Back

ⓘ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ                                               

ರಾಜ್ಯೋತ್ಸವ ಪ್ರಶಸ್ತಿ ೨೦೧೧ ಸಂಪೂರ್ಣ ಪಟ್ಟಿ

ಎಚ್.ಫಲ್ಗುಣ, ಚಾಮರಾಜನಗರ ಲಘು ಸಂಗೀತ ಬಾಲಚಂದ್ರ ನಾಕೋಡ್, ಧಾರವಾಡ ಹಿಂದುಸ್ತಾನಿ ಸಂಗೀತ ಗಣೇಶ ಪುತ್ತೂರು, ದಕ್ಷಿಣ ಕನ್ನಡ ಸ್ಯಾಕ್ಸೋಫೋನ್ ಶಂಕರ ಬಿನ್ನಾಳ, ಕೊಪ್ಪ ಶಾಸ್ತ್ರೀಯ ಸಂಗೀತ ಕೆ. ಎಸ್. ವೈಶಾಲಿ, ಶಿವಮೊಗ್ಗ ಶಾಸ್ತ್ರೀಯ / ಲಘು ಸಂಗೀತ

                                               

ಪಂ.ವಿ.ಜಿ.ಜೋಗ್

ಪಂ.ವ್ಹಿ.ಜಿ.ಜೋಗ್ ೧೯೨೧ರಲ್ಲಿ ಈಗಿನ ಮುಂಬಯಿಯಲ್ಲಿ ಜನನ. ಪ್ರಾರ್ಥಮಿಕ ಸಂಗೀತ ಶಿಕ್ಷಣ ಜೋಗ್ ಅವರಿಗೆ ಶ್ರೀ.ಎಸ್.ಸಿ.ಆಠವಲೆ ಹಾಗೂ ಶ್ರೀ.ಗಣಪತ್ ರಾವ್ ಪುರೋಹಿತ್ ಅವರಿಂದ ದೊರೆಯಿತು. ಮುಂದೆ ಜೋಗ್ ಅವರಿಗೆ ಶ್ರೀ ವಿಶ್ವೇಶ್ವರ್ ಶಾಸ್ತ್ರೀ, ಶ್ರೀ ಎಸ್.ಸಿ.ರತ್ನಾಕರ್ ಹಾಗೂ ಕೆಲ ಕಾಲದವರೆಗೆ ಶ್ರೀ ಬಾಬಾ ಅಲ್ಲಾವುದ್ದೀನ್ ಖಾನ್ ಅವರ ಮಾರ್ಗದರ್ಶನ ಲಭಸಿತು. ಪಾಶ್ಚಾತ್ಯ ಸಂಗೀತ ವಾದ್ಯವಾದ ವಾಯೋಲಿನ್ನಿನ ಭಾರತೀಕರಣ ಮಾಡುವಲ್ಲಿ ಶ್ರೀಯುತರ ಶ್ರಮ ಅತ್ಯಂತ ಸ್ಮರಣೀಯ. ಅವರು ವಾಯೋಲಿನ್ನನ್ನು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪರಿಚಯಿಸಿದ್ದೂ ಅಲ್ಲದೆ ಅದರ ಸರಿಯಾದ ಬಳಕೆಯನ್ನೂ ತೋರಿಸಿಕೊಟ್ಟರು. ಅವರು ವಾಯೋಲಿನ್ನನ್ನು ಪ್ರಸಿದ್ಧಗೊಳಿಸಿದ್ದು ಕಲಾರಾಧಕರಿಗೆ ಎಷ್ಟರ ಮಟ್ಟಿಗೆ ಮೆಚ್ಚುಗೆಯಾಯ್ತು ಅಂದರೆ ಅವರನ್ನ ರಸಿಕರು "ವಾಯೋಲಿನ್ ...

                                               

ಸಂಚಾರಿ ವಿಜಯ್

ಸಂಚಾರಿ ವಿಜಯ್ ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ ಒಬ್ಬ ಚಲನಚಿತ್ರ ಮತ್ತು ನಾಟಕ ನಟ. ಸಂಚಾರಿ ಹೆಸರಿನ ನಾಟಕ ತಂಡದಲ್ಲಿ ಇವರು ಒಬ್ಬರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ೨೦೧೪ರ ಸಾಲಿನ ೬೨ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
                                     

ⓘ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಹಿಂದುಸ್ತಾನಿ ಸಂಗೀತ ಭಾರತದ ಎರಡು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಒಂದು; ಉತ್ತರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾಗಶಃ ಕರ್ನಾಟಕ ರಾಜ್ಯದಲ್ಲಿ ಪ್ರಚಲಿತವಾಗಿದೆ.

ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದೆ. ೧೩-೧೪ ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯದ ಆಡಳಿತ ಪ್ರಾರಂಭವಾದ ನಂತರ ಅನೇಕ ಸಂಗೀತಗಾರರು ಈ ರಾಜರ ಬಳಿ ಆಶ್ರಯ ಪಡೆದರು. ಮುಸ್ಲಿಮ್ ರಾಜರ ಆಸ್ಥಾನಗಳಲ್ಲಿ ಭಾರತೀಯ ಸಂಗೀತ ಪರ್ಷಿಯದ ಸಾಕಷ್ಟು ಸಂಗೀತ ತತ್ವಗಳನ್ನು ತನ್ನದಾಗಿಸಿಕೊಂಡಿತು. ಈ ಸಂಯುಕ್ತ ಸಂಪ್ರದಾಯ ಹಿಂದುಸ್ತಾನಿ ಸಂಗೀತವಾಗಿ ಬೆಳವಣಿಗೆ ಹೊಂದಿದೆ.

ಮೊಘಲ್ ಕಾಲದ ಪ್ರಸಿದ್ಧ ಸಂಗೀತಗಾರ ಅಮೀರ್ ಖುಸ್ರೋ - ವೈದಿಕ ಸಂಪ್ರದಾಯದ ಸಂಗೀತ ಮತ್ತು ಪರ್ಷಿಯನ್ ಸಂಗೀತಗಳನ್ನು ಸಮಾಗಮಗೊಳಿಸಲು ಸಾಧ್ಯವಾಗುವ ಅನೇಕೆ ವಿಧಾನಗಳ ಪಿತಾಮಹ ಅಮೀರ್ ಖುಸ್ರೋ ಎಂದು ಪರಿಗಣಿಸಲಾಗಿದೆ. ಮೊಘಲ್ ಸಾಮ್ರಾಜ್ಯದ ಉನ್ನತಿಯಲ್ಲಿ ಅಕ್ಬರ್‍ನ ಆಡಳಿತದ ಕಾಲದ ಇನ್ನೊಬ್ಬ ಪ್ರಸಿದ್ಧ ಸಂಗೀತಗಾರ ತಾನ್ ಸೇನ್.

                                     

1. ಪ್ರಸಿದ್ಧ ಸಂಗೀತಗಾರರು

ಹಾಡುಗಾರರು

ಈ ಸಂಗೀತ ಪದ್ಧತಿಯ ಪ್ರಸಿದ್ಧ ಹಾಡುಗಾರರಲ್ಲಿ ಪಂಡಿತ್ ಗುರುರಾವ್ ದೇಶಪಾಂಡೆ, ಪಂಡಿತ್ ಭೀಮಸೇನ್ ಜೋಷಿ,ಪಂಡಿತ್ ಜಸ್ ರಾಜ್, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ನಸ್ರತ್ ಫತೇ ಅಲಿ ಖಾನ್ ಪಾಕಿಸ್ತಾನ ಮೊದಲಾದವರನ್ನು ಹೆಸರಿಸಬಹುದು.ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್, ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿ ಪಡೆದವರಲ್ಲಿ ವಿನಾಯಕ ತೊರವಿ, ರಷೀದ್ ಖಾನ್, ಸಂಜೀವ್ ಅಭ್ಯಂಕರ್ ಮೊದಲಾದವರು ಸೇರಿದ್ದಾರೆ.

ವಾದ್ಯ

ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ವಾದ್ಯಗಳಲ್ಲಿ ಸಿತಾರ್, ಸರೋದ್, ತಬಲಾ, ಸಾರಂಗಿ, ಸಂತೂರ್ ಮೊದಲಾದವುಗಳನ್ನು ಹೆಸರಿಸಬಹುದು. ವಾದ್ಯಗಳಲ್ಲಿ ಪರಿಣತಿ ಪಡೆದ ಸಂಗೀತಗಾರರಲ್ಲಿ ಅತಿ ಪ್ರಸಿದ್ಧರಾದವರಲ್ಲಿ ಕೆಲವರು: ಉಸ್ತಾದ್ ಬಿಸ್ಮಿಲ್ಲಾ ಖಾನ್ಶಹನಾಯಿ, ಪಂಡಿತ್ ರವಿ ಶಂಕರ್ ಸಿತಾರ್, ಶಿವಕುಮಾರ್ ಶರ್ಮಾ ಸಂತೂರ್, ಹರಿಪ್ರಸಾದ್ ಚೌರಾಸಿಯಾ ಕೊಳಲು, ಅಲ್ಲಾ ರಖಾ ಮತ್ತುಜಾಕಿರ್ ಹುಸೇನ್ ಸಂಗೀತಗಾರ ತಬಲಾ, ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್ ಸರೋದ್.

                                     

2. ಸಂಗೀತ ಪ್ರಕಾರಗಳು

ಹಿಂದುಸ್ತಾನಿ ಹಾಡುಗಾರಿಕೆಗೆ ಸಂಬಂಧಪಟ್ಟಂತೆ ಹೆಚ್ಚಾಗಿ ಬಳಕೆಯಲ್ಲಿರುವ ಪ್ರಕಾರಗಳೆಂದರೆ ಖಯಾಲ್, ಗಜಲ್ ಮತ್ತು ಠುಮ್ರಿ. ಬಳಕೆಯಲ್ಲಿರುವ ಇತರ ಪ್ರಕಾರಗಳಲ್ಲಿ ಧ್ರುಪದ್, ಧಮಾರ್ ಮತ್ತು ತರಾನಾ ಗಳು ಸೇರಿವೆ.

ಭಜನೆ

ಭಜನೆ ಹಿಂದೂ ಧರ್ಮದ ಧಾರ್ಮಿಕ ಸಂಗೀತ ಪ್ರಕಾರಗಳಲ್ಲಿ ಮುಖ್ಯವಾದುದು. ಭಜನೆಗಳ ಪ್ರಸಿದ್ಧ ಕವಿಗಳೆಂದರೆ ಕಬೀರ್, ತುಲಸಿದಾಸ್ ಮತ್ತು ಮೀರಾ ಬಾಯಿ. ಭಜನೆಗಳ ಉಗಮ ೯-೧೦ ನೆಯ ಶತಮಾನದ ಆಳ್ವಾರ್ ಭಕ್ತಿ ಪಂಥದ ಕಾಲದಲ್ಲಿ ಆಯಿತೆಂದು ಊಹಿಸಲಾಗಿದೆ.

                                     

2.1. ಸಂಗೀತ ಪ್ರಕಾರಗಳು ಧ್ರುಪದ್

ಧ್ರುಪದ್ ಕೃತಿಗಳು ಮುಖ್ಯವಾಗಿ ಭಕ್ತಿಪ್ರಧಾನವಾದ ಕೃತಿಗಳು. ಕೆಲವೊಮ್ಮೆ ವೀರರಸ ಪ್ರಧಾನವಾಗಿರಬಹುದು. ಬಹುಪಾಲು ಧ್ರುಪದ್ ಕೃತಿಗಳು ಮಧ್ಯಕಾಲೀನ ಹಿಂದಿ ಭಾಷೆಯಲ್ಲಿವೆ. ಪಕ್ಕವಾದ್ಯಗಳಾಗಿ ಸಾಮಾನ್ಯವಾಗಿ ತಂಬೂರಿ ಮತ್ತು ಪಖಾವಾಜ್ ಗಳು ಉಪಯೋಗಗೊಳ್ಳುತ್ತವೆ.

                                     

2.2. ಸಂಗೀತ ಪ್ರಕಾರಗಳು ಗಜಲ್

ಗಜಲ್ ಮೂಲತಃ ಪರ್ಷಿಯಾದ ಸಂಗೀತ ಪ್ರಕಾರ. ಈಗಲೂ ಸಹ ಭಾರತದ ಹೊರಗೆ ಇರಾನ್, ಮಧ್ಯ ಏಷ್ಯಾ, ಟರ್ಕಿ ಮೊದಲಾದ ದೇಶಗಳಲ್ಲಿ ಈ ಸಂಗಿತ ಪ್ರಕಾರ ಪ್ರಚಲಿತವಾಗಿದೆ. ಭಾರತದಲ್ಲಿ ಗಜಲ್ ಗಳ ಜಾನಪದ ಹಾಗೂ ಜನಪ್ರಿಯ ರೂಪಾಂತರಗಳುಂಟು. ಭಾರತದ ಪ್ರಸಿದ್ಧ ಗಜಲ್ ಗಾಯಕರು ಜಗಜೀತ್ ಸಿಂಗ್, ಪಂಕಜ್ ಉಧಾಸ್ ಮೊದಲಾದವರು. ಪಾಕಿಸ್ತಾನದ ಮೆಹದಿ ಹಸನ್ ಮತ್ತು ಗುಲಾಂ ಅಲಿ ಈ ಶೈಲಿಯ ಪ್ರಸಿದ್ದ ಗಾಯಕರು. ಈ ಹಾಡುಗಳ ವಸ್ತು ಶೃಂಗಾರದಿಂದ ಭಕ್ತಿಯವರೆಗೆ ವ್ಯತ್ಯಾಸಗೊಳ್ಳುತ್ತದೆ.

                                     

2.3. ಸಂಗೀತ ಪ್ರಕಾರಗಳು ಖಯಾಲ್

ಇತ್ತೀಚಿನ ವರ್ಷಗಳಲ್ಲಿ ಹಿಂದುಸ್ತಾನಿ ಸಂಗೀತದ ಅತ್ಯಂತ ಜನಪ್ರಿಯ ಪ್ರಕಾರ ಖಯಾಲ್. ಈ ಪ್ರಕಾರದಲ್ಲಿ ಮನೋಧರ್ಮ ಸಂಗೀತದ ಪ್ರಾಮುಖ್ಯತೆ ಇತರ ಪ್ರಕಾರಗಳದ್ದಕ್ಕಿಂತ ಹೆಚ್ಚು. ೧೮ ನೆಯ ಶತಮಾನದಿಂದ ಇತ್ತೀಚೆಗೆ ಜನಪ್ರಿಯವಾದ ಈ ಪ್ರಕಾರದ ಇತ್ತೀಚಿನ ಹಾಡುಗಾರರಲ್ಲಿ ಪ್ರಸಿದ್ಧರಾದವರು ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಮತ್ತಿತರರು.

                                     

2.4. ಸಂಗೀತ ಪ್ರಕಾರಗಳು ತರಾನಾ

ತರಾನಾಗಳು ಕರ್ನಾಟಕ ಸಂಗೀತ ಪದ್ಧತಿಯ ತಿಲ್ಲಾನಾ ಗಳನ್ನು ಹೋಲುವಂತಹ ಕೃತಿಗಳು. ಸಂತೋಷ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುವ ಈ ಕೃತಿಗಳನ್ನು ಸಾಮಾನ್ಯವಾಗಿ ಕಛೇರಿಗಳ ಕೊನೆಯಲ್ಲಿ ಹಾಡಲಾಗುತ್ತದೆ. ಲಯಬದ್ಧವಾದ ಶಬ್ದಪುಂಜಗಳು ಹೆಚ್ಚಿದ್ದು ಪದಗಳ ಬಳಕೆ ಈ ಪ್ರಕಾರದಲ್ಲಿ ಕಡಿಮೆ.

                                     

2.5. ಸಂಗೀತ ಪ್ರಕಾರಗಳು ಠುಮ್ರಿ

೧೯ ನೆಯ ಶತಮಾನದಲ್ಲಿ ಬಳಕೆಗೆ ಬಂದ ಶೃಂಗಾರ ರಸ ಪ್ರಧಾನವಾದ ಕೃತಿಗಳು. ಈ ಕೃತಿಗಳ ಭಾಷೆ ಸಾಮಾನ್ಯವಾಗಿ ಹಿಂದಿಯ ಪೂರ್ವರೂಪವಾದ ಬ್ರಜಭಾಷೆ. ಈ ಪ್ರಕಾರದ ಪ್ರಸಿದ್ಧ ಹಾಡುಗಾರರಲ್ಲಿ ಕೆಲವರೆಂದರೆ ಶೋಭಾ ಗುರ್ಟು, ಬಡೆ ಗುಲಾಮ್ ಅಲಿ ಖಾನ್ ಮತ್ತು ಗಿರಿಜಾ ದೇವಿ.

ಶೆಹನಾಯಿ
                                               

ಶೆಹನಾಯಿ

ಶೆಹನಾಯಿ ಇದು ಒಂದು ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಉಪಯೋಗದಲ್ಲಿರುವ ಒಂದು ಪೀಪಿ ವಾದ್ಯ. ಇದನ್ನು ಮಂಗಳಕರ ಸಂದರ್ಭಗಳಲ್ಲಿ ಬಳಸುತ್ತಾರೆ. ಇದು ಉತ್ತರ ಭಾರತ,ಪಾಕಿಸ್ತಾನ,ಇರಾನ್ ಮುಂತಾದ ದೇಶಗಳಲ್ಲಿ ಬಳಕೆಯಲ್ಲಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →