Back

ⓘ ದ್ರಾವಿಡ                                               

ಶಿವ

ಮಂಗಳಕರನೋ ಅವನೇ ಶಿವ. ʽಹಿಂದೂʼ ಧರ್ಮದಲ್ಲಿ ಯಾವ ಯಾವಾಗ ನಿರಾಕಾರ ಉಪಾಸನೆ ಬರುತ್ತದೋ ಆಗ ಆ ಪರಬ್ರಹ್ಮವನ್ನು ಶಿವ ಎಂದೇ ಸಂಬೋಧಿಸುತ್ತಾರೆ. ಲಿಂಗಾಯತ ಮತದ ಪ್ರಕಾರ ಶಿವವೇ ಪರಬ್ರಹ್ಮ. ಕೆಲವರು ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ. ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ ಜೀವಿಗಳಿಗೆ ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ ಕೊನೆ ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವಾ ಲಯಕಾರಕ ದೇವತೆ: ಶಿವ ಅಥವಾ ರುದ್ರ ಋಗ್ವೇದದಲ್ಲಿ ಶಿವ ಎನ್ನುವ ದೇವತೆ ಇಲ್ಲ. ರುದ್ರ ಎನ್ನುವ ಹೆಸರಿನ ದೇವತೆ ಇದ್ದಾನೆ. ಈ ರುದ್ರ ...

                                               

ವಿಧಾನಸೌಧ

ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ.ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವ ...

                                               

ಗೋಪುರ

ಗೋಪುರ ವು ಮುಖ್ಯವಾಗಿ ಔನ್ನತ್ಯದ ದೃಷ್ಟಿಯಿಂದ ರಚಿಸಲಾದ, ಆದ್ದರಿಂದ ತನ್ನ ವ್ಯಾಸಕ್ಕಿಂತ ಎತ್ತರವಾದ ಅಥವಾ ತನ್ನ ಸ್ಥಾನಮಹತ್ತ್ವದಿಂದಾಗಿ ಎತ್ತರವಾದ ಕಟ್ಟಡ. ಅದು ಒಂದು ಪ್ರತ್ಯೇಕ ಕಟ್ಟಡವಾಗಿರಬಹುದು; ಅಥವಾ ದೊಡ್ಡ ಕಟ್ಟಡವೊಂದಕ್ಕೆ ಸೇರಿದಂತಿರಬಹುದು; ಇಲ್ಲೇ ಗೋಡೆಯ ಮೇಲಿಂದ ಚಾಚಿ ನಿಂತಂತೆ ನಿರ್ಮಿಸಿದ್ದಾಗಿರಬಹುದು. ಆಧುನಿಕ ಗೋಪುರಗಳು ಸಾಮಾನ್ಯವಾಗಿ ಕಠಿನ ಚೌಕಟ್ಟುಗಳಿಂದ ನಿರ್ಮಿಸಿದವಾಗಿರುತ್ತವೆ. ಊರಿನ ಸುತ್ತ ರಕ್ಷಣೆಗಾಗಿ ಕಟ್ಟಿದ ಕೋಟೆಗಳ ಎತ್ತರ ಹೆಬ್ಬಾಗಿಲುಗಳನ್ನು ಗೋಪುರ ಎನ್ನುತ್ತಿದ್ದುದುಂಟು. ಕಾಲಕ್ರಮದಲ್ಲಿ ದೇವಾಲಯಗಳನ್ನು ಸುತ್ತಿಕೊಂಡಿರುವ ಪ್ರಾಕಾರಗಳ ಮಹಾದ್ವಾರಗಳನ್ನೂ ಗೋಪುರ ಎಂದು ಕರೆದರೂ ಆ ಮಹಾದ್ವಾರದ ಮೇಲೆ ಹಲವು ಅಂತಸ್ತುಗಳಾಗಿ ಉನ್ನತವಾಗಿ ಕಟ್ಟಲಾದ ಕಟ್ಟಡವನ್ನು ಮುಖ್ಯವಾಗಿ ಗೋಪುರ ಎಂಬ ಹೆಸರಿನಿಂದ ಕರೆಯಲಾ ...

                                               

ಉಭಯ ವೇದಾಂತ

ಉಭಯ ವೇದಾಂತ: ವೇದಾಂತದರ್ಶನದ ಸಮಗ್ರ ಸ್ವರೂಪವನ್ನು ತಿಳಿಯಲು ಸಂಸ್ಕೃತದಲ್ಲಿರುವ ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಗೀತೆಯೊಡನೆ, ದ್ರಾವಿಡ ಪ್ರಬಂಧಗಳ ಅನುಭವವಾಣಿಯನ್ನೂ ಸೇರಿಸಿಕೊಳ್ಳಬೇಕು ಎಂದು ವಾದಿಸಿ ಈ ದ್ವಿಮುಖವಾದ ಅನ್ಯೋನ್ಯ ಪೋಷಕ ಸಾಹಿತ್ಯರಾಶಿಗೆ ಉಭಯ ವೇದಾಂತವೆಂಬ ಪಾರಿಭಾಷಿಕ ನಿರ್ದೇಶವನ್ನು ಕೊಡಲಾಗಿದೆ. ವೇದಾಂತವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ರಾಮಾನುಜಾಚಾರ್ಯರು ನಿರೂಪಿಸಿದ್ದಾರೆ. ಅವರು ಸಂಸ್ಕೃತ ಆಧಾರಗಳಿಂದ ಒದಗಿಬಂದ ಈ ದರ್ಶನ ಸಂಪ್ರದಾಯ ದೊಡನೆ ದ್ರಾವಿಡದೇಶದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದ್ದ, ಆಳ್ವಾರುಗಳೆಂಬ ಭಕ್ತ ಪರಂಪರೆಯ, ಕೃತಿಗಳಾದ ದಿವ್ಯ ಪ್ರಬಂಧವನ್ನೂ ಸಂಯೋಜನೆ ಮಾಡುತ್ತಾರೆ. ಈ ಪ್ರಬಂಧಗಳು ವೇದ-ವೇದಾಂತದ ತಮಿಳು ಪರಿವರ್ತನೆಯೆಂದು ಶ್ರೀವೈಷ್ಣವ ಸಂಪ್ರದಾಯ ಪರಿಗಣಿಸುತ್ತದೆ. ಕೆಲವು ...

                                               

ಆಲಂಪುರ

ತುಂಗಭದ್ರಾನದಿಯ ಪಶ್ಚಿಮ ದಡದಲ್ಲಿ, ಆಂಧ್ರದ ಕರ್ನೂಲು ಪಟ್ಟಣಕ್ಕೆ ಸುಮಾರು ಎಂಟು ಮೈಲಿ ದೂರದಲ್ಲಿದೆ. ಭಾರತದ ದೇವಾಲಯಗಳ ಉಗಮ ಮತ್ತು ವಿಕಾಸವನ್ನು ಅಧ್ಯಯನ ಮಾಡಲು ಇಲ್ಲಿನ ದೇವಾಲಯಗಳು ಬಹು ಸಹಾಯಕವಾಗಿವೆ. ಈ ದೃಷ್ಟಿಯಿಂದ ಇದು ಪಟ್ಟದಕಲ್ಲಿನಷ್ಟೇ ಗಮನಾರ್ಹವಾದುದು. ಇಲ್ಲಿ ಪಟ್ಟದಕಲ್ಲಿನ ಪಾಪನಾಥ ದೇವಾಲಯವನ್ನು ಹೋಲುವ ಅನೇಕ ದೇವಾಲಯಗಳಿವೆ. ಇವುಗಳಲ್ಲಿ ಬಾಗುಳ್ಳ ಶಿಖರ, ಆಮಲಕ, ಗೂಡು ಮುಂತಾದವನ್ನು ಕಾಣಬಹುದು. ಚೌಕನೆಯ ಆಚ್ಛಾದಿತ ಹಜಾರಗಳು, ಅಪ್ಸರಶಿಲ್ಪಗಳಿಂದ ಕೂಡಿದ ಕಂಬಗಳು ದಕ್ಷಿಣಾಪಥದ ಗುಹಾಂತರ ದೇವಾಲಯಗಳ ಪ್ರಭಾವವನ್ನು ವ್ಯಕ್ತಪಡಿಸುತ್ತವೆ. ಸುಮಾರು ಒಂದು ಮೈಲಿ ದೂರದಲ್ಲಿ ದ್ರಾವಿಡ ಶೈಲಿಯ ಶಿಖರಗಳನ್ನುಳ್ಳ ಅನೇಕ ದೇವಾಲಯಗಳಿವೆ. ಈ ಶಿಖರಗಳು ಹಂತಗಳಿಂದ ಕೂಡಿದ್ದು, ಮೇಲೆ ಹೋದಂತೆ ಕಿರಿದಾಗುತ್ತವೆ. ಇಲ್ಲಿನ ಶಿಲ್ಪಗಳೂ ಮನೋಹರವಾ ...

                                               

ಕೈದಾಳ

ಕೈದಾಳ ಗ್ರಾಮವು ತುಮಕೂರಿನಿಂದ ಸುಮಾರು ೭ ಕಿ.ಮೀ ದೂರದಲ್ಲಿದೆ. ಇಲ್ಲಿ ಬಹಳ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವ ದೇವಾಲಯವಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು ೬ ಕಿ.ಮೀ ಚಲಿಸಿದರೆ ಪ್ರಸಿದ್ದವಾದ ಗಣೇಶನ ದೇವಾಲಯವಿರುವ ಗೂಳೂರು ಸಿಗುತ್ತದೆ. ಗೂಳೂರಿನಿಂದ ಬಲಕ್ಕೆ ತಿರುಗಿ ೧ ಕಿ.ಮೀ ಚಲಿಸಿದರೆ ಕೈದಾಳ ತಲುಪಬಹುದು. ಹತ್ತಿರದ ಐತಿಹಾಸಿಕ ಪುಣ್ಯಕ್ಷೇತ್ರಗಳು: ೧.ಗೂಳೂರು, ೨.ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ,

                                               

ಗದಬ

ಗದಬ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಹರವು ಮತ್ತು ಒರಿಸ್ಸದ ಕೋರಾಪುತ್ ಹರವುಗಳಲ್ಲಿ ಬಳಕೆಯಲ್ಲಿರುವ ಅಪ್ರಸಿದ್ಧ ಭಾಷೆ. ಇದನ್ನು ಮುಂಡ ಭಾಷಾವರ್ಗದ ಒಂದು ಉಪಭಾಷೆ ಎನ್ನುವವರೂ ಇದ್ದಾರೆ. ಗದಬ ಭಾಷೆ ಮುಂಡ ಭಾಷಾವರ್ಗಕ್ಕೆ ಅಥವಾ ಗ್ರಿಯಸನ್ನರ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಕ್ಕೆ ಅನುಸಾರವಾಗಿ ಆಸ್ಟ್ರಿಕ್ ಭಾಷಾವರ್ಗದ ಆಸ್ಟ್ರೋ-ಏಷ್ಯಾಟಿಕ್ ಉಪವರ್ಗದ ಮುಂಡಶಾಖೆಗೆ ಸೇರಿದ್ದು. ನಾರ್ಮನ್ ಎಚ್. ಜೈದ್ ಎಂಬುವವರು ಗದ್ಬಾ ಮತ್ತು ಗದಬ ಎಂಬ ಎರಡು ಉಪಭಾಷೆಗಳನ್ನು ಕರೆಂಟ್ ಟ್ರೆಂಡ್ಸ್ ಇನ್ ಲಿಂಗ್ವಿಸ್ಟಿಕ್ಸ್ ಎಂಬ ಗ್ರಂಥದಲ್ಲಿ ಗುರುತಿಸಿದ್ದಾರೆ. ಅವರ ಪ್ರಕಾರ ಮೊದಲನೆಯದು ಗುತೋಬ್ ಭಾಷೆಯ ಒಂದು ಅಂಗ. ಈ ಗುತೋಬ್ ಒಂದು ಪ್ರತ್ಯೇಕ ಮುಂಡ ಭಾಷೆ. ಎರಡನೆಯದನ್ನು ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯದಲ್ಲಿ ವಿಶಾಖಪಟ್ಟಣದ ಗದಬ ಎಂದು ಗುರುತಿಸಲಾಗಿ ...

                                               

ಜನಪದ ಛಂದಸ್ಸು

ಜನಪದ ಛಂದಸ್ಸು - ಜನಪದ ಹಾಡುಗಳ ರಚನೆ ಅಥವಾ ಅದರ ಛಂದಸ್ಸು ಆ ಒಂದು ವರ್ಗದ ವಿಶಿಷ್ಟವೂ ಸ್ವಕೀಯವೂ ಆದ ಲಕ್ಷಣಗಳನ್ನೊಳಗೊಂಡಿರುತ್ತದೆ. ಇತರ ಶಾಖೆಗಳಂತೆ ಇದೂ ಪ್ರಭಾವಿತವಾಗುವುದಕ್ಕಿಂತ ಪ್ರಭಾವ ನೀಡುವುದು ಹೆಚ್ಚು. ವಿಶೇಷವೆಂದರೆ ಜನಪದ ಛಂದಸ್ಸು ಭಾಷೆ ಇತ್ಯಾದಿಗಳಂತೆ ಬೇಗ ವಿಕಾರಗೊಳ್ಳದೆ ತನ್ನತನವನ್ನು ಗರಿಷ್ಠ ಪ್ರಮಾಣದಲ್ಲಿ ಉಳಿಸಿಕೊಂಡಿರುತ್ತದೆ. ಆದುದರಿಂದ ಛಂದಸ್ಸು ಜನಪದೀಯತೆಯ ಮುಖ್ಯ ಲಕ್ಷಣಗಳಲ್ಲೊಂದಾಗಿರುತ್ತದೆ. ವಿಕಾಸ ಜೀವಂತಿಕೆಯ ಕುರುಹು. ಜನಪದದ್ದು ಸಹಜವಾದ ವಿಕಾಸ. ಇಲ್ಲಿ ಪಲ್ಲವಿಯ ಪುನರುಕ್ತಿಯಿಂದಲೂ ಏಕತಾನ ಸಹಜವಾದರೂ ವಿಕಾಸಶೀಲವೂ ಆದ ಜನಪದರ ಸಮಾಜದ ಕೈಯಲ್ಲಿ ವೈವಿಧ್ಯಸಾಧನೆಯೂ ಆಗುತ್ತದೆ. ಈ ವೈವಿಧ್ಯ ಮತ್ತು ಅದರ ಚರಿತ್ರೆ ಆ ಒಂದು ಸಮಾಜದ ವಿಶಿಷ್ಟವಾದ ಸಾಂಸ್ಕೃತಿಕ ಕೊಡುಗೆಯನ್ನು ನಿರ್ಧರಿಸುತ್ತದೆ.

                                               

ಸಿಂಧೂಲಿಪಿ

ಸಿಂಧೂಲಿಪಿ ಇನ್ನು ಗೌಪ್ಯಲಿಪಿಯಾಗಿಯೇ ಉಳಿದಿದೆ. ಅದನ್ನು ಓದಲು ಮಾಡಿರುವ ಪ್ರಯತ್ನಗಳು ಸ್ತುತ್ಯಾರ್ಹ. ವ್ಯಾಡೆಲ್- ಈ ಲಿಪಿಯು ಭಾರತಕ್ಕೆ ಸುಮೇರಿಯನ್ನರಿಂದ ಬಂದಿದೆ ಎಂದಿದ್ದಾನೆ. ರೆವೆರೆಂಡ್ ಹೆರಾಸ್ ಇದರ ಮೂಲವನ್ನು ಶೋಧಿಸಲು ಸಂಶೋಧನೆ ಕೈಗೊಂಡಿದ್ದಾರೆ. ಕೆಲವು ವಿದ್ವಾಂಸರು ಗಣಕಯಂತ್ರದ ನೆರವಿನಿಂದ ಈ ಲಿಪಿಯನ್ನು ಓದುವ ಪ್ರಯತ್ನವನ್ನು ಮಾಡಿದ್ದಾರೆ. ಭಾಷಾ ವಿದ್ವಾಂಸರು ಪ್ರತಿ ಚಿಹ್ನೆಗೂ ದ್ರಾವಿಡ ಅರ್ಥವನ್ನು ಕೊಟ್ಟರೂ, ಅವರ ಪ್ರಯತ್ನ ಸಫಲವಾಗಲಿಲ್ಲ. ಫಿನ್ನಿಷ್ ವಿದ್ವಾಂಸರು "ಸಿಂಧೂಲಿಪಿ"ಯ ಪ್ರತಿಯೊಂದು ಚಿಹ್ನೆಯನ್ನು ಅಭ್ಯಸಿಸಿ, ಆ ಪ್ರತಿಯೊಂದು ಚಿಹ್ನೆಗಳಲ್ಲಿ ಒಂದೊಂದು, ಒಂದೊಂದು ಪದಕ್ಕೆ ಸಮ ಎಂದಿದ್ದಾರೆ.

                                               

ಅಮಾವಾಸ್ಯೆ

ಅಮಾವಾಸ್ಯೆ ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ. ಪ್ರಾಚೀನ ಭಾರತೀಯ ಪಂಚಾಂಗಗಳು ೩೦ ಚಾಂದ್ರಹಂತಗಳನ್ನು ಬಳಸುತ್ತಿದ್ದವು. ಇವನ್ನು ತಿಥಿಗಳೆಂದು ಕರೆಯಲಾಗುತ್ತದೆ. ಯುತಿಯ ಮೊದಲಿನ ಸೂರ್ಯ ಮತ್ತು ಚಂದ್ರರ ನಡುವಿನ ಕೋನೀಯ ದೂರದ ೧೨ ಕೋನಮಾನಗಳೊಳಗೆ ಚಂದ್ರನು ಇರುವಾಗ ಅಮಾವಾಸ್ಯೆ ತಿಥಿಯು ಸಂಭವಿಸುತ್ತದೆ. ಅನೇಕ ಹಬ್ಬಗಳನ್ನು ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಇವುಗಳಲ್ಲಿ ದೀಪಾವಳಿಯು ಅತ್ಯಂತ ಪ್ರಸಿದ್ಧವಾಗಿದೆ. ಅನೇಕ ಹಿಂದೂಗಳು ಅಮಾವಾಸ್ಯೆಯಂದು ಉಪವಾಸ ಮಾಡುತ್ತಾರೆ. ಪ್ರತಿ ತಿಂಗಳು, ಪೂರ್ವಜರ ಪೂಜೆಗಾಗಿ ಅಮಾವಾಸ್ಯೆ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧರ್ಮನಿಷ್ಠ ಜನರು ಪ್ರಯಾಣ ಅಥವಾ ಕೆಲಸ ಮಾಡುವಂತಿಲ್ಲ, ಬದಲಾಗಿ ಅಮಾವಾಸ್ಯೆಗಳ ಕ್ರಿಯಾವಿಧಿಗಳ ಮೇಲೆ ಗಮನಹರಿಸಬೇಕು, ಸಾಮಾನ್ಯವಾಗಿ ಮನೆಯಲ್ಲಿ ...

                                               

ಕನ್ನಡ ಅಂಕಿ-ಸಂಖ್ಯೆಗಳು

ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆಯಾದ ಕನ್ನಡಕ್ಕೆ ಸುಮಾರು ೨೫೦೦ ವರ್ಷಗಳಷ್ಟು ಸುಧೀರ್ಘವಾದ ಇತಿಹಾಸವಿದೆ ಹಾಗೂ ಕನ್ನಡ ಲಿಪಿಗಳಿಗು ಕೂಡ ಸುಮಾರು ೧೮೦೦ ರಿಂದ ೨೦೦೦ ವರ್ಷಗಳಷ್ಟು ಇತಿಹಾಸವಿದೆ.ಅದರಂತೆಯೆ ಕನ್ನಡ ಅಂಕಿಗಳು ಸಹ ತನ್ನದೆ ಆದ ಇತಿಹಾಸವನ್ನು ಹೊಂದಿದೆ.

                                               

ತೆರಕಣಾಂಬಿ

ತೆರಕಣಾಂಬಿ ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಊರು. ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಇದು ಒಂದು ಐತಿಹಾಸಿಕ ಸ್ಥಳವಾಗಿದೆ.ಇಲ್ಲಿ ರಾಜಮಹಾರಾಜರು ನೆಲೆಸಿದ್ಧರೆಂಬ ಮಾಹಿತಿ ಇದೆ. ತೆರಕಣಾಂಬಿ - ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಸಬೆಯಿಂದ 11ಕಿಮೀ ದೂರದಲ್ಲಿ ಚಾಮರಾಜನಗರದ ರಸ್ತೆಯಲ್ಲಿರುವ ಊರು. ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ದ್ರಾವಿಡ, ಕೇರಳ ಮತ್ತು ಹದಿನಾಡು ಅಥವಾ ದಕ್ಷಿಣ ಕರ್ನಾಟಕ ಇಲ್ಲಿ ಕೂಡುತ್ತಿದ್ದುದರಿಂದ ಇದು ಕೂಡುಗಲ್ಲೂರು ಎಂದೂ ತ್ರಿಕದಂಬಪುರ ಎಂದೂ ಹೆಸರಾಯಿತೆಂದು ಪ್ರತೀತಿ. ಆರನೆಯ ಶತಮಾನದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಳುತ್ತಿದ್ದ ಕದಂಬ ವಂಶದ ತ್ರಿನೇತ್ರ ಕದಂಬ ಲಂಬಕರ್ಣರಾಯ ಎಂಬುವನು ಈ ಕೂಡು ಸ್ಥಳದಲ್ಲಿ ತ್ರಿಕದಂಬ ಅಥವಾ ಮುಕ್ಕಣ್ಣನ ಶಿವ ದೇವಾಲಯವನ್ನು ಕಟ ...

                                               

ಮಾಯಕೊಂಡ

ದಾವಣಗೆರೆ ಆಗ್ನೇಯದಲ್ಲಿ 23 ಕಿಮೀ ದೂರದಲ್ಲಿ ಬೆಂಗಳೂರು-ಪುಣೆ ರೈಲು ಮಾರ್ಗದಲ್ಲಿದೆ. ಜನಸಂಖ್ಯೆ 4.642 1981. ಈ ಊರು ವ್ಯಾಪಾರಸ್ಥಳವಾಗಿ ಅಭಿವೃದ್ಧಿಯಾಗುತ್ತಿದೆ. ಅಂಚೆ, ವಿದ್ಯುಚ್ಛಕ್ತಿ, ಶಾಲೆಗಳು, ಆರೋಗ್ಯ ಕೇಂದ್ರ ಮುಂತಾದ ನಾಗರಿಕ ಸೌಲಭ್ಯಗಳಿವೆ. ಪುರಸಭಾಡಳಿತವಿದೆ. ಈ ಊರಿನಲ್ಲಿ ಕೇಶವ ಮತ್ತು ಓಬಳ ನರಸಿಂಹ ಗುಡಿಗಳಿವೆ.

                                               

ಕೊಂಡ

ಮಧ್ಯ ದ್ರಾವಿಡ ಭಾಷೆಗಳಲ್ಲೊಂದು. ಕೂಬಿ ಎಂದೂ ಇದನ್ನು ಕರೆವುದಿದೆ. ಇದು ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಿಂದ 70 ಮೈಲಿ ವಾಯವ್ಯಕ್ಕಿರುವ ಅರಕು ಕಣಿವೆಯ ನಿವಾಸಿಗಳ ವ್ಯವಹಾರದಲ್ಲಿದೆ. ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಸುಮಾರು 20.000 ಈ ಜನರನ್ನು ಕೊಂಡ ದೊರಲು, ಕೊಂಡಕಾಪುಲು, ಓಜಲು ಮತ್ತು ಪಾಂಡವರೈತುಲು ಎಂಬುದಾಗಿ ಕರೆಯುತ್ತಾರೆ. ಈ ಭಾಷೆಯಲ್ಲಿರುವ ವರ್ಣಗಳು ಇವು: ವ್ಯಂಜನಗಳು 23:ಕ,?, ಗ, ಙ, ಸ, ಜZ, ಟ, ಡ, ಣ, ಸ್ವರಗಳು 10: ಅ, ಆ, ಇ, ಈ, ಉ, ಊ, ಎ, ಏ, ಒ, ಓ, ತ, ದ, ನ, ಪ, ಬ, ಮ, ಯ, ರ, ¾, ¾್ಹ ಖ, ಲ, ಢ, ವ, ಹ. ಈ ಭಾಷೆಯಲ್ಲಿರುವ ವಿಶಿಷ್ಟ ವರ್ಣಗಳು ಕಂಠಮೂಲೀಯ ಸ್ಪಶ್ರ್ಯ=/?, ಪರುಷ, ಸರಳ ¾=/ಖ/¾ ್ಹ,/ಡಿ/¾; ಈಷತ್ ಸ್ಪøಷ್ಟ ಢಕಾರ=/ಡಿ/. ಇತರ ಎಲ್ಲ ದ್ರಾವಿಡ ಭಾಷೆಗಳಲ್ಲಿ ನಷ್ಟವಾಗಿ ಹೋದ ರ ¾ ಭೇದ ಈ ಭಾಷೆಯಲ್ ...

                                               

ಸ್ವರ (ಭಾಷೆ)

ಕನ್ನಡ ಭಾಷೆಯು ನಾಲ್ಕು ದ್ರಾವಿಡ ಭಾಷೆಗಳಲ್ಲಿ ಒಂದು. ಕನ್ನಡದಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವುಗಳನ್ನು ವರ್ಣ ಮಾಲೆ ಎಂದು ಕರೆಯುತ್ತಾರೆ. ವರ್ಣಗಳ ಈ ಮಾಲೆಯನ್ನು ಕನ್ನಡ ಮಾತೆಯಾದ ತಾಯಿ ಭುವನೇಶ್ವರಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸೋಣ!!! ವರ್ಣಮಾಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವು ಕ್ರಮವಾಗಿ ಸ್ವರಗಳು, ವ್ಯಂಜನಗಳು ಮತ್ತ್ತು ಯೋಗವಾಹಗಳು. ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತೇವೆ ಸ್ವಯಂ ರಂಜತಿ ಇತಿ ಸ್ವರಃ ಇವು ಒಟ್ಟು ಹದಿಮೂರು. ಅವುಗಳು, ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ ೠ ಎಂಬ ಅಕ್ಷರದಿಂದ ಪದಗಳು ದೊರಕದೆ ಇರುವುದರಿಂದ ಈ ಅಕ್ಷರವನ್ನು ಕೈಬಿಡಲಾಗಿದೆ ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಹ್ರಸ್ವಾಕ್ಷರಗಳು - ಅ, ಇ, ಉ, ಋ, ಎ, ಒ ಒಟ್ಟು - ೬ ದೀರ್ಘ ...

                                               

ಉಮ್ಮತ್ತೂರು

ಉಮ್ಮತ್ತೂರು, ಇದು ಚಾಮರಾಜನಗರ ಜಿಲ್ಲೆಯ ಅತಿ ದೊಡ್ಡ ಊರು. ೧೫೫೦ರ ಹಾಸುಪಾಸಿನಲ್ಲಿ ಗಂಗರಾಜ ಎಂಬ ಪಾಳೇಗಾರ ಊರನ್ನು ಆಳಲ್ಪಟ್ಟು ವಿಜಯ ನಗರ ಸಾಮ್ರಾಜ್ಯದ ಅರಸರ ಸಾಮ್ರಾಜ್ಯ ವಿಸ್ತಾರಣಾ ಪರ್ವದಲ್ಲಿ ವಿಜಯ ನಗರ ಸಮ್ರಾಜ್ಯದ ಅಳ್ವಿಕೆಗೆ ಒಳಪಟ್ಟಿತು. ೪೦೦ಎಕರೆ ವಿಸ್ತೀರ್ಣದ ಕೆರೆ ಊರಿನ ದೊಡ್ಡ ಆಸ್ತಿ. ಆದರೆ, ಸರಿಯಾದ ನಿರ್ಹವಣೆ ಇಲ್ಲದೆ ನೀರು ತುಂಬದೆ ಜನರ ಬದುಕು ಮೂರಾಬಟ್ಟೆಯಾಗಿದೆ ಉಮ್ಮತ್ತೂರು: ಚಾಮರಾಜನಗರ ಜಿಲ್ಲೆಯ ಅದೇ ತಾಲ್ಲೂಕಿನಲ್ಲಿ ಯಳಂದೂರಿನಿಂದ 14ಕಿಮೀ ದೂರದಲ್ಲಿರುವ ಗ್ರಾಮ. ಹಿಂದೆ ಇದು ಉಮ್ಮತ್ತೂರು ಪಾಳೆಯಗಾರರ ರಾಜಧಾನಿಯಾಗಿತ್ತು. 11ನೆಯ ಶತಮಾನದಲ್ಲಿಯೇ ಈ ಊರು ಇದ್ದುದಕ್ಕೆ ಇಲ್ಲಿರುವ ನಿಷಧಿಶಾಸನಗಳು ಸಾಕ್ಷಿ. ಆಗ ಇಲ್ಲಿ ಜೈನರ ವಸತಿ ಹೆಚ್ಚಾಗಿದ್ದಂತೆ ತೋರುತ್ತದೆ. ಇಲ್ಲಿರುವ ವರ್ಧಮಾನ ಬಸದಿ 13ನೆಯ ಶತಮಾನಕ್ಕೆ ಸೇರಿ ...

                                               

ನವಲಿ೦ಗ ದೇವಾಲಯ

ನವಲಿಂಗ ದೇವಸ್ಥಾನವು ೯ ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಹಿಂದೂ ದೇವಾಲಯಗಳ ಸಮೂಹವಾಗಿದ್ದು, ರಾಜಕುಟ ರಾಜವಂಶದ ರಾಜ ಅಮೋಘವರ್ಷ ಅಥವಾ ಅವನ ಮಗ ಕೃಷ್ಣ II ರ ಆಳ್ವಿಕೆಯಲ್ಲಿದೆ. ಈ ದೇವಾಲಯವು ಕೊಪ್ಪಳ ಜಿಲ್ಲೆಯ ಇಟಾಗಿ ಉತ್ತರಕ್ಕೆ ೪ ಮೈಲುಗಳು ಕುಕ್ಕನೂರ್ ಕುಕ್ನೂರ್ ಎಂದೂ ಕರೆಯಲ್ಪಡುತ್ತದೆ ಮತ್ತು ಭಾರತದ ಕರ್ನಾಟಕ ರಾಜ್ಯದಲ್ಲಿ ಗದಗಕ್ಕೆ ಪೂರ್ವಕ್ಕೆ ೨೫ ಮೈಲಿ ಕಿ.ಮಿ ಪೂರ್ವದಲ್ಲಿದೆ. ಸೌತ್ ಇಂಡಿಯನ್ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ, ಕ್ಲಸ್ಟರ್ನಲ್ಲಿರುವ ಒಂಬತ್ತು ದೇವಾಲಯಗಳಲ್ಲಿ ಪ್ರತಿಯೊಂದೂ ಹಿಂದೂ ದೇವರಾದ ಶಿವನ ಸಾರ್ವತ್ರಿಕ ಚಿಹ್ನೆಯಾಗಿದ್ದು, ಆದ್ದರಿಂದ ನವಲಿಂಗ ಎಂದು ಹೆಸರಿಸಿದೆಸಾಮಾನ್ಯ ಯೋಜನೆ. ದೇವಾಲಯಗಳ ಗುಂಪುಗಳು, ನವಲಿಂಗ ಗುಂಪನ್ನು ಯಾವುದೇ ನಿರ್ದಿಷ್ಟ ಕ್ರಮವಿಲ್ಲದೆ ಅಸಮಪಾರ್ಶ್ವವಾಗಿ ಇರಿಸಲಾಗಿದೆ ಎಂದು ತೋರು ...

                                               

ಚರಿಟಾನ್ ಮಿಮ್

ಚರಿಟಾನ್ ಮಿಮ್ ಒ೦ದು ಗ್ರೀಕ್ ನಾಟಕ. ಪಪೈರಸ್ ಒಕ್ಸೈರಿಂಚಸ್ 413 ಹಸ್ತಪ್ರತಿಯಲ್ಲಿ ಇರುವ ಒ೦ದು ಪ್ರಹಸನ ಅಥವ ಅಣಕು ನಾಟಕ. ಇದು ಸುಮಾರು ಎರಡನೆಯ ಶತಮಾನಕ್ಕೆ ಸಂಬಂಧಿಸಿದ್ದು ಮತ್ತು ಈ ನಾಟಕವನ್ನು ಈಜಿಪ್ಟ್ನಲ್ಲಿ ನಡೆಸಲಾಗುತ್ತಿತ್ತು. ಈ ನಾಟಕದ ವೈಶಿಶ್ಃಟ್ಯವೆ೦ದರೆ, ಇದರಲ್ಲಿ ಹಲವಾರು ಪಾತ್ರದಾರಿಗಳು ಒ೦ದು ಅಜ್ಞಾತ ಭಾಷೆಯಲ್ಲಿ ಮಾತನಾಡುತ್ತಾರೆ. ಈ ಭಾಷೆ ಭಾಗಶಃ ಅಥವಾ ಸಂಪೂರ್ಣವಾಗಿ ದಕ್ಷಿಣ ಭಾರತದ ದ್ರಾವಿಡ ಭಾಷೆಯನ್ನು ಹೋಲುತ್ತದೆ. ಸಮಕಾಲೀನ ಪ್ರೇಕ್ಷಕರಿಗೆ ಈ ಭಾಷೆ ಅರ್ಥವಾಗದಿದ್ದ ಕಾರಣದಿ೦ದ ನಾಟಕವನ್ನು ವಿನೋದವಾಗಿಸಲು ಅಜ್ಞಾತ ಭಾಷೆ ಸ೦ಭಾಷಣೆ ಸೇರಿಸಲಾಯಿತು. ದ್ರಾವಿಡ ಭಾಷೆಗಳ ಉತ್ತಮ ಜ್ಣಾನ ಹೊ೦ದಿದ್ದ ಜೆರ್ಮನ್ ಭಾರತಜ್ಞ ಡಾ. ಇ. ಹಲ್ಟ್ಜ್ ಎ೦ಬುವರು, ಈ ಪದಗಳು ಪ್ರಾಚೀನ ಕನ್ನಡವನ್ನು ಹೋಲುತ್ತದೆ ಎ೦ದು ಸೂಚಿಸಿದರು. ಭಾರತೀಯ ...

                                               

ರಾಮನಾಥಪುರ

ರಾಮನಾಥಪುರ ಇದು ಹಾಸನ ಜಿಲ್ಲೆ ಅರಕಲಗೂಡುತಾಲ್ಲೂಕಿನಲ್ಲಿ ಇದೆ. ಪುರಾಣ ಐಹಿತ್ಯವಿರುವ ಈ ಕ್ಷೇತ್ರ ಬಹು ಪ್ರಸಿದ್ದವಾದದು.ಇದನ್ನು ದಕ್ಶಿಣಕಾಶಿ ಎ೦ದೂ ಕರೆಯುತ್ತಾರೆ. ಇಲ್ಲಿ ಕಾವೇರಿ ನದಿ, ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಕುಮಾರಧಾರಾ ತೀರ್ಥ, ಶ್ರೀ ರಾಮೇಶ್ವರ ದೇವಸ್ಠಾನ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಟಾನ, ಶ್ರೀ ಪಟ್ಟಾಭಿರಾಮ ದೇವಸ್ಟಾನ,ಶ್ರೀ ಲಕ್ಷ್ಮೀನರಸಿ೦ಹಸ್ವಾಮಿ ದೇವಸ್ಟಾನ, ಶ್ರೀ ಲಕ್ಶ್ಮಣೇಶ್ವರ ಸೇರಿದ೦ತೆ ಹಲವಾರು ದೇವಸ್ಠಾನಗಳವೆ. ೧)ಶ್ರೀ ರಾಮೇಶ್ವರ ದೇವಸ್ಥಾನ. ಈ ದೇವಸ್ಥಾನ ಹೊಯ್ಸಳ ಕಾಲದಲ್ಲಿ ನಿರ್ಮಿತವಾದದ್ದು ಎಂದು ಅಲ್ಲಿನ ಶಾಸನಗಳು ಹೇಳುತ್ತವೆ. ಈ ದೇವಸ್ಥಾನದ ಒಳಗಡೆ ಹಲವಾರು ಶಿವನ ಲಿ೦ಗಗಳಿವೆ. ದೇವಸ್ಥಾನದ ಬಳಿ ಹರಿಯುವ ಕಾವೆರಿ ನದಿಗೆ ವಹ್ನಿ ಪುಶ್ಕರ ...

                                               

ಅಂಶಗಣ

ಅಕ್ಷರ ಮತ್ತು ಮಾತ್ರೆಗಳಂತೆ ಒಂದು ಗುರುವಿನ ಉಚ್ಚಾರಣೆಯ ಅಂಶವನ್ನು ಆಧಾರವಾಗಿಟ್ಟುಕೊಂಡು ಮಾಡುವ ಗಣರಚನೆಗೆ ಈ ಹೆಸರಿದೆ. ಈ ಗಣದಲ್ಲಿನ ಮೊದಲ ಅಂಶ ಒಂದು ಗುರು ಅಥವಾ ಎರಡು ಲಘುಗಳಾಗಿದ್ದು ಅನಂತರದ ಅಂಶ ಒಂದು ಲಘುವೋ ಒಂದು ಗುರುವೋ ಆಗಿರುತ್ತದೆ. ಸಂಸ್ಕೃತದ ವೈದಿಕ ಛಂದಸ್ಸಿನಲ್ಲಿ ಅಕ್ಷರ ವೃತ್ತಗಳೂ ಲೌಕಿಕ ಛಂದಸ್ಸಿನಲ್ಲಿ ವರ್ಣವೃತ್ತಗಳೂ ಪ್ರಾಕೃತ-ಅಪಭ್ರಂಶಗಳಲ್ಲಿ ತಾಳವೃತ್ತ-ಮಾತ್ರಾವೃತ್ತಗಳೂ ವಿಶಿಷ್ಟವಾಗಿರುವಂತೆಯೇ ದ್ರಾವಿಡ ಭಾಷೆಗಳಲ್ಲಿ ದೇಶೀಯವಾದ ಹಾಡಿನ ಮಟ್ಟುಗಳು ಜಾತಿ ಎಂದೆನಿಸಿ ವಿಶಿಷ್ಟವಾಗಿವೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಆದಿಕಾಲದಿಂದ ಸಹಜವಾಗಿ ಬಂದಿರುವ ಹಾಡಿನ ಮಟ್ಟುಗಳ ಗುಂಪನ್ನು ಛಂದಶ್ಯಾಸ್ತ್ರ ಕರ್ತೃಗಳು ಕರ್ಣಾಟಕ ವಿಷಯೆ ಜಾತಿ ವೃತ್ತ ಎಂದೂ ಕರ್ಣಾಟ ವಿಷಯ ಭಾಷಾಜಾತಿ ಎಂದೂ ಕರೆದಿದ್ದಾರೆ. ಅದನ್ನು ...

                                               

ವೇಸರ

ವೇಸರ ಪದವು ಭಾರತೀಯ ಹಿಂದೂ ದೇವಾಲಯ ವಾಸ್ತುಶಿಲ್ಪದ ಒಂದು ವಿಶಿಷ್ಟ ಶೈಲಿಯ ಸಂಪ್ರದಾಯವನ್ನು ವರ್ಣಿಸಲು ಬಳಸಲಾದ ಅನೇಕ ಪದಗಳಲ್ಲಿ ಒಂದು. ಈ ಶೈಲಿಯನ್ನು ಮುಖ್ಯವಾಗಿ ದಖ್ಖನ್ ಪೀಠಭೂಮಿ, ವಿಂಧ್ಯ ಪರ್ವತಗಳು ಮತ್ತು ಕೃಷ್ಣಾ ನದಿಯ ನಡುವೆ ಉತ್ತರ ಭಾರತ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಬಳಸಲಾಗಿತ್ತು. ಇತರ ಎರಡು ಪ್ರಮುಖ ಮಾದರಿಗಳು ಅಥವಾ ಶೈಲಿಗಳೆಂದರೆ ದಕ್ಷಿಣ ಭಾರತದ ದ್ರಾವಿಡ ಶೈಲಿ ಮತ್ತು ಉತ್ತರ ಭಾರತದ ನಾಗರ ಶೈಲಿಗಳು. ವೇಸರ ಶೈಲಿಯು ಮೇಲಿನ ಎರಡು ದೇವಸ್ಥಾನ ಶೈಲಿಗಳ ಲಕ್ಷಣಗಳು, ಮತ್ತು ತನ್ನ ಸ್ವಂತದ ಮೂಲ ಲಕ್ಷಣಗಳ ಸಂಯೋಜನೆಯಾಗಿದೆ. ವಿವರಣೆ ವಿಶೇಷವಾಗಿ, ವೇಸರ ಶೈಲಿಯಲ್ಲಿ ಗರ್ಭಗುಡಿಯ ಮೇಲಿನ ಅಧಿರಚನೆಯ ಆಕಾರವು ಸಾಮಾನ್ಯವಾಗಿ ಪಾರ್ಶ್ವ ನೋಟದಲ್ಲಿ ಪಿರಮಿಡ್‍ನಂತೆ ಇರುತ್ತದೆ, ಮತ್ತು ಉತ್ತರದ ಶಿಖರ ಗೋಪುರಕ್ಕಿಂತ ಗಿಡ್ಡವಾಗಿರುತ್ತ ...

                                               

ನುಗ್ಗೆಹಳ್ಳಿ

ಹೊಯ್ಸಳ ರಾಜವಂಶದ ಸೋಮೇಶ್ವರ ರಾಜನ ಮುಖ್ಯಸ್ಥ ಬೊಮ್ಮಣ್ಣ ದಂದಾ ನಾಯಕರಿಂದ ನಿರ್ಮಿಸಲ್ಪಟ್ಟ ಹಳೆಯ ನಗ್ಗೆಹಳ್ಳಿ ಜಯಗೋಂಡೇಶ್ವರ ದೇವಸ್ಥಾನಕ್ಕೆ ನಗ್ಗೆಹಳ್ಳಿಯು ಪ್ರಸಿದ್ಧವಾಗಿದೆ. ಈ ಗ್ರಾಮವು ಪ್ರಾಚೀನ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಲಕ್ಷ್ಮಿ ನರಸಿಂಹ ದೇವಸ್ಥಾನ ಮತ್ತು ಸದಾಶಿವ ದೇವಸ್ಥಾನದಂತಹ ಪ್ರಾಚೀನ ದೇವಾಲಯಗಳನ್ನು ಹೊಂದಿದೆ. ನುಗ್ಗೆಹಳ್ಳಿ ಕರ್ನಾಟಕ ರಾಜ್ಯ, ಹಾಸನ ಜಿಲ್ಲೆಯ ಚನ್ನಾರಾಯಪಟ್ಟಣ ತಾಲ್ಲೂಕಿನ ಒಂದು ಗ್ರಾಮ. ಇದು ಮೈಸೂರು ವಿಭಾಗಕ್ಕೆ ಸೇರಿದ್ದು. ಇದು ಜಿಲ್ಲಾ ಕೇಂದ್ರದ ಹಾಸನದಿಂದ ಪೂರ್ವಕ್ಕೆ 47 ಕಿಮೀ ದೂರದಲ್ಲಿದೆ. ಚನ್ನಾರಾಯಪಟ್ಟಣದಿಂದ 7 ಕಿ.ಮೀ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 141 ಕಿ.ಮೀ.ನುಗ್ಗೆಹಳ್ಳಿ ಪಿನ್ ಕೋಡ್ 573131 ಮತ್ತು ಪೋಸ್ಟಲ್ ಹೆಡ್ ಆಫೀಸ್ ನುಗಿಹಳ್ಳಿ.ಅಕ್ಕನಹಳ್ಳಿ 6 ಕೆ.ಎಂ, ಕಲ್ಕೆರೆ 7 ಕ ...

                                               

ಕವಿತಾಳ

ಕವಿತಾಳ: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ರಾಯಚೂರು ಲಿಂಗಸುಗೂರು ರಸ್ತೆಯಲ್ಲಿ ಲಿಂಗಸುಗೂರಿನಿಂದ ೨೮ಕಿಮೀ ದೂರದಲ್ಲಿರುವ ಒಂದು ಗ್ರಾಮ. ಈ ಊರಿನಲ್ಲಿ ಪಟ್ಟಣ ಪಂಚಾಯಿತಿ ಇದೆ.

                                               

ಪಾಂಡವಪುರ

{{#if:| ಪಾಂಡವಪುರ ಮಂಡ್ಯ ಜಿಲ್ಲೆಯ ನೈಋತ್ಯ ಭಾಗದಲ್ಲಿರುವ ಈ ತಾಲ್ಲೂಕು ಏರಿಳಿತಗಳಿಂದ ಕೂಡಿದೆ. ಪೂರ್ವ ಮತ್ತು ಉತ್ತರ ಭಾಗಗಳು ಹಿರೋಡೆ ಮತ್ತು ಮೇಲುಕೋಟೆ ಬೆಟ್ಟಗಳಿಂದ ಕೊಡಿದೆ. ಲೋಕಪಾವನಿ ನದಿ ಉತ್ತರದಿಂದ ದಕ್ಷಿಣಕ್ಕೆ ಹರಿದು ಮುಂದೆ ಕರೀಘಟ್ಟದ ಬಳಿ ಕಾವೇರಿನದಿಯನ್ನು ಸೇರಿಕೊಳ್ಳುತ್ತದೆ. ಈ ತಾಲ್ಲೂಕಿನ ಹೆಚ್ಚು ಭಾಗ ಕಾವೇರಿ ಮತ್ತು ಲೋಕಪಾವನಿ ನದಿಗಳ ಬಯಲನ್ನು ಒಳಗೊಂಡಿದೆ. ಕೆಂಪು ಜೇಡಿಮಣ್ಣು ಹಾಗು ಮರಳು ಮಿಶ್ರಿತ ಭೂಮಿ ಕಾಣಬರುತ್ತದೆ. ಪಾಂಡವಪುರ, ಮೇಲುಕೋಟೆ ಮತ್ತು ಚಿನಕುರಳಿ ಎಂಬ ಮೂರು ಹೋಬಳಿಗಳಿದ್ದು ಸುಮಾರು ೧೭೫ ಗ್ರಾಮಗಳಿವೆ. ಪಾಂಡವಪುರಕ್ಕೆ ಪೂರ್ವದಲ್ಲಿ ಹಿರೋಡೆ ಎಂದು ಹೆಸರಾಗಿತ್ತು. ಐತಿಹ್ಯವಾಗಿ, ಕುಂತಿಬೆಟ್ಟದಲ್ಲಿ ಬಕಾಸುರ ಎಂಬ ರಾಕ್ಷಸನಿದ್ದ. ಅವನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆ ಆಹಾರ, ಹಿರೋಡೆ ಈಗಿನ ಪಾಂಡವಪ್ರ ...

                                               

ತಮಿಳು ವಿಕಿಪೀಡಿಯ

ತಮಿಳು ವಿಕಿಪೀಡಿಯ ವಿಕಿಮೀಡಿಯ ಫೌಂಡೇಶನ್ ನಡೆಸುತ್ತಿರುವ ವಿಕಿಪೀಡಿಯದ ತಮಿಳು ಭಾಷೆಯ ಆವೃತ್ತಿಯಾಗಿದೆ. ಇದನ್ನು ಸೆಪ್ಟೆಂಬರ್ 2003 ರಲ್ಲಿ ಸ್ಥಾಪಿಸಲಾಯಿತು ಮತ್ತು ಮಾರ್ಚ್ 2017 ರಂದು 91.000 ಲೇಖನಗಳನ್ನು ದಾಟಿದೆ. 1 ಜುಲೈ 2020 ರ ಹೊತ್ತಿಗೆ, ತಮಿಳು ವಿಕಿಪೀಡಿಯ 61 ನೇ ಅತಿದೊಡ್ಡ ವಿಕಿಪೀಡಿಯ ಮತ್ತು ಲೇಖನ ಎಣಿಕೆಯ ಪ್ರಕಾರ ಭಾರತೀಯ ಭಾಷೆಗಳಲ್ಲಿ ಎರಡನೇ ಅತಿದೊಡ್ಡ ವಿಕಿಪೀಡಿಯ ಆಗಿದೆ. 10.000 ಕ್ಕೂ ಹೆಚ್ಚು ಲೇಖನಗಳನ್ನು ಹೊಂದಿರುವ ದ್ರಾವಿಡ ಭಾಷಾ ಮೂಲದ ಮೊದಲ ವಿಕಿಪೀಡಿಯ ಇದಾಗಿದೆ. ಈ ಯೋಜನೆಯು ದಕ್ಷಿಣ ಏಷ್ಯಾದ ಇತರ ಭಾಷೆಗಳಲ್ಲಿ ವಿಕಿಪೀಡಿಯದ ಪ್ರಮುಖ ಗುಣಮಟ್ಟದ ಮಾತೃಕೆ‌ಗಳಲ್ಲಿ ಪ್ರಮುಖವಾಗಿದೆ. ಮಾರ್ಚ್ 2017ರ ವೇಳೆಗೆ 91.610 ಕ್ಕೂ ಹೆಚ್ಚು ಲೇಖನಗಳನ್ನು ಮತ್ತು 109.691 ನೋಂದಾಯಿತ ಬಳಕೆದಾರರನ್ನು ಹೊಂದಿತ್ತು. ಇದು ಮೇ ...

                                               

ತುರುವೇಕೆರೆ

ದುಮ್ಮನಹಳ್ಳಿ ಎಂಬುದು ದುಮ್ಮಿ ಒಡೆಯರ ಪಾಳೆಯಪಟ್ಟಾಗಿತ್ತು. ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ಕಲ್ಲೇಶ್ವರ ದೇವಾಲಯವಿದೆ. ಕಡಸೂರಿನ ಭೈರವ ದೇವಾಲಯ ಪ್ರಸಿದ್ಧವಾದ್ದು. ಮಾಯಸಂದ್ರದಲ್ಲಿ ಮಾಯಮ್ಮ, ಕೊಲ್ಲಾಪುರದಮ್ಮ ದೇವಾಲಯಗಳಿವೆ. ಮಾಯಸಂದ್ರಕ್ಕೆ ಹತ್ತಿರವಿರುವ ರಾಮಸಾಗರದಲ್ಲಿರುವ ವರದರಾಜ ದೇವಾಲಯ ಹೆಸರಾದ್ದು. ನಾಗಲಾಪುರದಲ್ಲಿ ಹೊಯ್ಸಳರ ಕಾಲದ ಪಾಳುಬಿದ್ದಿರುವ ವಿಷ್ಣು ಮತ್ತು ಶಿವ ದೇವಾಲಯಗಳಿವೆ. ಸಂಪಿಗೆ ತೆಂಗಿನ ತೋಟಗಳಿಗೆ ಪ್ರಸಿದ್ಧ. ಇಲ್ಲಿ ವೆಂಕಟರಮಣಸ್ವಾಮಿ ದೇವಾಲಯವಿದೆ. ಸೂಳೆಕೆರೆಯಲ್ಲಿ ಹೊಯ್ಸಳ ಶೈಲಿಯ ಈಶ್ವರ ದೇವಾಲಯವೂ ವೀರಭದ್ರನ ದೇವಸ್ಥಾನವೂ ಇದೆ. ತಂಡದಲ್ಲಿಯ ಹೊಯ್ಸಳ ಶೈಲಿಯ ಚೆನ್ನಕೇಶವ ದೇವಾಲಯ ಪ್ರಸಿದ್ಧವಾದ್ದು. ಇದಲ್ಲದೆ ಇಲ್ಲಿ ಮಲ್ಲೇಶ್ವರ ಮತ್ತು ಈಶ್ವರ ದೇವಾಲಯಗಳಿವೆ. ಈಶ್ವರ ದೇವಾಲಯ ದ್ರಾವಿಡ ಶೈಲಿಯದು.

                                               

ಐಹೊಳೆ ಶಾಸನ

ಐಹೊಳೆ ಶಾಸನ ಇಮ್ಮಡಿ ಪುಲಿಕೇಶಿಯ ಕಾಲದ್ದು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಗ್ರಾಮದ ಮೇಗುತಿ ಎಂಬ ದೇವಾಲಯದ ಪೂರ್ವ ದಿಕ್ಕಿನ ಗೋಡೆಯಲ್ಲಿ ಈ ಐಹೊಳೆ ಶಾಸನವಿದೆ. ಇದರ ಉದ್ದ ಸುಮಾರು ೫ ಅಗಲ, ೨೧/೪ ಅಡಿ ಎತ್ತರವಾಗಿದೆ. ಈ ಶಾಸನದ ಕಾಲ ಕ್ರಿ.ಶ. ೬೩೪-೬೩೫. ಭಾಷೆ ಸಂಸ್ಕೃತ, ಲಿಪಿ ಹಳಗನ್ನಡ. ಕಲಾ ಇತಿಹಾಸದಲ್ಲಿ ಇದನ್ನು ವಾಸ್ತುಶಿಲ್ಪಗಳ ತೊಟ್ಟಿಲು ಎಂದು ಕರೆಯಲಾಗಿದ್ದು, ಇಮ್ಮಡಿ ಪುಲಕೇಶಿ ಆಸ್ಥಾನದ ಕವಿ ರವೀಕೀರ್ತಿಯು ಬರೆದಿರುವ ಶಾಸನ ಇಲ್ಲಿದೆ. ಚಾಲುಕ್ಯರ ಕಾಲದಲ್ಲಿ ಇದು ಪ್ರಮುಖ ವಿದ್ಯಾಕೇಂದ್ರ ಹಾಗೂ ವ್ಯಾಪಾರ ವಾಣಿಜ್ಯ ಕೇಂದ್ರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿ ಐಹೊಳೆಯಾಯಿತು. ಐಹೊಳೆಯಂತೂ ಪೂರ್ಣವಾಗಿ ದೇವಾಲಯ ...

                                               

ಅಶೋಕನ ಬಂಡೆ ಶಾಸನಗಳು

ಚಕ್ರವರ್ತಿ ಅಶೋಕನ ಬಂಡೆ ಶಾಸನ ಗಳು ವಿಶೇಷವಾದ ಗೌರವವನ್ನೋ, ಆಸ್ತಿಯನ್ನೋ ಸಾಧಿಸುವುದರ ಸಲುವಾಗಿ ಕೃತಕ ತಾಮ್ರಪಟಗಳನ್ನು ಸೃಷ್ಟಿಸಿ ಅವುಗಳನ್ನು ಅಧಿಕೃತ ದಾಖಲೆಯೆಂದು ರಾಜರ ಮುಂದೆ ಅಥವಾ ಊರ ಹಿರಿಯರ ಮುಂದೆ ಹಾಜರು ಮಾಡಿ ಅನವಶ್ಯಕ ಸವಲತ್ತುಗಳನ್ನು ಪಡೆಯುತ್ತಿದ್ದರು. ದೊರೆತಿರುವ ಮುಖ್ಯವಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅಶೊಕನು ಕ್ರಿಸ್ತಪೂರ್ವ 272-232 ರ ಅವಧಿಯಲ್ಲಿ ರಾಜ್ಯಭಾರ ಮಾಡಿದನು. ಅವನು ಮೌರ್ಯವಂಶದ ಮೂರನೆಯ ದೊರೆ. ಅವನ ಸಾಮ್ರಾಜ್ಯದ ದಕ್ಷಿಣದ ಗಡಿಗೆರೆಗಳನ್ನು ಈ ಶಾಸನಗಳು ಸೂಚಿಸುತ್ತವೆ.

                                               

ಮಾಲ್ಯವಂತ ರಘುನಾಥ ದೇವಾಲಯ

ಮಾಲ್ಯವಂತ ರಘುನಾಥ ದೇವಾಲಯ ಕರ್ನಾಟಕ ರಾಜ್ಯದ ಬಳ್ಳಾರಿಯ ಕಮಲಾಪುರ ಎಂಬ ಊರಿನಲ್ಲಿ ಇದೆ. ಈ ದೇವಾಲಯ ಶ್ರೀರಾಮ ದೇವರಿಗೆ ಸಮರ್ಪಿಸಲಾಗಿದೆ. ಕಮಲಾಪುರದ ಮುಖ್ಯರಸ್ತೆಯಿಂದ ಸುಮಾರು ೦೨ ಕಿ.ಲೊ ಆಚೆಗೆ ಈ ವಿಶಾಲವಾದ ಮಾಲ್ಯವಂತ ಬೆಟ್ಟವಿದೆ. ಈ ಸ್ಥಳದಲ್ಲಿ ರಘುನಾಥ ದೇವಾಲಯವಿದೆ.

                                               

ಇಲ್ಲಿಗ

ಇಲ್ಲಿಗ ಬುಡಕಟ್ತು ಪದವನ್ನು ಒಂದು ಸಾಮಾಜಿಕ ಮೊದಲು ಅಸ್ತಿತ್ವದಲ್ಲಿರುವ ಗುಂಪು, ಅಥವಾ ರಾಜ್ಯಗಳ ಹೊರಗೆ ಐತಿಹಾಸಿಕವಾಗಿ ಬೆಳೆಯುವ ಗುಂಪು ಎಂದು ನೋಡಲಾಗುತ್ತದೆ. ಅನೇಕ ಜನರು ಸಾಮಾಜಿಕ, ವಿಶೇಷವಾಗಿ ಕಾರ್ಪೊರೇಟ್, ಮೂಲದ ಗುಂಪುಗಳ ಆಧಾರದ ಮೇಲೆ ಹೆಚ್ಚಾಗಿ ಸಂಘಟಿತ ಸಮಾಜಗಳು ಈ ಪದವನ್ನು ಬುಡಕಟ್ಟು ಸಮಾಜದ ಎಂದು ಬಳಸಲಾಗುತ್ತದೆ. ಬುಡಕಟ್ಟು ಈಗ ಖಂಡಾತ್ಮಕ ಸಮಾಜದ ಎಂದು ಕರೆಸಿಕೊಳ್ಳಲಾಗುತ್ತಿದೆ. ಖಂಡಾತ್ಮಕ ಸಮಾಜದ ಬೇಟೆಗಾರರ ಗುಂಪು ದೊಡ್ಡದಾಗಿರುತ್ತದೆ, ಆದರೆ ರಾಜತ್ವ ಚಿಕ್ಕದಾಗಿರುತ್ತದೆ.ವಿಶಿಷ್ಟ ಗಾತ್ರ ಕೆಲವು ನೂರುಕು ಹೆಚ್ಚು ಇರುತ್ತದೆ ಆದರೆ ಸಾವಿರಕ್ಕಿಂತ ಹೆಚ್ಚು ಇರದು. ಇಲ್ಲಿಗರು ಬೇಟೆಯನ್ನು ಮೂಲ ವೃತ್ತಿಯನ್ನಾಗಿ ಅವಲಂಬಿಸಿರುವ ಒಂದು ಬುಡಕಟ್ಟು ಸಮುದಾಯ. ಇರುಳಿಗ ಎಂಬ ಪದ ಇಲ್ಲಿಗರು ಎಂದು ವಿರೂಪಗೊಂಡಿದೆ. ಇವರಿಗೆ ಕಾಡು ಪೂ ...

                                               

ಭಾರತದ ಬುಡಕಟ್ಟು ಜನಾಂಗಗಳು

ಭಾರತವು ಜ್ಯತಾತೀತ ದೇಶ. ಇಲ್ಲಿ ಹಲವಾರು ಜನಾಂಗಗಳು ಒಟ್ಟಿಗೆ ಕೂಡಿ ಬಾಳುತಿದ್ದಾರೆ. ಆದರೆ ಕೆಲವು ವರ್ಶಗಲಳ ಹಿಂದೆ ಜನರನ್ನು ಜಾತಿಯ ಮೂಲಕ ವರ್ಗವಣೆ ಮಾಡುತಿದ್ದರು. ಬ್ರಾಹ್ಮಣಾರು, ಕ್ಷತ್ರಿಯರು, ವೈಶ್ಯಯರು ಮತ್ತು ಶೂದ್ರರು. ಹೀಗೆ ಶೂದ್ರರಿಗೆ ಸರಿಯಾದ ವ್ಯವಸ್ಥೆ, ಆದಿರತ್ಯ ಸಿಗುತಿರಲಿಲ್ಲ. ಅವರನ್ನು ಕೆಳಮಟ್ತದವರು ಎಂದು ಗುರ್ತಿಸುತಿದ್ದರು. ಆದರೆ ಇವರನ್ನು ಹರಿಜನರು ಎಂದು ಕರೆದರು. ಶೂದ್ರರನ್ನು ಕೆಳಮಟ್ತದ ಕೆಲಸಗಳನ್ನು ಬಲವಂತವಾಗಿ ಮಾಡಿಸುತಿದ್ದರು, ಅಸ್ಪ್ರಶ್ಯತೆ ಯನ್ನು ಅಭ್ಯಾಸ ಮಾಡುತಿದ್ದರು. ಮೇಲೆ ಜಾತಿಯ ಜನರು ಇವರನ್ನು ಕೆಟ್ತದಾಗಿ ನೆಡೆಸಿ ಕೊಳ್ಳುತಿದ್ದರು. ಕಾಲ ಕಳೆದಂತೆ ಬ್ರಿಟೀಷ್ ಸರ್ಕರ ದಿಂದ ಭಾರತದಲ್ಲಿ ನ್ಯಾಗಳು ಬಂದವು. ಇದರಿಂದಾಗಿ ಇವರ ಸ್ಥಿತಿ ಸುಧಾರಿಸಿತು. ಬುಡಕತಟ್ಟು ಜನಂಗಳಿಗೆ ಹಲವಾರು ಕಡೆ ಅಂದರೆ ಶಾಲೆ, ...

                                               

ಕೂಡ್ಲಿಗಿ

ಕೂಡ್ಲಿಗಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬೆಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ಕಂಡುಬರುವ ಕೂಡ್ಲಿಗಿ ಪಟ್ಟಣ ಧಾರ್ಮಿಕ, ಐತಿಹಾಸಿಕ, ರಾಜಕೀಯವಾಗಿ ಪ್ರಸಿದ್ಧಿ ಪಡೆದ ಸ್ಥಳ.ಕೂಡ್ಲಿಗಿಯ ಇತಿಹಾಸವನ್ನು ಗಮನಿಸುತ್ತ ಬಂದಾಗ ಮೌರ್ಯರು, ಶಾತವಾಹನರು, ಪಲ್ಲವರು, ಕದಂಬರು, ಚಾಳುಕ್ಯರ ಆಳ್ವಿಕೆಗೆ ಈ ಭಾಗ ಒಳಪಟ್ಟದ್ದೆಂದು ತಿಳಿದುಬರುತ್ತದೆ. ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಇದು ಅವರ ಸಾಮಂತರಾದ ಗಂಗರ ಆಳ್ವಿಕೆಯಲ್ಲಿತ್ತು. ನಂತರ ವಿಜಯನಗರ ಅರಸರು, ಹೈದರಾಲಿ, ಟಿಪ್ಪೂಸುಲ್ತಾನರ ಆಳ್ವಿಕೆ. ನಂತರ ಬ್ರಿಟೀಶರ ಅಧಿಪತ್ಯಕ್ಕೊಳಪಟ್ಟಿತ್ತು. ಸ್ವಾತಂತ್ರ್ಯಾನಂತರ ೧೯೫೩ರ ಅಕ್ಟೋಬರ್ ನಲ್ಲಿ ಬಳ್ಳಾರಿ ಜಿಲ್ಲೆಯೊಂದಿಗೆ ಇದು ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟಿತು. ೧೯೫೬ರಲ್ಲಿ ಕರ್ನಾಟಕದಲ್ಲಿ ವಿಲೀನವಾಯಿತು.

                                               

ಇಕ್ಕೇರಿ ವಾಸ್ತುಶಿಲ್ಪ

ಇಕ್ಕೇರಿ ಅರಸರ ಆಳ್ವಿಕೆಗೆ ಸಂಬಂಧಿಸಿದ ಶಿವತತ್ತ್ವರತ್ನಾಕರ, ಕೆಳದಿ ನೃಪವಿಜಯ ಮುಂತಾದ ಸ್ಥಳೀಯ ಕೃತಿಗಳಲ್ಲೂ ಪಯೆಸ್, ಡೆಲ್ಲವಲ್ಲೆ ಮುಂತಾದ ವಿದೇಶೀಯರ ಬರಹಗಳಲ್ಲೂ ಅನೇಕ ಸಮಕಾಲೀನ ಕೋಟೆ-ಕೊತ್ತಳಗಳ, ಸುಂದರ ನಗರಗಳ, ವೈಭವಯುತ ಅರಮನೆ, ದೇವಾಲಯಗಳ ವರ್ಣನೆಗಳು ದೊರಕುತ್ತವೆ. ಆ ವಾಸ್ತುಕೃತಿಗಳಲ್ಲಿ ಹಲವು ಇಂದಿಗೂ ಉಳಿದುಬಂದಿವೆ. ಆದರೆ ಅವುಗಳಲ್ಲಿ ಬಹುಮಟ್ಟಿನವು ಈಗ ಅತ್ಯಂತ ಶಿಥಿಲಾವಸ್ಥೆಯಲ್ಲಿವೆ. ಅವುಗಳ ವಿಶೇಷ ಅಧ್ಯಯನವೇನೂ ನಡೆದಿಲ್ಲದಿರುವುದರಿಂದ ಆ ಉಚ್ಛ್ರಾಯ ಕಾಲದ ಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸುವುದು ಕಷ್ಟಸಾಧ್ಯ.

                                               

ಆದಿಚುಂಚನಗಿರಿ

ಪುರಾಣ ಪ್ರಸಿದ್ಧವೂ, ಪವಿತ್ರವೂ ಆದ ಶ್ರೀ ಆದಿಚುಂಚನಗಿರಿ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನಲ್ಲಿದೆ. ಇದು ಬೆಂಗಳೂರಿನಿಂದ 110 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ಮಂಗಳೂರು ರಾ.ಹೆ.47 ರಲ್ಲಿ ಸಾಗಿ ಬೆಳ್ಳೂರು ಕ್ರಾಸ್‍ಗೆ ತಲುಪಿದರೆ, ಅಲ್ಲಿಂದ ಸುಮಾರು 08 ಕಿ.ಮೀ. ಅಂತರದಲ್ಲಿ ಆದಿಚುಂಚನಗಿರಿಯ ಬೆಟ್ಟ ಸಿಗುತ್ತದೆ. ಮೈಸೂರಿನಿಂದ ತುಮಕೂರಿಗೆ ಹೋಗುವ ಹೆದ್ದಾರಿಯಲ್ಲಿ ಬೆಳ್ಳೂರಿಗೆ 2 ಮೈಲಿಗಳ ದೂರದಲ್ಲಿ ಚುಂಚನಹಳ್ಳಿಯೆಂಬ ಚಿಕ್ಕ ಗ್ರಾಮವು ಚುಂಚನಗಿರಿಯ ತಪ್ಪಲಿನಲ್ಲಿದೆ. ಉತ್ತರದಕ್ಷಿಣವಾಗಿ ಹಬ್ಬಿರುವ ಕಲ್ಲು-ಬಂಡೆಗಳಿಂದ ಕೂಡಿದ ಈ ಗಿರಿಯು ಸಮುದ್ರ ಮಟ್ಟದಿಂದ ಸುಮಾರು 3221 ಅಡಿ ಎತ್ತರವಾಗಿದೆ. ಹಸಿರು ಕಾನನಗಳಿಂದ ಕೂಡಿ, ರಮಣೀಯವೂ, ಪ್ರಶಾಂತವೂ ಆದ ಈ ಕ್ಷೇತ್ರವು ಪರಶಿವನ ತಪೋಭೂಮಿಯಾಗಿದ್ದಿತ ...

ದ್ರಾವಿಡ
                                     

ⓘ ದ್ರಾವಿಡ

ದ್ರಾವಿಡರು ಭಾರತದ ಮೂಲನಿವಾಸಿಗಳೆಂದೂ ಮಧ್ಯ ಏಷ್ಯಾದಿಂದ ಬಂದ ಆರ್ಯರು ಇವರನ್ನು ಸೋಲಿಸಿ, ದಕ್ಷಿಣಕ್ಕೆ ಅಟ್ಟಿದರೆಂದೂ ಆದ್ದರಿಂದ ಉತ್ತರ ಭಾರತದ ಸಂಸ್ಕøತಿ ಆರ್ಯರದಾಯಿತೆಂದೂ ದಕ್ಷಿಣದಲ್ಲಿ ದ್ರಾವಿಡ ಸಂಸ್ಕೃತಿ ಉಳಿಯಿತೆಂದೂ ಬಹುಕಾಲ ಇತಿಹಾಸದ ಅಭಿಪ್ರಾಯವಾಗಿತ್ತು. ಆರ್ಯರು ಉತ್ತಮರು, ದೃಢಕಾಯರು, ಸುಸಂಸ್ಕøತರು. ದ್ರಾವಿಡರಾದರೋ ಕಪ್ಪುಬಣ್ಣದವರು, ಕುಳ್ಳರು ಮತ್ತು ಕೆಳಮಟ್ಟದ ಸಂಸ್ಕೃತಿಯಿದ್ದವರು. ಆದ್ದರಿಂದಲೇ ಆರ್ಯರು ಅವರನ್ನು ಗೆಲ್ಲುವುದು ಸಾಧ್ಯವಾಯಿತು. ಅಲ್ಲದೆ ತಮ್ಮ ಸಂಸ್ಕೃತಿಯನ್ನು ಭಾರತದಲ್ಲಿ ಹರಡಲು ಸುಲಭವಾಯಿತು. ದ್ರಾವಿಡರು ಆರ್ಯರ ದಾಸರಾದರು, ದಸ್ಯುಗಳೆನಿಸಿಕೊಂಡರು. ಆರ್ಯ ಸಂಪರ್ಕದಿಂದ ದ್ರಾವಿಡರು ನಾಗರಿಕರಾದರು-ಹೀಗೆಂದು ಬಹುಕಾಲ ವಿದ್ವಾಂಸರು ತಿಳಿದಿದ್ದರು.

                                     

1. ಇತ್ತೀಚಿನ ಸಂಶೋಧನೆಗಳು

ಆದರೆ ಈ ವಾದಸರಣಿ ಸಮಂಜಸವಲ್ಲವೆಂದೂ ಆಧಾರರಹಿತವಾದುದೆಂದೂ ಸತ್ಯಕ್ಕೆ ದೂರವೆಂದೂ ಐತಿಹಾಸಿಕವಲ್ಲವೆಂದೂ ಇತ್ತೀಚಿನ ಸಂಶೋಧನಗಳಿಂದ ಖಚಿತವಾಗಿದೆ. ಮುಖ್ಯವಾಗಿ, ಭಾರತದ ಸಂಸ್ಕೃತಿ ಮತ್ತು ಭಾಷೆಗಳ ವಿಷಯವನ್ನು ಪ್ರಸ್ತಾಪಿಸದೆ, ಬರಿ ಭಾರತೀಯರ ಭೌತಿಕ ಲಕ್ಷಣಗಳ ಆಧಾರದ ಮೇಲೆ ಸಿದ್ಧಾಂತವನ್ನು ರೂಪಿಸಿದ್ದೇ ಈ ವಾದ ಸರಣಿ ದಾರಿ ತಪ್ಪಲು ಕಾರಣವಾಯಿತು. ಅಲ್ಲದೆ ಯಾವ ಖಚಿತವಾದ ಆಧಾರವೂ ಇಲ್ಲದೆ, ಶಾಸ್ತ್ರದ ಬೆಂಬಲವಿಲ್ಲದೆ ಭಾರತೀಯರನ್ನು ಏಳು ಗುಂಪುಗಳನ್ನಾಗಿ ವಿಂಗಡಿಸಿ, ಅದರಲ್ಲಿ ಇಂಡೊ - ಆರ್ಯರು ಮತ್ತು ಮಂಗೋಲ್ - ದ್ರಾವಿಡರು, ಆರ್ಯ - ದ್ರಾವಿಡರು ಮತ್ತು ಸಿಥಿಯ ದ್ರಾವಿಡರನ್ನು ಸೇರಿಸಲಾಯಿತು.

                                     

1.1. ಇತ್ತೀಚಿನ ಸಂಶೋಧನೆಗಳು ಎಲ್ಲರೂ ಹೊರಗಿನಿಂದ ಬಂದವರೇ; ದ್ರವಿಡರು ಮೆಡಿಟರೇನಿಯನ್ ಬುಡಕಟ್ಟಿಗೆ ಸೇರಿದವರು

1933ರಲ್ಲಿ ಹಟನ್ ಎಂಬ ವಿದ್ವಾಂಸ ಈ ವಾದ ಮತ್ತು ವರ್ಗೀಕರಣಗಳನ್ನು ಅಲ್ಲಗೆಳೆದು, ಭಾರತದಲ್ಲಿ ಮೂಲವಾಸಿಗಳು ಯಾರೂ ಇರಲಿಲ್ಲವೆಂದೂ ಎಲ್ಲರೂ ಹೊರಗಿನಿಂದ ಬಂದ ಗುಂಪುಗಳೇ ಆಗಿವೆಯೆಂದೂ ಅವರನ್ನು ಎಂಟು ಗುಂಪುಗಳನ್ನಾಗಿ ವಿಂಗಡಿಸಬಹುದೆಂದೂ ಅಭಿಪ್ರಾಯಪಟ್ಟ. ಈ ಎಂಟು ಗುಂಪುಗಳು ಭಾರತಕ್ಕೆ ಬಂದು ವಿವಿಧ ಪ್ರದೇಶಗಳಲ್ಲಿ ನೆಲಸಿ ತಮ್ಮ ಸಂಸ್ಕೃತಿ ಮತ್ತು ಸಂಸ್ಥೆಗಳನ್ನು ಬೆಳೆಸಿಕೊಂಡರು; ಅವರಲ್ಲಿ ನಾರ್ಡಿಕ್ ಮೂಲಕ್ಕೆ ಸೇರಿದ ವೇದಕಾಲದ ಆರ್ಯರು ಮತ್ತು ಮೆಡಿಟರೇನಿಯನ್ ಬುಡಕಟ್ಟಿಗೆ ಸೇರಿದ ದ್ರಾವಿಡರು ಮುಖ್ಯರಾದವರು.

ಇತ್ತೀಚಿಗೆ ಈ ಕ್ಷೇತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿದ ಆಂತ್ರೊಪಾಲಾಜಿಕಲ್ ಸರ್ವೆ ಸಂಸ್ಥೆಯ ಮುಖ್ಯಸ್ಥರಾದ ಗುಹ ಅವರು ತಮ್ಮ ರೇಷಿಯಲ್ ಎಲಿಮೆಂಟ್ಸ್ ಇನ್ ಪಾಪ್ಯುಲೇಷನ್ ಎಂಬ ಪುಸ್ತಕದಲ್ಲಿ ಶಾಸ್ತ್ರೀಯವಾದ ಮತ್ತು ವಿದ್ವಾಂಸರಿಂದ ಪುರಸ್ಕರಿಸಲ್ಪಟ್ಟ ವಾದವನ್ನು ಪ್ರತಿಪಾದಿಸಿದ್ದಾರೆ. ಅದರ ಪ್ರಕಾರ ಭಾರತದ ಜನ ಸಮುದಾಯವನ್ನು ಆರು ಮುಖ್ಯ ಜನಾಂಗಗಳಾಗಿ ಮತ್ತು ಒಂಬತ್ತು ಸಣ್ಣ ಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ನಾಲ್ಕನೆಯ ಜನಾಂಗಕ್ಕೆ ಸೇರಿದ ಮೆಡಿಟರೇನಿಯನ್ ಜನರನ್ನು ಕನ್ನಡ, ತಮಿಳು ಮತ್ತು ಮಲೆಯಾಳ ಪ್ರದೇಶಗಳಲ್ಲಿ ಕಾಣಬಹುದಾಗಿದೆಯೆಂದು ಅವರ ಅಭಿಪ್ರಾಯ. ಈ ಬುಡಕಟ್ಟಿಗೆ ಸೇರಿದ ಜನ ಕುಳ್ಳರು. ಕಪ್ಪು ಬಣ್ಣದವರು. ನಿಜ ಮೆಡಿಟರೇನಿಯನ್ ಅಥವಾ ಯೂರೋಪಿಯನ್ ಜನಾಂಗಕ್ಕೆ ಸೇರಿದ ಮತ್ತು ಎತ್ತರದ ಮತ್ತು ದೃಢಕಾಯ ಜನ ಗಂಗಾ ಕಣಿವೆಯಲ್ಲಿ ನೆಲೆಸಿದರು. ಇವರೇ ಆರ್ಯರಿಗಿಂತ ಮುಂಚೆ ಉತ್ತರ ಭಾರತದಲ್ಲಿದ್ದ ದ್ರಾವಿಡರು. ಮುಂದೆ ಇವರೇ ಆರ್ಯರಾದರು. ಉತ್ತರ ಭಾರತದ ಸಂಸ್ಕೃತಿಯ ಬೆಳವಣಿಗೆಗೆ ಪೋಷಕರಾದರು. ಆರನೆಯ ಗುಂಪಾದ ನಾರ್ಡಿಕ್ ಆರ್ಯರು ಭಾರತಕ್ಕೆ ಭಾಷೆಯನ್ನು ಕೊಟ್ಟರು. ಅಲ್ಲದೆ ತಮ್ಮ ಪ್ರತಿಭೆಯಿಂದ ಭಾರತದ ವಿವಿಧ ಸಂಸ್ಕೃತಿಗಳನ್ನು ಒಂದುಗೂಡಿಸಿ, ಭಾರತೀಯ ನಾಗರಿಕತೆಯ ಅಡಿಪಾಯವನ್ನು ಹಾಕಿದರು. ಅಲ್ಲದೆ, ಭಾರತದ ಆರು ಗುಂಪುಗಳಲ್ಲಿ ಪ್ರತ್ಯೇಕತೆಯ ಮನೋಭಾವವಿರಲಿಲ್ಲವಲ್ಲದೆ ಅವು ಮಿಶ್ರಿತವಾದ ಗುಂಪುಗಳೇ ಆಗಿದ್ದವು. ಆದ್ದರಿಂದ ಭಾರತದ ಇತಿಹಾಸದ ಪ್ರಾರಂಭದಿಂದಲೂ ಇಂಥ ಜನಾಂಗದ ಮಿಶ್ರಣವನ್ನು ಕಾಣಬಹುದಾಗಿದೆ. ಭಾಷೆಯೇ, ಜನಾಂಗದ ಜೀವಾಳವಾದುದರಿಂದ, ಅದರಿಂದಲೇ ಒಂದು ಜನಾಂಗದ ಸಂಸ್ಕೃತಿಯನ್ನು ಅಳೆಯಬೇಕೇ ಹೊರತು, ಬುಡಕಟ್ಟಿನ ಆಧಾರದ ಮೇಲಲ್ಲ.

ಮೇಲೆ ಪಟ್ಟಿ ಮಾಡಿದ ಆರು ಗುಂಪುಗಳು ಒಂದು ಜನಾಂಗವಾಯಿತಲ್ಲದೆ ಅದು ನಾಲ್ಕು ಭಾಷೆಗಳನ್ನು ಹೊಂದಿತ್ತು. ಅದರಲ್ಲಿ ದ್ರಾವಿಡ ಮತ್ತು ಇಂಡೊ-ಯೂರೋಪಿಯನ್ ಆರ್ಯ ಭಾಷೆಗಳು ಸೇರಿವೆ. ದ್ರಾವಿಡ ಭಾಷೆಗಳು ವಿಶೇಷವಾಗಿ ದಕ್ಷಿಣದಲ್ಲಿ ಕೇಂದ್ರೀಕೃತವಾದರೂ ಉತ್ತರ ಭಾರತದ ಛೋಟನಾಗಪುರದಲ್ಲಿ, ದ್ರಾವಿಡ ಭಾಷೆಯನ್ನು ಬಳಸುವ ಓರಾಯನರಲ್ಲಿ ಮತ್ತು ಕೋಲ್ ಭಾಷೆಯನ್ನು ಬಳಸುವ ಮುಂಡರಲ್ಲಿ ಬಲೂಚಿಸ್ಥಾನದ ಬ್ರಾಹುಇ ಭಾಷೆಯಲ್ಲಿ ದ್ರಾವಿಡ ಭಾಷೆಗಳ ಪ್ರಭಾವವನ್ನು ಕಾಣಬಹುದಾಗಿದೆ. ಮುಖ್ಯವಾಗಿ ಭಾರತಕ್ಕೆ ಬಂದು ನೆಲಸಿದ ವಿವಿಧ ಜನಾಂಗಗಳು ತಮ್ಮ ಸಂಸ್ಕೃತಿಯನ್ನು ಬೆಳಸಿ, ಅವೆಲ್ಲವನ್ನೂ ಒಂದುಗೂಡಿಸಿ, ಭಾರತೀಯ ಸಂಸ್ಕøತಿಯನ್ನು ರೂಪಿಸಿಕೊಂಡಿದ್ದು ಇತಿಹಾಸದ ಮುಖ್ಯ ಘಟನೆಯಾಗಿದೆ. ಈ ಸಂಸ್ಕೃತಿಯ ಸಾಗರದಲ್ಲಿ ಗುಂಪುಗಳ ಕೊಡುಗೆಯನ್ನು ಬೇರ್ಪಡಿಸುವುದು ಸುಲಭದ ಕೆಲಸವಾಗದಿದ್ದರೂ ಅವುಗಳ ಮುಖ್ಯ ಲಕ್ಷಣಗಳು ತೋರಿಸುವುದು ಕಷ್ಟದ ಕೆಲಸವಾಗದು.

                                     

1.2. ಇತ್ತೀಚಿನ ಸಂಶೋಧನೆಗಳು ದ್ರಾವಿಡರ ನಾಗರೀಕತೆ

ದ್ರಾವಿಡರು ನಾಗರಿಕರಾಗಿದ್ದು ಭಾರತದಲ್ಲಿ ಪಟ್ಟಣಗಳನ್ನು ಕಟ್ಟಿ ನಗರ ನಾಗರಿಕತೆಯನ್ನು ರೂಪಿಸಿದರು. ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಬೆಳೆಸಿದರು. ಭಾರತದ ಎಲ್ಲ ಕಡೆಗಳಲ್ಲೂ ನೆಲೆಸಿದರು. ಬಲೂಚಿಸ್ತಾನದಲ್ಲಿ ಬಳಕೆಯಲ್ಲಿರುವ ಬ್ರಾಹುಇ ಭಾಷೆ ದ್ರಾವಿಡ ಭಾಷೆಯ ಛಾಯೆಯನ್ನು ಹೊಂದಿರುವುದರಿಂದ, ದ್ರಾವಿಡರು ಸಿಂಧ್, ರಜಪುಟಾಣ ಮತ್ತು ಮಾಳವದ ಮೂಲಕ ಈಗಿನ ಮಹಾರಾಷ್ಟ್ರ ಪ್ರದೇಶ ಮತ್ತು ದಕ್ಷಿಣ ಭಾರತದ ಇತರ ಪ್ರದೇಶಗಳಿಗು ಪ್ರಸರಿಸಿದರೆಂದು ಹೇಳಬಹುದಾಗಿದೆ. ಅಲ್ಲದೆ ಸುಪ್ರಸಿದ್ಧವಾದ ಸಿಂಧೂಕಣಿವೆ ನಾಗರಿಕತೆ ಪಟ್ಟಣದಲ್ಲಿ ಕೇಂದ್ರೀಕೃತವಾಗಿದ್ದು, ಅಲ್ಲಿನ ಭಾಷೆ ದ್ರಾವಿಡ ಭಾಷೆಯನ್ನು ಹೋಲುವುದರಿಂದ ಸಿಂಧೂಕಣಿವೆಯ ಜನ ದ್ರಾವಿಡ ಗುಂಪಿಗೆ ಸೇರಿದವರೆಂದು ಹೇಳುವುದು ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಹೀರಾಸ್ ಮತ್ತು ಎಸ್.ಆರ್.ರಾವ್ ಅವರು ಇದೇ ತೀರ್ಮಾನಕ್ಕೆ ಬಂದಿದ್ದಾರೆ.

                                     

1.3. ಇತ್ತೀಚಿನ ಸಂಶೋಧನೆಗಳು ಆರ್ಯರು ಮತ್ತು ದ್ರಾವಿಡರು

ಆರ್ಯರು ಭಾರತಕ್ಕೆ ಬಂದಾಗ ಇಲ್ಲಿ ಎರಡು ಗುಂಪುಗಳನ್ನು ಕಂಡರು. ಅವರನ್ನು ದಾಸ ಅಥವಾ ದಸ್ಯು ಮತ್ತು ನಿಷಾದರೆಂದು ಕರೆದರು. ಶತ್ರುಗಳಾದ ಅವರು ಆರ್ಯರಿಗೆ ದಾಸರೆನಿಸಿಕೊಂಡರು, ಕಳ್ಳರೆನಿಸಿಕೊಂಡರು. ಆದರೆ ದಾಸ ಅಥವಾ ದಸ್ಯು ಎಂಬ ಪದಗಳು ಪ್ರಾಚೀನ ಇರಾನಿನಲ್ಲೇ ಬಳಕೆಯಲ್ಲಿದ್ದುವು. ಅದು ಗುಂಪಿನ ನಾಮವಾಗಿತ್ತೇ ಹೊರತು ಸೇವಕನೆಂಬ ಅರ್ಥದಲ್ಲಿರಲಿಲ್ಲ. ಅಲ್ಲದೆ ಭಾರತದ ತತ್ತ್ವಶಾಸ್ತ್ರ, ಸಾಹಿತ್ಯ, ಧರ್ಮ ಮತ್ತು ಸಂಸ್ಕøತಿಯಲ್ಲಿಯ ಉದಾತ್ತ ಮತ್ತು ಒಳ್ಳೆಯ ಭಾವನೆಗಳೆಲ್ಲ ಆರ್ಯರಿಂದಲೇ ರೂಪಿತವಾಯಿತೆಂದೂ ಇಲ್ಲಿನ ಕಂದಾಚಾರ ಪದ್ಧತಿ ಮತ್ತು ಹಿಂದೂ ಧರ್ಮದಲ್ಲಿ ಕಂಡು ಬರುವ ಮೂಢನಂಬಿಕೆಗಳು, ಕೆಟ್ಟ ಲಕ್ಷಣಗಳು ದ್ರಾವಿಡರಿಂದ ಬಂತೆಂದೂ ಹೇಳುವುದು ವಾಡಿಕೆ. ಆದರೆ ಈ ಅಭಿಪ್ರಾಯ ಈಗ ತಿರಸ್ಕರಿಸಲ್ಪಟ್ಟಿದೆ.

                                     

1.4. ಇತ್ತೀಚಿನ ಸಂಶೋಧನೆಗಳು ಭಾರತದ ನಾಗರಿಕತೆ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ದ್ರಾವಿಡರ ಪಾತ್ರ

ಆರ್ಯ ಮತ್ತು ದ್ರಾವಿಡ ಲಕ್ಷಣಗಳನ್ನು ಆಳವಾಗಿ ಪಾಂಡಿತ್ಯಪೂರ್ಣವಾಗಿ ವಿವೇಚಿಸಿರುವ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಭಾರತದ ನಾಗರಿಕತೆ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ದ್ರಾವಿಡರ ಪಾತ್ರ ಹಿರಿದಾದುದೆಂದೂ ಸಿಂಧೂ ಕಣಿವೆಯಸಂಸ್ಕೃತಿ ಆರ್ಯರಿಗಿಂತ ಉತ್ತಮವಾದುದೆಂದೂ ತಿಳಿದು ಬಂದಿದೆ. ಹಿಂದೂಧರ್ಮದ ಅನೇಕ ದೇವತೆಗಳು ದ್ರಾವಿಡರ ಕೊಡುಗೆಯೇ ಶಿವಾರಾಧನೆ, ಮಾತೃದೇವತೆಯ ಪೂಜೆ, ನಂದಿ, ಶಿವ ಉಮೆಯರ ಪೂಜೆ, ಯೋಗ - ಇವು ದ್ರಾವಿಡ ಲಕ್ಷಣಗಳು. ದೇವರನ್ನು ಪೂಜಿಸುವ ಪದ್ಧತಿ ದ್ರಾವಿಡರದೇ ಆಗಿದೆ. ಹಿಂದೂಧರ್ಮದಲ್ಲಿ ಶ್ರೇಷ್ಠಸ್ಥಾನ ಪಡೆದ ಶಿವ, ಉಮೆ, ವಿಷ್ಣು, ಹನುಮಂತ ಮತ್ತು ಗಣೇಶ ಈ ದ್ರಾವಿಡ ದೇವರುಗಳು ಹಿಂದೂ ಧರ್ಮದಲ್ಲಿ ಸೇರಿಹೋಗಿವೆ.

                                     

1.5. ಇತ್ತೀಚಿನ ಸಂಶೋಧನೆಗಳು ಭಾರತೀಯರ ಸಂಸ್ಕೃತಿಯ ಮೇಲೆ ದ್ರಾವಿಡರ ಪ್ರಭಾವ

ದ್ರಾವಿಡರ ಪ್ರಭಾವವನ್ನು ಭಾರತೀಯರ ಸಂಸ್ಕೃತಿಯ ನಾನಾ ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಉತ್ತರ ಭಾರತದ ಊರುಗಳ ಹೆಸರಿನಲ್ಲಿ, ವೇದ ಮತ್ತು ಭಾರತದ ಸಾಹಿತ್ಯದಲ್ಲಿ, ಆರ್ಯರ ಭಾಷೆಗಳಲ್ಲಿ. ಮತಪದ್ಧತಿಯಲ್ಲಿ ಸಂಪ್ರದಾಯದಲ್ಲಿ ಪುರಾಣದಲ್ಲಿ, ಇತಿಹಾಸದಲ್ಲಿ, ದ್ರಾವಿಡ ಲಕ್ಷಣಗಳನ್ನು ಗುರುತಿಸಲಾಗಿದೆ. ಆರ್ಯ ಸಂಸ್ಕೃತಿಯ ಬಹುಭಾಗ ದ್ರಾವಿಡರದೇ ಆಗಿದೆ. ಭಾರತೀಯ ಆರ್ಥಿಕ ವ್ಯವಸ್ಥೆ, ಭಾರತೀಯ ಭಾಷೆಗಳು, ಸಮಾಜಿಕ ಸಂಸ್ಥೆಗಳು ಮತ್ತು ಸಂಪ್ರದಾಯ ಮದುವೆ ಮುಂತಾದ ಪದ್ಧತಿಗಳು - ಇವುಗಳಲ್ಲಿ ದ್ರಾವಿಡರ ಪ್ರಭಾವವಿದೆ. ನಡೆ ನುಡಿಗಳಲ್ಲಿ ದ್ರಾವಿಡ ಛಾಯೆಯಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →