕ೦ಡುಹಿಡಿದ. ಸೂರ್ಯನ ಮೇಲರುವ ಹೊಸ ಅಂಶ ಈ ನಿಗೂಢ ಹಳದಿ ಹೊರಸೂಸುವಿಕೆಯೇ ಜವಾಬ್ದಾರಿ ಎಂದು ಊಹಿಸಲಾಗಿತ್ತು. ಈ ಅಪರಿಚಿತ ಅಂಶವನ್ನು ಲಾಕ್ಯರ್ನ ಹೀಲಿಯಮ್ ಎಂದು ಹೆಸರಿಸಲಾಯಿತು. ಭೂಮಿಯ ಮೇಲೆ ಹೀಲಿಯಂನ್ನು ಹುಡುಕಲು ಆರ೦ಭಸಿದವರು ...

                                               

ಕಲ್ಲುಂಡೆಗಳು

ಕಲ್ಲುಂಡೆಗಳು: ಜಲಜ ಶಿಲೆಗಳು ಸಂಚಿತವಾದ ಮೇಲೆ ಅವುಗಳಲ್ಲಿ ಭೌತ, ರಾಸಾಯನಿಕ ಮತ್ತು ಜೈವಿಕ ವ್ಯತ್ಯಾಸಗಳಾಗಿ ಅವು ಗಟ್ಟಿಯಾಗುವಾಗ ಕೆಲವು ಖನಿಜಗಳು ಕರಗಿ ಮತ್ತೆ ಹರಳಿನ ರೂಪವನ್ನು ತಾಳುತ್ತವೆ. ಇವೇ ಕಲ್ಲುಂಡೆಗಳು. ಈ ಕ್ರಿಯೆ ನಡೆಯುವಾಗ ಕಲ್ಲಿದ್ದಲು, ಕಲ್ಲೆಣ್ಣೆ ಮೊದಲಾದ ವಸ್ತುಗಳು ಸಹ ಉಂಟಾಗುತ್ತವೆ. ಕಲ್ಲುಂಡೆಗಳು ಸಾಮಾನ್ಯವಾಗಿ ಒಂದು ಖನಿಜ ಕಣದ ಅಥವಾ ಚಿಪ್ಪಿನ ಚೂರಿನ ಸುತ್ತಲೂ ಕೇಂದ್ರದಿಂದ ಅಂಚಿನವರೆಗೆ ಪದರಗಳ ರೂಪದಲ್ಲಿ ಒಂದರ ಮೇಲೊಂದು ಶೇಖರವಾಗಿರುವ ಖನಿಜತಿಂತಿಣಿಗಳು. ಆಕಾರದಲ್ಲಿ ಇವು ಗುಂಡಾಗಿ ಮೊಟ್ಟೆಯಂತೆ, ದ್ರಾಕ್ಷಿ ಹಣ್ಣುಗಳ ಗೊಂಚಲಿನಂತೆ ಅಥವಾ ಮರದಂತೆ ಇರಬಹುದು. ಕಲ್ನಾರಿನ ಹಾಗೆ ರೇಷ್ಮೆಯಂತೆ ನೀಳವಾಗಿರುವ ಖನಿಜರಾಶಿಗಳೂ ಕಲ್ಲುಂಡೆಗಳಲ್ಲಿ ಸೇರಿವೆ. ಮಣ್ಣಿನಿಂದ ನಿರ್ಮಿತವಾದ ಶಿಲೆಗಳಲ್ಲಿ ಸಾಮಾನ್ಯವಾಗಿ ಸುಣ್ಣಕಲ್ಲ ...

                                               

ಕಡಪ ಶ್ರೇಣಿಗಳು

ಕಡಪ ಶ್ರೇಣಿಗಳು: ಭಾರತದ ಭೂ ಇತಿಹಾಸದಲ್ಲಿ ಆರ್ಷೇಯ ಕಲ್ಪವಾದ ಮೇಲೆ ಈಗಿನ ಕಡಪ ಕರ್ನೂಲ್ ಜಿಲ್ಲಾ ಭಾಗಗಳು, ವಿಂಧ್ಯಪರ್ವತ ಪ್ರದೇಶ, ಬೆಳಗಾವಿ, ಬಿಜಾಪುರ ಜಿಲ್ಲೆಗಳು ಮುಂತಾದ ಪ್ರದೇಶಗಳಲ್ಲಿ ಶಿಲಾನಿಕ್ಷೇಪಗಳು ಉಂಟಾದವು. ಈ ಕಾಲದ ಹೆಸರು ಪುರಾಣಕಲ್ಪ. ಇದರಲ್ಲಿ ಆದಿಪುರಾಣಕಲ್ಪ ಮತ್ತು ಅಂತ್ಯಪುರಾಣಕಲ್ಪವೆಂಬ ಎರಡು ವಿಭಾಗಗಳಿವೆ. ಆದಿಪುರಾಣಕಲ್ಪವೇ ಕಡಪಶ್ರೇಣಿಯೆಂದೂ ಹೆಸರುವಾಸಿಯಾಗಿದೆ. ಈ ಶಿಲಾಶ್ರೇಣಿಯನ್ನು ಮೊದಲು ಡಬ್ಲ್ಯು. ಕಿಂಗ್ ಎಂಬಾತ ಆಂಧ್ರಪ್ರದೇಶದಲ್ಲಿರುವ ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳಲ್ಲಿ ಪರಿಶೋಧಿಸಿದ. ಇದರ ವ್ಯಾಪ್ತಿ ಸು. 19884 ಚ ಕಿಮೀಗಳು. ಇದು ಅರ್ಧಚಂದ್ರಾಕಾರವಾಗಿ ಹಬ್ಬಿದೆ. ಉಬ್ಬಿರುವ ಭಾಗ ಪಶ್ಚಿಮದಲ್ಲಿದೆ. ಈ ಪ್ರದೇಶದ ಬಹುಭಾಗದಲ್ಲಿನ ಶಿಲಾಸಮುದಾಯ ಕಡಪಶ್ರೇಣಿಗಳ ಗುಂಪಿಗೆ ಸೇರಿದೆ.

ಖನಿಜ
                                     

ⓘ ಖನಿಜ

ಪ್ರಕೃತಿಯಲ್ಲಿ ದೊರೆಯುವ, ಅಜೈವಿಕ ಮೂಲದ ಸಾಮಾನ್ಯವಾಗಿ ಸ್ಪಟಿಕರೂಪವನ್ನು ಹೊಂದಿರುವ ನಿಸರ್ಗ ಸಹಜವಾದ ರಾಸಾಯನಿಕ ಸಂಯುಕ್ತಗಳನ್ನು ಖನಿಜ ಗಳು ಎನ್ನುತ್ತಾರೆ.

"ಖನಿಜ" ಅಂದರೆ ಖನಿ ವಸ್ತು, ಎಂಬ ಶಬ್ಧ ಸಂಸ್ಕೃತ ಮೂಲದಿಂದ ಬಂದಿದೆ. ಇಂಗ್ಲೀಷಿನಲ್ಲಿ ಮಿನರಲ್ mineral ಎನ್ನುತ್ತಾರೆ. ಖನಿಜಗಳ ಅಧ್ಯಯನವನ್ನು "ಖನಿಜ ವಿಜ್ಞಾನ" ಅಥವಾ "ಖನಿಜಶಾಸ್ತ್ರ" ಎಂದು ಕರೆಯಲಾಗುತ್ತದೆ.

ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ. ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಸಹಜ ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಭೂಮಿಯ ಹೊರಪದರತೊಗಟೆ crustಯಲ್ಲಿ ಅತಿ ಹೆಚ್ಚು ಇರುವ ಮೂಲವಸ್ತುಗಳು ಇವೆರಡು ಸುಮಾರು ೭೫% ನಷ್ಟು ಪ್ರಮಾಣ ದಲ್ಲಿವೆ. ವಿವಿಧ ಖನಿಜ ಪ್ರಬೇಧಗಳನ್ನು ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂದ ಗುರುತಿಸಲಾಗುತ್ತದೆ.

                                     

1. ಖನಿಜಗಳು

ನೈಸರ್ಗಿಕವಾಗಿ ದೊರೆಯುವ, ಸಾಮಾನ್ಯವಾಗಿ ಸ್ಪಟಿಕ ರೂಪದಲ್ಲಿರುವ, ಅಜೈವಿಕ ಉಗಮದ ರಾಸಾಯನಿಕ ಸಂಯುಕ್ತ ವನ್ನು ಖನಿಜವೆಂದು ಕರೆಯುತ್ತಾರೆ. ಯಾವುದೇ ಒಂದು ಖನಿಜಕ್ಕೆ ನಿರ್ದಿಷ್ಟವಾದ ರಾಸಾಯನಿಕ ಸಂಘಟನೆ ಇರುತ್ತದೆ. ವಿವಿಧ ಬಗೆಯ ಖನಿಜಗಳು minerals ಅಥವಾ ಖನಿಜರೂಪಿಗಳು mineraloids ಸೇರಿಕೊಂಡಿರುವ ನೈಸರ್ಗಿಕ ವಸ್ತುವನ್ನು ಶಿಲೆrock ಯೆಂದು ಪರಿಗಣಿಸಲಾಗುತ್ತದೆ.

ಈ ಹಿಂದೆ 1995 ರಲ್ಲಿ ಅಂತರ್ರಾಷ್ಟ್ರೀಯ ಖನಿಜವಿಜ್ಞಾನ ಸಂಘ IMA ಅಂಗೀಕರಿಸಿದ ವ್ಯಾಖ್ಯೆಯ ಪ್ರಕಾರ ಭೂವೈಜ್ಙಾನಿಕ ಪ್ರಕ್ರಿಯೆಗಳಿಂದ ಉತ್ಪತ್ತಿಯಾದ ಸ್ಫಟಿಕ ರಚನೆಯಿರುವ ಯಾವುದೇ ಒಂದು ಮೂಲವಸ್ತು ಧಾತು ಅಥವಾ ರಾಸಾಯನಿಕ ಸಂಯುಕ್ತ ವನ್ನು ಖನಿಜ ವೆನ್ನಲಾಗುತ್ತದೆ.

ಖನಿಜಗಳ ಅಧ್ಯಯನವನ್ನು ”ಖನಿಜವಿಜ್ಞಾನ” ಅಥವಾ" ಖನಿಜಶಾಸ್ತ್ರ" mineralogy ಎನ್ನುತ್ತಾರೆ.

ಪ್ರಪಂಚದಲ್ಲಿ 2017ರ ಮಾರ್ಚ್ ತಿಂಗಳವರೆಗೆ 5300 ವಿಧತಳಿಗಳನ್ನು ಖನಿಜ ಗುರುತಿಸಲಾಗಿದೆ. ಇವುಗಳಲ್ಲಿ 5230 ಖನಿಜ ವಿಧಗಳನ್ನು ಅಂತರಾಷ್ಟ್ರಿಯ ಖನಿಜವಿಜ್ಞಾನ ಸಂಘ ವು IMA -ಇಂಟರ ನ್ಯಾಶನಲ್ ಮಿನರಲೊಜಿಕಲ್ ಅಸೋಸಿಯೇಶನ್ ಅಂಗೀಕರಿಸಿದೆ.

ಭೂಮಿಯ ಹೊರತೊಗಟೆ crust ಯಲ್ಲಿರುವ ಖನಿಜಗಳಲ್ಲಿ ಹೆಚ್ಚುಕಡಿಮೆ 90% ದಷ್ಟು ಸಿಲಿಕೇಟು ಖನಿಜಗಳಾಗಿವೆ. ಭೂಮಿಯ ರಾಸಾಯನಿಕಗುಣಶಾಸ್ತ್ರದ ಅನುಸಾರವಾಗಿ ವಿವಿಧ ಲಭ್ಯ ಖನಿಜ ವಿಧಗಳ ವೈವಿಧ್ಯತೆ ಮತ್ತು ವಿಪುಲತೆ ನಿರ್ಧಾರವಾಗುತ್ತದೆ. ಸಿಲಿಕಾನ್ ಮತ್ತು ಆಮ್ಲಜನಕ ಎಂಬ ಮೂಲವಸ್ತುಗಳು ಭೂಮಿಯ ಹೊರತೊಗಟೆಯಲ್ಲಿ ಅಂದಾಜು 75 % ದಷ್ಟು ಇರುವ ಕಾರಣ, ಈ ಮೂಲವಸ್ತುಗಳನ್ನು ಹೊಂದಿರುವ ಸಿಲಿಕೇಟು ವಿಧದ ಖನಿಜಗಳು ವ್ಯಾಪಕವಾಗಿ ಕಂಡು ಬರುತ್ತವೆ.

                                     

2. ಖನಿಜಗಳ ಗುರುತು ಹಚ್ಚುವುದು

ಖನಿಜಗಳನ್ನು ವಿವಿಧ ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಧರ್ಮಗಳ ಸಹಾಯದಿಂದ ಗುರುತಿಸಬಹುದಾಗಿದೆ. ಉತ್ಪತ್ತಿಯಾಗುವ ಭೂವೈಜ್ಞಾನಿಕ ಪರಿಸರದ ಅನುಗುಣವಾಗಿ ಖನಿಜಗಳ ರಾಸಾಯನಿಕ ಸಂಘಟನೆ ಮತ್ತು ಸ್ಪಟಿಕ ರಚನೆಗಳಲ್ಲಿ ಉಂಟಾಗುವ ವ್ಯತಾಸಗಳನ್ನು ಆಧರಿಸಿ ವಿವಿಧ ಖನಿಜ ವಿಧಗಳನ್ನು ಗುರುತಿಸಬಹುದು. ಶಿಲಾ ವಸ್ತುಗಳ ಉಗಮ ಪರಿಸರದಲ್ಲಿ ಉಂಟಾಗುವ ಉಷ್ಣತೆ, ಒತ್ತಡ ಮತ್ತು ಸಮಗ್ರ ಸಂಘಟನೆಯಲ್ಲಿ ಬದಲಾವಣೆಗಳು ಅದರಲ್ಲಿರುವ ಖನಿಜಗಳಲ್ಲಿ ಬದಲಾವಣೆಗೆ ಕಾರಣವಾಗುತ್ತವೆ.

ಖನಿಜಗಳ ರಾಸಾಯನಿಕ ರಚನೆ ಮತ್ತು ಸಂಘಟನೆಗೆ ಸಂಬಂಧಪಟ್ಟ ವಿವಿಧ ಭೌತಿಕ ಗುಣಧರ್ಮಗಳ ಆಧಾರದ ಮೇಲೆ ಖನಿಜಗಳನ್ನು ವಿವರಿಸಬಹುದು. ಖನಿಜಗಳನ್ನು ಗುರುತಿಸಲು ಸಹಕಾರಿಯಾದ ಸಾಮಾನ್ಯ ಭೌತಿಕ ಗುಣಗಳೆಂದರೆ ಅವುಗಳ ಸ್ಪಟಿಕ ರಚನೆ, ಬಾಹ್ಯರೂಪ, ಗಡಸುತನ, ಹೊಳಪು, ಪಾರದರ್ಶಕತ್ವ,ಬಣ್ಣ, ಪುಡಿ, ಸೀಳಿಕೆ, ಬಿರುಕು,ಸಂದುಗಳು ಮತ್ತು ವಿಶಿಷ್ಟ ಸಾಂದ್ರತೆ. ಇದಲ್ಲದೆ ಖನಿಜಗಳ ಆಯಸ್ಕಾಂತೀಯ ಗುಣ, ರುಚಿ, ವಾಸನೆ, ವಿಕಿರಣಶೀಲತ್ವ ಮತ್ತು ಆಮ್ಲದೊಂದಿಗೆ ವರ್ತನೆಯಂತಹ ವಿಶಿಷ್ಟ ಗುಣಗಳನ್ನು ಬಳಸಿ ಇನ್ನಷ್ಟು ನಿಖರವಾಗಿ ಖನಿಜ ಪ್ರಭೇಧವನ್ನು ಗುರುತಿಸಬಹುದು.

ಖನಿಜಗಳು ಒಳಗೊಂಡಿರುವ ಮುಖ್ಯ ರಾಸಾಯನಿಕ ಘಟಕಗಳ ಆಧಾರದ ಮೇಲೆ ಅವುಗಳನ್ನು ವರ್ಗಿಕರಿಸುತ್ತಾರೆ. ಖನಿಜಗಳ ವರ್ಗಿಕರಣ ಕ್ಕಾಗಿ ೧ ಡಾನಾ ವರ್ಗಿಕರಣ ಮತ್ತು ೨ ಸ್ಟ್ರುಂಝ್ ವರ್ಗಿಕರಣ ಎಂಬ ಎರಡು ಮುಖ್ಯವಾದ ಪದ್ಧತಿಗಳಿವೆ.

                                     

3. ಸಿಲಿಕೇಟು ಖನಿಜಗಳು

ಸಿಲಿಕೇಟು Silicate ವರ್ಗಕ್ಕೆ ಸೇರಿದ ಖನಿಜಗಳನ್ನು ಅವುಗಳ ಬಹುಕಣಕರಣ ಪಾಲಿಮರಿಕರಣ -polymerization ಮತ್ತು ಸ್ಪಟಿಕ ರಚನೆಗಳ crystal structureಆಧಾರದ ಮೇಲೆ ಆರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಸಿಲಿಕೇಟು ಖನಿಜಗಳಲ್ಲಿ 4- ಎಂಬ ಸಿಲಿಕಾsilica ಚತರ್ಮುಖಿ ಗಳ tetrahedron ಮೂಲ ಘಟಕಗಳಿರುತ್ತವೆ. ಸಿಲಿಕಾ ಚತುರ್ಮುಖಿ ಅಂದರೆ, ಒಂದು ಸಿಲಿಕಾನ್ ಧನಾಯಾನುcationವಿನ ಸುತ್ತ ನಾಲ್ಕು ಆಮ್ಲಜನಕದ ಋಣಾಯನುಗಳು anions ಕೂಡಿಕೊಂಡು ಉಂಟಾದ ಚತುರ್ಮುಖ ರೂಪದ ರಚನೆ. ಬಹುಕಣಕರಣಗೊಂಡ ಇಂತಹ ಸಿಲಿಕಾನ್ ಚತುರ್ಮುಖಿಗಳನ್ನು ಈ ಕೆಳಗಿನಂತೆ ಉಪವಿಭಾಗಿಸಬಹುದು.

 • ನೇರ ಸಿಲಿಕೇಟುಗಳು ಆರ್ಥೋ ಸಿಲಿಕೇಟುಗಳು- Orthosilicates ಬಹುಕಣವಿಲ್ಲದ ಒಂಟಿ ಸಿಲಿಕಾ ಚತುರ್ಮುಖಿಗಳು
 • ದ್ವ ಸಿಲಿಕೇಟುಗಳು ಡೈ ಸಿಲಿಕೇಟುಗಳು-Disilicates ಪರಸ್ಪರ ಬಂಧಿಸಿದ ಎರಡು ಸಿಲಿಕಾ ಚತುರ್ಮುಖಿಗಳು
 • ಚಕ್ರಿಯ ಸಿಲಿಕೇಟುಗಳು ಸೈಕ್ಲೋಸಿಲಿಕೇಟುಗಳು cyclosilicates- ಉಂಗುರರೂಪದ ಸಿಲಿಕಾ ಚತುರ್ಮುಖಿಗಳು
 • ಸರಣಿ ಸಿಲಿಕೇಟುಗಳುಇನೊ ಸಿಲಿಕೇಟುಗಳು inosilicates- ಸರಣಿರೂಪದ ಸಿಲಿಕಾ ಚತುರ್ಮುಖಿಗಳು
 • ಪದರ ಸಿಲಿಕೇಟುಗಳು ಫಿಲ್ಲೊಸಿಲಿಕೇಟುಗಳು phyllosilicates- ಪದರರೂಪದ ಸಿಲಿಕಾ ಚತುರ್ಮುಖಿಗಳು ಮತ್ತು
 • ಜಾಲ ಸಿಲಿಕೇಟುಗಳು ಟೆಕ್ಟೊಸಿಲಿಕೇಟುಗಳು- tectosilicates-ಮೂರು ಆಯಾಮದ ಜಾಲದಂತಹ ಸಿಲಿಕಾ ಚತುರ್ಮುಖಿಗಳು.


                                     

4. ಇತರ ಖನಿಜ ವರ್ಗಗಳು

ಸಿಲಿಕೇಟುಗಳಲ್ಲದೆ ಇತರ ಪ್ರಮುಖ ಖನಿಜ ವರ್ಗಗಳೆಂದರೆ:

 • ಸಹಜ ಮೂಲವಸ್ತುಗಳು native elements,
 • ಸಲ್ಫೈಡುಗಳು sulfides,
 • ಆಕ್ಸೈಡುಗಳು oxides,
 • ಹೇಲೈಡುಗಳು halides,
 • ಕಾರ್ಬೋನೇಟುಗಳುcarbonates,
 • ಸಲ್ಫೇಟುಗಳು sulfates ಮತ್ತು
 • ಫಾಸ್ಫೇಟುಗಳು phosphates.
                                               

ಅರೆ

ಅರೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಭೂಶಾಸ್ತ್ರದ ಪ್ರಕಾರ, ನೈಸರ್ಗಿಕವಾಗಿ ದೊರಕುವ ಖನಿಜ ಪದಾರ್ಥಗಳ ಸಮಷ್ಟಿಯಾದ ಬಂಡೆ ತಮ್ಮ ವಾಸಕ್ಕೆ, ಮೊಟ್ಟೆಗಳನ್ನಿಡುವುದಕ್ಕೆ, ಮರಿಗಳ ಪಾಲನೆಗೆ ಹಕ್ಕಿ, ಇರುವೆ, ಕಣಜ, ಜೇನುನೊಣ ಮುಂತಾದ ಅನೇಕ ಬಗೆಯ ಪ್ರಾಣಿಗಳು ಕಟ್ಟುವ ಸುರಕ್ಷಿತ ನೆಲೆಯಾದ ಗೂಡು ಸಮತಲವಾಗಿ ಸೆಳೆಯಬಲ್ಲ ರೀತಿಯಲ್ಲಿ ಪೀಠೋಪಕರಣದ ಒಂದು ಭಾಗದಲ್ಲಿ ಸರಿಹೊಂದುವ ಪೆಟ್ಟಿಗೆ ಆಕಾರದ ಒಂದು ಧಾರಕವಾದ ಸೆಳೆಖಾನೆ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →