Back

ⓘ ಪರಮಾತ್ಮ(ಚಲನಚಿತ್ರ)



                                               

ಶ್ರೀ ಕ್ಷೇತ್ರ ಇಂಚಗೇರಿ ಮಠ

ಕರ್ನಾಟಕ - ಮಹಾರಾಷ್ಟ್ರ ಗಡಿ ಭಾಗದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರುವ ಇಂಚಗೇರಿ ಗ್ರಾಮವು ಐತಿಹಾಸಿಕ ಶ್ರೀ ಕ್ಷೇತ್ರ ಇಡೀ ದಕ್ಷಿಣ ಭಾರತದ ಶ್ರೇಷ್ಟ ಭಕ್ತಿ ಪಂಥಗಳೊಲ್ಲೊಂದಾಗಿದೆ. ವಿಜಯಪುರ ಜಿಲ್ಲಾ ಕೇಂದ್ರದಿಂದ ಸೋಲ್ಲಾಪುರ ಮಾರ್ಗದಲ್ಲಿ ಸುಮಾರು 30 ಕಿ.ಮೀ. ದೂರದಲ್ಲಿರುವ ಹೊರ್ತಿ ಪಟ್ಟಣದಿಂದ 11 ಕಿ.ಮೀ.ದೂರದಲ್ಲಿರುವ ಈ ಸುಕ್ಷೇತ್ರ ಗುರು ಪರಂಪರೆಯ ವಿಚಾರದಲ್ಲಿ ಶತಮಾನಗಳ ಹಳೆಯ ಇತಿಹಾಸ ಹೊಂದಿದೆ.

ಪರಮಾತ್ಮ(ಚಲನಚಿತ್ರ)
                                     

ⓘ ಪರಮಾತ್ಮ(ಚಲನಚಿತ್ರ)

ಪರಮಾತ್ಮ 2011ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಿತ್ರ. ಯೋಗರಾಜ್ ಭಟ್ ರವರು ಈ ಚಿತ್ರಕ್ಕೆ ನಿರ್ದೇಶನ ಮತ್ತು ಸಹ ನಿರ್ಮಾಣ ಮಾಡಿದ್ದಾರೆ.ಇದರಲ್ಲಿಪುನೀತ್ ರಾಜ್‌ಕುಮಾರ್ ಮತ್ತು ದೀಪಾ ಸನ್ನಿಧಿ ಮುಖ್ಯ ಪಾತ್ರಗಳಲ್ಲಿನಟಿಸಿದ್ದಾರೆ.ಈ ಚಿತ್ರವು 6 ಅಕ್ಟೋಬರ್ 2011 ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು. ನಿರ್ಮಾಣ ಹಂತದಲ್ಲಿದ್ದಾಗಲೇ ಚಿತ್ರದ ಟಿವಿ ಹಕ್ಕುಗಳು ದಾಖಲೆಯ ₹ 3.5 ಕೋಟಿಗೆ ಮಾರಾಟವಾಯಿತು.ಬಿಡುಗಡೆಗೆ ಮುಂಚೆಯೇ,ಚಿತ್ರವು ಪ್ರಸಾರ ಮತ್ತು ವಿತರಣಾ ಹಕ್ಕುಗಳನ್ನು ಒಳಗೊಂಡಂತೆ ₹ 25 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿತು.

                                     

1. ಪಾತ್ರವರ್ಗ

  • ರಮ್ಯಾ ಬಾರ್ನಾ
  • ರಾಜು ತಾಳಿಕೋಟೆ
  • ಜಯಂತ್ ಪಾತ್ರದಲ್ಲಿ ಅನಂತ್ ನಾಗ್
  • ಅಣ್ಣಯ್ಯ ಪಾತ್ರದಲ್ಲಿ ರಂಗಾಯಣ ರಘು
  • ಸಾನ್ವಿ/ಪಸೀನಾ ಪಾತ್ರದಲ್ಲಿ ಐಂದ್ರಿತಾ ರೇ
  • ಅಪ್ಪಣ್ಣ ಪಾತ್ರದಲ್ಲಿ ದತ್ತಣ್ಣ
  • ಶ್ರೀನಿವಾಸ್ ಪಾತ್ರದಲ್ಲಿ ಅವಿನಾಶ್
  • ದೀಪಾ/ತಿಥಿ ವಡೆ ಪಾತ್ರದಲ್ಲಿ ದೀಪಾ ಸನ್ನಿಧಿ
  • ಕೆರೋಸಿನ್ ಪಾತ್ರದಲ್ಲಿ ಶ್ವೇತಾ ಪಂಡಿತ್
  • ಪರಮತ್ಮಾ/ಕರಡಿ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್
                                     

2. ನಿರ್ಮಾಣ

ಪುನೀತ್ ರಾಜ್‌ಕುಮಾರ್ ಅಭಿನಯದ ಲಗೋರಿ ಹೆಸರಿನ ಚಲನಚಿತ್ರವನ್ನು 2009 ರಲ್ಲಿ ಚಿತ್ರೀಕರಿಸಬೇಕಾಗಿತ್ತು, ಆದರೆ ನಿರ್ಮಾಣದ ವೆಚ್ಚವು ಹೆಚ್ಚಿಸಿರುವುದರಿಂದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರದಿಂದ ಹಿಂದೆ ಸರಿದರು, ನಂತರ ಅದು ಸ್ಥಗಿತಗೊಂಡಿತು. 2011 ರಲ್ಲಿ, ಭಟ್ ಅವರ 2010 ರ ನಿರ್ಮಿತ ಚಿತ್ರ ಪಂಚರಂಗಿಯ ಯಶಸ್ಸಿನ ನಂತರ, ಅವರು ಪುನೀತ್ ರಾಜ್‌ಕುಮಾರ್ ಅಭಿನಯದ ಪರಮಾತ್ಮ ಚಿತ್ರವನ್ನು ನಿರ್ಮಾಪಕ ಜಯಣ್ಣ ರವರೊಂದಿಗೆ ಸಹ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಕಥೆಯ ಪ್ರಕಾರ ಮೂವರು ನಟಿಯರು ನಟಿಸಬೇಕಿದೆ, ಅವರೇ: ದೀಪ ಸನ್ನಿಧಿ ಐಂದ್ರಿತಾ ರೈ ಮತ್ತು ರಮ್ಯಾ ಬಾರ್ನಾ. ಚಿತ್ರದ ಚಿತ್ರೀಕರಣ ಮಾರ್ಚ್ 3 ರಂದು ಸಕಲೇಶಪುರದಲ್ಲಿ ಪ್ರಾರಂಭವಾಯಿತು,ಚಿತ್ರವು ಅಕ್ಟೋಬರ್ 6, 2011 ರಂದು ಬಿಡುಗಡೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಸುತ್ತ ಮುತ್ತ ಚಿತ್ರೀಕರಣ ನಡೆಯಿತು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →