ⓘ Free online encyclopedia. Did you know? page 89                                               

ಕ್ಯಾಪ್ಸಿಕಂ (ದೊಡ್ಡ ಮೆಣಸಿನಕಾಯಿ)

ಹಣ್ಣಿಗಾಗಿ: ಚಿಲಿ ಪೆಪರ್ದೊಣ್ಣೆ ಮೆಣಸಿನಕಾಯಿಯನ್ನು ನೋಡಿ ಕ್ಯಾಪ್ಸಿಕಂ ಎಂಬುದು ಸೊಲನಾಸಿಯ ಎಂದು ಕರೆಯುವ ಸೊಲೇನಮ್ ಕುಟುಂಬದಲ್ಲಿ ಹೂ ಬಿಡುವ ಸಸ್ಯದ ಜಾತಿಯಾಗಿದೆ. ಇದರ ಜಾತಿಗಳು ಅಮೇರಿಕಾ ಮೂಲದ್ದಾಗಿವೆ. ಇವುಗಳನ್ನು ನೂರಾರು ವರ್ಷಗಳ ಕಾಲ ಅಮೇರಿಕಾದ ಉಷ್ಣವಲಯದ ಜನರು ಬೆಳೆದಿದ್ದಾರೆ. ಅಲ್ಲದೇ ಈಗ ಇವು ...

                                               

ಕ್ಯೂಫಿಯ

ಕ್ಯೂಫಿಯ ಲೈತ್ರೇಸೀ ಕುಟುಂಬದ ಕ್ಯೂಫಿಯ ಮಿನಿಯೇಟ ಎಂಬ ವೈಜ್ಞಾನಿಕ ಹೆಸರಿನ ವಾರ್ಷಿಕ ಸಸ್ಯ. ಇದರ ಹೊಳಪಿನ ಎಲೆಗಳ ಮತ್ತು ನಸುಗೆಂಪು ಹೂವಿನ ಅಲಂಕಾರಕ್ಕಾಗಿ ಈ ಸಸ್ಯ ತೋಟಗಾರಿಕೆಯಲ್ಲಿ ಪ್ರಾಮುಖ್ಯ ಪಡೆದಿದೆ. 12"-15" ಎತ್ತರಕ್ಕೆ ಬೆಳೆಯುವ ಈ ಸಸ್ಯವನ್ನು ಕುಂಡದಲ್ಲಿ ಅಥವಾ ಮಡಿಗಳಲ್ಲಿ ಬೆಳೆಸಬಹುದು.

                                               

ಕ್ರೋಟನ್

ಕ್ರೋಟನ್ - ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸುಂದರ ಹಾಗೂ ಸುಪ್ರಸಿದ್ಧ ಅಲಂಕಾರ ಸಸ್ಯ ಜಾತಿ. ಕೋಡೀಯಂ ವೇರಿಗೇಟಂ ಇದರ ಶಾಸ್ತ್ರೀಯ ನಾಮ. ಇದರಲ್ಲಿ ಅಸಂಖ್ಯಾತ ಬಗೆಗಳಿದ್ದು ಒಂದೊಂದೂ ವರ್ಣ ವೈವಿಧ್ಯಮಯವಾದ ಉಜ್ವಲವಾದ ಎಲೆಗಳನ್ನು ಪಡೆದಿರುವುದರಿಂದ ಇವನ್ನು ಅಂದಕ್ಕಾಗಿ ಉದ್ಯಾನಗಳಲ್ಲಿ ಮನೆ ತೋಟಗ ...

                                               

ಕ್ರ್ಯಾಸ್ಯುಲ

ಕ್ರ್ಯಾಸ್ಯುಲ - ಹೆಸರಾಂತ ಅಲಂಕಾರ ಸಸ್ಯ. ಕ್ರ್ಯಾಸ್ಯುಲೇಸೀ ಕುಟುಂಬಕ್ಕೆ ಸೇರಿದೆ. ಇದಕ್ಕೆ ವಿಚಿತ್ರವಾದ ಹಾಗೂ ಆಕರ್ಷಕವಾದ ಎಲೆಗಳಿರುವುದರಿಂದ ಮತ್ತು ಇದು ಸುಂದರವಾದ ಹೂಗಳನ್ನು ಬಿಡುವುದರಿಂದ ಇದನ್ನು ಕುಂಡಸಸ್ಯ, ಕಲ್ಲೇರಿಸಸ್ಯ ಇತ್ಯಾದಿಯಾಗಿ ಉದ್ಯಾನಗಳಲ್ಲಿ ಬೆಳೆಸಲಾಗುತ್ತದೆ. ಇದರಲ್ಲಿ ಸುಮಾರು 250 ...

                                               

ಕ್ಲಿಯೋಮೀ

ಇದರಲ್ಲಿ ಸುಮಾರು 140ಕ್ಕೂ ಹೆಚ್ಚು ಪ್ರಭೇದಗಳಿವೆ. ಭಾರತದಲ್ಲಿ ಸುಮಾರು 13 ಪ್ರಭೇದಗಳಿವೆ. ಕ್ಲಿ.ಐಕೊಸ್ಯಾಂಡ್ರ ಎಂಬುದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಉದ್ಯಾನ ಪ್ರಾಮುಖ್ಯವಿರುವ ಪ್ರಭೇದಗಳೂ ಇಲ್ಲದಿಲ್ಲ. ಇವುಗಳಲ್ಲಿ ಮುಖ್ಯವಾದವು ಕ್ಲಿಯೋಮೀ ಸ್ಟೈನೋಸ, ಕ್ಲಿ.ಸ್ಪೀಶಿಯೊಸಿಸ್ಸಿಮ ಮತ್ತು ಕ್ಲಿ.ಸೆರುಲೇಟ.

                                               

ಖರ್ಜೂರದ ಮರ

ಖರ್ಜೂರದ ಮರ ವು ಅರಿಕೇಸೀ ಕುಟುಂಬಕ್ಕೆ ಸೇರಿದ ಸುಪ್ರಸಿದ್ಧ ಹಣ್ಣಿನ ಮರ. ತೆಂಗು, ಈಚಲು ಮುಂತಾದ ಮರಗಳಿಗೆ ಬಲು ಹತ್ತಿರದ ಸಂಬಂಧಿ. ಸಸ್ಯಶಾಸ್ತ್ರೀಯ ಹೆಸರು ಫೀನಿಕ್ಸ್ ಡ್ಯಾಕ್ಟೈಲಿಫೆರ. ಇಂಗ್ಲಿಷಿನಲ್ಲಿ ಬಳಕೆಯ ಹೆಸರು ಡೇಟ್ ಪಾಮ್. ಇದರ ಹಣ್ಣನ್ನು ಸಂಸ್ಕøತದಲ್ಲಿ ಪಿಂಡ-ಖರ್ಜೂರ ಎಂದೂ ಕನ್ನಡದಲ್ಲಿ ಖರ್ ...

                                               

ಗಂಧಗರಿಗೆ

ಇದು ಮೆಲಿಯೇಸೀ ಕುಟುಂಬಕ್ಕೆ ಸೇರಿದ್ದು ಟೂನ ಸಿಲಿಯಾಟ Toona ciliataಎಂದು ಸಸ್ಯಶಾಸ್ತ್ರೀಯ ಹೆಸರು.ಆಂಗ್ಲ ಭಾಷೆಯಲ್ಲಿ Red ceader,Indian mahogany ಎಂದೂ ಕರೆಯುತ್ತಾರೆ.ಕನ್ನಡದಲ್ಲಿ ನೊಗೆ,ಬೆಳಂದಿ ಮುಂತಾಗಿ ಹೆಸರುಗಳಿವೆ.

                                               

ಗಜನಿಂಬೆ

ನಿಂಬೆಯನ್ನು ಹೋಲುವುದಾದರೂ ಹಣ್ಣಿನ ಗಾತ್ರದಲ್ಲಿ ನಿಂಬೆಗಿಂತ ದಪ್ಪ. ಮರವೊ ಹೆಚ್ಚು ದಪ್ಪುಪುಷ್ಟ. ಹಣ್ಣಿನಲ್ಲಿ ಸಿಪ್ಪೆ ಸಡಿಲವಾಗಿಲ್ಲ. ಹಣ್ಣಿನ ರುಚಿ ಹುಳಿ ಇಲ್ಲವೆ ಕೊಂಚ ಒಗರು ; ಆಕಾರ ಅಂಡದಂತೆ ; ತುದಿ ಚೂಚುಕದಂತೆ ಮುಂಚಾಚಿದೆ. ಇದು 10-20 ಎತ್ತರ ಬೆಳೆಯುತ್ತದೆ. ಇದರಲ್ಲಿ ಗಟ್ಟಿಯಾದ ಮುಳ್ಳುಗಳಿವೆ ...

                                               

ಗಜ್ಜರಿ

ಗಜ್ಜರಿ ಯು ಕ್ಯಾರಟ್ ಡಾಕಸ್ ಕ್ಯಾರೋಟಾ ಉಪಜಾತಿ. ಸಟೈವಸ್ ಸಾಮಾನ್ಯವಾಗಿ ಕಿತ್ತಳೆ, ನೇರಳೆ, ಕೆಂಪು, ಬಿಳಿ, ಅಥವಾ ಹಳದಿ ಬಣ್ಣವುಳ್ಳ, ತಾಜಾ ಇದ್ದಾಗ ಗರಿಗರಿ ರಚನೆ ಹೊಂದಿರುವ ಒಂದು ಗಡ್ಡೆ ತರಕಾರಿ. ಗಜ್ಜರಿಯ ತಿನ್ನಲರ್ಹವಾದ ಭಾಗವು ಒಂದು ತಾಯಿಬೇರಾಗಿದೆ. ಅದು ಯೂರಪ್ ಮತ್ತು ನೈಋತ್ಯ ಏಷ್ಯಾಕ್ಕೆ ಸ್ಥಳೀ ...

                                               

ಗಣಗಲೆ ಹೂ

ಗಣಗಿಲೆ ಅಥವಾ ಕಣಗಿಲೆ ಹೂ ಜನ ಸಾಮಾನ್ಯರ ಹೂ. ಇದು ಗ್ರಾಮೀಣ ಪ್ರದೇಶದಲ್ಲಿ, ತೊರೆ, ಹಳ್ಳಗಳ ಮಗ್ಗುಲಲ್ಲಿ ಒತ್ತೊತ್ತಾಗಿ ಅಥವಾ ಹಿಂಡು ಹಿಂಡಾಗಿ ಬೆಳೆಯುತ್ತದೆ. ಶುಭಕಾರ್ಯಗಳಿಂದ ಹಿಡಿದು ಸಾವಿನ ಮನೆಯವರೆಗೂ ಇದರ ಬಳಕೆಯಾಗುತ್ತದೆ.

                                               

ಗಣಿಗಲ ತೋರ

ಸಮುದ್ರ ತೀರ ಪ್ರದೇಶದ ಚೌಗು ಕಾಡುಗಳಲ್ಲಿ,ಅಳಿವೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.ಮೊಜಾಂಬಿಕ್, ದಕ್ಷಿಣ ಆಫ್ರಿಕದಿಂದ ಹಿಡಿದು,ಭಾರತ,ಶ್ರೀಲಂಕಾ,ಮಲೇಷಿಯಾ,ಚೀನಾ,ಲಾವೋಸ್ ಮತ್ತು ಆಸ್ಟ್ರೇಲಿಯ ಸಮುದ್ರ ತೀರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ದಕ್ಷಿಣ ಆಫ್ರಿಕ ದೇಶದಲ್ಲಿ ಇದು ಸಂರಕ್ಷಿತ ಸಸ್ಯವಾಗಿದೆ. ಸ್ವಾ ...

                                               

ಗರಿಕೆಹುಲ್ಲು

ಗರಿಕೆಹುಲ್ಲು / ದೂರ್ವ ಪೋಯೇಸೀ ಕುಟುಂಬಕ್ಕೆ ಸೇರಿದ ಸೈನೊಡಾನ್ ಡ್ಯಾಕ್ಟಿಲಾನ್ ಎಂಬ ವೈಜ್ಞಾನಿಕ ಹೆಸರಿನ ಒಂದು ಬಹುವಾರ್ಷಿಕ ಹುಲ್ಲು ಗಿಡ. ಕುಡಿಗರಿಕೆ. ಪರ್ಯಾಯ ನಾಮ. ಬರ್ಮ್ಯುಡ ಹುಲ್ಲು, ಬಹಾಮ ಹುಲ್ಲು ಎಂಬ ಹೆಸರುಗಳೂ ಇವೆ. ಇದನ್ನೆ ಬಹುವಾಗಿ ಹೋಲುವ ಇನ್ನಿತರ ಸುಮಾರು 10 ಬಗೆಯ ಹುಲ್ಲುಗಳಿವೆ. ಇವಕ್ ...

                                               

ಗರುಡಫಲ

ಸುಮಾರು 50ಮೀ ಎತ್ತರಕ್ಕೆ ಬೆಳೆಯುವ ಮರ ಇದು. ಕಂದುಬಣ್ಣದ ತೊಗಟೆ, ಗರಗಸದಂಥ ಅಂಚುಳ್ಳ ನೀಳವಾದ ಎಲೆಗಳು, ಹಸುರು ಮಿಶ್ರಿತ ಬಿಳಿಬಣ್ಣದ ಚಿಕ್ಕ ಗಾತ್ರದ ಹೂಗಳು, ಲಿಂಗಭಿನ್ನತೆ-ಇವು ಈ ಮರದ ಮುಖ್ಯ ಲಕ್ಷಣಗಳು. ಬೀಜಗಳು ಅಂಡಾಕೃತಿಯಲ್ಲಿವೆ. ಅವುಗಳಲ್ಲಿ ಒಂದು ವಿಶೇಷ ಬಗೆಯ ಎಣ್ಣೆ ಉಂಟು, ಇದಕ್ಕೆ ಹಿಡ್ನೊಕಾರ ...

                                               

ಗಲಗು

ಗಲಗು-ಸೋರ್ಗಂ ಹ್ಯಾಲಪೆನ್ಸ್ ಎಂಬ ವೈಜ್ಞಾನಿಕ ಹೆಸರಿನ ಏಕದಳ ಸಸ್ಯ. ಪೋಯೇಸೀ ಕುಟುಂಬಕ್ಕೆ ಸೇರಿದೆ. ಯುರೋಪು ಮತ್ತು ಆಫ್ರಿಕದ ಮೆಡಿಟರೇನಿಯನ್ ಪ್ರದೇಶಗಳ ಮೂಲನಿವಾಸಿಯಾದ ಈ ಸಸ್ಯವನ್ನು ಮೊಟ್ಟಮೊದಲು ಕರ್ನಲ್ ಜಾನ್ಸನ್ ಎಂಬಾತ ತಂದು ಬೆಳೆಸಿದ್ದರಿಂದ ಇದನ್ನು ಜಾನ್ಸನ್ ಹುಲ್ಲು ಎಂದೂ ಕರೆಯುವುದುಂಟು. ದಪ್ಪ ...

                                               

ಗಸಗಸೆ

ಗಸಗಸೆ ಪ್ರಾಚೀನ ಕಾಲದಿಂದಲೂ ಬೆಳೆಸಲ್ಪಡುತ್ತಿರುವ ಒಂದು ಸಸ್ಯ. ಕಳೆಯ ಪಟ್ಟದಿಂದ ಬೆಳೆಯ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಬಹಳ ಹಿಂದಿನ ಕಾಲದಿಂದ ಮೆಡಿಟರೇನಿಯನ್ ಪ್ರದೇಶಗಳು, ಮಧ್ಯ ಪ್ರಾಚ್ಯ, ಭಾರತ, ರಷ್ಯಾ ದೇಶಗಳಲ್ಲಿ ಇದರ ವ್ಯವಸಾಯ ಇದೆ.

                                               

ಗಸಗಸೆ ಹಣ್ಣಿನ ಮರ

ಗಸಗಸೆ ಹಣ್ಣಿನ ಮರ ಟೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮಧ್ಯಮಗಾತ್ರದ ಮರ. ಇದರ ಹಣ್ಣಿನಲ್ಲಿ ಗಸಗಸೆ ಬೀಜವನ್ನು ಹೋಲುವ ನೂರಾರು ಬೀಜಗಳು ಇರುವುದರಿಂದ ಇದಕ್ಕೆ ಈ ಹೆಸರು. ಇದನ್ನು ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಸಿಂಗಪುರ ಚೆರಿ ಅಥವಾ ಜಪಾನೀಸ್ ಚೆರಿ ಎನ್ನಲಾಗುತ್ತದೆ. ಮುಂಟಿಂಜಿಯ ಕ್ಯಾಲಬುರ ಶಾಸ್ತ್ ...

                                               

ಗಾಂಜಾಗಿಡ

ಗಾಂಜಾಗಿಡ ಕ್ಯಾನಬಿನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ; ವೈಜ್ಞಾನಿಕ ನಾಮ ಕ್ಯಾನಬಿಸ್ ಸೇಟಿವ. ಪರ್ಯಾಯನಾಮ ಭಂಗಿ, ಹೆಂಪ್, ಸಾಫ್ಟ್ ಹೆಂಪ್ ಮುಂತಾದವು ಇಂಗ್ಲಿಷಿನ ಬಳಕೆಯ ಹೆಸರುಗಳು. ಈ ಸಸ್ಯ ಮೂಲತಃ ಹಿಮಾಲಯದ ಉತ್ತರಪ್ರದೇಶದ್ದು ಎಂದು ಹೇಳಲಾಗಿದೆ. ಪ್ರ.ಶ.ಪು. 2800ರಲ್ಲೇ ಚೀನೀಯರು ಈ ಗಿಡದ ನಾರನ್ನು ...

                                               

ಗಾಳಿಮರ

ಗಾಳಿಮರ ಕ್ಯಾಜಂಯಾರೈನೇಸೀ ಕುಟುಂಬಕ್ಕೆ ಸೇರಿದ ಒಂದು ಚೆಲುವಾದ ಮರ. ಸರ್ವೆಮರ ಪರ್ಯಾಯನಾಮ. ಕ್ಯಾಜ್ಯುಂಯಾರೈನ ಎಕ್ವಿಸಿಟಿಫೋಲಿಯ ಇದರ ವ್ಶೆಜ್ಞಾನಿಕ ಹೆಸರು. ಇದರ ಪುಟ್ಟರೆಂಬೆಗಳು ಕ್ಯಾಸೊವರಿ ಹಕ್ಕಿಯ ಪುಕ್ಕಗಳನ್ನು ಹೋಲುತ್ತವೆ ಎಂಬ ಕಾರಣದಿಂದ ಬಹುಶಃ ಈ ವ್ಶೆಜ್ಞಾನಿಕ ಹೆಸರು ಬಂದಿರಬೇಕು. ಸಾಮಾನ್ಯ ಬಳಕ ...

                                               

ಗಿಂಕ್ಗೊ ಬಿಲೋಬ

ಗಿಂಕ್ಗೊ ಬದುಕಿರುವ ಯಾವುದೇ ಹತ್ತಿರದ ಸಂಬಂಧಗಳಿಲ್ಲದ ಒಂದು ಭಿನ್ನ ಜಾತಿಯ ಮರವಾಗಿದೆ. ಗಿಂಗ್ಕೊ ಎಂದೂ ಉಚ್ಛರಿಸಲಾಗುವ ಇದನ್ನು ಆಡಿಯಾಂಟಮ್ ನ ನಂತರ ಮೈಡೆನ್ಹೇರ್ ಮರ ಎಂದೂ ಕರೆಯುತ್ತಾರೆ. ಗಿಂಕ್ಗೊವನ್ನು ಅದರ ಸ್ವಂತ ವಿಭಾಗ ಗಿಂಕ್ಗೊಫೈಟದಲ್ಲಿ ವರ್ಗೀಕರಿಸಲಾಗಿದೆ. ಇದು ಗಿಂಕ್ಗೋಪ್ಸಿಡ ವರ್ಗ, ಗಿಂಕ್ಗೋ ...

                                               

ಗಿಜಿಗಿಜಿ ಗಿಡ

ಬೀಳುಭೂಮಿ, ಪಾಳುಜಾಗ, ರಸ್ತೆಬದಿಗಳಲ್ಲಿ ಬೆಳೆಯುವ ಕಳೆಗಿಡದಂತೆ ಕಾಣುವ ಸಸ್ಯ, ಕ್ರೋಟಾರಿಯ ಪಲ್ಲಿಡ ಇದರ ಸಸ್ಯಶಾಸ್ತ್ರೀಯ ಹೆಸರು. ಇದನ್ನು rattlepod ಎಂದು ಇಂಗ್ಲೀಷಿನಲ್ಲಿ ಕರೆಯುತ್ತಾರೆ.

                                               

ಗಿನಿ ಹುಲ್ಲು

1.3-3 ಮೀ ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಹುಲ್ಲು ಇದು. ಹಲವಾರು ಬಗೆಯ ಮಣ್ಣಿನಲ್ಲೂ ವಾಯುಪರಿಸ್ಥಿತಿಗಳಲ್ಲೂ ಬೆಳೆಯಬಲ್ಲ ಸಾಮರ್ಥ್ಯ ಇದಕ್ಕೆ ಇದೆ. ಆದರೆ ಮಣ್ಣಿನಲ್ಲಿ ನೀರು ನಿಲ್ಲುವಂತಿರಬಾರದು. ಇದು ಚಳಿಯನ್ನು ತಡೆಯಲಾರದು. ಬೀಜ ಇಲ್ಲವೆ ಬೇರು ತುಂಡುಗಳಿಂದ ಇದನ್ನು ವೃದ್ಧಿಸಬಹುದು. ಬೀಜ ಬಿತ್ತಿದ ...

                                               

ಗುಗ್ಗುಳ ಧೂಪ

ಗುಗ್ಗುಳ ಧೂಪ ಒಂದು ಮದ್ಯಮ ಪ್ರಮಾಣದ ಪರ್ಣಪಾತಿ ಮರ.ಕರ್ನಾಟಕದ ಶುಷ್ಕ ವಾತಾವರಣದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಗುಗ್ಗುಳದ ಮರ ಬರ್ಸೆರೇಸೀ ಕುಟುಂಬಕ್ಕೆ ಸೇರಿದ ಬಾಸ್ವೆಲಿಯ ಸೆರ್ರೇಟ ಎಂಬ ವೈಜ್ಞಾನಿಕ ಹೆಸರುಳ್ಳ ಒಂದು ಮರ. ಮಡ್ಡಿ ಮರ ಇದರ ಪರ್ಯಾಯ ಹೆಸರು. ಭಾರತದಲ್ಲಿ ಬಿಹಾರ, ಒಡಿಶಾ, ರಾಜಾಸ್ತಾನ ಮ ...

                                               

ಗುಪ್ಪಟ್ಟೆ ಗಿಡ

ಗುಪ್ಪಟ್ಟೆ ಗಿಡ ರಸ್ತೆಬದಿ ಹಾಗೂ ಖಾಲಿ ಜಾಗದಲ್ಲಿ ಹೆಚ್ಚಾಗಿ ಕಂಡುಬರುವ ಸಸ್ಯ. ಇದು ಸೊಲನೇಶಿಯೆ ಕುಟುಂಬಕ್ಕೆ ಸೇರದೆ. ಇದರ ವೈಜ್ಞಾನಿಕ ಹೆಸರು ಪೈಸೇಲಿಯ ಮಿನಿಮ. ಸಾಮಾನ್ಯವಾಗಿ ಕನ್ನಡದಲ್ಲಿ ಗದ್ದೆ ಹಣ್ಣಿನ ಗಿಡ ಹಾಗೂ ಆಂಗ್ಲ ಭಾಷೆಯಲ್ಲಿ ನೇಟಿವ್ ಗೂಸ್ಬೆರ್ರಿ ಮತ್ತು ಫೋರೆಸ್ಟ್ ಕ್ರೇಪ್ ಗೂಸ್ಬೆರ್ರಿ ಎ ...

                                               

ಗುರೆಳ್ಳು

ಹುಚ್ಚೆಳ್ಳು, ಕಾರೆಳ್ಳು, ಖುರಾಸಾನಿ ಪರ್ಯಾಯ ನಾಮಗಳು. ಇಂಗ್ಲೀಷಿನ ನೈಜರ್ ಎಂದು ಕರೆಯಲಾಗುತ್ತದೆ. ಗೈಜೋóಶಿಯ ಅಬಿಸೀನಿಕ ಇದರ ಶಾಸ್ತ್ರೀಯ ಹೆಸರು. ಆಫ್ರಿಕದ ಉಷ್ಣವಲಯದ ಮೂಲವಾಸಿ. ಇದನ್ನು ಎಣ್ಣೆಗೋಸ್ಕರ ಆಫ್ರಿಕ ಮತ್ತು ಭಾರತದಲ್ಲಿ ಬೆಳೆಸುತ್ತಾರೆ.

                                               

ಗುಲಗಂಜಿ

ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು ಕೆಂಪು ಬಣ್ಣದ ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿನ ತುದಿಯಲ್ಲಿ ಕಪ್ಪು ಚುಕ್ಕೆಯಿರುವ ಸಣ್ಣ ಬೀಜವೇ ಗುಲಗಂಜಿ. ಅಕ್ಕಸಾಲಿಗರು ಹಿಂದಿನ ಕಾಲದಲ್ಲಿ ಬಂಗಾರವನ್ನು ತೂಕಮಾಡಲು ಗುಲಗಂಜಿಯ ಬೀಜಗಳನ್ನು ಬಳಸುತ್ತಿದ್ದರು.ಈಗಲೂ ಗ್ರಾಮೀಣ ಪ್ರದೇಶದಲ್ಲಿ ಚಿನ್ನ ತೂಕ ಮ ...

                                               

ಗುಲಾಬಿ

ಟೆಂಪ್ಲೇಟು:Redirectshere ಟೆಂಪ್ಲೇಟು:Redirectshere ಗುಲಾಬಿ ಯು ರೋಸೇಸಿ ವಂಶದೊಳಗೆ ಬರುವ ರೋಸಾ ಕುಲದ ಒಂದು ದೀರ್ಘಕಾಲಿಕ, ಹೂವಿನ ಪೊದೆಸಸ್ಯ ಅಥವಾ ಬಳ್ಳಿಯಾಗಿದ್ದು, ಅದು 100ಕ್ಕೂ ಹೆಚ್ಚಿನ ಜಾತಿಗಳನ್ನು ಒಳಗೊಂಡಿದೆ ಹಾಗೂ ವೈವಿಧ್ಯಮಯ ಬಣ್ಣಗಳಲ್ಲಿ ದೊರೆಯುತ್ತದೆ. ನೆಟ್ಟಗೆ ನಿಲ್ಲುವ ಪೊದೆಸಸ್ಯಗ ...

                                               

ಗುಲ್ಮಹರ್

ಗುಲ್ಮಹರ್ ಒಂದು ಅಲಂಕಾರಿಕ ಸಸ್ಯವಾಗಿ ಕರ್ನಾಟಕದಲ್ಲಿ ಪರಿಚಿತ.ಮಡಗಾಸ್ಕರ್ಇದರ ತೌರು.ಮಡಗಾಸ್ಕರಿನ ಮೂಲವಾಸಿಯಾದ ಈ ಮರ ಭಾರತಕ್ಕೆ ಸು. 100-125 ವರ್ಷಗಳ ಹಿಂದೆ ಬಂತೆಂದು ಹೇಳಲಾಗಿದೆ.ಹೆಚ್ಚು ಕಡಿಮೆ ಪ್ರಪಂಚದಲ್ಲಿ ಉಷ್ಣವಲಯವಾತಾವರಣ ಇರುವೆಡೆಯಲ್ಲೆಲ್ಲಾ ಬೆಳೆಯುತ್ತದೆ.

                                               

ಗುಳುಮಾವು

ಗುಳುಮಾವು ಲಾರೇಸೀ ಕುಟುಂಬಕ್ಕೆ ಸೇರಿದ ಒಂದು ನಿತ್ಯಹರಿದ್ವರ್ಣದ ಮರ. ಮ್ಯಾಕಿಲಸ್ ಮ್ಯಾಕ್ರಾಂತ ಅಥವಾ ಪರ್ಸಿಯ ಮ್ಯಾಕ್ರಾಂತ ಇದರ ಶಾಸ್ತ್ರೀಯ ಹೆಸರು. ಚಿಟ್ಟುತಂಡ್ರಿ ಮರ ಇದರ ಪರ್ಯಾಯನಾಮ.

                                               

ಗೆಡ್ಡೆ

ಗೆಡ್ಡೆ ಕಾಂಡದ ಒಂದು ಬಗೆಯ ಮಾರ್ಪಾಟು: ನೆಲದೊಳಗೇ ಹುದುಗಿ ಬೆಳೆಯುತ್ತದೆ. ಆಹಾರ ಸಂಗ್ರಹಣೆ ಇದರ ಮುಖ್ಯಕಾರ್ಯ. ಇದರಿಂದಾಗಿ ಇದು ಸಾಮಾನ್ಯವಾಗಿ ದಪ್ಪವಾಗಿಯೂ ರಸಭರಿತವಾಗಿಯೂ ಇರುತ್ತದೆ. ಸಸ್ಯಗಳ ಸಂತಾನಾ ಭಿವೃದ್ಧಿಯಲ್ಲೂ ಇದು ಪಾಲುಗೊಳ್ಳುತ್ತದೆ. ಗೆಡ್ಡೆಯ ಬಾಹ್ಯ ರೂಪ ಕಾಂಡದ ರಚನೆಗಿಂತ ಎಷ್ಟು ಭಿನ್ನವ ...

                                               

ಗೆಣಸಿನ ಕುಟುಂಬ

ಗೆಣಸಿನ ಕುಟುಂಬ ಸಿಂಪೆಟಲೀ ಗುಂಪಿಗೆ ಸೇರಿದ ಒಂದು ಕುಟುಂಬ. ಇದರಲ್ಲಿ ಸುಮಾರು 50 ಜಾತಿಗಳಿವೆ. ಸುಮಾರು 21 ಜಾತಿಗಳು ದಕ್ಷಿಣ ಭಾರತದ ವನ್ಯ ಪ್ರದೇಶಗಳಲ್ಲಿ ಬೆಳೆಯುತ್ತವೆ. ಇವುಗಳಲ್ಲಿ ಕೆಲವನ್ನು ಉದ್ಯಾನಗಳಲ್ಲಿ ಬೆಳೆಸುವುದುಂಟು. ಇವು ಸಾಮಾನ್ಯವಾಗಿ ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಸಸ್ಯಗಳು. ಈ ಕುಟ ...

                                               

ಗೊಡೀಷಿಯ

ಗೊಡೀಷಿಯ ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸಲಾಗುವ ಒಂದು ಏಕವಾರ್ಷಿಕ ಸಸ್ಯಜಾತಿ. ಆನಗ್ರೇಸೀ ಕುಟುಂಬಕ್ಕೆ ಸೇರಿದೆ. ಸ್ವಿಟ್ಜರ್ಲೆಂಡಿನ ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಸಿ.ಎಚ್.ಗೊಡೆಟ್ ಎಂಬವನ ಗೌರವಾರ್ಥವಾಗಿ ಗಿಡಕ್ಕೆ ಈ ಹೆಸರನ್ನು ಇಡಲಾಗಿದೆ.

                                               

ಗೊಡ್ಡು ಈಚಲು

ಗೊಡ್ಡು ಈಚಲು ಜಿಮ್ನೋಸ್ಪರ್ಮೀ ವರ್ಗ, ಸೈಕಡೇಲೀಸ್ ಗಣ, ಸೈಕಡೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಮಂಡೀಚಲು ಇದರ ಪರ್ಯಾಯ ನಾಮ. ಸೈಕ್ಯಾಸ್ ವೈಜ್ಞಾನಿಕ ಹೆಸರು. ಪ್ರಪಂಚದ ಉಷ್ಣ ಹಾಗೂ ಉಪೋಷ್ಣವಲಯಗಳಲ್ಲಿ ಹಬ್ಬಿರುವ ಸುಮಾರು 20 ಪ್ರಭೇದಗಳನ್ನು ಇದು ಒಳಗೊಂಡಿದೆ. ಭಾರತದಲ್ಲಿ ಸರ್ಸಿನ್ಯಾಲಿಸ್, ರೆವಲ ...

                                               

ಗೊಡ್ಡುಗೇರು ಮರ

ಗೊಡ್ಡುಗೇರು ಮರ ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಪರ್ಣಪಾತಿವೃಕ್ಷ. ಸೆಮಿಕಾರ್ಪಸ್ ಅನಕಾರ್ಡಿಯಮ್ ವೈಜ್ಞಾನಿಕ ಹೆಸರು. ಭಾರತಾದ್ಯಂತ ಸ್ವಾಭಾವಿಕವಾಗಿ ಬೆಳೆಯುತ್ತದೆ. ಗುಡ್ಡೆ ಗೇರುಮರ ; ಗುಡ್ಡ=ಸಣ್ಣ ಬೆಟ್ಟ,ಗುಡ್ಡೆ=ಕಾಡು, wild Anacardium giganteum

                                               

ಗೊಡ್ಡೆ

ಗೊಡ್ಡೆ ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ಕಾಡುಮರ. ಊದಿಮರ, ಉಡೀಮರ, ಸಿಂಟೆಮರ ಪರ್ಯಾಯನಾಮಗಳು. ಇಂಗ್ಲಿಷಿನಲ್ಲಿ ಇಂಡಿಯನ್ ಆಷ್‍ಟ್ರೀ ಎಂದು ಕರೆಯಲಾಗುತ್ತದೆ. ಲ್ಯಾನಿಯ ಕೋರೊಮ್ಯಾಂಡಲಿಕ ಇದರ ವೈಜ್ಞಾನಿಕ ಹೆಸರು. ಭಾರತಾದ್ಯಂತ ಇದರ ವ್ಯಾಪ್ತಿ ಇದೆ. ಇದು ಅಂಡಮಾನ್ ದ್ವೀಪಗಳಲ್ಲೂ ಕಾಣದೊ ...

                                               

ಗೊದ್ದನಮರ

ಗೊದ್ದನಮರ ಬರ್ಸರೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಅರೆನೆಲ್ಲಿ, ಬೋಳಮಟೆ, ಹಾಲಉಲಿಗೆ ಇದರ ಪರ್ಯಾಯ ನಾಮಗಳು. ಗಾರುಗ ಪಿನೇಟ ವೈಜ್ಞಾನಿಕ ಹೆಸರು. ಭಾರತಾದ್ಯಂತ ಮಿಶ್ರಪರ್ಣಪಾತಿ ಕಾಡುಗಳಲ್ಲಿ ತೇಗ ಮತ್ತು ಸಾಲ ವೃಕ್ಷಗಳ ಜೊತೆಯಲ್ಲಿ ಕಂಡುಬರುತ್ತದೆ. ಆಗ್ನೇಯ ಏಷ್ಯ ಮತ್ತು ಪೆಸಿಫಿಕ್ ಸಾಗರದ ಕೆಲವು ದ ...

                                               

ಗೋಡಂಬಿ

ಗೋಡಂಬಿ ಯು ಅನಾಕಾರ್ಡಿಯೇಸಿ ಎಂಬ ಹೂಬಿಡುವ ಸಸ್ಯ ವಂಶದಲ್ಲಿನ ಒಂದು ದ್ವಿದಳ ಧಾನ್ಯ ಸಸ್ಯದ ಬೀಜಕೋಶವಾಗಿದೆ. ಇದರ ಸಸ್ಯವು ಈಶಾನ್ಯ ಬ್ರೆಜಿಲ್‌‌‌ಗೆ ಸ್ಥಳೀಕವಾಗಿದೆ. ಗೋಡಂಬಿ ಮರದ ಹಣ್ಣಿಗಾಗಿರುವ ಪೋರ್ಚುಗೀಸ್‌ ಹೆಸರಾಗಿರುವ ಕಾಜು ಎಂಬುದರಿಂದ ಇದರ ಇಂಗ್ಲಿಷ್‌ ಹೆಸರು ಜನ್ಯವಾಗಿದೆ; ಕಾಜು ಎಂಬ ಹೆಸರು ಸ್ ...

                                               

ಗೋಧಿ

ಪ್ರಪಂಚ ಎಲ್ಲೆಡೆ ಬಳಕೆಯಲ್ಲಿರುವ ಒಂದು ಏಕದಳ ಧಾನ್ಯ. ಪ್ರಪಂಚ ಅತ್ಯಂತ ಹೆಚ್ಚು ಬೆಳೆಸುವ ದಾನ್ಯಗಳಲ್ಲಿ ಮೂರನೆಯದ್ದು. ವಾರ್ಷಿಕ ಉತ್ಪಾದನೆ ಸುಮಾರು ೬೫೧ ಮಿಲಿಯನ್ ಟನ್‍ಗಳು.೨೦೧೦. ಜೋಳ ಮತ್ತು ಅಕ್ಕಿ ಗಿಂತ ಹೆಚ್ಚು ಪ್ರೋಟೀನ್‍ನ್ನು ಹೊಂದಿರುವ ಇದು ಜಗತ್ತಿನ ಜನರಿಗೆ ಸಸ್ಯ ಜನ್ಯ ಪ್ರೋಟೀನ್ ಒದಗಿಸುವ ಒ ...

                                               

ಗೋರಂಟಿ

ಗೋರಂಟಿ ಲಿತ್ರೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಮದರಂಗಿ ಪರ್ಯಾಯನಾಮ. ಇದರ ಶಾಸ್ತ್ರೀಯ ಹೆಸರು ಲಾಸೋನಿಯ ಇನರ್ಮಿಸ್. ಇಂಗ್ಲಿಷಿನಲ್ಲಿ ಇದನ್ನು ಹೆನ ಎಂದು ಕರೆಯಲಾಗುತ್ತದೆ. ಇದು ಉತ್ತರ ಆಫ್ರಿಕ ಹಾಗೂ ನೈರುತ್ಯ ಏಷ್ಯದ ಮೂಲವಾಸಿ. ಇದನ್ನು ಅಲಂಕಾರಕ್ಕಾಗಿಯೂ ಇದರಿಂದ ಪಡೆಯಲಾಗುವ ಬಣ್ಣಕ್ಕಾಗಿಯೂ ಬೆಳೆ ...

                                               

ಗೋರಿಕಾಯಿ

ಗೋರಿಕಾಯಿ ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ. ಚವಳೀಕಾಯಿ ಪರ್ಯಾಯನಾಮ. ಸಯಮಾಪ್ಸಿಸ್ ಟೆಟ್ರಗೋನೊಲೋಬ ಇದರ ಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಕ್ಲಸ್ಟರ್ ಬೀನ್ಸ್‌ ಎಂದು ಕರೆಯಲಾಗುತ್ತದೆ. ಗೋರಿಕಾಯಿ ಭಾರತದ ಮೂಲವಾಸಿ ಎಂದು ಹೇಳಲಾಗಿದೆ. ಕಾಡುಗಿಡವಾಗಿ ಇದ ...

                                               

ಚಹಾ

ಚಹಾ ವು ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ಸಸ್ಯದ ಎಲೆಗಳು, ಎಲೆಯ ಮೊಗ್ಗುಗಳು, ಹಾಗೂ ಅಂತರಗೆಣ್ಣುಗಳ ವ್ಯಾವಸಾಯಿಕ ಉತ್ಪನ್ನವಾಗಿದ್ದು ಹಲವಾರು ವಿಧಾನಗಳಿಂದ ಇದು ತಯಾರಿಸಲ್ಪಡುತ್ತದೆ ಮತ್ತು ಹದಗೊಳಿಸಲ್ಪಡುತ್ತದೆ. ಬಿಸಿಯಾಗಿರುವ ಅಥವಾ ಕುದಿಯುತ್ತಿರುವ ನೀರಿಗೆ ಹದಗೊಳಿಸಲಾದ ಅಥವಾ ಸಂಸ್ಕರಿಸಲಾದ ಎಲೆ ...

                                               

ಚಿಕ್ಕಿಸೊಪ್ಪು

ಇದು ಮೃದುವಾದ ಕಾಂಡವನ್ನು ಹೊಂದಿದ್ದು,ಭೂಮಿಯ ಮೇಲೆ ತೆವಳುತ್ತಾ ಸಾಗುವ ಒಂದು ಬಳ್ಳಿ. ಎಲೆಯ ಸಸಿಗಳು ನೆಟ್ಟಗೆ ಬೆಳೆಯುತ್ತವೆ. ಕಾಂಡಗಳು ಕೋನಗಳನ್ನು ಹೊಂದಿರುತ್ತವೆ. ಎಲೆಗಲು ಅಂಡಾಕಾರ ಅಥಾವ ವಜ್ರಾಕೃತಿಯಲ್ಲಿದ್ದು ಮಂದವಾದ ತೊಟ್ಟು ಹೊಂದಿರುತ್ತವೆ. ಹೂಗಳ ಹೊರಭಾಗ ಹಸಿರಾಗಿದ್ದು, ಒಳಭಾಗ ಹಸಿರು ಮಿಶ್ರಿ ...

                                               

ಚೀಯಾ

ಚೀಯಾ ಪುದೀನ ಕುಟುಂಬವಾದ ಲೇಮಿಯೇಸಿಯಿಯಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ, ಮತ್ತು ಮಧ್ಯ ಹಾಗೂ ದಕ್ಷಿಣ ಮೆಕ್ಸಿಕೊ ಹಾಗೂ ಗ್ವಾಟೆಮಾಲಾಕ್ಕೆ ಸ್ಥಳೀಯವಾಗಿದೆ. ಚೀಯಾ ೧.೭೫ ಮಿ. ನಷ್ಟು ಎತ್ತರಕ್ಕೆ ಬೆಳೆಯುವ ಒಂದು ವಾರ್ಷಿಕ ಮೂಲಿಕೆ ಮತ್ತು ೪-೮ ಸೆ.ಮಿ. ಉದ್ದ ಹಾಗೂ ೩-೫ ಸೆ.ಮಿ. ಅಗಲವಾದ ಅಭಿಮುಖ ಎಲೆಗ ...

                                               

ಚೊಗಚೆ

ಚೊಗಚೆ ಅಥವಾ ಅಗಸೆ ಎಂದು ಕರೆಯಲಾಗುವ ಈ ಮರ ಸಣ್ಣಗಾತ್ರದ ಮರ.ಇದು ವೇಗವಾಗಿ ಬೆಳಯುವ ಮರ.ಇದುಫೇಬೇಸಿಕುಟುಂಬಕ್ಕೆ ಸೇರಿದ ಮರ. ಸೆಸ್ಬೇನಿಯಾ ಗ್ರಾಂಡಿಫ್ಲೋರ ಎನ್ನುವ ಹಸರು ಈ ಮರದ ಸಸ್ಯಶಾಸ್ತ್ರದ ಹೆಸರು.ಇದರ ಕಾಂಡ ನೆಟ್ಟಗಿರುತ್ತದೆ.ಎರಡು ವರ್ಷಗಳಲ್ಲಿ ಸುಮಾರು ೬ ಮೀ. ಬೆಳೆಯುತ್ತದೆ.

                                               

ಜಂಬೆ

ಇದು ಲೆಗುಮಿನೋಸೆ ಕುಟುಂಬದ ಮಿಮೋಸಿಯೆ ಉಪ ಕುಟುಂಬದಲ್ಲಿದೆ.ಸಸ್ಯಶಾಸ್ಟ್ರೀಯ ಹೆಸರು ಕ್ಸೈಲಿಯ ಕ್ಸೈಲೋಕಾರ್ಪ ಎಂದಾಗಿದೆ.ತುಳು ಬಾಷೆಯಲ್ಲಿ ತಿರುವೆ ಎಂದು ಕರೆಯುತ್ತಾರೆ.Iron wood ಕೆಲವು ಕಡೆ ಕರೆಯುತ್ತಾರೆ.

                                               

ಜಪಪುಷ್ಪ

ಜಪಪುಷ್ಪಇದರ ವೈಜ್ಞಾನಿಕ ಹೆಸರು ಹೈಬಿಸ್ಕಸ್ ರೊಸ-ಸಿನೆನ್ಸಿಸ್. ಆಡುಮಾತಿನಲ್ಲಿಚೀನೀ ದಾಸವಾಳ, ಚೀನಾ ಗುಲಾಬಿ, ಹವಾಯಿಯನ್ ದಾಸವಾಳ,ಮ್ಯಾಲೋ ಗುಲಾಬಿಎಂದುಕರೆಯಲಾಗುತ್ತದೆ. ಇದು ಉಷ್ಣವಲಯದಲ್ಲಿ ಬೆಳೆಯುವ ಹೂಬಿಡುವ ಸಸ್ಯವಾಗಿದೆ. ಜಪಪುಷ್ಪವನ್ನು 1753ರಲ್ಲಿ ಕಾರ್ಲ್‍ಲಿನ್ನಿಯಸ್‍ ಅವರ ಸ್ಪೀಸೀಸ್ ಪ್ಲಾಂಟರಮ ...

                                               

ಜಲವಾಸಿ ಸಸ್ಯಗಳು

ಜಲವಾಸಿ ಸಸ್ಯ ಗಳನ್ನು, ನೀರಿನಲ್ಲಿ ಬೆಳೆಯುವ ಸಸ್ಯಗಳು ಅಥವಾ ಜಲಸಸ್ಯ ಗಳೆಂದೂ ಸಹ ಕರೆಯಲಾಗುತ್ತದೆ, ಈ ಸಸ್ಯಗಳು ನೀರಿನ ಪರಿಸರದಲ್ಲಿ ಅಥವಾ ನೀರಿನೊಳಗೆ ಬೆಳೆಯಲು ಹೊಂದಾಣಿಕೆಯಾಗುತ್ತವೆ. ನೀರಿನಲ್ಲಿ ಅಥವಾ ತಳಭಾಗದಲ್ಲಿ ಬೆಳೆಯುವ ಕಾರಣದಿಂದಾಗಿ ಇದಕ್ಕೆ ವಿಶೇಷ ಹೊಂದಾವಣಿಕೆ ಮಾಡಿಕೊಳ್ಳುವ ಅಗತ್ಯವಿರುತ್ ...

                                               

ಜಾಜಿ

ಜಾಜಿ ದಕ್ಷಿಣ ಏಷ್ಯಾ ಇತ್ಯಾದಿಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಜಾತಿ. ಈ ಪ್ರಜಾತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ ಹಾಗೂ ಮಾರೀಷಸ್, ಜಾವಾ, ಮಧ್ಯ ಅಮೇರಿಕಾ ಇತ್ಯಾದಿಗಳಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ. ಅದು ೨-೪ ಮಿ. ಎತ್ತರ ಬೆಳೆಯುವ ಒಂದು ತೆವಳುವ ಪರ್ಣಪಾತಿ ಪೊದೆಸಸ್ಯ. ಈ ಹೂವ ...

                                               

ಜಾಯಿಕಾಯಿ

ಇಂಗ್ಲೀಷ್ನಲ್ಲಿ Myristica ಎಂದು ಕರೆಯಲಾಗುವ ಜಾಯಿಕಾಯಿ ಔಷಧೀಯ ಗುಣಗಳಿಂದಲೂ, ವಾಣಿಜ್ಯಿಕವಾಗಿ ಬಹಳ ಪ್ರಮುಖವಾದ ವನಸ್ಪತಿ. ಪ್ರಕೃತಿಯ ಅಮೂಲ್ಯ ಕೊಡುಗೆ.ಬಹು ಉಪಯೋಗಿಯಾದ ಜಾಯಿಕಾಯಿ ಮರ, ಮೂಲತ: ಉಷ್ಣವಲಯದಲ್ಲಿ ಬೆಳೆಯುತ್ತದೆ.ಕರ್ನಾಟಕದಲ್ಲಿ ಗಿಡವನ್ನು ಬೇರೆ ದೇಶಗಳಿಂದ ಆಮದು ಮಾಡಿ ನೆಡಲಾಗಿದೆ.

                                               

ಜೀರಿಗೆ

ಮನುಷ್ಯ ಬಳಸತೊಡಗಿದ ಅತ್ಯ೦ತ ಹಳೆಯ ಮಸಾಲೆ ವಸ್ತುಗಳಲ್ಲಿ ಜೀರಿಗೆಯೂ ಒಂದು ಎಂದು ಗೊತ್ತಾಗಿದೆ. ಹುರಿದ ಜೀರಿಗೆಯ ಜೀರ್ಣಾಶಕ್ತಿಯನ್ನು ಹೆಚ್ಚಿಸುವುದು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವುದು ಅತ್ಯ೦ತ್ತ ಪ್ರಾಚೀನಾ ಕಾಲದಿನ್ದಲೂ ಮನುಷ್ಯರಿಗೆ ತಿಳಿದಿತ್ತು. ಪ್ರಾಚೀನಾ ಈಜಿಪ್ತಿನ ಅನೇಕ ಐತಿಹಾಸಿಕ ...

                                               

ಜೊಂಡು

ಜೊಂಡು ಟೈಫೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಗಿಡ. ಟೈಫ ಇದರ ಶಾಸ್ತ್ರೀಯ ಹೆಸರು. ಬೆಕ್ಕಿನ ಬಾಲದ ಗಿಡ ಎಂಬ ಹೆಸರೂ ಇದಕ್ಕುಂಟು. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದನ್ನು ರೀಡ್ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಜೌಗು ಪ್ರದೇಶಗಳಲ್ಲಿ ಬೆಳೆಯುತ್ತದೆ. ಗಿಡದ ಕಾಂಡ ಭೂಮಿಯೊಳಗೆ ಸಮಾಂತರವಾಗಿ ದಪ್ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →